twitter
    For Quick Alerts
    ALLOW NOTIFICATIONS  
    For Daily Alerts

    ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅಲ್ಲದೆ ಇನ್ನೂ 25 OTT ಗಳಿವೆ

    By ಜೇಮ್ಸ್ ಮಾರ್ಟಿನ್
    |

    ಕೊರೊನಾವೈರಸ್ ಬಂದಿದ್ದೇ ಬಂದಿದ್ದು, ಸಿನಿಮಾ, ಕಿರುತರೆ ಕ್ಷೇತ್ರದವರು ಒಮ್ಮೆ ಒವರ್ ದಿ ಟಾಪ್ (ಒಟಿಟಿ) ಯತ್ತ ನೋಡುವಂಥ ಪರಿಸ್ಥಿತಿ ಉಂಟಾಗಿದೆ. ಒಂದೆಡೆ ಶೂಟಿಂಗ್ ನಿಂತಿರುವುದರಿಂದ ನಿರ್ಮಾಪಕರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ವಿವಿಧ ಭಾಷೆಗಳ, ಪ್ರಮುಖ ನಟರು ನಟಿಸಿರುವ ಚಿತ್ರಗಳು ಅಮೆಜಾನ್ ಪ್ರೈಮ್‌ನಲ್ಲಿ ತೆರೆಕಾಣಲು ಸಜ್ಜಾಗಿರುವ ಸುದ್ದಿ ಬಂದಿದೆ.

    ಲಾಕ್ ಡೌನ್ ಆರಂಭಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಏಕ ಪರದೆಯ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ತೆರೆಯುವುದು ಕಷ್ಟ. ಹೀಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿ ವೇದಿಕೆಯ ಮೂಲಕ ಬಿಡುಗಡೆ ಮಾಡಲು ಬಯಸುತ್ತಿದ್ದಾರೆ. ನಿರ್ಮಾಪಕರ ನಿರ್ಧಾರವನ್ನು ಪ್ರದರ್ಶಕರು ವಿರೋಧಿಸುತ್ತಿದ್ದಾರೆ

    ನೇರವಾಗಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿವೆ ಏಳು ಸಿನಿಮಾಗಳು: ಇಲ್ಲಿದೆ ಮಾಹಿತಿನೇರವಾಗಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿವೆ ಏಳು ಸಿನಿಮಾಗಳು: ಇಲ್ಲಿದೆ ಮಾಹಿತಿ

    ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್‌ಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ನಿರ್ಮಾಪಕರಿಗೆ ಓವರ್ ದಿ ಟಾಪ್ ತಾಣಗಳಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡಬಾರದು ಎಂದು ಅಗ್ರಹಿಸಿದ್ದಾರೆ. ಈ ಗಲಾಟೆ ನಡುವೆ ಒಟಿಟಿಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಮೆಜಾನ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಸನ್‌ಎಕ್ಸ್‌ ಹೀಗೆ ಹಲವು ಒಟಿಟಿಗಳು ಜನಪ್ರಿಯವಾಗಿರಬಹುದು. ಇವಲ್ಲದೆ ಇನ್ನೂ 25ಕ್ಕೂ ಅಧಿಕ ಒಟಿಟಿಗಳು ಮಾರುಕಟ್ಟೆಯಲ್ಲಿವೆ.

    ಡಿಸ್ನಿ + ಹಾಟ್ ಸ್ಟಾರ್

    ಡಿಸ್ನಿ + ಹಾಟ್ ಸ್ಟಾರ್

    * ಡಿಸ್ನಿ + ಹಾಟ್ ಸ್ಟಾರ್- ಗೇಮ್ ಆಫ್ ಥ್ರೋನ್ಸ್, ಐಪಿಎಲ್ ಪಂದ್ಯಗಳ ನೇರ ಪ್ರಸಾರದಿಂದ ಜನಪ್ರಿಯತೆ ಗಳಿಸಿರುವ ಹಾಟ್ ಸ್ಟಾರ್ ಅಪ್ಲಿಕೇಷನ್ ನಲ್ಲಿ ಈಗ ಡಿಸ್ನಿ ನಿರ್ಮಿಸಿದ ಅನಿಮೇಷನ್ ಚಿತ್ರಗಳು, ಶೋಗಳು ಲಭ್ಯವಿರಲಿದೆ. ಬೆಲೆ ವಾರ್ಷಿಕ 1,499ರು.

    ಆಪಲ್ ಟಿವಿ ಪ್ಲಸ್

    ಆಪಲ್ ಟಿವಿ ಪ್ಲಸ್

    ಭಾರತದಲ್ಲಿ ಇತ್ತೀಚೆಗೆ ಲಭ್ಯವಿರುವ ಆಪಲ್ ಟಿವಿ ಪ್ಲಸ್ ತನ್ನ ರಿಜಿನಲ್ ಸೀರಿಸ್ ನಿಂದಾಗಿ ಜನಪ್ರಿಯತೆ ಗಳಿಸಿದೆ. ಆಪಲ್ ಉತ್ಪನ್ನ ಖರೀದಿಸಿದವರಿಗೆ ಒಂದು ವರ್ಷಗಳ ಉಚಿತ ಚಂದಾದಾರಿಕೆ ಸಿಗಲಿದೆ. ಚಂದಾದಾರರಾಗಲು ತಿಂಗಳಿಗೆ 99 ರು ನೀಡಬೇಕು.

    ಲಾಕ್ ಡೌನ್ ಮುಗಿದ ನಂತರ ಚಿತ್ರಮಂದಿರಗಳ ಪರಿಸ್ಥಿತಿ ಏನು? ಕೋಟಿ ನಷ್ಟದ ಬಗ್ಗೆ ಪ್ರದರ್ಶಕರು ಹೇಳುವುದೇನು?ಲಾಕ್ ಡೌನ್ ಮುಗಿದ ನಂತರ ಚಿತ್ರಮಂದಿರಗಳ ಪರಿಸ್ಥಿತಿ ಏನು? ಕೋಟಿ ನಷ್ಟದ ಬಗ್ಗೆ ಪ್ರದರ್ಶಕರು ಹೇಳುವುದೇನು?

    ಝೀ 5

    ಝೀ 5

    ಏರ್ ಟೆಲ್ ಪೋಸ್ಟ್ ಪೇಯ್ಡ್ ಉಳ್ಳವರಿಗೆ ಝೀ 5 ಕಂಟೆಟ್ ಸಿಗಲಿದೆ. ಇದಲ್ಲದೆ ಪ್ರತ್ಯೇಕವಾಗಿ ಝೀ 5 ಚಂದಾದಾರರಾಗಲು ವಾರ್ಷಿಕ 999ರು ಪಾವತಿಸಬೇಕು. ಕನ್ನಡದಲ್ಲೂ ಹಲವು ಡಬ್ ಆಗಿರುವ ಸಿನಿಮಾ, ಒರಿಜಿನಲ್ ಸರಣಿ ಲಭ್ಯವಿದ್ದು, ಪ್ರಾದೇಶಿಕ ಭಾಷೆಗೆ ಒತ್ತು ನೀಡಲಾಗಿದೆ. ಹಲವು ಹಳೆ ಚಿತ್ರಗಳು ಹೊಸ ಒರಿಜಿನಲ್ಸ್ ನೋಡಬಹುದು.

    ಯೂಟ್ಯೂಬ್ ಪ್ರೀಮಿಯಂ

    ಯೂಟ್ಯೂಬ್ ಪ್ರೀಮಿಯಂ

    ಯೂಟ್ಯೂಬ್ ಪ್ರೀಮಿಯಂ ಸದಸ್ಯತ್ವ ಪಡೆದುಕೊಂಡರೆ ಬಹುದೊಡ್ಡ ವಿಡಿಯೋ ಲೈಬ್ರರಿಗೆ ನಿಮ್ಮ ಕರೆದೊಯ್ಯಲಿದೆ. ಸಿನಿಮಾ, ಹಾಡು, ಮಾಹಿತಿ ಮನರಂಜನೆ ಎಲ್ಲವೂ ಸಿಗಲಿದೆ. ಪ್ರತಿ ತಿಂಗಳಿಗೆ 129 ರು ನಂತೆ ಪಾವತಿಸಬೇಕು.

    Mubi -ಮುಬಿ

    Mubi -ಮುಬಿ

    ಮಾರುಕಟ್ಟೆಯಲ್ಲಿರುವ ಹೊಚ್ಚ ಹೊಸ ಪ್ಲೇಯರ್ ಇದಾಗಿದ್ದು, ದಿನಕ್ಕೊಂದು ಹೊಸ ಸಿನಿಮಾ ಸೇರ್ಪಡೆಯಾಗುತ್ತಿದೆ. ಪ್ರತಿ ತಿಂಗಳಿಗೆ 499 ರು ಚಂದಾದಾರಿಕೆ ಹೊಂದಿದೆ.

    Sony liv: ಸೋನಿ ಲಿವ್

    Sony liv: ಸೋನಿ ಲಿವ್

    ಸೋನಿ ಸಂಸ್ಥೆಯ ಅಪ್ಲಿಕೇಷನ್ ನಲ್ಲಿ ಸಿನಿಮಾ, ರಿಯಾಲಿಟಿ ಶೋ, ವಿವಿಧ ಕ್ರೀಡೆಗಳ ಲೈವ್ ಪ್ರಸಾರಗಳನ್ನು ನೋಡಬಹುದು. ವಾರ್ಷಿಕ 499 ರು ಚಂದಾದಾರಿಕೆ ಹೊಂದಿದೆ.

    Discovery plus

    Discovery plus

    ಡಿಸ್ಕವರಿ ಪ್ಲಸ್ ನಲ್ಲಿ ಬೇರೆ ಒಟಿಟಿಯಂತೆ ಸಿನಿಮಾಗಳಿಲ್ಲ, ಮನರಂಜನೆಗಿಂತ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. 40 ಪ್ಲಸ್ ವಿಭಾಗವಿದ್ದು ಸಾಹಸ, ವಿಜ್ಞಾನ, ಆಹಾರ, ಜೀವನಶೈಲಿ ಹೀಗೆ ವಿವಿಧ ರೀತಿಯಲ್ಲಿ ವಿಡಿಯೋಗಳನ್ನು ವೀಕ್ಷಿಸಬಹುದು.

    ALT Balaji

    ALT Balaji

    ಸಿನಿಮಾ, ಸರಣಿಯಲ್ಲದೆ ಕಾಮಿಡಿಯಾಗಿ ಹೆಚ್ಚಿನ ಮಹತ್ವದನ್ನು ಈ ಒಟಿಟಿ ಪ್ಲಾಟ್ ಫಾರ್ಮ್ ನೀಡಿದೆ. ವಿಶೇಷ ಮ್ಯೂಸಿಕ್ ವಿಡಿಯೋಗಳಿವೆ. ಚಂದಾದಾರಿಗೆ ವೆಚ್ಚ ವರ್ಷಕ್ಕೆ 300 ರು ಮಾತ್ರ.

    ಎರೋಸ್ ನೌ

    ಎರೋಸ್ ನೌ

    12,000 ಹೆಚ್ಚು ಸಂಗ್ರಹಗಳನ್ನು ಹೊಂದಿರುವ ಅತಿ ದೊಡ್ಡ ಡಿಜಿಟಲ್ ವೇದಿಕೆಯಾಗಿದೆ ಎರೋಸ್ ನೌ. ಹಿಂದಿ ಚಿತ್ರಗಲ್ಲದೆ, ಈಗ ಪ್ರಾದೇಶಿಕ ಚಿತ್ರಗಳು ಕೂಡಾ ಜನಪ್ರಿಯವಾಗುತ್ತಿವೆ.

    ಹಂಗಾಮಾ

    ಹಂಗಾಮಾ

    ಹಾಡುಗಳ ಬೃಹತ್ ಸಂಗ್ರಹ ಹೊಂದಿರುವ ಹಂಗಾಮಾ ಈಗ ಒಡಿಯಾ, ಭೋಜಪುರಿ ಹಾಗೂ ಮರಾಠಿ ಕಟೆಂಟ್ ಕೂಡಾ ಲಭವಿದೆ. ಹಾಡು, ಸಿನಿಮಾ, ಮನರಂಜನೆ ವಿಡಿಯೋಗಳಿವೆ. ವಾರ್ಷಿಕ ಚಂದಾದಾರ ಶುಲ್ಕ 1399 ರು .

    ಎಂಎಕ್ಸ್ ಪ್ಲೇಯರ್

    ಎಂಎಕ್ಸ್ ಪ್ಲೇಯರ್

    ಒಂದು ವರ್ಷ ಹಳೆಯದಾದ ಎಂಎಕ್ಸ್ ಪ್ಲೇಯರ್ ನಲ್ಲಿ ಎಲ್ಲಾ ಭಾಷೆಯ ಸಣ್ಣ ಹಾಗೂ ದೊಡ್ಡ ವಿಡಿಯೋಗಳು ಲಭ್ಯವಿದೆ. ಸಿನಿಮಾಗಳಿವೆ. ಮುಖ್ಯವಿಷ್ಯವೆಂದರೆ ಇದು ಉಚಿತವಾಗಿ ಲಭ್ಯವಿದೆ.

    ವೂಟ್

    ವೂಟ್

    ಕಲರ್ಸ್ ವಾಹಿನಿಯ ಕಾರ್ಯಕ್ರಮಗಳ ಪ್ರಸಾರಕ್ಕಾಗಿ ಇರುವ ವೂಟ್ ಅಪ್ಲಿಕೇಷನ್ ನಲ್ಲಿ ಹಿಂದಿ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವವಿದ್ದರೂ ಇತ್ತೀಚೆಗೆ ಪ್ರಾದೇಶಿಕ ಭಾಷೆಗೆ ಒತ್ತು ನೀಡಲಾಗುತ್ತಿದೆ. ವೀಕ್ಷಣೆ ಉಚಿತವಾಗಿದ್ದರೂ ಸಿಕ್ಕಾಪಟ್ಟೆ ಆಂತರಿಕ ಆಡ್ ಗಳಿರುತ್ತವೆ.

    HOOQ

    HOOQ

    ಹಾಲಿವುಡ್ ಚಿತ್ರಗಳನ್ನು ಇಷ್ಟಪಡುವವರಿಗೆ ಹಾಗು ಜೊತೆಗೆ ಪ್ರಾದೇಶಿಕ ಸಿನಿಮಾ ನೋಡಬಯಸುವವರಿಗೆ ಈ ಆಪ್ ಸೂಕ್ತವಾಗಿದೆ. ಸಿನಿಮಾ, ಸರಣಿ ಎಲ್ಲವೂ ಇದರಲ್ಲಿವೆ.

    ಫ್ಲಿಪ್ ಕಾರ್ಟ್ ವಿಡಿಯೋ

    ಫ್ಲಿಪ್ ಕಾರ್ಟ್ ವಿಡಿಯೋ

    ಬಹಳಷ್ಟು ಮಂದಿಗೆ ಫ್ಲಿಪ್ ಕಾರ್ಟ್ ವಿಡಿಯೋ ಇರುವ ಬಗ್ಗೆ ತಿಳಿದಿಲ್ಲ. ಆದರೆ, 5000 ಕ್ಕೂ ಅಧಿಕ ಸಿನಿಮಾ, ಕಿರುಚಿತ್ರ, ಟಿವಿ ಶೋ ಹೊಂದಿದ್ದು, ವಿವಿಧ ಭಾಷೆಗಳಲ್ಲಿ ಲಭ್ಯವಿದೆ. ಅಲ್ಲದೆ, ಸಂಪೂರ್ಣ ಉಚಿತವಾಗಿದೆ.

    ಬಿಗ್ ಫ್ಲಿಕ್ಸ್

    ಬಿಗ್ ಫ್ಲಿಕ್ಸ್

    ಭಾರತದ ಮೊದಲ ಆನ್ ಡಿಮ್ಯಾಂಡ್ ಸೇವೆ ಒದಗಿಸುವ ವೇದಿಕೆ ಎಂದು ಖ್ಯಾತಿ ಗಳಿಸಿರುವ ಬಿಗ್ ಫ್ಲಿಕ್ಸ್ ನಲ್ಲಿ ವೈವಿಧ್ಯಮಯ ಸಿನಿಮಾ ಸಂಗ್ರಹವಿದೆ. ಹಿಂದಿ, ತೆಲುಗು, ಬೆಂಗಾಲಿ ಹೀಗೆ ವಿವಿಧ ಭಾಷೆ ಸಿನಿಮಾಗಳಿವೆ. 50 ರು ಪ್ರತಿ ತಿಂಗಳ ಚಂದಾದಾರಿಕೆ ದರವಿದೆ.

    Yupp TV

    Yupp TV

    ಸಿನಿಮಾಗಳ ಸಂಗ್ರಹದ ಜೊತೆಗೆ ಈ ಅಪ್ಲಿಕೇಷನ್ ಮೂಲಕ ಲೈವ್ ಟಿವಿ ವೀಕ್ಷಿಸಬಹುದು. ಸರಿ ಸುಮಾರು 106 ಚಾನೆಲ್ ಲಭ್ಯವಿದ್ದು, ತಿಂಗಳಿಗೆ 49 ರುಗಳು ಮಾತ್ರ.

    ಪ್ರೈಮ್ ಫ್ಲಿಕ್ಸ್

    ಪ್ರೈಮ್ ಫ್ಲಿಕ್ಸ್

    ಆನ್ ಲೈನ್ ಹಾಗೂ ಆಫ್ ಲೈನ್ ನಲ್ಲಿ ಸಿನಿಮಾ ನೋಡಲು ಇರುವ ವೇದಿಕೆ. ಆಂಡ್ರಾಯ್ಡ್ ಹಾಗೂ ಐಒಎಸ್ ನಲ್ಲಿ ಲಭ್ಯವಿದೆ. ವಾರ್ಷಿಕ ಬಳಕೆ ವೆಚ್ಚ 299 ರು.

    Addatimes

    Addatimes

    ಬೆಂಗಾಲಿಗಳಿಗೆ ಹೇಳಿ ಮಾಡಿಸಿದ ವೇದಿಕೆ ಇದಾಗಿದೆ. ಅಡ್ಡಾಟೈಮ್ಸ್ ನಲ್ಲಿ ಹಿಂದಿ ಡಬ್ ಆವೃತ್ತಿ ಸಿನಿಮಾಗಳು ಇಲ್ಲಿವೆ. ವಾರ್ಷಿಕ 299 ರು.

    Arre ಆಪ್

    Arre ಆಪ್

    ವಿಡಿಯೋ, ಆಡಿಯೋ, ವೆಬ್ ಸೀರಿಸ್, ಡ್ಯಾಕುಮೆಂಟರಿ, ಡೂಡ್ಲ್ ಗಳೆಲ್ಲವೂ ಇದರಲ್ಲಿ ಲಭ್ಯ. ಈ ಆಪ್ ಉಚಿತವಾಗಿ ಲಭ್ಯವಿದೆ.

    hoichoi

    hoichoi

    ಬೆಂಗಾಲಿಗಳಿಗೆ ಹೇಳಿ ಮಾಡಿಸಿದ ವೇದಿಕೆ ಇದಾಗಿದೆ. ಅಡ್ಡಾಟೈಮ್ಸ್ ನಲ್ಲಿ ಹಿಂದಿ ಡಬ್ ಆವೃತ್ತಿ ಸಿನಿಮಾಗಳು ಇಲ್ಲಿವೆ. ಇಂಗ್ಲೀಷ್ subtitles ಗಳು ಲಭ್ಯವಿದೆ. ವಾರ್ಷಿಕ 499 ರು.

    Spuul

    Spuul

    Spuul ಅಪ್ಲಿಕೇಷನ್ ನಲ್ಲಿ 10,000 ಹಿಂದಿ ಚಿತ್ರಗಳಿದ್ದು, ಹಲವಾರು ಸಿನಿಮಾಗಳು ಉಚಿತವಾಗಿ ಲಭ್ಯವಿದೆ. ಚಂದಾದಾರಿಕೆಯೂ ಇದ್ದು,ವಾರ್ಷಿಕ 999 ರು ಖರ್ಚು ಮಾಡಬೇಕು.

    Sun NXT

    Sun NXT

    ದಕ್ಷಿಣ ಭಾರತೀಯ ಚಿತ್ರಗಳು 390 ಶೋ, 4087 ಸಿನಿಮಾಗಳಿವೆ. ವಾರ್ಷಿಕವಾಗಿ 480 ರು ವರ್ಷಕ್ಕೆ ನೀಡಬೇಕಾಗುತ್ತದೆ. ದಕ್ಷಿಣ ಭಾರತದಲ್ಲಿ ಹೆಚ್ಚಿನ ಮಟ್ಟದಲ್ಲಿ ಸಿನಿಮಾ ಸಂಗ್ರಹವನ್ನು ಸನ್ ನೆಟ್ವರ್ಕ್ ನಲ್ಲಿ ಹೊಂದಿವೆ.

    ಕನ್ನಡದ namma Flix

    ಕನ್ನಡದ namma Flix

    ಕನ್ನಡ ಏಕೈಕ ಆನ್ ಡಿಮ್ಯಾಂಡ್ ವಿಡಿಯೋ ಸ್ಟ್ರೀಮಿಂಗ್ ಆಪ್ ಎನಿಸಿಕೊಂಡಿರುವ Namma Flix ನ ಲೈಬ್ರರಿಯಲ್ಲಿ ಸದ್ಯ 100ಕ್ಕೂ ಅಧಿಕ ಸಿನಿಮಾಗಳಿವೆ. ಇತ್ತೀಚೆಗೆ ಬಿಡಗಡೆಯಾದ ಮತ್ತೆ ಉದ್ಭವ ಚಿತ್ರ ಕೂಡಾ ಈ ಒಟಿಟಿಯಲ್ಲಿ ಪ್ರದರ್ಶನ ಕಂಡಿದೆ. ಉಚಿತವಾಗಿ ಅಥವಾ ಚಂದಾದಾರಿಕೆ ಪಡೆದು ಸಿನಿಮಾ ವೀಕ್ಷಿಸಬಹುದು. ಕನ್ನಡ ಸಿನಿಮಾಗಳನ್ನು ನೋಡಲು ವರ್ಷವೊಂದಕ್ಕೆ ಕೇವಲ 399 ರೂ ನೀಡಬೇಕಾಗಿದೆ. ಇದರ ಹೊರತಾಗಿ, ವಾರದ, ತಿಂಗಳ ಪ್ಲ್ಯಾನ್‌ಗಳು ಸಹ ಲಭ್ಯವಿದ್ದು, ವಾರಕ್ಕೆ 19 ತಿಂಗಳಿಗೆ 49 ರೂಪಾಯಿಯ ಪ್ಲ್ಯಾನ್‌ಗಳು ಸಹ ಲಭ್ಯವಿದೆ

    ಏರ್ ಟೆಲ್ Xtream(Airtel TV)

    ಏರ್ ಟೆಲ್ Xtream(Airtel TV)

    ಏರ್ಟೆಲ್ ಟಿವಿ ಈಗ ಏರ್ ಟೆಲ್ Xtream ಆಪ್ ಆಗಿದೆ. ಕಲರ್ಸ್, ಎಚ್ ಬಿಒ, ಈಟಿವಿ, ಸಿಎನ್ಎನ್, ಕಾರ್ಟೂನ್ ನೆಟ್ವರ್ಕ್ ಸೇರಿದಂತೆ 350 ಪ್ಲಸ್ ಚಾನೆಲ್ ,10,000ಕ್ಕೂ ಅಧಿಕ ಸಿನಿಮಾ, 100ಕ್ಕೂ ಅಧಿಕ ಟಿವಿ ಶೋಗಳು ವಿವಿಧ ಭಾಷೆಯಲ್ಲಿ ಲಭ್ಯ. ಜೊತೆಗೆ ಟಿವಿ ಲೈವ್ ಸ್ಟ್ರೀಮಿಂಗ್ ಕೂಡಾ ಇದೆ. ಒಟಿಟಿ ಪಟ್ಟಿಯಲ್ಲಿರುವ ಅನೇಕ ಆಪ್ ಗಳ ಸಂಗ್ರಹ ಏರ್ಟೆಲ್ Xtreamವೊಂದರಲ್ಲೇ ಸಿಗುತ್ತದೆ.

    ULLU VoD

    ULLU VoD

    ವಿಡಿಯೋ ಆನ್ ಡಿಮ್ಯಾಂಡ್ ವೇದಿಕೆ ಉಲ್ಲು(Ullu) ಹೌದು ಗೂಬೆ ಚಿತ್ರವಿರುವ ಈ ಆಪ್ ಜನಪ್ರಿಯತೆ ಗಳಿಸಿದೆ. ಹಿಂದಿಯಲ್ಲದೆ ಮರಾಠಿ, ಗುಜರಾತಿ, ತಮಿಳು ಭಾಷೆಯಲ್ಲೂ ಲಭ್ಯವಿದೆ.ಸಿನಿಮಾ, ಕಿರುಚಿತ್ರ, ಟಿವಿ ಶೋ, ಒರಿಜಿನಲ್ ಸರಣಿ ಲಭ್ಯ.

    ಟಿವಿಎಫ್

    ಟಿವಿಎಫ್

    ವೆಬ್ ಸೀರಿಸ್ ಮೂಲಕವೇ ಜನಪ್ರಿಯತೆ ಗಳಿಸಿದ ಟಿವಿಎಫ್ ನಲ್ಲಿ ಕೋಟಾ ಫ್ಯಾಕ್ಟರಿ, ಯೇ ಮೇರಿ ಫ್ಯಾಮಿಲಿ ಜನಪ್ರಿಯತೆ ಗಳಿಸಿವೆ. ಸಾಂಸಾರಿಕ, ಸಾಹಸ, ಕಾಮಿಡಿ ವೆಬ್ ಸೀರಿಸ್ ಗಳು ಇಲ್ಲಿವೆ. ಟಿವಿಎಫ್ ಕ್ಯೂತಿಯಪ್ಪ, ಒರಿಜಿನಲ್, ಗಿರ್ಲಿಯಪ್ಪ, ಟೈ ಲೈನರ್ಸ್ ಯುವಜನಾಂಗಕ್ಕೆ ಆಕರ್ಷಣೆಯಾಗಿದೆ.

    English summary
    Apart from Netflix and Prime Video there are around 22 other OTT platforms that one can watch and enjoy.
    Sunday, May 17, 2020, 20:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X