twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರು ಅಪರಾಧ ಪ್ರಕರಣ: ಹೈಕೋರ್ಟ್ ಆದೇಶಕ್ಕೆ ತಲೆಬಾಗಿದ ನೆಟ್‌ಫ್ಲಿಕ್ಸ್

    |

    ಒಟಿಟಿ ದಿಗ್ಗಜ ನೆಟ್‌ಫ್ಲಿಕ್ಸ್‌ ಇತ್ತೀಚೆಗೆ ಡಾಕ್ಯುಮೆಂಟರಿ ಸೀರೀಸ್ ಒಂದನ್ನು ಹೊರತಂದಿತ್ತು. ಬೆಂಗಳೂರಿನಲ್ಲಿ ನಡೆದ ಕೆಲವು ಅಪರಾಧ ಪ್ರಕರಣಗಳ ಕುರಿತಾದ ಡಾಕ್ಯುಮೆಂಟ್ ಸರಣಿ ಅದು.

    'ಕ್ರೈಂ ಸ್ಟೋರೀಸ್; ಇಂಡಿಯಾ ಡಿಟೆಕ್ಟೀವ್ಸ್' ಹೆಸರಿನ ನೆಟ್‌ಫ್ಲಿಕ್ಸ್‌ನ ಡಾಕ್ಯುಮೆಂಟ್ ಸೀರೀಸ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಮೂರು ಅಪರಾಧ ಪ್ರಕರಣಗಳನ್ನು ತನಿಖೆ ಹಂತದಲ್ಲಿ ಚಿತ್ರೀಕರಿಸಿ ಪ್ರಸಾರ ಮಾಡಲಾಗಿತ್ತು. ಕ್ರೈಂ ನಡೆದಾಗಿನಿಂದ, ಪೊಲೀಸರ ವಿಚಾರಣೆ, ತನಿಖೆ, ಆರೋಪಿಗಳನ್ನು ಹಿಡಿಯುವ ರೀತಿ ಎಲ್ಲವನ್ನೂ ಚಿತ್ರೀಕರಿಸಿ ಪ್ರಸಾರ ಮಾಡಲಾಗಿತ್ತು.

    ಈ ಡಾಕ್ಯುಮೆಂಟ್‌ ಸೀರೀಸ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮೂರು ಅಪರಾಧ ಪ್ರಕರಣಗಳಿದ್ದವು. ಅದರಲ್ಲಿ ಮೊದಲ ಪ್ರಕರಣವಾದ 'ಎ ಮದರ್ ಮರ್ಡರ್' ಎಪಿಸೋಡ್ ಅನ್ನು ನೆಟ್‌ಫ್ಲಿಕ್ಸ್ ಹಿಂಪಡೆದಿದೆ. ಹೈಕೋರ್ಟ್ ಆದೇಶದ ಮೇರೆಗೆ ನೆಟ್‌ಫ್ಲಿಕ್ಸ್ ಈ ನಿರ್ಣಯ ತೆಗೆದುಕೊಂಡಿದೆ.

    Netflix Take Down A Episode From Crime Stories: India Detectives Documentary Series

    'ಎ ಮದರ್ ಮರ್ಡರ್‌' ಕಂತು, ಟೆಕಿಯೊಬ್ಬಾಕೆ ತನ್ನ ತಾಯಿಯನ್ನು ಕೊಂದು ಪರಾರಿಯಾಗಿದ್ದ ಪ್ರಕರಣದ್ದಾಗಿದೆ. ಈ ಪ್ರಕರಣದಲ್ಲಿ ಯುವಕನೊಬ್ಬ ಆರೋಪಿಯಾಗಿದ್ದು, ಮುಖ್ಯ ಆರೋಪಿಯಾಗಿದ್ದ ಯುವತಿಗೆ ಆ ಯುವಕ ಸಹಾಯ ಮಾಡಿದ್ದಾನೆ ಎಂಬರ್ಥ ಬರುವಂತೆ ತೋರಿಸಲಾಗಿದೆ. ಯುವಕ ಪೊಲೀಸರ ಮುಂದೆ ತಪ್ಪೊಪ್ಪಿಕೊಳ್ಳುವ (ಕೊಲೆ ಮಾಡಿದ್ದಾಗಿ ಅಲ್ಲ) ದೃಶ್ಯವೊಂದಿದೆ. ಈ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

    ''ನಾನು ಸೆಕ್ಷನ್ 302, 307, 212, 201 ಹಾಗೂ 34ರ ಅನ್ವಯ ವಿಚಾರಣೆ ಎದುರಿಸುತ್ತಿದ್ದೇನೆ. ನೆಟ್​ಫ್ಲಿಕ್ಸ್​ ಸರಣಿಯಲ್ಲಿ ತನಿಖೆಗೆ ಬಳಕೆಯಾಗಿರುವ ಕೆಲ ಅಂಶಗಳು ಸೇರಿಕೊಂಡಿವೆ. ಇದು ನನ್ನ ರಕ್ಷಣೆಗೆ ಬಾಧಕವಾಗಬಹುದು. ನ್ಯಾಯಾಲಯದಲ್ಲಿ ನನ್ನ ವಾದವನ್ನು ದುರ್ಬಲಗೊಳಿಸಬಹುದು'' ಎಂದು ಆರೋಪಿ ಯುವಕ ಮನವಿ ಮಾಡಿದ್ದ.

    ತಪ್ಪೊಪ್ಪಿಗೆಯ ವಿಡಿಯೊ ತುಣುಕನ್ನೂ ಈ ಸರಣಿಯಲ್ಲಿ ಬಳಸಲಾಗಿದೆ ಎಂಬ ಅಂಶವನ್ನೂ ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಕಕ್ಷಿದಾರರಿಗೆ ಇರುವ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ಇದು ಕಿತ್ತುಕೊಳ್ಳುತ್ತದೆ. ಖಾಸಗಿ ಬದುಕಿಗೂ ಧಕ್ಕೆ ತರುತ್ತದೆ. ಸಾರ್ವಜನಿಕವಾಗಿ ಅತ್ಯಂತ ಮುಜುಗರ ಉಂಟು ಮಾಡುವುದಲ್ಲದೆ, ಕಿರುಕುಳು ಅನುಭವಿಸುವಂತಾಗುತ್ತದೆ'' ಎಂದು ಯುವಕನ ಪರ ವಕೀಲರು ವಾದಿಸಿದ್ದರು.

    ವಾದ ಆಲಿಸಿದ ಹೈಕೋರ್ಟ್, ನೆಟ್‌ಫ್ಲಿಕ್ಸ್‌ನ ಪ್ರಸಾರ ಮಾಡಿರುವ 'ಕ್ರೈಂ ಸ್ಟೋರೀಸ್; ಇಂಡಿಯಾ ಡಿಟೆಕ್ಟೀವ್ಸ್'ನ 'ಎ ಮದರ್ ಮರ್ಡರ್' ಎಪಿಸೋಡ್ ಅನ್ನು ತೆಗೆದುಹಾಕುವಂತೆ ಸೂಚಿಸಿತ್ತು, ಅಂತೆಯೇ ಇದೀಗ ನೆಟ್‌ಫ್ಲಿಕ್ಸ್ ಆ ಒಂದು ಎಪಿಸೋಡ್ ಅನ್ನು ಹಿಂಪಡೆದಿದೆ.

    ಸರಣಿಯ ಇನ್ನೆರಡು ಕಂತುಗಳು ಮಾತ್ರವೇ ಪ್ರಸಾರವಾಗುತ್ತಿವೆ. ಒಂದು ಕಂತಿನಲ್ಲಿ ವೇಶ್ಯೆಯೊಬ್ಬಳ ಕೊಲೆ ಪ್ರಕರಣ ಮತ್ತು ಮಗುವೊಂದರ ಅಪಹರಣ ಪ್ರಕರಣದ ಮತ್ತೊಂದು ಕಂತು ಪ್ರಸಾರವಾಗುತ್ತಿದೆ.

    'ಕ್ರೈಂ ಸ್ಟೋರೀಸ್; ಇಂಡಿಯಾ ಡಿಟೆಕ್ಟೀವ್ಸ್' ಡಾಕ್ಯುಮೆಂಟ್ ಸೀರೀಸ್ ಕುರಿತು ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಪ್ರಕರಣಗಳ ತನಿಖೆ ನಡೆಯುವ ಹೊತ್ತಿನಲ್ಲಿಯೇ ಅವುಗಳನ್ನು ಚಿತ್ರಿಸಿ ಪ್ರಸಾರ ಮಾಡಲಾಗಿದೆ. ಕೃತ್ಯ ಎಸಗಿದ ಆರೋಪಿಗಳನ್ನು ಸಹ ಸಂದರ್ಶಿಸಲಾಗಿದೆ.

    'ಕ್ರೈಂ ಸ್ಟೋರೀಸ್; ಇಂಡಿಯಾ ಡಿಟೆಕ್ಟೀವ್ಸ್' ಡಾಕ್ಯುಸರಣಿ ಮುಂದುವರೆಯುತ್ತಿದ್ದು, ಅಕ್ಟೋಬರ್ 08ರಂದು ಹೊಸ ಕಂತುಗಳು ಪ್ರಸಾರವಾಗಲಿವೆ. ಅಕ್ಟೋಬರ್ 08ರ ಕಂತಿನಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬುರಾರಿ ಪ್ರಕರಣದ ಮಾಹಿತಿಗಳನ್ನು ಹೊರಹಾಕಲಿದೆ ನೆಟ್‌ಫ್ಲಿಕ್ಸ್.

    ಈವರೆಗೆ ಪ್ರಸಾರವಾಗಿರುವ 'ಕ್ರೈಂ ಸ್ಟೋರೀಸ್; ಇಂಡಿಯಾ ಡಿಟೆಕ್ಟೀವ್ಸ್' ಡಾಕ್ಯುಮೆಂಟ್ ಸೀರೀಸ್‌ನಲ್ಲಿ ಬೆಂಗಳೂರು ಸೆಂಟ್ರಲ್ ಡಿಸಿಪಿ ಅನುಚೇತ್ ಸೇರಿದಂತೆ ಹಲವು ಬೆಂಗಳೂರು ಪೊಲೀಸ್ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಕಾನ್ಸ್‌ಟೇಬಲ್‌ಗಳು ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಹಲವರು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವೆಬ್ ಸರಣಿಯ ಚಿತ್ರೀಕರಣ ನಡೆದಿದೆ.

    ಈ ಡಾಕ್ಯುಮೆಂಟ್ ಸೀರೀಸ್ ಅನ್ನು ಎನ್.ಅಮಿತ್ ಮತ್ತು ಜಾಕ್ ರ್ಯಾಂಪ್ಲಿಂಗ್ ನಿರ್ದೇಶನ ಮಾಡಿದ್ದಾರೆ. ತರುಣ್ ಸಲ್ದಾನಾ, ಮೋರ್ಗನ್ ಮ್ಯಾಥೀವ್ಸ್, ಫಿಯೋನಾ ಸ್ಟೋರ್‌ಟೋನ್ ಸಹ ನಿರ್ಮಾಪಕರಾಗಿದ್ದಾರೆ. ಈ ಡಾಕ್ಯುಮೆಂಟರಿ ಸರಣಿಯನ್ನು ಮಿನ್ನಾವ್ ಫಿಲಮ್ಸ್ ಅರ್ಪಿಸಿದ್ದು, ಇದೇ ನಿರ್ಮಾಣ ಸಂಸ್ಥೆ ಈ ಹಿಂದೆ 'ದಿ ಲಾಸ್ಟ್ ಸರ್ವೈವರ್', 'ದಿ ಫಾಲೆನ್' ಅಂಥಹಾ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ನೆಟ್‌ಫ್ಲಿಕ್ಸ್‌ನ 'ಬ್ಯಾಡ್‌ ಬಾಯ್ ಬಿಲಿಯನೇರ್ಸ್' ನಿರ್ಮಾಣವನ್ನು ಸಹ ಇದೇ ನಿರ್ಮಾಣ ಸಂಸ್ಥೆ ಮಾಡಿದೆ.

    English summary
    As per the Karnataka high court order Netflix take down a episode from crime stories; India detectives document series.
    Monday, October 4, 2021, 16:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X