Don't Miss!
- News
Pervez Musharraf death: ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ 79 ನಿಧನ
- Sports
BGT 2023: ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ; ಮತ್ತೋರ್ವ ಸ್ಟಾರ್ ವೇಗಿ ಮೊದಲ ಟೆಸ್ಟ್ನಿಂದ ಔಟ್!
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Technology
ಇಂಥಾ ಸ್ಮಾರ್ಟ್ಫೋನ್ ಖರೀದಿಸಿದ್ರೆ, ಫೋನ್ ಹ್ಯಾಂಗ್ ಆಗುವ ಸಮಸ್ಯೆ ಇರಲ್ಲ!
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಮ್ಯಾ ನಿರ್ಮಾಣದ ಮೊದಲ ಚಿತ್ರ 'ಸ್ವಾತಿ ಮುತ್ತಿನ ಮಳೆ ಹನಿಯೇ' ನೇರ ಓಟಿಟಿಯಲ್ಲಿ ಬಿಡುಗಡೆ?
ಆಪಲ್ ಬಾಕ್ಸ್ ಸ್ಟುಡಿಯೊಸ್ ಎಂಬ ತನ್ನದೇ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನು ಘೋಷಿಸುವ ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ ಮೋಹಕತಾರೆ ರಮ್ಯಾ ಈ ಬ್ಯಾನರ್ ಅಡಿಯಲ್ಲಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರಕ್ಕೆ ಬಂಡವಾಳ ಹೂಡುವುದಾಗಿ ಪ್ರಕಟಿಸಿದ್ದರು. ಈ ಚಿತ್ರ ಈಗ ಚಿತ್ರಮಂದಿರದ ಬದಲಾಗಿ ನೇರವಾಗಿ ಓಟಿಟಿಗೆ ಬರಲಿದೆ ಎಂಬ ಸುದ್ದಿ ಹರಿದಾಡಿದೆ. ರಾಜ್ ಬಿ ಶೆಟ್ಟಿ ನಿರ್ದೇಶನವಿರುವ ಈ ಚಿತ್ರದಲ್ಲಿ ಸ್ವತಃ ತಾವೇ ನಟಿಯಾಗಿಯೂ ಕಾಣಿಸಿಕೊಳ್ಳಲಿದ್ದೇನೆ ಎಂಬುದನ್ನೂ ಸಹ ತಿಳಿಸಿದ್ದರು.
ಇನ್ನು ಈ ಕುರಿತು ಮಾತನಾಡಿದ್ದ ರಾಜ್ ಬಿ ಶೆಟ್ಟಿ ಇದೊಂದು ಮಹಿಳಾ ಪ್ರಧಾನ ಕತೆಯಾಗಿದ್ದು, ರಮ್ಯಾ ಪಾತ್ರ ಅತಿ ದೊಡ್ಡ ಪ್ರಾಮುಖ್ಯತೆ ಇರುವ ಪಾತ್ರದಲ್ಲಿ ನಟಿಸಲಿದ್ದಾರೆ ಎಂದೂ ಸಹ ತಿಳಿಸಿದ್ದರು. ಆದರೆ ಈ ಚಿತ್ರದ ಚಿತ್ರೀಕರಣ ಆರಂಭವಾಗುವ ಮುನ್ನವೇ ನಟಿ ರಮ್ಯಾ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಅಷ್ಟೇ ಅಲ್ಲದೇ ಸಕುಟುಂಬ ಸಮೇತ ಚಿತ್ರದಲ್ಲಿ ನಟಿಸಿ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದ್ದ ನಟಿ ಸಿರಿ ರವಿಕುಮಾರ್ ರಮ್ಯಾ ಬದಲಾಗಿ ಆಯ್ಕೆಯಾದರು.
ಇನ್ನು ಇಷ್ಟೆಲ್ಲಾ ದೊಡ್ಡ ಬದಲಾವಣೆ ನಡುವೆ ಚಿತ್ರೀಕರಣ ಆರಂಭಿಸಿದ ಚಿತ್ರತಂಡ ಕೇವಲ 16 ದಿನಗಳಲ್ಲಿ ಚಿತ್ರೀಕರಣವನ್ನು ಮುಗಿಸಿತು. ಕಳೆದ ವರ್ಷವೇ ಕುಂಬಳಕಾಯಿ ಹೊಡೆದಿದ್ದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರತಂಡ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಫೆಬ್ರವರಿ ತಿಂಗಳಿಗೆ ಚಿತ್ರಮಂದಿರಗಳ ಅಂಗಳಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಕಳೆದ ಬಾರಿ ಗರುಡ ಗಮನ ವೃಷಭ ವಾಹನ ಚಿತ್ರದ ಮೂಲಕ ನಿರ್ದೇಶಕನಾಗಿ ದೊಡ್ಡ ಗೆಲುವು ಕಂಡಿದ್ದ ರಾಜ್ ಬಿ ಶೆಟ್ಟಿ ನಿರ್ದೇಶನದ ಈ ಮೂರನೇ ಚಿತ್ರ ಯಾವ ರೀತಿ ಇರಲಿದೆ ಎಂದು ಕಾಯುತ್ತಿದ್ದವರಿಗೆ ಹೊಸದೊಂದು ಸುದ್ದಿ ಕೇಳಿಬಂದಿದ್ದು, ಫೆಬ್ರವರಿ ತಿಂಗಳಿನಲ್ಲಿ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಈ ಚಿತ್ರ ಚಿತ್ರಮಂದಿರದ ಬದಲಾಗಿ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.