For Quick Alerts
  ALLOW NOTIFICATIONS  
  For Daily Alerts

  'ಕ್ಲಿಷ್ಟಕರ ಸನ್ನಿವೇಶ'ದ ಒತ್ತಡ: 'ಯುವರತ್ನ' ಸಿನಿಮಾ ಒಟಿಟಿಗೆ, ದಿನಾಂಕ ಪ್ರಕಟ

  |

  ಕಳೆದ ವಾರವಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದ್ದ 'ಯುವರತ್ನ' ಸಿನಿಮಾವು 'ಅಮೆಜಾನ್ ಪ್ರೈಮ್'ನಲ್ಲಿ ಬಿಡುಗಡೆ ಆಗಲಿದೆ.

  ಇಂದು (ಏಪ್ರಿಲ್ 08) ರಂದು ನಡೆದ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ನಟ ಪುನೀತ್ ರಾಜ್‌ಕುಮಾರ್, ನಿರ್ದೇಶಕ ಸಂತೋಶ್ ಆನಂದ್‌ರಾಮ್, ನಿರ್ಮಾಪಕ ವಿಜಯ್ ಕಿರಗಂದೂರು ಅವರುಗಳು ಒಟ್ಟಿಗೆ ಈ ವಿಷಯವನ್ನು ಘೋಷಿಸಿದ್ದಾರೆ. 'ಯುವರತ್ನ' ಸಿನಿಮಾವು ಏಪ್ರಿಲ್ 09 ರಿಂದ ಅಮೆಜಾನ್ ಪ್ರೈಂ ನಲ್ಲಿ ಪ್ರಸಾರವಾಗಲಿದೆ.

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸಂತೋಶ್ ಆನಂದ್‌ರಾಮ್, 'ಇದೊಂದು ಕ್ಲಿಷ್ಟಕರ ಸನ್ನಿವೇಶ, ಸಿನಿಮಾ ಬಿಡುಗಡೆ ಆದಾಗಿನಿಂದಲೂ ಬಹಳ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಆದರೆ ಕೊರೊನಾ ಕಾರಣದಿಂದ ಈ ಕ್ಲಿಷ್ಟಕರ ಸನ್ನಿವೇಶದಲ್ಲಿ ಸಿನಿಮಾವನ್ನು ಅಮೆಜಾನ್‌ನಲ್ಲಿ ಬಿಡುಗಡೆ ಮಾಡಬೇಕಾಯಿತು' ಎಂದರು.

  'ಸಿನಿಮಾವನ್ನು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡುವುದು ಇಡೀ ಚಿತ್ರತಂಡ ನಿರ್ಣಯ. ಅಷ್ಟೇ ಅಲ್ಲದೆ. ಜನರಿಂದಲೂ ಸಾಕಷ್ಟು ಮನವಿಗಳು ಬಂದಿದ್ದವು. 'ಚಿತ್ರಮಂದಿರಕ್ಕೆ ಬರಲಾಗುತ್ತಿಲ್ಲ, ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಿ' ಎಂದು ಹೇಳುತ್ತಿದ್ದರು ಹಾಗಾಗಿ ನಾವು ಪ್ರೈಮ್‌ನಲ್ಲಿ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ' ಎಂದರು.

  English summary
  Puneeth Rajkumar's movie 'Yuvarathnaa ' movie will streamed on Amazon prime from April 09.
  Thursday, April 8, 2021, 12:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X