Don't Miss!
- News
Morbi Tragedy: ಸೇತುವೆ ನವೀಕರಿಸಿದ ಕಂಪನಿ ಮಾಲೀಕನೇ A1 ಆರೋಪಿ, ಚಾರ್ಚ್ಸೀಟ್ನಲ್ಲಿ ಏನಿದೆ? ತಿಳಿಯಿರಿ
- Finance
Budget 2023: ಕೇಂದ್ರ ಬಜೆಟ್ನ ಇತಿಹಾಸ, ಕುತೂಹಲಕಾರಿ ಸಂಗತಿ ತಿಳಿಯಿರಿ
- Technology
Budget 2023: ಈ ಆಪ್ನಲ್ಲಿ ಪಡೆಯಿರಿ ಬಜೆಟ್ 2023 ರ ಸಂಪೂರ್ಣ ವಿವರ!
- Automobiles
ಭಾರತದದಲ್ಲಿ ಟ್ರೆಂಡಿಂಗ್ನಲ್ಲಿರುವ ಜನಪ್ರಿಯ ಕಾರುಗಳು: ಇವುಗಳಿಗೆ ಸರಿಸಾಟಿಯೇ ಇಲ್ಲ..!
- Sports
ಈ ಹಿಂದಿನಂತೆ ಈ ತಂಡ ಈಗ ಬಲಿಷ್ಠ ತಂಡವಲ್ಲ: ಆಕಾಶ್ ಚೋಪ್ರ ಹೇಳಿದ ಆ ತಂಡ ಯಾವುದು?
- Lifestyle
Shani Asta 2023 : ಶನಿ ಅಸ್ತ 2023: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹಾಗೂ ಪರಿಹಾರ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಬ್ಬಿಕೊಂಡ ಬಾಲಕೃಷ್ಣ, ಪವನ್ ಕಲ್ಯಾಣ್! ಇದು ಪವಾಡ ಎಂದ ಅಭಿಮಾನಿಗಳು!
2022 ನೇ ವರ್ಷದ ಅಂಚಿನಲ್ಲಿ ತೆಲುಗು ಚಿತ್ರರಂಗದಲ್ಲೊಂದು ಪವಾಡ ನಡೆದಿದೆ. ನಟ, ರಾಜಕಾರಣಿ ಪವನ್ ಕಲ್ಯಾಣ್ ಹೆಗಲ ಮೇಲೆ ನಟ, ರಾಜಕಾರಣಿ ಬಾಲಕೃಷ್ಣ ಕೈ ಹಾಕಿದ್ದಾರೆ. ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದಾರೆ.
ಸಾಮಾನ್ಯರಿಗೆ ಇದೊಂದು ಸಾಮಾನ್ಯ ಘಟನೆ ಎನಿಸಬಹುದು ಆದರೆ ತೆಲುಗು ಚಿತ್ರರಂಗದ ಅಭಿಮಾನಿಗಳಿಗೆ ಇದು ಅಸಾಮಾನ್ಯ ಸಂಗತಿ. ಒಂದು ರೀತಿಯಲ್ಲಿ ಇದೊಂದು ಪವಾಡ.
ಸಾಮಾನ್ಯವಾಗಿ ಯಾವುದೇ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳದೇ ಇದ್ದ ನಟ ಪವನ್ ಕಲ್ಯಾಣ್ ಹಠಾತ್ತನೆ ಆಹಾ ಒಟಿಟಿಯ 'ಅನ್‌ಸ್ಟಾಪೆಬಲ್ 2' ಟಾಕ್‌ಶೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ಸ್ವಂತ ಅಣ್ಣ ಮೆಗಾಸ್ಟಾರ್ ಚಿರಂಜೀವಿ ಟಾಕ್ ಶೋ ನಡೆಸಿದಾಗ ಅದಕ್ಕೇ ಹೋಗದಿದ್ದ ಪವನ್ ಕಲ್ಯಾಣ್ ಇದೀಗ ಬಾಲಯ್ಯನ ಟಾಕ್ ಶೋಗೆ ಬಂದಿರುವುದು ಅಭಿಮಾನಿಗಳಲ್ಲಿ ಮಹದಾಶ್ಚರ್ಯ ಹುಟ್ಟಿಸಿದೆ.

ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ
ಮೆಗಾ ಫ್ಯಾಮಿಲಿ ಹಾಗೂ ನಂದಮೂರಿ ಕುಟುಂಬಕ್ಕೂ ಕೆಲವು ದಶಕಗಳಿಂದಲೂ ವೈರತ್ವ ನಡೆಯುತ್ತಲೇ ಇದೆ. ಮೆಗಾ ಅಭಿಮಾನಿಗಳು ಹಾಗೂ ನಂದಮೂರಿ ಅಭಿಮಾನಿಗಳು ಸದಾ ಕಿತ್ತಾಡುತ್ತಲೇ ಬಂದಿದ್ದಾರೆ. ಕೆಲವರು ಜೀವ ಕಳೆದುಕೊಂಡ ಉದಾಹರಣೆಯೂ ಇವೆ. ತಮ್ಮ ಕುಟುಂಬಗಳ ವೈರತ್ವದ ಬಗ್ಗೆ ಎರಡೂ ಕುಟುಂಬದವರು ಬಹಿರಂಗವಾಗಿ ಮಾತನಾಡಿದ್ದೂ ಸಹ ಇದೆ. ಆದರೆ ಈಗ ಏಕಾ-ಏಕಿ ಬಾಲಕೃಷ್ಣ ಹಾಗೂ ಪವನ್ ಕಲ್ಯಾಣ್ ತಬ್ಬಿಕೊಂಡಿರುವುದು ಇಷ್ಟು ದಿನ ಕಿತ್ತಾಟದಲ್ಲಿ ತೊಡಗಿದ್ದ ನಂದಮೂರಿ ಹಾಗೂ ಮೆಗಾ ಫ್ಯಾಮಿಲಿ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ.

ಅನ್‌ಸ್ಟಾಪೆಬಲ್‌ನಲ್ಲಿ ಚಿತ್ರರಂಗದ ದಿಗ್ಗಜರು
ಆಹಾ ಒಟಿಟಿಯಲ್ಲಿ ಬಾಲಕೃಷ್ಣ 'ಅನ್‌ಸ್ಟಾಪೆಬಲ್' ಹೆಸರಿನ ಟಾಕ್ ಶೋ ನಡೆಸುತ್ತಿದ್ದು, ಚಿತ್ರರಂಗದ ದಿಗ್ಗಜರನ್ನು ಕರೆಸಿ ನೇರಾ-ನೇರ ಪ್ರಶ್ನೆಗಳನ್ನು ಕೇಳುತ್ತಾರೆ. ಈ ಶೋನಲ್ಲಿ ಬಾಲಕೃಷ್ಣ ಮಾತನಾಡುವ ರೀತಿ, ಎದುರು ಕೂತವರಿಗೆ ಪ್ರಶ್ನೆ ಕೇಳುವ ರೀತಿ ಬಹಳ ವೈರಲ್ ಆಗಿದೆ. ಶೋನ ಜನಪ್ರಿಯತೆ ಆಕಾಶ ಮುಟ್ಟಿದೆ. ಯಾವ ಟಿವಿ ಕಾರ್ಯಕ್ರಮದಲ್ಲಿಯೂ ಭಾಗವಹಿಸದ ಸ್ಟಾರ್ ನಟರೆಲ್ಲ ಬಾಲಕೃಷ್ಣದ ಆಹ್ವಾನದ ಮೇರೆಗೆ ಶೋಗೆ ಆಗಮಿಸುತ್ತಿದ್ದಾರೆ. ನಟ ಪ್ರಭಾಸ್ ಸಹ ಈ ಶೋಗೆ ಆಗಮಿಸಿ ಹೋಗಿದ್ದಾರೆ. ಇದೀಗ ಪವನ್ ಕಲ್ಯಾಣ್ ಬಂದಿದ್ದಾರೆ.

ಕೆಲವು ಚಿತ್ರಗಳು ಲೀಕ್ ಆಗಿವೆ
ಪವನ್ ಕಲ್ಯಾಣ್ ಹಾಗೂ ಬಾಲಕೃಷ್ಣರ 'ಅನ್‌ಸ್ಟಾಪೆಬಲ್' ಎಪಿಸೋಡ್‌ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಚಿತ್ರೀಕರಣ ನಡೆಯುವಾಗಿನ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಾಲಕೃಷ್ಣ-ಪವನ್ ಕಲ್ಯಾಣ್ ಅಪ್ಪಿಕೊಂಡಿರುವುದು, ಪವನ್ ಕಲ್ಯಾಣ್ ಹೆಗಲ ಮೇಲೆ ಬಾಲಕೃಷ್ಣ ಕೈ ಯಿರಿಸಿರುವುದು, ಇಬ್ಬರೂ ಕಾರ್ಯಕ್ರಮದ ವೇದಿಕೆ ಮೇಲೆ ಕುಳಿತು ಮಾತನಾಡುತ್ತಿರುವ ಚಿತ್ರಗಳು ಇದೀಗ ಲೀಕ್ ಆಗಿವೆ. ಇಬ್ಬರೂ ಕಪ್ಪು ಬಣ್ಣದ ಉಡುಗೆ ತೊಟ್ಟು ಮಿಂಚುತ್ತಿದ್ದಾರೆ.

ಡಿಸೆಂಬರ್ 31 ಕ್ಕೆ ಬಿಡುಗಡೆ ಆಗಲಿದೆ ಪ್ರಭಾಸ್ ಎಪಿಸೋಡ್
ನಟ ಮಹೇಶ್ ಬಾಬು, ಅಲ್ಲು ಅರವಿಂದ್, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ರವಿತೇಜ, ಬ್ರಹ್ಮಾನಂದಂ ಇನ್ನೂ ಹಲವು ತಾರೆಯರು 'ಅನ್‌ಸ್ಟಾಪೆಬಲ್' ವೇದಿಕೆಗೆ ಬಂದಿದ್ದಾರೆ. ನಟ ಪ್ರಭಾಸ್ ಸಹ 'ಅನ್‌ಸ್ಟಾಪೆಬಲ್ 2' ಶೋಗೆ ಬಂದಿದ್ದು, ಆ ಎಪಿಸೋಡ್‌ನ ಪ್ರೋಮೋ ಇದೀಗ ಬಿಡುಗಡೆ ಆಗಿದೆ. ಎಪಿಸೋಡ್ ಡಿಸೆಂಬರ್ 31 ರಂದು ಪ್ರಸಾರವಾಗಲಿದೆ. ಪವನ್ ಕಲ್ಯಾಣ್‌ರ ಎಪಿಸೋಡ್ ಚಿತ್ರೀಕರಣ ಮುಗಿದಿದ್ದು, ಪ್ರೋಮೋ ಜನವರಿ 1 ರಂದು ಬಿಡುಗಡೆ ಆಗುವ ಸಾಧ್ಯತೆ ಇದ್ದು, ಎಪಿಸೊಡ್ ಜನವರಿ ತಿಂಗಳ ಮೊದಲ ವಾರದಲ್ಲಿ ಆಹಾ ಒಟಿಟಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.