Don't Miss!
- News
ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯಕ್ಕೆ ಅನುಕೂಲ: ಹೆಚ್.ಡಿ. ಕುಮಾರಸ್ವಾಮಿ
- Automobiles
ಭಾರತದಲ್ಲಿ ಯಮಹಾ ಸ್ಕೂಟರ್, ಬೈಕ್ಗಳ ದರ ಹೆಚ್ಚಳ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಾಲದಲ್ಲಿ ಮುಳುಗಿದ್ದ ಪ್ರಭಾಸ್: ಬಾಲಯ್ಯನ ಮುಂದೆ ಗುಟ್ಟು ರಟ್ಟು
ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ಸ್ಟಾರ್ ನಟರಲ್ಲಿ ಒಬ್ಬರು ಪ್ರಭಾಸ್. ಸಿನಿಮಾವೊಂದಕ್ಕೆ ನೂರಕ್ಕೂ ಹೆಚ್ಚು ಕೋಟಿ ಸಂಭಾವನೆ ಪಡೆಯುತ್ತಾರೆ.
ಆದರೆ ಪ್ರಭಾಸ್ ಒಂದು ಸಮಯದಲ್ಲಿ ಸಾಲದಲ್ಲಿ ಮುಳುಗಿದ್ದರೆಂದರೆ ನಂಬಲೇ ಬೇಕು. ಏಕೆಂದರೆ ಸ್ವತಃ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಆಹಾ ಒಟಿಟಿಗಾಗಿ ನಟ ಬಾಲಕೃಷ್ಣ ನಡೆಸಿಕೊಡುವ 'ಅನ್‌ಸ್ಟಾಪೆಬಲ್' ಟಾಕ್ ಶೋನಲ್ಲಿ ಪ್ರಭಾಸ್ ಅತಿಥಿಯಾಗಿ ಬಂದಿದ್ದ ಎಪಿಸೋಡ್ ನಿನ್ನೆಯಷ್ಟೆ ಪ್ರಸಾರವಾಗಿದ್ದು, ಅಭಿಮಾನಿಗಳು ಮುಗಿಬಿದ್ದು ಎಪಿಸೋಡ್ ಅನ್ನು ವೀಕ್ಷಿಸಿದ್ದಾರೆ. ಬಾಲಯ್ಯ-ಪ್ರಭಾಸ್ ನಡುವೆ ನಡೆದಿರುವ ಆಪ್ತ ಸಂವಾದದಲ್ಲಿ ಹಲವು ವಿಷಯಗಳನ್ನು ಪ್ರಭಾಸ್ ಮಾತನಾಡಿದ್ದಾರೆ. ಅದರಲ್ಲಿ ಸಾಲದ ವಿಷಯವೂ ಒಂದು.

ಬಾಲಯ್ಯನ ಜೊತೆ ಪ್ರಭಾಸ್ ಮಾತುಕತೆ
'ಬಾಹುಬಲಿ' ಸಿನಿಮಾದ ಬಗ್ಗೆ ತಮಾಷೆಯಾಗಿ ಮಾತನಾಡುತ್ತಾ, 'ಛತ್ರಪತಿ' ಸಿನಿಮಾದ ಬಳಿಕ ನಾನು ರಾಜಮೌಳಿ ಮತ್ತೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆವು. ನಾನು ಸಾಲದಲ್ಲಿ ಮುಳುಗಿದ್ದ ಕಾರಣ ಒಂದರ ಹಿಂದೊಂದು ಸಿನಿಮಾಗಳನ್ನು ಸಹಿ ಮಾಡುತ್ತಿದ್ದೆ. ಅದೇ ಸಮಯದಲ್ಲಿ ರಾಜಮೌಳಿ 'ಬಾಹುಬಲಿ' ಮಾಡೋಣ ಎಂದರು. ಆದರೆ 'ಬಾಹುಬಲಿ' ಮುಗಿವ ವರೆಗೆ ಯಾವುದೂ ಸಿನಿಮಾ ಒಪ್ಪಿಕೊಳ್ಳಬಾರದು ಎಂದುಬಿಟ್ಟರು'' ಎಂದಿದ್ದಾರೆ ಪ್ರಭಾಸ್.

ಬಾಲಯ್ಯನ ಮುಂದೆ ಸಾಲದ ಕತೆ ಹೇಳಿದ ಪ್ರಭಾಸ್
ಆದರೆ ನಾನು ಸಾಲದಲ್ಲಿದ್ದಿದ್ದರಿಂದ ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದೆ. 'ರೆಬಲ್' ಸಿನಿಮಾ ಮುಗಿಸಿದ ಬಳಿಕ ರಾಜಮೌಳಿಗೆ ಫೋನ್ ಮಾಡಿ, 'ಬಾಹುಬಲಿ' ಪ್ರಾರಂಭವಾಗಲು ಇನ್ನೂ ಸಮಯ ಇದೆಯಲ್ಲ ಈ ಗ್ಯಾಪ್‌ನಲ್ಲಿ ಒಂದು ಸಿನಿಮಾ ಮಾಡಿಕೊಂಡು ಬಿಡುತ್ತೇನೆ ಸಾಲಗಳು ಜಾಸ್ತಿ ಇವೆ ಎಂದೆ. ರಾಜಮೌಳಿ ಓಕೆ ಎಂದರು ಆಗ 'ಮಿರ್ಚಿ' ಸಿನಿಮಾ ಪ್ರಾರಂಭ ಮಾಡಿದೆ'' ಎಂದಿದ್ದಾರೆ ಪ್ರಭಾಸ್. ಅಂದಹಾಗೆ ಮಿರ್ಚಿ ಸಿನಿಮಾವನ್ನು ಪ್ರಭಾಸ್ ಸಹ ಒಡೆತನದ ಯುವಿ ಕ್ರಿಯೇಶನ್‌ನಿಂದ ನಿರ್ಮಾಣ ಮಾಡಲಾಗಿದೆ. ಆ ಸಿನಿಮಾ ಹಿಟ್ ಆಗಿ ದೊಡ್ಡ ಮಟ್ಟದ ಲಾಭವನ್ನೇ ಪ್ರಭಾಸ್ ಹಾಗೂ ಅವರ ಗೆಳೆಯರಿಗೆ ತಂದುಕೊಟ್ಟಿತು.

ಪ್ರಭಾಸ್ ಸಾಲದ ಬಗ್ಗೆ ಸುದ್ದಿ
ಪ್ರಭಾಸ್ ಸಾಲ ಮಾಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಮತ್ತೆ ಹರಿದಾಡುತ್ತಿದೆ. ಹೈದರಾಬಾದ್‌ನ ನ್ಯಾಷನಲ್ ಬ್ಯಾಂಕೊಂದರಲ್ಲಿ ಪ್ರಭಾಸ್ 21 ಕೋಟಿ ಸಾಲ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ಕೆಲವು ದಾಖಲೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಇದನ್ನು ಪ್ರಭಾಸ್ ಅಭಿಮಾನಿಗಳು ನಿರಾಕರಿಸಿದ್ದಾರೆ. ನೂರಾರು ಕೋಟಿ ಸಂಭಾವನೆ ಪಡೆವ ನಟನಿಗೆ 21 ಕೋಟಿ ದೊಡ್ಡದಲ್ಲ, ಇದು ತೆರಿಗೆ ಉಳಿಸಲು ಮಾಡಿಕೊಂಡಿರುವ ವ್ಯವಸ್ಥೆ ಇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಪ್ರಭಾಸ್ ನಟನೆಯ ಮುಂಬರುವ ಸಿನಿಮಾಗಳು
ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ನಟ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಆದರೆ ಸಿನಿಮಾದ ಟೀಸರ್‌ಗೆ ಭಾರಿ ಟೀಕೆಗಳು ವ್ಯಕ್ತವಾದ ಕಾರಣ ಸಿನಿಮಾ ಸಿಜಿಐ ಅನ್ನು ಬದಲಾಯಿಸಲಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಈ ಸಿನಿಮಾ ಸೆಪ್ಟೆಂಬರ್ ವೇಳೆಗೆ ತೆರೆಗೆ ಬರಲಿದೆ. ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದಲ್ಲಿಯೂ ಪ್ರಭಾಸ್ ನಟಿಸುತ್ತಿದ್ದು ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಇದೀಗ ಮಾರುತಿ ನಿರ್ದೇಶನದ ಸಿನಿಮಾ ಹಾಗೂ ಸುಕುಮಾರ್ ಜೊತೆಗೆ ಒಂದು ಸಿನಿಮಾಕ್ಕೂ ಪ್ರಭಾಸ್ ಸೈ ಎಂದಿದ್ದಾರೆ.