For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್‌ನಲ್ಲಿ ಶಿಲ್ಪಾ ಶೆಟ್ಟಿ ವಿಷಯಕ್ಕೆ ಕಣ್ಣೀರು ಹಾಕಿದ ಶಮಿತಾ ಶೆಟ್ಟಿ

  By ಫಿಲ್ಮಿಬೀಟ್ ಡೆಸ್ಕ್
  |

  ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬಿಗ್‌ಬಾಸ್ ಒಟಿಟಿಯಲ್ಲಿ ಸ್ಪರ್ಧಿಯಾಗಿದ್ದಾರೆ. ರಾಜ್ ಕುಂದ್ರಾ ಬಂಧನವಾಗಿ ಅಕ್ಕ ಶಿಲ್ಪಾ ಶೆಟ್ಟಿ ಒತ್ತಡದಲ್ಲಿರುವ ಸಂದರ್ಭದಲ್ಲಿ ಶಮಿತಾ ಶೆಟ್ಟಿ ಬಿಗ್‌ಬಾಸ್‌ನಲ್ಲಿ ಆಟವಾಡುತ್ತಿರುವುದಕ್ಕೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.

  ಬಿಗ್‌ಬಾಸ್ ಒಳಗೆ ಆಟವಾಡುತ್ತಿರುವ ಶಮಿತಾ ಶೆಟ್ಟಿ ಅಕ್ಕನ ವಿಷಯಕ್ಕೆ ಕಣ್ಣೀರು ಹಾಕಿದ್ದಾರೆ. ಆದರೆ ಅದು ರಾಜ್ ಕುಂದ್ರಾ ಬಂಧನದ ವಿಷಯಕ್ಕಾಗಿ ಅಲ್ಲ ಬದಲಿಗೆ ಅಕ್ಕನ ನೆರಳಲ್ಲಿ ತಾನು ತನ್ನದೇ ಆದ ಗುರುತು ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ.

  ಶಿಲ್ಪಾ ಶೆಟ್ಟಿಯ ತಂಗಿ ಆಗಿರುವುದು ಸುಲಭವಲ್ಲ, ಇದರಿಂದ ತಾನು ನಷ್ಟ ಅನುಭವಿಸಿದ್ದಾಗಿಯೂ ಪರೋಕ್ಷವಾಗಿ ಹೇಳಿರುವ ನಟಿ ಶಮಿತಾ ಶೆಟ್ಟಿ ಅದಕ್ಕಾಗಿ ಕಣ್ಣೀರು ಸುರಿಸಿದ್ದಾರೆ.

  ''20 ಕ್ಕೂ ಹೆಚ್ಚು ವರ್ಷದಿಂದ ಸಿನಿಮಾ ಉದ್ಯಮದಲ್ಲಿದ್ದೇನೆ. ಈ ಪಯಣ ಸುಲಭದ್ದಾಗಿರಲಿಲ್ಲ. ಅದರಲ್ಲೂ ಶಿಲ್ಪಾ ಶೆಟ್ಟಿಯ ನೆರಳಲ್ಲಿರುವುದು ಸುಲಭದ ಕೆಲಸವಲ್ಲ. ಜನರು ನನ್ನ ಶಮಿತಾ ಶೆಟ್ಟಿ, ಶಿಲ್ಪಾ ಶೆಟ್ಟಿಯ ತಂಗಿ ಎಂದೇ ಗುರುತಿಸುತ್ತಾರೆ. ಒಂದು ಬಗೆಯಲ್ಲಿ ನಾನು ಅದೃಷ್ಟವಂತೆ ಸಹ ಹೌದು'' ಎಂದಿದ್ದಾರೆ ಶಮಿತಾ.

  ಶಿಲ್ಪಾ ಶೆಟ್ಟಿ ತಂಗಿಯೆಂದೇ ಗುರುತಿಸುತ್ತಾ ಬಂದಿದ್ದಾರೆ

  ಶಿಲ್ಪಾ ಶೆಟ್ಟಿ ತಂಗಿಯೆಂದೇ ಗುರುತಿಸುತ್ತಾ ಬಂದಿದ್ದಾರೆ

  ''ಇಷ್ಟು ವರ್ಷಗಳಿಂದಲೂ ಜನರು ನನ್ನನ್ನು ಶಿಲ್ಪಾ ಶೆಟ್ಟಿಯ ತಂಗಿ ಎಂದು ಗುರುತಿಸುತ್ತಲೇ ಬಂದಿದ್ದರಿಂದ ನನ್ನನ್ನು ನಾನು ಹುಡುಕಿಕೊಳ್ಳುವ ಹಠ ಹೆಚ್ಚಾಯಿತು. ನನಗಾಗಿ ನಾನು ಪ್ರತ್ಯೇಕ ಗುರುತು ಪಡೆದುಕೊಳ್ಳುವ ಹಂಬಲ ಹೆಚ್ಚಾಗಿ ಆ ನಿಟ್ಟಿನಲ್ಲಿ ನಾನು ಕೆಲಸ ಮಾಡಿದೆ. ನಾನು ಚಿತ್ರರಂಗದಲ್ಲಿ ಕಳೆದಿರುವ ಈ ಎರಡು ದಶಕ ನನ್ನ ಪಾಲಿಗೆ ಬಹಳ ಕಠಿಣವಾಗಿದ್ದವು'' ಎಂದಿದ್ದಾರೆ ಶಮಿತಾ.

  ಶಮಿತಾ ಶೆಟ್ಟಿಯ ಹೊಗಳಿದ ಕರಣ್ ಜೋಹರ್

  ಶಮಿತಾ ಶೆಟ್ಟಿಯ ಹೊಗಳಿದ ಕರಣ್ ಜೋಹರ್

  ಶಮಿತಾ ಆಡುತ್ತಿರುವ ರೀತಿಯನ್ನು ಹೊಗಳಿದ ನಿರೂಪಕ ಕರಣ್ ಜೋಹರ್, ಈ ಶೋನ ಮೂಲಕ ಜನ ನಿನ್ನನ್ನು ಹೆಚ್ಚು ಗುರುತಿಸುವಂತಾಗುತ್ತಿದೆ. ನಿನ್ನ ವ್ಯಕ್ತಿತ್ವ ಎಂಥಹದ್ದು ಎಂದು ಜನರಿಗೆ ಪರಿಚಯ ಆಗುತ್ತಿದೆ ಎಂದಿದ್ದಾರೆ. ಬಿಗ್‌ಬಾಸ್ ಒಟಿಟಿಯಲ್ಲಿ ಶಮಿತಾ ಚೆನ್ನಾಗಿಯೇ ಆಡುತ್ತಿದ್ದಾರೆ. ಕೆಲವು ಸ್ಪರ್ಧಿಗಳೊಂದಿಗೆ ಜಗಳವನ್ನು ಆಡಿದ್ದಾರೆ.

  ರಾಜ್ ಕುಂದ್ರಾ ಬಂಧನ

  ರಾಜ್ ಕುಂದ್ರಾ ಬಂಧನ

  ಶಮಿತಾ ಭಾವ, ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಜುಲೈ 19 ರಂದು ಬಂಧನಕ್ಕೆ ಒಳಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿಯನ್ನೂ ಸಹ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶಮಿತಾ ಶೆಟ್ಟಿ ಸಹ ರಾಜ್ ಕುಂದ್ರಾ ಜೊತೆಗೆ ಆಪ್ತ ಸಂಬಂಧ ಹೊಂದಿದ್ದರು. ರಾಜ್ ಕುಂದ್ರಾ ನಿರ್ಮಿಸಲಿದ್ದ ಸಿನಿಮಾದಲ್ಲಿ ಶಮಿತಾ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸುವವರಿದ್ದರು. ಆದರೆ ಆ ವೇಳೆಗೆ ರಾಜ್ ಕುಂದ್ರಾ ಬಂಧನವಾಗಿದೆ. ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಹಾಟ್‌ಶಾಟ್ಸ್ ಹೆಸರಿನ ಆಪ್‌ಗೆ ವಿದೇಶದ ಸಂಸ್ಥೆಯೊಂದರ ಮೂಲಕ ಅಪ್‌ಲೋಡ್ ಮಾಡುತ್ತಿದ್ದ ಆರೋಪವನ್ನು ರಾಜ್ ಕುಂದ್ರಾ ಮೇಲೆ ಹೊರಿಸಲಾಗಿದೆ. ರಾಜ್ ಕುಂದ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಆಗಸ್ಟ್ 20ಕ್ಕೆ ಇದೆ.

  2000ರಲ್ಲಿ ಚಿತ್ರರಂಗಕ್ಕೆ ಎಂಟ್ರಿ

  2000ರಲ್ಲಿ ಚಿತ್ರರಂಗಕ್ಕೆ ಎಂಟ್ರಿ

  2000 ರಲ್ಲಿ ಬಿಡುಗಡೆ ಆಗಿದ್ದ ಸೂಪರ್ ಹಿಟ್ ಸಿನಿಮಾ 'ಮೊಹಬತ್ತೇನ್' ಮೂಲಕ ಶಮಿತಾ ಶೆಟ್ಟಿ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ತೆಲುಗು, ತಮಿಳು ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದರು. ಆದರೆ ಸ್ಟಾರ್ ನಟಿಯಾಗಿ ಗುರುತಿಸಿಕೊಳ್ಳಲು ಶಮಿತಾಗೆ ಸಾಧ್ಯವಾಗಲಿಲ್ಲ. 2007ರ 'ಕ್ಯಾಶ್' ಸಿನಿಮಾದ ಬಳಿಕ ಅವಕಾಶಗಳೇ ಇಲ್ಲವಾದವು ಶಮಿತಾಗೆ. 2017 ರಲ್ಲಿ 'ಯೊ ಕೆ ಹುವಾ ಬ್ರೊ' ವೆಬ್ ಸರಣಿ ಮೂಲಕ ಮರುಪ್ರವೇಶ ಮಾಡಿದರು. ಕಿರುತೆರೆಯಲ್ಲಿಯೂ ಮಿಂಚಿರುವ ಶಮಿತಾ, 2009ರಲ್ಲಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು, ನಂತರ 2015 ರಲ್ಲಿ ಝಲಕ್ ದಿಕಲಾಜಾ, 2019 ರಲ್ಲಿ ಫಿಯರ್ ಫ್ಯಾಕ್ಟರ್‌ನಲ್ಲಿ ಸ್ಪರ್ಧಿಯಾಗಿದ್ದರು. ಇದೀಗ ಬಿಗ್‌ಬಾಸ್ ಒಟಿಟಿಯಲ್ಲಿ ಭಾಗವಹಿಸಿದ್ದಾರೆ.

  English summary
  Actress Shamita Shetty said in Bigg Boss OTT that, it has been not an easy journey in the movie industry as Shilpa Shetty's sister.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X