For Quick Alerts
  ALLOW NOTIFICATIONS  
  For Daily Alerts

  Head Bush OTT : ಮಾಜಿ ಡಾನ್ ಜಯರಾಜ್ ಅವತಾರವೆತ್ತಿ ಡಾಲಿ: ಸಂಕ್ರಾಂತಿಗೆ ಜೀ 5ನಲ್ಲಿ 'ಹೆಡ್ ಬುಷ್'!

  |

  ಕಳೆದ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ 'ಹೆಡ್ ಬುಷ್'. ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಚಿತ್ರಕಥೆ, ಸಂಭಾಷಣೆ ಬರೆದಿದ್ದರು. ಬೆಂಗಳೂರು ಕಂಡ ಮಾಜಿ ಅಂಡರ್‌ವರ್ಲ್ಡ್ ಡಾನ್ ಎಂ.ಪಿ ಜಯರಾಜ್‌ ಲೈಫ್ ಸ್ಟೋರಿಯನ್ನು ಈ ಸಿನಿಮಾ ಆಧರಿಸಿತ್ತು.

  'ಹೆಡ್ ಬುಷ್' ಥಿಯೇಟರ್‌ನಲ್ಲಿ ಮೆಚ್ಚುಗೆ ಗಳಿಸಿದ ಬಳಿಕ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಕಳೆದ ಕೆಲವು ದಿನಗಳಿಂದ ಈ ಸಿನಿಮಾ ಓಟಿಟಿಯಲ್ಲಿ ಪ್ರಸಾರ ಆಗುತ್ತೆ ಅನ್ನೋ ಮಾತು ಕೇಳಿ ಬರುತ್ತಲೇ ಇತ್ತು. ಅದರಂತೆ ಜೀ 5ನಲ್ಲಿ ಪ್ರಸಾರ ಆಗುವುದಕ್ಕೆ ಡೇಟ್ ಫಿಕ್ಸ್ ಆಗಿದೆ.

  ಈಗಾಗಲೇ ಜೀ 5 ನಲ್ಲಿ ಕನ್ನಡ ಸೂಪರ್ ಹಿಟ್ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿವೆ. ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ', ಗಣೇಶ್ ನಟನೆಯ 'ಗಾಳಿಪಟ 2', ಶರಣ್ ಸಿನಿಮಾ 'ಗುರು ಶಿಷ್ಯರು' ಬಳಿಕ ಜೀ5 'ಹೆಡ್‌ ಬುಷ್' ಅನ್ನು ಸ್ಟ್ರೀಮಿಂಗ್ ಮಾಡಲು ಮುಂದಾಗಿದೆ.

  "ಧಮ್ ಇದ್ರೆ ಹೊಡಿ ನನ್ನ.. ದಿಲ್ ಇದ್ರೆ ತಡಿ ನನ್ನ" ಕವಿತೆ ಬರೆದು ಸಮರ ಸಾರಿದ ಡಾಲಿ!

  ಇದೇ ಜನವರಿ 13ರಂದು ಡಾಲಿ ಧನಂಜಯ ಸಿನಿಮಾ 'ಹೆಡ್ ಬುಷ್' ಜೀ5 ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಅಗ್ನಿ ಶ್ರೀಧರ್ ಅವರೇ ಬರೆದಿರೋ ಪುಸ್ತಕವನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಶೂನ್ಯ 'ಹೆಡ್ ಬುಷ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

  ಧನಂಜಯ್ 'ಹೆಡ್ ಬುಷ್' ಓಟಿಟಿ ಬಿಡುಗಡೆ ದಿನಾಂಕ ಪ್ರಕಟ; ಯಾವಾಗ, ಎಲ್ಲಿ? ಇಲ್ಲಿದೆ ಮಾಹಿತಿಧನಂಜಯ್ 'ಹೆಡ್ ಬುಷ್' ಓಟಿಟಿ ಬಿಡುಗಡೆ ದಿನಾಂಕ ಪ್ರಕಟ; ಯಾವಾಗ, ಎಲ್ಲಿ? ಇಲ್ಲಿದೆ ಮಾಹಿತಿ

  'ಹೆಡ್ ಬುಷ್' 70ರ ದಶಕದ ಭೂಗತ ಜಗತ್ತಿನ ಅನಾವರಣ ಮಾಡಿತ್ತು. ಮಾಜಿ ಡಾನ್ ಎಂ.ಪಿ.ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ ಕಾಣಿಸಿಕೊಂಡಿದ್ದರು. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಅಪಾರ ಮೆಚ್ಚುಗೆ ಸಿಕ್ಕಿತ್ತು. ಇದೀಗ ಓಟಿಟಿಯಲ್ಲಿ ಜನರ ಮನಗೆಲ್ಲುವುದಕ್ಕೆ ಸಜ್ಜಾಗಿದೆ.

  Dhananjay Starrer Head Bush Will Be Streaming In Zee 5 Ott From Jan 13th

  ಡಾಲಿಗೆ ನಾಯಕಿಯಾಗಿ ಪಾಯಲ್ ರಜಪೂತ್ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಲೂಸ್ ಮಾದ ಯೋಗಿ, ರಘು ಮುಖರ್ಜಿ, ವಸಿಷ್ಠ ಸಿಂಹ, ಕ್ರೇಜಿ ಸ್ಟಾರ್ ರವಿಚಂದ್ರನ್, ಶೃತಿ ಹರಿಹರನ್ ಪ್ರಮುಖ ಪಾತ್ರಗಳಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಚರಣ್ ರಾಜ್ ಟ್ಯೂನ್ ಹಾಕಿದ್ದಾರೆ. ಕಳೆದ ವರ್ಷ ಜೀ 5ನಲ್ಲಿ ಕನ್ನಡ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ವಿಶೇಷ ಅಂದ್ರೆ, ಇವುಗಳಲ್ಲಿ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ.

  ಜೀ 5ನಲ್ಲಿ ಈಗಾಗಲೇ ರಿಲೀಸ್ ಆಗಿರುವ 'ವಿಕ್ರಾಂತ್ ರೋಣ', 'ಗಾಳಿಪಟ 2' ಹಾಗೂ 'ಗುರು ಶಿಷ್ಯರು' ಸಿನಿಮಾಗಳಿಗೆ ದಾಖಲೆ ವೀವ್ಸ್ ಸಿಕ್ಕಿದೆ. ಈಗ 'ಹೆಡ್ ಬುಷ್' ಸಿನಿಮಾವನ್ನು ವೀಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅನ್ನೋ ಕುತೂಹಲವಂತೂ ಇದೆ.

  English summary
  Dhananjay Starrer Head Bush Will Be Streaming In Zee 5 Ott From Jan 13th,Know More.
  Tuesday, January 10, 2023, 22:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X