For Quick Alerts
  ALLOW NOTIFICATIONS  
  For Daily Alerts

  ಸಮಂತಾ ಜೊತೆಗೆ ಮಾತುಕತೆಗೆ ಕುಳಿತ ಮೆಗಾಸ್ಟಾರ್ ಚಿರಂಜೀವಿ

  |

  ನಟಿ ಸಮಂತಾ ಅಕ್ಕಿನೇನಿ ಹಲವು ಸಾಹಸಗಳಿಗೆ ಕೈ ಹಾಕಿದ್ದಾರೆ. ಎಲ್ಲದರಲ್ಲೂ ಯಶಸ್ಸನ್ನೇ ಗಳಿಸುತ್ತಿದ್ದಾರೆ.

  ಇತ್ತೀಚೆಗಷ್ಟೆ ಬಿಗ್‌ಬಾಸ್ ಶೋ ನಿರೂಪಿಸಿ ಸೈ ಎನಿಸಿಕೊಂಡಿದ್ದ ಸಮಂತಾ, ಯೂಟ್ಯೂಬ್‌ ಚಾನೆಲ್‌ಗೆ ಆರೋಗ್ಯ ಟಿಪ್ಸ್‌ಗಳನ್ನು ನೀಡಿದ್ದರು. ಮೊದಲ ಬಾರಿಗೆ ವೆಬ್ ಸರಣಿಯಲ್ಲಿ ನಟಿಸಿದರು ಈಗ ಟಾಕ್ ಶೋ ನಡೆಸುತ್ತಿದ್ದು, ದೊಡ್ಡ-ದೊಡ್ಡ ಸ್ಟಾರ್ ನಟರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದಾರೆ.

  ಹೌದು, ನಟಿ ಸಮಂತಾ, 'ಆಹಾ' ತೆಲುಗು ಒಟಿಟಿಯಲ್ಲಿ 'ಸ್ಯಾಮ್-ಜಾಮ್' ಹೆಸರಿನ ಟಾಕ್ ಶೋ ನಡೆಸುತ್ತಿದ್ದಾರೆ. ಶೋ ಗೆ ತೆಲುಗು ಚಿತ್ರರಂಗದ ಗಣ್ಯಾತಿಗಣ್ಯರನ್ನು ಆಹ್ವಾನಿಸಿ ಮಾತುಕತೆ ನಡೆಸುತ್ತಿದ್ದಾರೆ. ಈ ಬಾರಿಯ ಎಪಿಸೋಡ್ ಗೆ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಕರೆಸಿದ್ದಾರೆ ಸಮಂತಾ.

  ಚಿರಂಜೀವಿ ಜೊತೆಗೆ ಸಮಂತಾ ಟಾಕ್ ಶೋ

  ಚಿರಂಜೀವಿ ಜೊತೆಗೆ ಸಮಂತಾ ಟಾಕ್ ಶೋ

  ಹೌದು, ತಮ್ಮ ಸ್ಯಾಮ್-ಜ್ಯಾಮ್ ಶೋ ಗೆ ಚಿರಂಜೀವಿಯನ್ನು ಆಹ್ವಾನಿಸಿದ್ದಾರೆ ಸಮಂತಾ. ಚಿರಂಜೀವಿ-ಸಮಂತಾ ನಡುವಿನ ಎಪಿಸೋಡ್ ಈಗಾಗಲೇ ಚಿತ್ರೀಕರಣ ಸಹ ಮುಗಿದಿದ್ದು ಪ್ರಸಾರವಷ್ಟೆ ಬಾಕಿ ಇದೆ. ಚಿರಂಜೀವಿ ಎಪಿಸೋಡ್ ಎರಡು ಭಾಗಗಳಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ.

  ತಮಾಷೆ ಭರಿತ ಪ್ರಶ್ನೆ ಕೇಳುವ ಸಮಂತಾ

  ತಮಾಷೆ ಭರಿತ ಪ್ರಶ್ನೆ ಕೇಳುವ ಸಮಂತಾ

  ಸ್ಯಾಮ್-ಜ್ಯಾಮ್ ಶೋ ನಲ್ಲಿ ಅತಿಥಿಗಳೊಂದಿಗೆ ಮಜಾ-ಮಸ್ತಿ ಭರಿತ ಪ್ರಶ್ನೆಗಳನ್ನು ಕೇಳುವ ಸಮಂತಾ, ಅದರ ಜೊತೆ-ಜೊತೆಗೆ ಸಾಮಾಜಿಕ ಬಾಧ್ಯತೆಯ ಪ್ರಶ್ನೆಗಳನ್ನೂ ಸಹ ಕೇಳುತ್ತಾರೆ. ಒಟ್ಟಾರೆಯಾಗಿ ಶೋ ಮನೊರಂಜನೆ ಜೊತೆಗೆ ಸಂದೇಶವನ್ನೂ ಒಳಗೊಂಡು ಸಮತೋಲಿತವಾಗಿರುವಂತೆ ನೋಡಿಕೊಳ್ಳುತ್ತಾರೆ.

  ಮೊದಲ ಎಪಿಸೋಡ್‌ನಲ್ಲಿ ವಿಜಯ್ ದೇವರಕೊಂಡ

  ಮೊದಲ ಎಪಿಸೋಡ್‌ನಲ್ಲಿ ವಿಜಯ್ ದೇವರಕೊಂಡ

  ಸ್ಯಾಮ್‌-ಜ್ಯಾಮ್‌ ನ ಮೊದಲ ಎಪಿಸೋಡ್‌ಗೆ ವಿಜಯ್ ದೇವರಕೊಂಡ ಅನ್ನು ಆಹ್ವಾನಿಸಿದ್ದರು ಸಮಂತಾ. ವಿಜಯ್ ದೇವರಕೊಂಡ ತಮ್ಮ ಪ್ರೀತಿ ಪ್ರೇಮದ ವಿಷಯಗಳನ್ನು ಸಹ ಸಮಂತಾ ಮುಂದೆ ಬಾಯ್ಬಿಟ್ಟಿದ್ದರು. ಆ ಎಪಿಸೋಡ್ ಜನಪ್ರಿಯವಾಗಿತ್ತು.

  ಇದು ನನಗೆ ತುಂಬಾ ಹತ್ತಿರವಾದ ಸಿನಿಮಾ ಎಂದ ನಟಿ ಊರ್ವಶಿ ರೈ | Urvashi Rai | Filmibeat Kannada
  ಚಿರಂಜೀವಿ ಸೊಸೆ ಶೋ ನಲ್ಲಿ ಸಮಂತಾ

  ಚಿರಂಜೀವಿ ಸೊಸೆ ಶೋ ನಲ್ಲಿ ಸಮಂತಾ

  ಇನ್ನು ಚಿರಂಜೀವಿ ಸೊಸೆ ಉಪಾಸನಾ, ಸಮಂತಾಗೆ ಅತ್ಯಾಪ್ತ ಗೆಳತಿ. ಉಪಾಸನಾ ನಡೆಸುವ ಯೂಟ್ಯೂಬ್ ಚಾನೆಲ್‌ಗೆ ಸಮಂತಾ ಅತಿಥಿಯಾಗಿ ಹೋಗಿದ್ದರು. ಈಗ ಉಪಾಸನಾ ಮಾವ ಚಿರಂಜೀವಿ ಸಮಂತಾ ಶೋ ಗೆ ಅತಿಥಿಯಾಗಿ ಬಂದಿದ್ದಾರೆ.

  English summary
  Megastar Chiranjeevi is in Samantha Akkineni's 'sam-jam' talk show which will broadcast on Aha OTT.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X