twitter
    For Quick Alerts
    ALLOW NOTIFICATIONS  
    For Daily Alerts

    'ಗಾಡ್‌ಮ್ಯಾನ್' ಮೇಲೆ ಬ್ರಾಹ್ಮಣ ಸಮುದಾಯ ಸಿಟ್ಟು: ಬಿಡುಗಡೆಗೆ ತಡೆ

    |

    ಇದು ವೆಬ್‌ಸೀರೀಸ್‌ಗಳ ಜಮಾನಾ. ಸಿನಿಮಾಗಳಲ್ಲಿ ತೋರಿಸಲಾಗದ ಹಸಿ-ಬಿಸಿ, ಅತಿ ರಂಜಕ, ಮಾದಕ ದೃಶ್ಯ, ಸಂಬಾಷಣೆಗಳನ್ನು ಬಹುತೇಕ ವೆಬ್‌ಸೀರೀಸ್‌ ಸುಲಭವಾಗಿ ಒಳಗೊಂಡಿರುತ್ತವೆ.

    ಭಾರತದಲ್ಲೂ ವೆಬ್‌ಸೀರೀಸ್‌ಗಳು ಈಗಾಗಲೇ ಮುನ್ನೆಲೆಗೆ ಬಂದಿವೆ. ಈಗ ಪ್ರಾದೇಶಿಕ ಭಾಷೆಗಳಲ್ಲೂ ವೆಬ್‌ಸೀರೀಸ್‌ಗಳನ್ನು ಗಂಭೀರವಾಗಿ ಪರಿಗಣಿಸಿ ನಿರ್ಮಿಸುತ್ತಿದ್ದಾರೆ.

    ತಮಿಳುನಾಡಿನಲ್ಲಿ ಇಂಥಹುದೇ ಪ್ರಯತ್ನದ ಭಾಗವಾಗಿ ನಿರ್ಮಿಸಲಾಗಿರುವ 'ಗಾಡ್‌ಮ್ಯಾನ್' ವೆಬ್‌ ಸೀರೀಸ್‌ ಬಿಡುಗಡೆಗೆ ಮುನ್ನವೇ ಭಾರಿ ವಿವಾದ ಮೈಮೇಲೆ ಎಳೆದುಕೊಂಡಿತು. ಅದರ ಫಲವಾಗಿ ವೆಬ್‌ಸೀರೀಸ್‌ ಬಿಡುಗಡೆಯನ್ನು ತಡೆಹಿಡಿಯಲಾಗಿದೆ.

    ಹಸಿ-ಬಿಸಿ ಟ್ರೇಲರ್ ಬಿಡುಗಡೆ

    ಹಸಿ-ಬಿಸಿ ಟ್ರೇಲರ್ ಬಿಡುಗಡೆ

    ತಮಿಳಿನ 'ಗಾಡ್‌ ಮ್ಯಾನ್' ವೆಬ್‌ ಸೀರೀಸ್‌ ಒಬ್ಬ ಸ್ವಾಮೀಜಿ ಮತ್ತು ಆತನ ಶಿಷ್ಯ, ಶಿಷ್ಯೆ ಹಾಗೂ ಅವರ ಸುತ್ತಲಿನ ರಾಜಕೀಯ, ಮಠ, ಹಣಕಾಸು ವಿಷಯ, ಧರ್ಮ, ಕಾಮ ಇನ್ನಿತರೆ ವಿಷಯಗಳನ್ನು ಒಳಗೊಂಡಿದ್ದಾಗಿದೆ. ಅದರ ಟೀಸರ್‌ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿ ಟಾಪ್‌ ಟ್ರೆಂಡ್‌ನಲ್ಲಿತ್ತು.

    ಬ್ರಾಹ್ಮಣ ಸಮುದಾಯವನ್ನು ನಿಂದಿಸಿದ್ದಾರೆಂದು ಆರೋಪ

    ಬ್ರಾಹ್ಮಣ ಸಮುದಾಯವನ್ನು ನಿಂದಿಸಿದ್ದಾರೆಂದು ಆರೋಪ

    ಆದರೆ ಟೀಸರ್‌ ನೋಡಿದ ಮಂದಿ ವೆಬ್‌ಸೀರೀಸ್‌ನಲ್ಲಿ ಬ್ರಾಹ್ಮಣರನ್ನು ಬಹು ಕೆಟ್ಟದಾಗಿ ಚಿತ್ರೀಕರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ವೆಬ್‌ ಸೀರೀಸ್‌ನಲ್ಲಿ ಕುಡಿತದ ದಾಸನಾಗಿರುವವ, ಹೆಣ್ಣುಗಳ ಗೀಳುಳ್ಳವ ತಾನು ಬ್ರಾಹ್ಮಣನಾಗುತ್ತೇನೆ ಎಂದು ಹೇಳುತ್ತಾನೆ. ಟೀಸರ್‌ ಮುಂದುವರೆದಂತೆ ಆತ ಸ್ವಾಮೀಜಿ ಆಗುತ್ತಾನೆ. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

    ಸಾಕಷ್ಟು ಹಸಿ-ಬಿಸಿ ದೃಶ್ಯಗಳಿದ್ದವು

    ಸಾಕಷ್ಟು ಹಸಿ-ಬಿಸಿ ದೃಶ್ಯಗಳಿದ್ದವು

    ಬಿಡುಗಡೆ ಆದ ಟೀಸರ್‌ನಲ್ಲಿ ಸಹಿತ ಸಾಕಷ್ಟು ಹಸಿ-ಬಿಸಿ ದೃಶ್ಯಗಳು, ಹಿಂಸೆ, ಬ್ರಾಹ್ಮಣರ ಬಗ್ಗೆ ಮಾತುಗಳು ಧರ್ಮದ ಬಗ್ಗೆ ಡೈಲಾಗ್‌ಗಳು ಇದ್ದವು. ಬಹುತೇಕ ಸಂಭಾಷಣೆ ಸಮುದಾಯ, ಧರ್ಮವನ್ನು ಅವಹೇಳನ ಮಾಡುವಂತೆಯೇ ಇತ್ತು. ಹಾಗಾಗಿ ಈ ವೆಬ್‌ಸೀರೀಸ್‌ ಗೆ ಬಾರಿ ವಿರೋಧ ಕೇಳಿಬಂದಿತ್ತು.

    ಜೂನ್ 12 ಕ್ಕೆ ಬಿಡುಗಡೆ ಆಗಬೇಕಿತ್ತು

    ಜೂನ್ 12 ಕ್ಕೆ ಬಿಡುಗಡೆ ಆಗಬೇಕಿತ್ತು

    ಜೂನ್ 12 ಕ್ಕೆ ವೆಬ್ ಸೀರೀಸ್ ಅನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಜೀ5 ಘೋಷಿಸಿತ್ತು. ಆದರೆ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವೆಬ್ ಸೀರೀಸ್ ಅನ್ನು ಜೀ 5 ತಡೆಹಿಡಿದಿದೆ. ಈ ವೆಬ್‌ ಸೀರೀಸ್ ನಲ್ಲಿ ಸೋನಿಯಾ ಅಗರ್ವಾಲ್, ತಾನ್ಯಾ ದೇಸಾಯಿ, ಡ್ಯಾನಿಯಲ್ ಬಾಲಾಜಿ, ಜಯ ಪ್ರಕಾಶ್ ಅಂಥಹಾ ಘಟಾನುಗಟಿ ನಟರೇ ನಟಿಸಿದ್ದರು.

    ತಮಿಳುನಾಡು ಐಟಿ ಸೆಲ್‌ ದೂರು

    ತಮಿಳುನಾಡು ಐಟಿ ಸೆಲ್‌ ದೂರು

    ಗಾಡ್‌ಮ್ಯಾನ್ ವೆಬ್‌ ಸೀರೀಸ್‌ನ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಬಿಜೆಪಿ ತಮಿಳುನಾಡು ಐಟಿ ಸೆಲ್ ದೂರು ನೀಡಿತ್ತು. ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಸಹ ಈ ವೆಬ್‌ಸೀರಿಸ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಚೆನ್ನೈನ ಸಿಸಿಬಿ ವೆಬ್ ಸೀರೀಸ್‌ನ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಸಮನ್ಸ್‌ ಜಾರಿ ಮಾಡಿದೆ.

    English summary
    Godman Tamil web series create controversy. Zee5 holds its release. Accused that content against Brahmin community.
    Tuesday, June 9, 2020, 23:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X