India
  For Quick Alerts
  ALLOW NOTIFICATIONS  
  For Daily Alerts

  ಆಗಸ್ಟ್ ಮೊದಲ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು

  |

  ಆಗಸ್ಟ್ ಬಂದಿದೆ, ಹಬ್ಬದ ಸಾಲು ರಜೆ ಇದೆ ಆದರೆ ಹೊರಗೆ ಜೋರು ಮಳೆ. ಇಂಥಹಾ ಸಂದರ್ಭದಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದು ಸುಲಭ ಸಾಧ್ಯವಲ್ಲ. ಆದರೆ ಮನೊರಂಜನೆಗೆ ಒಟಿಟಿ ಇದೆಯಲ್ಲ!

  ಹೌದು, ವರಮಹಾಲಕ್ಷ್ಮಿ ಹಬ್ಬಕ್ಕೆ ಸಾಮಾನ್ಯವಾಗಿ ಹಲವು ಕನ್ನಡ ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆ ಆಗುತ್ತಿದ್ದವು. ಆದರೆ ಈ ಬಾರಿ ಹಾಗಾಗಿಲ್ಲ. ಸತತ ಮಳೆಯಿಂದಾಗಿ ಜನ ಚಿತ್ರಮಂದಿರದ ಕಡೆ ಹೋಗಲು ಸಾಧ್ಯವಾಗುತ್ತಿಲ್ಲ.

  ಆದರೆ ಈ ಹಬ್ಬಕ್ಕೆ ಒಟಿಟಿಯಲ್ಲಿ ಒಳ್ಳೊಳ್ಳೆ ಸಿನಿಮಾಗಳು ಬಿಡುಗಡೆ ಆಗಿವೆ. ಮನೆಯಲ್ಲೇ ಕೂತು ಆರಾಮವಾಗಿ ಸಿನಿಮಾ ನೋಡುವ ಅವಕಾಶವನ್ನು ಒಟಿಟಿ ಸಾಧ್ಯವಾಗಿಸಿದೆ. ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

  ಆಲಿಯಾ ಭಟ್, ಸಾಯಿ ಪಲ್ಲವಿ, ಹನ್ಸಿಕಾ ಮೊಟ್ವಾನಿ, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳು ಈ ಬಾರಿ ಒಟಿಟಿಯಲ್ಲಿ ತೆರೆ ಕಾಣುತ್ತಿವೆ. ಕೆಲವು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿಯೇ ತೆರೆಗೆ ಬರುತ್ತಿರುವುದು ವಿಶೇಷ. ಈ ವಾರ ಯಾವ ಯಾವ ಸಿನಿಮಾಗಳು ಒಟಿಟಿಗೆ ಬಂದಿವೆ ಇಲ್ಲಿದೆ ಪಟ್ಟಿ.

  ಸಾಯಿ ಪಲ್ಲವಿ ನಟನೆಯ 'ಗಾರ್ಗಿ' ಕನ್ನಡದಲ್ಲೂ ಲಭ್ಯವಿದೆ

  ಸಾಯಿ ಪಲ್ಲವಿ ನಟನೆಯ 'ಗಾರ್ಗಿ' ಕನ್ನಡದಲ್ಲೂ ಲಭ್ಯವಿದೆ

  ಸಾಯಿ ಪಲ್ಲವಿ ನಟಿಸಿರುವ 'ಗಾರ್ಗಿ' ಸಿನಿಮಾ ಕನ್ನಡ ಸೇರಿದಂತೆ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರದಲ್ಲಿ ಜುಲೈ 15 ರಂದು ಬಿಡುಗಡೆ ಆಗಿತ್ತು. ಇದೀಗ ಇದೇ ಸಿನಿಮಾ ಸೋನಿ ಲಿವ್‌ನಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿದ್ದವು. ಈ ಸಿನಿಮಾವನ್ನು ಕರ್ನಾಟಕದಲ್ಲಿ ನಟ ರಕ್ಷಿತ್ ಶೆಟ್ಟಿ ಪ್ರೆಸೆಂಟ್ ಮಾಡಿದ್ದರು.

  ಆಲಿಯಾ ಭಟ್‌ರ ಹೊಸ ಸಿನಿಮಾ

  ಆಲಿಯಾ ಭಟ್‌ರ ಹೊಸ ಸಿನಿಮಾ

  'ಗಂಗೂಬಾಯಿ ಕಾಠಿಯಾವಾಡಿ' ಹಾಗೂ 'RRR' ಸಿನಿಮಾ ಮೂಲಕ ಡಬಲ್ ಹಿಟ್ ನೀಡಿರುವ ಆಲಿಯಾ ಭಟ್‌ರ ಹೊಸ ಸಿನಿಮಾ ಇದೀಗ ನೇರವಾಗಿ ಒಟಿಟಿಗೆ ಬಿಡುಗಡೆ ಆಗುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಆಲಿಯಾ ನಟಿಸಿರುವ 'ಡಾರ್ಲಿಂಗ್ಸ್' ಸಿನಿಮಾ ಬಿಡುಗಡೆ ಆಗಿದೆ. ಡಾರ್ಕ್ ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ಆಲಿಯಾ ಭಟ್ ಜೊತೆಗೆ ವಿಜಯ್ ವರ್ಮಾ, ರೋಶನ್ ಶಾ ನಟಿಸಿದ್ದಾರೆ.

  ತಮಿಳಿನ ಯಾವ ಸಿನಿಮಾಗಳು

  ತಮಿಳಿನ ಯಾವ ಸಿನಿಮಾಗಳು

  ತಮಿಳಿನ ಥ್ರಿಲ್ಲರ್ ಸಿನಿಮಾ ವಿಕ್ಟಿಮ್ ನೇರವಾಗಿ ಸೋನಿ ಲಿವ್‌ನಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಈಗಾಗಲೇ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿವೆ. ಮಾಯೋನ್ ಹೆಸರಿನ ತಮಿಳಿನ ಸಿನಿಮಾ 'ಸಿಂಪ್ಲಿ ಸೌತ್' ಹೆಸರಿನ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಜೊತೆಗೆ ಹನ್ಸಿಕಾ ಮೊಟ್ವಾನಿ ನಟಿಸಿರುವ 'ಮಹಾ' ಹೆಸರಿನ ತಮಿಳಿನ ಸಿನಿಮಾ ಆಹಾ ನಲ್ಲಿ ಇದೇ ವಾರ ಬಿಡುಗಡೆ ಆಗಿದೆ. ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ತಮಿಳು ಸಿನಿಮಾ 'ಡಿ-ಬ್ಲಾಕ್' ಶಿಮಾರೋ ಮೀ ಒಟಿಟಿಯಲ್ಲಿ ತೆರೆಗೆ ಬಂದಿದೆ.

  ಮಲಯಾಳಂನ ಹಲವು ಸಿನಿಮಾಗಳು

  ಮಲಯಾಳಂನ ಹಲವು ಸಿನಿಮಾಗಳು

  ಎನ್‌ಇಟಿಪಿಪಿಎಸಿ ಸೇರಿದಂತೆ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ 'ಆವಾಸ ವ್ಯೂಹಂ' ಮಲಯಾಳಂ ಸಿನಿಮಾ ಸೋನಿ ಲಿವ್‌ನಲ್ಲಿ ತೆರೆಗೆ ಬಂದಿದೆ. ಪೃಥ್ವಿರಾಜ್ ಸುಕುಮಾರನ್ ಅವರ ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ 'ಕಡುವ' ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಬಾಲಿವುಡ್ ನಟ ವಿವೇಕ್ ಒಬೆರಾಯ್ ಸಹ ನಟಿಸಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಹಿಟ್ ಆಗಿತ್ತು. ಸಿನಿಮಾಗಳ ಬಗೆಗಿನ ಸಿನಿಮಾ 'ಚಲಲಚಿತ್ರಂ' ಮಲಯಾಳಂ ಸಿನಿಮಾ ಮೇನ್‌ಸ್ಟ್ರೀಂಟಿವಿ ಒಟಿಟಿಯಲ್ಲಿ ಪ್ರಸಾರವಾಗಲಿದೆ.

  English summary
  Here is the list of new movies released on OTT on August first week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X