For Quick Alerts
  ALLOW NOTIFICATIONS  
  For Daily Alerts

  ಭಾರತದ ಮೇಲೆ ಡಿಸ್ನಿ ಫೋಕಸ್, ಹೊಸ ಪ್ಲ್ಯಾನ್‌ ಬಿಡುಗಡೆ

  |

  ಡಿಸ್ನಿ ಹಾಟ್‌ಸ್ಟಾರ್ ಒಟಿಟಿ ತನ್ನ ಸಬ್‌ಸ್ಕ್ರಿಪ್ಷನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಜೊತೆಗೆ ಭಾರತದ ಕಂಟೆಂಟ್‌ ಮೇಲೆ ಹೆಚ್ಚಿನ ಗಮನ ನೀಡಲು ನಿರ್ಧರಿಸಿದೆ.

  ವಿವಿಧ ಟಿವಿ ಚಾನೆಲ್‌ಗಳ ಲೈವ್ (ವಿಶೇಷವಾಗಿ ಕ್ರಿಕೆಟ್) ಕಾರಣಕ್ಕೆ ಹೆಚ್ಚು ಜನಪ್ರಿಯವಾಗಿರುವ ಡಿಸ್ನಿ ಹಾಟ್‌ಸ್ಟಾರ್‌ ಇತ್ತೀಚೆಗೆ ಬಹಳ ಒಳ್ಳೆಯ ಸಿನಿಮಾಗಳನ್ನು, ವೆಬ್ ಸರಣಿಗಳನ್ನು ಸಹ ನೀಡುತ್ತಿದೆ. ಆದರೆ ಈ ಒಟಿಟಿಯು ವಿಐಪಿ ಪ್ಲ್ಯಾನ್ ಹೊಂದಿದ್ದು ತನ್ನ ಎಲ್ಲ ಉತ್ತಮ ಕಂಟೆಂಟ್ ಅನ್ನು ವಿಐಪಿ ಚಂದಾದಾರರಿಗೆ ಮಾತ್ರವೇ ನೀಡುತ್ತಿತ್ತು. ಆದರೆ ಈಗ ಯೋಜನೆ ಬದಲಿಸಿದೆ ಹಾಟ್‌ಸ್ಟಾರ್.

  ವಿಐಪಿ ಪ್ಲ್ಯಾನ್ ಅನ್ನು ತೆಗೆದು ಹಾಕಿರುವ ಡಿಸ್ನಿ ಹಾಟ್‌ಸ್ಟಾರ್ ಮೂರು ಸರಳ ಸಬ್‌ಸ್ಕ್ರಿಪ್ಷನ್ ಯೋಜನೆಗಳನ್ನು ಹೊರಗೆ ತಂದಿದೆ. 500 ರುಗಳ ಮೊದಲ ಯೋಜನೆ ಕೇವಲ ಮೊಬೈಲ್‌ಗೆ ಮಾತ್ರವೇ ಸೀಮಿತವಾಗಿದ್ದು ಒಬ್ಬರು ಮಾತ್ರವೇ ನೋಡಬಹುದಾಗಿದೆ. 899ರ ಎರಡನೇ ಪ್ಲ್ಯಾನ್‌ನಲ್ಲಿ ಇಬ್ಬರು ಚಂದಾದಾರರು ಕಂಟೆಂಟ್ ನೋಡಬಹುದಾಗಿದೆ. 1499 ರ ಪ್ರೀಮಿಯಮ್ ಪ್ಲ್ಯಾನ್‌ನಲ್ಲಿ ನಾಲ್ಕು ಜನ ಒಟಿಟಿಯ ಕಂಟೆಂಟ್ ಅನ್ನು ನೋಡಬಹುದು. ಮೊದಲೆರಡು ಪ್ಲ್ಯಾನ್‌ನಲ್ಲಿ ಎಚ್‌ಡಿ ವಿಡಿಯೋಗಳು ಲಭ್ಯವಿದ್ದರೆ ಪ್ರೀಮಿಯಮ್‌ ಪ್ಲ್ಯಾನ್‌ನಲ್ಲಿ 4ಕೆ ಗುಣಮಟ್ಟದ ವಿಡಿಯೋ ವೀಕ್ಷಿಸಬಹುದಾಗಿದೆ.

  ಭಾರತದ ಕಂಟೆಂಟ್‌ ಅನ್ನು ಹೆಚ್ಚಿಗೆ ಕೊಡಲು ಡಿಸ್ನಿ ಹಾಟ್‌ಸ್ಟಾರ್ ಯೋಜಿಸಿದ್ದು, ಕೆಲವು ಸ್ಟಾರ್ ನಟರ ಸಿನಿಮಾಗಳು, ವೆಬ್ ಸರಣಿಗಳನ್ನು ತಮ್ಮ ಒಟಿಟಿ ಮೂಲಕ ಜನರಿಗೆ ತಲುಪಿಸುವ ಯೋಜನೆ ಹಾಕಿಕೊಂಡಿದೆ. ಅದರಲ್ಲಿಯೂ ಅಮೆಜಾನ್ ಪ್ರೈಂಗೆ ದೊಡ್ಡ ಸ್ಪರ್ಧೆ ನೀಡುವ ಸುಳಿವು ನೀಡಿದೆ ಡಿಸ್ನಿ ಹಾಟ್‌ಸ್ಟಾರ್.

  ಬಾಲಿವುಡ್ ನಟರಾದ ಅಜಯ್ ದೇವಗನ್, ಸೈಫ್ ಅಲಿ ಖಾನ್, ಸುಶ್ಮಿತಾ ಸೇನ್, ಕುನಾಲ್ ಕಪೂರ್, ಪ್ರತೀಕ್ ಗಾಂಧಿ, ಶಬಾನಾ ಆಜ್ಮಿ, ರೀಚಾ ಚಡ್ಡಾ ಇನ್ನೂ ಹಲವಾರು ನಟ-ನಟಿಯರ ಸಿನಿಮಾಗಳು ವೆಬ್ ಸರಣಿಗಳು ಮುಂದಿನ ದಿನಗಳಲ್ಲಿ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿವೆ.

  English summary
  Disney plus Hotstar removed its VIP plan and introduced new subscribers plan. It is focusing more on Indian content specially Bollywood content.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X