Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ ಬರ್ತಿದೆ 'ಸ್ಕ್ವಿಡ್ ಗೇಮ್': ವಿಶ್ವದಾಖಲೆ ಬರೆದ ವೆಬ್ ಸರಣಿ ಬಗ್ಗೆ ಇಲ್ಲಿ ತಿಳಿಯಿರಿ
ನೆಟ್‌ಫ್ಲಿಕ್ಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆದ ಕೊರಿಯನ್ ವೆಬ್ ಸರಣಿ 'ಸ್ಕ್ವಿಡ್ ಗೇಮ್' ಮತ್ತೆ ಬರುತ್ತಿದೆ. ಜೀವನದಲ್ಲಿ ಸೋತ, ಹಣದ ತೀವ್ರ ಅವಶ್ಯಕತೆ ಇರುವ, ಜೂಜುಕೋರ ಮನಸ್ಥಿತಿಯ ವ್ಯಕ್ತಿಗಳು, ಹಣಕ್ಕಾಗಿ ಮಕ್ಕಳು ಆಡುವ ಆಟ ಆಡುವ ಕತೆಯನ್ನು ಹೊಂದಿದ್ದ 'ಸ್ಕ್ವಿಡ್ ಗೇಮ್' ಭಾರಿ ಯಶಸ್ಸು ಗಳಿಸಿತ್ತು.
ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ ಭಾರಿ ಲಾಭದಾಯಕ ಹಾಗೂ ಅತಿ ಹೆಚ್ಚು ಜನರಿಂದ ವೀಕ್ಷಣೆಗೆ ಒಳಪಟ್ಟ ಶೋ ಎಂಬ ದಾಖಲೆ ಬರೆದಿರುವ ಸ್ಕ್ವಿಡ್ ಗೇಮ್ ಸೀಸನ್ 2 ಅನ್ನು ನೆಟ್‌ಫ್ಲಿಕ್ಸ್ ಘೋಷಣೆ ಮಾಡಿದ್ದು, ಶೋ ಕುರಿತ ಸಣ್ಣ ಟೀಸರ್ ಅನ್ನು ಸಹ ಪ್ರಕಟಿಸಿದೆ.
ಸ್ಕ್ವಿಡ್ ಗೇಮ್ ವೀಕ್ಷಕರಿಗೆ ಪತ್ರವೊಂದನ್ನು ಬರೆದಿರುವ ನಿರ್ದೇಶಕ ವಾಂಗ್ ಡಾಂಗ್ ಯುಕ್, ''ಸ್ಕ್ವಿಡ್ ಗೇಮ್' ಮಾಡಲು ನಮಗೆ 12 ವರ್ಷಗಳು ಬೇಕಾಯಿತು. ಆದರೆ ಅದು ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀಕ್ಷನೆಯಾದ ಶೋ ಆಗಲು ಕೇವಲ 12 ದಿನಗಳ ಸಾಕಾಯ್ತು'' ಎಂದು ನೆನಪು ಮಾಡಿಕೊಂಡಿದ್ದಾರೆ.
''ನಮ್ಮ ಸ್ಕ್ವಿಡ್ ಗೇಮ್ ಶೋ ಅನ್ನು ನೋಡಿ ಮೆಚ್ಚಿದ್ದಕ್ಕೆ ವೆಬ್ ಸರಣಿಯ ನಿರ್ದೇಶಕ, ಬರಹಗಾರ, ನಿರ್ಮಾಪಕನಾಗಿರುವ ನಾನು ಧನ್ಯವಾದ ಹೇಳುತ್ತೇನೆ'' ಎಂದಿದ್ದಾರೆ. ವಾಂಗ್ ಡಾಂಗ್ ಯುಕ್ 'ಸ್ಕ್ವಿಡ್ ಗೇಮ್' ನ ಕಾರ್ಯಕಾರಿ ನಿರ್ಮಾಪಕ ಸಹ ಆಗಿದ್ದಾರೆ.

ಯಾವ ಪಾತ್ರಗಳು ಶೋನಲ್ಲಿರಲಿವೆ?
'ಸ್ಕ್ವಿಡ್ ಗೇಮ್' ಸೀಸನ್ 2 ನಲ್ಲಿ ಯಾವ ಪಾತ್ರಗಳು ಇರಲಿವೆ ಎಂಬ ಬಗ್ಗೆಯೂ ವಾಂಗ್ ಡಾಂಗ್ ಯುಕ್ ಸುಳಿವು ನೀಡಿದ್ದು, ವೆಬ್ ಸರಣಿಯ ಮುಖ್ಯ ಪಾತ್ರ ಜಿ-ಹಾನ್, ಫ್ರಂಟ್ ಮ್ಯಾನ್, ಯಾಂಗ್ ಹೀಳ ಬಾಯ್‌ಫ್ರೆಂಡ್, ಜನರನ್ನು ಗೇಮ್‌ಗೆ ಆಯ್ಕೆ ಮಾಡುವ ಸೇಲ್ಸ್‌ಮ್ಯಾನ್ ಡಾಡ್ಚಿ ಇನ್ನೂ ಕೆಲವರು ಸೀಸನ್ 2 ರಲ್ಲಿ ಮುಂದುವರೆಯಲಿದ್ದಾರೆ.

94 ರಾಷ್ಟ್ರಗಳ ಜನ ಶೋ ನೋಡಿದ್ದಾರೆ
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದ್ದ 'ಸ್ಕ್ವಿಡ್ ಗೇಮ್' ನೆಟ್‌ಫ್ಲಿಕ್ಸ್‌ನ ಈವರೆಗಿನ ಅತ್ಯಂತ ಯಶಸ್ವಿ ವೆಬ್ ಸರಣಿ ಎನಿಸಿಕೊಂಡಿತು. 94 ರಾಷ್ಟ್ರಗಳಲ್ಲಿ ಅಧಿಕೃತವಾಗಿ ಇದು ಟ್ರೆಂಡಿಂಗ್ ಟಾಪ್ ಶೋ ಎನಿಸಿಕೊಂಡಿತು. ಬಿಡುಗಡೆ ಆದ ಕೇವಲ 12 ದಿನಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಈವರೆಗೆ ಅತಿ ಹೆಚ್ಚು ನೋಡಲಾದ ಶೋ ಎನಿಸಿಕೊಂಡಿತು.

ಅತಿ ಹೆಚ್ಚು ನೋಡಲಾದ ಶೋ
ಸ್ಕ್ವಿಡ್ ಗೇಮ್ ಬಿಡುಗಡೆ ಆದ ಕೇವಲ 28 ದಿನಗಳಲ್ಲಿ 1.65 ಲಕ್ಷ ಕೋಟಿಗೂ ಹೆಚ್ಚು ಗಂಟೆಗಳ ಕಾಲ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಿತ್ತು. ವಿಶ್ವದಾದ್ಯಂತ ಸುಮಾರು 100 ಕೋಟಿಗೂ ಹೆಚ್ಚು ಮಂದಿ ಈ ವೆಬ್ ಸರಣಿಯನ್ನು ನೋಡಿದ್ದರು. ನೆಟ್‌ಫ್ಲಿಕ್ಸ್ ಇಲ್ಲದ ಚೀನಾದಲ್ಲಿಯೂ ಈ ಶೋನ ಪೈರೆಟೆಡ್ ಕಾಪಿಗಳು ಹರಿದಾಡಿ ಅಲ್ಲಿಯೂ ಶೋ ಜನಪ್ರಿಯವಾಗಿತ್ತು.

ಅತಿ ಹೆಚ್ಚು ಮೌಲ್ಯದ ವೆಬ್ ಸರಣಿ
ವಿಶ್ವದಾದ್ಯಂತ ವೈರಲ್ ಆಗಿದ್ದ ವೆಬ್ ಸರಣಿ 'ಸ್ಕ್ವಿಡ್ ಗೇಮ್'ನ ಮೌಲ್ಯ 6750 ಕೋಟಿ ರುಪಾಯಿ. ನೆಟ್‌ಫ್ಲಿಕ್ಸ್‌ನ ವೆಬ್ ಸರಣಿ, ಸಿನಿಮಾಗಳ ಮಾರುಕಟ್ಟೆಯನ್ನು ಟಿವಿ ಕಾರ್ಯಕ್ರಮಗಳ ಟಿಆರ್‌ಪಿ, ಸಿನಿಮಾಗಳ ಬಾಕ್ಸ್‌ಆಫೀಸ್ ಮಾದರಿಯಲ್ಲಿ ಲೆಕ್ಕಹಾಕಲಾಗುವುದಿಲ್ಲವಾದರೂ, ನೆಟ್‌ಫ್ಲಿಕ್ಸ್ ತನ್ನ ಕಂಟೆಂಟ್‌ನ ಒಟ್ಟು ವೀಕ್ಷಣೆಯ ಮಾಹಿತಿಯ ಆಧಾರದಲ್ಲಿ ಯಾವ ಕಂಟೆಂಟ್ ಎಷ್ಟು ಮಾರುಕಟ್ಟೆ ರೆವಿನ್ಯೂ ತರಬಹುದು ಎಂಬುದನ್ನು ಲೆಕ್ಕ ಹಾಕುತ್ತದೆ. ಅದರ ಆಧಾರದಲ್ಲಿ 'ಸ್ಕ್ವಿಡ್ ಗೇಮ್'ನ ಒಟ್ಟು ಮಾರುಕಟ್ಟೆ ಮೌಲ್ಯ 900 ಮಿಲಿಯನ್ ಡಾಲರ್, ಭಾರತೀಯ ರೂಪಾಯಿ ಲೆಕ್ಕದಲ್ಲಿ 6750 ಕೋಟಿ ರು ಎಂದಾಗುತ್ತದೆ.