For Quick Alerts
  ALLOW NOTIFICATIONS  
  For Daily Alerts

  'ಆಶ್ರಮ್' ವೆಬ್ ಸಿರೀಸ್ ವಿರುದ್ಧ ದೂರು ದಾಖಲು: ಬಾಬಿ ಡಿಯೋಲ್‌ಗೆ ನೊಟೀಸ್

  |

  ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಆಶ್ರಮ್' ವೆಬ್ ಸರಣಿ ವಿರುದ್ಧ ರಾಜಸ್ಥಾನದ ಜೋದ್‌ಪುರ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

  ದೂರಿಗೆ ಸಂಬಂಧಿಸಿದಂತೆ 'ಆಶ್ರಮ್' ವೆಬ್ ಸರಣಿಯ ಮುಖ್ಯ ಪಾತ್ರಧಾರಿ ಬಾಬಿ ಡಿಯೋಲ್ ಹಾಗೂ ವೆಬ್ ಸರಣಿಯ ನಿರ್ದೇಶಕ ಪ್ರಕಾಶ್ ಝಾ ಗೆ ನೊಟೀಸ್ ಅನ್ನು ನೀಡಿದೆ. ಮುಂದಿನ ವಿಚಾರಣೆಯನ್ನು ಜನವರಿ 11 ಕ್ಕೆ ಮುಂದೂಡಿದೆ ನ್ಯಾಯಾಲಯ.

  ಕೆಲವು ದಿನಗಳ ಮುನ್ನಾ, ಕರಣಿ ಸೇನಾ ಸಹ 'ಆಶ್ರಮ್' ವೆಬ್ ಸರಣಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದೂರು ನೀಡಿತ್ತು. ವೆಬ್ ಸರಣಿಯ ನಿರ್ಮಾಪಕ-ನಿರ್ದೇಶಕ ಪ್ರಕಾಶ್ ಝಾ, ಹಾಗೂ ಒಟಿಟಿ ವಿರುದ್ಧ ದೂರು ಸಲ್ಲಿಸಿ ನೊಟೀಸ್ ಈಗಾಗಲೇ ಕಳಿಸಲಾಗಿದೆ.

  'ಲೈಂಗಿಕ ದೃಶ್ಯಗಳು ವೆಬ್ ಸರಣಿಯಲ್ಲಿವೆ'

  'ಲೈಂಗಿಕ ದೃಶ್ಯಗಳು ವೆಬ್ ಸರಣಿಯಲ್ಲಿವೆ'

  'ಆಶ್ರಮ ಎನ್ನುವುದು ಹಿಂದುಗಳ ಪಾಲಿಗೆ ಪವಿತ್ರವಾದುದು. ಆ ಹೆಸರು ಇಟ್ಟುಕೊಂಡು ಲೈಂಗಿಕ ವಿಷಯಗಳನ್ನು ವೆಬ್ ಸರಣಿಯಲ್ಲಿ ತೋರಿಸಲಾಗಿದೆ. ಈ ವೆಬ್ ಸರಣಿಯಿಂದ ಹಿಂದು ಬಾಬಾಗಳ ಮೇಲೆ ಕೆಟ್ಟ ಅಭಿಪ್ರಾಯ ಮೂಡುತ್ತದೆ' ಎಂದು ಕರಣಿ ಸೇನಾ ಆರೋಪಿಸಿತ್ತು.

  ಆಶ್ರಮದಲ್ಲಿ ನಡೆಯುವ ಅಪರಾಧ ಪ್ರಕರಣಗಳ ಕತೆ

  ಆಶ್ರಮದಲ್ಲಿ ನಡೆಯುವ ಅಪರಾಧ ಪ್ರಕರಣಗಳ ಕತೆ

  'ಆಶ್ರಮ್' ವೆಬ್ ಸರಣಿಯು ಆಶ್ರಮವೊಂದರಲ್ಲಿ ನಡೆಯುವ ಅಪರಾಧ ಪ್ರಕರಣಗಳು, ರಾಜಕೀಯ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ. ಬಾಬಾ ನ ಕಾಮುಕತನಗಳ ಕತೆ ಹೊಂದಿದೆ. ಬಾಬಾ ಪಾತ್ರಧಾರಿಯಾಗಿ ಬಾಬಿ ಡಿಯೋಲ್ ನಟಿಸಿದ್ದಾರೆ.

  ಗುರುಮೀತ್ ರಾಮ್ ರಹೀಮ್ ಸಿಂಗ್ ಬಾಬಾನ ಕತೆ?

  ಗುರುಮೀತ್ ರಾಮ್ ರಹೀಮ್ ಸಿಂಗ್ ಬಾಬಾನ ಕತೆ?

  ನಿರ್ದೇಶಕ ಪ್ರಕಾಶ್ ಝಾ, 'ಆಶ್ರಮ್' ವೆಬ್ ಸರಣಿ ಕಾಲ್ಪನಿಕ ಕತೆಯಷ್ಟೆ ಎಂದು ಹೇಳಿದ್ದಾರೆ. ಆದರೆ ವೆಬ್ ಸರಣಿಯ ಕೆಲವು ದೃಶ್ಯಗಳು ಗುರುಮೀತ್ ರಾಮ್ ರಹೀಮ್ ಸಿಂಗ್ ಬಾಬಾ ನ ಜೀವನನ್ನು ಹೋಲುತ್ತವೆ. ರಾಮ್ ರಹೀಮ್ ಸಿಂಗ್ ಅತ್ಯಾಚಾರ ಆರೋಪದಲ್ಲಿ ಜೈಲಿನಲ್ಲಿದ್ದಾನೆ.

  ಮೊದಲಿನಿಂದಲೂ ಆಕ್ಷೇಪ

  ಮೊದಲಿನಿಂದಲೂ ಆಕ್ಷೇಪ

  ಆಶ್ರಮ್ ವೆಬ್ ಸರಣಿಯು ಮ್ಯಾಕ್ಸ್‌ ಪ್ಲೇಯರ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಆಶ್ರಮ್ ವೆಬ್ ಸರಣಿಯಲ್ಲಿ ಸರಸದ ದೃಶ್ಯಗಳು ಕೆಲವಿವೆ. ಜೊತೆಗೆ ಆಶ್ರಮದಲ್ಲಿ ಮಹಿಳೆಯರ ಕಳ್ಳ ಸಾಗಾಣೆ, ಕೊಲೆಗಳು, ಕೆಟ್ಟ ಭಾಷೆ ಬಳಕೆಗಳು ಸಹ ಇವೆ. ಹಾಗಾಗಿ ಆರಂಭದಿಂದಲೂ ಆಶ್ರಮ್ ವೆಬ್ ಸರಣಿ ಬಗ್ಗೆ ಹಲವರು ಆಕ್ಷೇಪ ಎತ್ತುತ್ತಲೇ ಬಂದಿದ್ದಾರೆ.

  English summary
  Notice issued to actor Bobby Deol & Producer Prakash Jha by a Jodhpur court in a case filed against Ashram web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X