For Quick Alerts
  ALLOW NOTIFICATIONS  
  For Daily Alerts

  ಅಮೆಜಾನ್‌ ಪ್ರೈಮ್ ವೀಡಿಯೋ 89ಕ್ಕೆ ಮೊಬೈಲಿನಲ್ಲಿ ವೀಕ್ಷಿಸಿ ಈ 5 ಫಿಲಂ

  By ಜೇಮ್ಸ್ ಮಾರ್ಟಿನ್
  |

  ಅಮೆಜಾನ್ ಪ್ರೈಮ್‌ ವೀಡಿಯೋ ಈಗ ಹೊಸ ಮೊಬೈಲ್‌ ಎಡಿಶನ್ ಅನ್ನು ಬಿಡುಗಡೆ ಮಾಡಿದೆ. ಆರಾಮವಾಗಿ ಕಾಲ ಕಳೆಯುವ ಸಮಯದಲ್ಲಿ ನೀವು ಸಿನಿಮಾ ನೋಡಲು ಬಯಸಿದ್ದರೆ ಇನ್ನು ನೀವು ಚಿಂತೆ ಮಾಡಬೇಕಿಲ್ಲ. ಒಂದೇ ಯೂಸರ್‌ನಲ್ಲಿ ಸಿನಿಮಾ ನೋಡುವುದು ಇನ್ನಷ್ಟು ಖುಷಿ ನೀಡುತ್ತದೆ.

  ಏರ್‌ಟೆಲ್‌ ಸಹಭಾಗಿತ್ವದಲ್ಲಿ ಭಾರತಕ್ಕೆ ವಿಶೇಷವಾಗಿ ಅಮೆಜಾನ್ ಪ್ರೈಮ್ ವಿಡಿಯೋ ರೂಪಿಸಿದ, ಪ್ರೈಮ್‌ ವೀಡಿಯೋ ಮೊಬೈಲ್‌ ಎಡಿಶನ್‌ ಆರಂಭಿಕ ದರ ಕೇವಲ ರೂ. 89 ಆಗಿದೆ. ಒಂದು ಯೂಸರ್‌ ಮೊಬೈಲ್‌ ಒನ್ಲೀ ಪ್ಲಾನ್ ಇದಾಗಿದೆ. ಸದ್ಯ ಚಾಲ್ತಿಯಲ್ಲಿರುವ 1 ತಿಂಗಳು ಉಚಿತ ಟ್ರಯಲ್‌ ಅವಧಿಯ ಜೊತೆಗೆ ಏರ್‌ಟೆಲ್‌ ಬಳಕೆದಾರರು ಎಸ್‌ಡಿ ಕ್ವಾಲಿಟಿಯಲ್ಲಿ ಅಮೆಜಾನ್ ಪ್ರೈಮ್ ವೀಡಿಯೋ ಅನ್ನು ಸ್ಟ್ರೀಮ್‌ ಮಾಡಬಹುದು.

  ಇದರಿಂದ ನೀವು ಇನ್ನು ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಒಟಿಟಿ ಸಬ್‌ಸ್ಕ್ರಿಪ್ಷನ್ ಅನ್ನು ಹಂಚಿಕೊಳ್ಳುವ ಅಗತ್ಯವಿಲ್ಲ. ಉತ್ತಮ ಭಾರತೀಯ ಸಿನಿಮಾ ವೀಕ್ಷಿಸಲು ನೀವು ಬಯಸಿದರೆ, ಅಮೆಜಾನ್ ಪ್ರೈಮ್‌ ವೀಡಿಯೋದಲ್ಲಿ ಇತ್ತೀಚಿನ ಬ್ಲಾಕ್‌ಬಸ್ಟರ್‌ ಸಿನಿಮಾದ ಪಟ್ಟಿ ಮುಂದಿದೆ...

  ಸೂರಾರೈ ಪೊಟ್ರು

  ಸೂರಾರೈ ಪೊಟ್ರು

  ಸೂರಾರೈ ಪೊಟ್ರು - ಡೆಕ್ಕನ್‌ ಸಂಸ್ಥಾಪಕ ಜಿಆರ್‌ ಗೋಪಿನಾಥ್‌ ಅವರ ಜೀವನ ಕಥೆ(ಸಿಂಪ್ಲಿಫೈ)ಯಿಂದ ಸ್ಫೂರ್ತಿ ಪಡೆದ ಸಿನಿಮಾ ಆಗಿದೆ. ಇದು ನಿಮಗೆ ಗಗನ ವಿಹಾರ ಮಾಡಿಸುತ್ತದೆ. ಸುಧಾ ಕೊಂಗರ ನಿರ್ದೇಶಿಸಿದ ಈ ಸಿನಿಮಾದಲ್ಲಿ ಸೂಪರ್‌ಸ್ಟಾರ್‌ ಸೂರ್ಯ ನಟಿಸಿದ್ದಾರೆ. ಸ್ಫೂರ್ತಿಯನ್ನು ನೀಡುವ ಉತ್ತಮ ಕಥೆಯ ಜೊತೆಗೆ ಉತ್ತಮ ತಾರಾಗಣದ ಸೂಕ್ತ ಮಿಶ್ರಣವೂ ಇದಾಗಿದೆ. ಇದು ನಿಮ್ಮನ್ನು ನಿಮ್ಮ ಗುರಿ ಮತ್ತು ಕನಸಿನ ಕಡೆಗೆ ಕರೆದೊಯ್ಯುತ್ತದೆ. ನಿಮ್ಮ ಗುರಿಯನ್ನು ಸಾಧಿಸಲು ಇನ್ನಷ್ಟು ಶ್ರದ್ಧೆಯಿಂದ ಕೆಲಸ ಮಾಡಲು ಸ್ಫೂರ್ತಿ ನೀಡುತ್ತದೆ. ಇದೊಂದು ಫೀಲ್ ಗುಡ್ ಮೂವಿಯಾಗಿದ್ದು, ಮೊದಲ ಫ್ರೇಮ್‌ನಿಂದ ಕೊನೆಯ ಫ್ರೇಮ್‌ನವರೆಗೂ ನಿಮ್ಮ ಗಮನವನ್ನು ಸೆಳೆಯುತ್ತದೆ. ಸೂರ್ಯ ಮತ್ತು ಅಪರ್ಣಾ ಬಾಲಮುರಳಿ ಜೊತೆಗೆ ಗಗನ ವಿಹಾರ ಮಾಡುವ ಅವಕಾಶವನ್ನು ಯಾಕೆ ಕಳೆದುಕೊಳ್ಳುತ್ತೀರಿ.

  ಮಿಡಲ್‌ ಕ್ಲಾಸ್ ಮೆಲೊಡೀಸ್‌

  ಮಿಡಲ್‌ ಕ್ಲಾಸ್ ಮೆಲೊಡೀಸ್‌

  ರುಚಿಕರ ತಿನಿಸುಗಳು ಮತ್ತು ನಗುವಿನ ಪಯಣ ನಿಮಗೆ ಇಷ್ಟವೆಂದಾದರೆ, ಈ ಸಿನಿಮಾವನ್ನು ನೀವು ನೋಡಲೇಬೇಕು. ಮಿಡಲ್‌ ಕ್ಲಾಸ್ ಮೆಲೊಡೀಸ್‌ ಒಂದು ಕಾಮಿಕಲ್‌ ಡ್ರಾಮಾ ಸಿನಿಮಾ ಆಗಿದ್ದು, ರೆಸ್ಟೋರೆಂಟ್ ಹೊಂದಿರುವ ತಂದೆ ಮತ್ತು ಮಗನ ಜೀವನದ ಸುತ್ತ ಸುತ್ತುತ್ತದೆ. ಲಘು ಹಾಸ್ಯ ಮಿಶ್ರಿತ ರೂಪದಲ್ಲಿ ಅವರ ನಿತ್ಯದ ಜಗಳಗಳು ಮತ್ತು ಸವಾಲುಗಳನ್ನು ಇದು ಹೇಳುತ್ತದೆ. ಜೀವನ ಎಂಬ ಪರಿಪೂರ್ಣ ರೆಸಿಪಿಯಲ್ಲಿ ಸಿಹಿ ಮತ್ತು ಹುಳಿ ಕ್ಷಣಗಳನ್ನು ಇದು ಹೇಳುತ್ತದೆ. ಹೀಗಾಗಿ, ಒಂದು ತಿಂಡಿ ಪ್ಲೇಟ್‌ ಎಳೆದುಕೊಳ್ಳಿ, ಸಿನಿಮಾ ನೋಡಲು ಸಿದ್ಧವಾಗಿ. ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ತನ್ನ ಜನಪ್ರಿಯ ಬಾಂಬೆ ಚಟ್ನಿ ಅನ್ನು ಸರ್ವ್‌ ಮಾಡಲು ಆನಂದ ದೇವರಕೊಂಡ ಸಿದ್ಧವಾಗಿದ್ದಾರೆ.

  ನಿಶ್ಶಬ್ದಂ

  ನಿಶ್ಶಬ್ದಂ

  ನಮ್ಮ ದೇವಸೇನಾ (ಅನುಷ್ಕಾ ಶೆಟ್ಟಿ) ಈಗ ಒಬ್ಬ ಥ್ರೀ ಈಡಿಯೆಟ್ಸ್ (ಆರ್‌ ಮಾಧವನ್‌) ಜೊತೆಗೆ ಒಂದು ಥ್ರಿಲ್ಲರ್ ಸಿನಿಮಾ ಸಹಿತ ಆಗಮಿಸಿದ್ದು, ವೀಕ್ಷಕರಿಗೆ ಅದ್ಭುತ ಮನರಂಜನೆ ಒದಗಿಸಲಿದೆ. ಮೊದಲ ಸಂಭಾಷಣೆಯಿಂದಲೇ ಈ ಇಡೀ ಸಿನಿಮಾ ನಿಮ್ಮನ್ನು ಕುರ್ಚಿಯ ತುದಿಗೆ ಕುಳ್ಳಿರಿಸಲಿದೆ. ಈ ಸಿನಿಮಾವು ಡ್ರಾಮಾ, ಸಸ್ಪೆನ್ಸ್ ಮತ್ತು ಭಾವನೆಗಳ ಸಮ್ಮಿಶ್ರಣವಾಗಿರಲಿದೆ. ನೀವು ಮಿಸ್ಟರಿ ಸಿನಿಮಾ ನೋಡಬೇಕು ಎಂದು ಬಯಸಿದರೆ, ಹಿಂಜರಿಯಬೇಡಿ. ಯಾಕೆಂದರೆ, ಈ ಸಿನಿಮಾ ನಿಮಗೆ ಹೆಜ್ಜೆ ಹೆಜ್ಜೆಗೂ ಅಚ್ಚರಿ ಮತ್ತು ಮೌನವನ್ನು ಮೂಡಿಸಲಿದೆ.

  ಮಾರಾ

  ಮಾರಾ

  ಈ ಸಿನಿಮಾ ನಮ್ಮನ್ನು ಕನಸಿನ ಜಗತ್ತಿಗೆ ಕರೆದೊಯ್ಯುತ್ತದೆ. ಸುಂದರ ಸ್ಥಳಗಳು ಮತ್ತು ಮನಮೋಹಕ ಪ್ರದೇಶಗಳೂ ಇದರಲ್ಲಿವೆ. ಆರ್‌ ಮಾಧವನ್‌ ಮತ್ತು ಶ್ರದ್ಧಾ ಶ್ರೀನಾಥ್‌ ಇರುವ ಈ ಸಿನಿಮಾ ನಿಮ್ಮನ್ನು ಕನಸಿನ ಸ್ಥಳಗಳಿಗೆ ಕೊಂಡೊಯ್ಯುತ್ತದೆ. ಸುಂದರ ಹಸಿರಿನ ಪರಿಸರ, ಸ್ವಚ್ಛಂದ ಆಕಾಶ ಮತ್ತು ಪಾರಂಪರಿಕ ಸ್ಥಳಗಳು ಈ ಕ್ಷಣವೇ ಬ್ಯಾಗ್ ಪ್ಯಾಕ್ ಮಾಡಿಕೊಂಡು ದೇಶ ಸುತ್ತಲು ಹೊರಡಬೇಕೆಂಬ ಸ್ಫೂರ್ತಿ ನೀಡುತ್ತವೆ. ಕಲಾಕಾರ ಮತ್ತು ಅವನ ಕಲೆಯ ಕುರಿತ ಸಿನಿಮಾ ಮಾರಾ. ಸುಂದರ ಪೇಂಟಿಂಗ್‌ಗಳು, ವಾಲ್ ಆರ್ಟ್‌ಗಳು, ಕ್ರಿಯೇಟಿವ್ ಮಣ್ಣಿನ ಪ್ರತಿಮೆಗಳು ಇತ್ಯಾದಿಯೆಲ್ಲವೂ ಕಣ್ಣಿಗೆ ಹಬ್ಬ. ಕ್ರಿಯಾಶೀಲ ಮತ್ತು ದೃಗ್ಗೋಚರ ಕಲೆಯನ್ನು ಇಡೀ ಸಿನಿಮಾ ಆವರಿಸಿಕೊಂಡಿದೆ. ಕಥೆ ಕೂಡಾ ಕಲೆಯನ್ನೇ ಆವಾಹಿಸಿಕೊಂಡಿದೆ. ಮೊದಲೇ ಯಾಕೆ ನೋಡಿಲ್ಲ ಎಂದು ನಿಮಗೆ ಅನ್ನಿಸಬಹುದಾದ ಸಿನಿಮಾ ಮಾರಾ.

  ಸಿಯು ಸೂನ್‌

  ಸಿಯು ಸೂನ್‌

  ಲಾಕ್‌ಡೌನ್‌ ಸಮಯದಲ್ಲಿ ಶೂಟಿಂಗ್ ಮಾಡಲು ಅತ್ಯಂತ ಕಡಿಮೆ ಅವಕಾಶವಿದ್ದುದರಿಂದ, ಒಂದು ಸಿನಿಮಾವನ್ನು ಹೇಗೆ ಮಾಡಬಹುದು ಎಂಬುದರ ವಿಶಿಷ್ಟ ತಂತ್ರಗಳನ್ನು ಸಿಯು ಸೂನ್‌ ಸಿನಿಮಾ ಹೊಂದಿದೆ. ನಿರ್ದೇಶಕರು, ಎಡಿಟರ್ ಆಗಬೇಕೆಂದು ಬಯಸುವವರಿಗೆ ಈ ಸಿನಿಮಾ ಒಂದು ಸ್ಫೂರ್ತಿ. ಒಂದು ಉತ್ತಮ ಸಿನಿಮಾ ಆಗುವ ಎಲ್ಲ ಚೆಕ್‌ ಬಾಕ್ಸ್‌ಗಳನ್ನೂ ಈ ಸಿನಿಮಾ ಪೂರೈಸುತ್ತದೆ. ಫಹಾದ್‌ ಫಾಸಿಲ್‌ರ ಸಮಪರ್ಕ ನಟನೆ, ವಿಶಿಷ್ಟ ಮತ್ತು ಹಿಡಿದಿಡುವ ಕಥೆಯನ್ನು ಹೊಂದಿರುವ ಈ ಸಿನಿಮಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಹೊರಬಿತ್ತು. ಮನೆಯಲ್ಲಿ ಸಿಕ್ಕಿಹಾಕಿಕೊಂಡಾಗಲೂ ಕಥೆ ಮತ್ತು ವಿಷನ್‌ ಇದ್ದಲ್ಲಿ ಒಂದು ಸಿನಿಮಾ ತಯಾರಿಸಬಹುದು ಎಂಬುದನ್ನು ಇದು ಸಾಬೀತು ಮಾಡುತ್ತದೆ.

  English summary
  Five fantastic/fabulous South Indian films that you can watch With Airtel and Prime Video Mobile Edition (PVME) with introductory Plan with prices at just Rs. 89.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X