For Quick Alerts
  ALLOW NOTIFICATIONS  
  For Daily Alerts

  ವಿಚಿತ್ರ ವೇಷದಲ್ಲಿ ಬಿಗ್‌ಬಾಸ್ ಸೆಟ್‌ ಮುಂದೆ ಪ್ರತಿಭಟನೆ ನಡೆಸಿದ ರಾಖಿ

  |

  ನಟಿ ರಾಖಿ ಸಾವಂತ್ ಅಭಿನಯಕ್ಕಿಂತಲೂ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದರು ಮತ್ತು ವಿವಾದಗಳಿಂದಲೇ ಸುದ್ದಿಯಲ್ಲಿರಲು ಸದಾ ಯತ್ನಿಸುವವರು.

  ಅತಿರೇಕಕ್ಕೆ ಹೋಯ್ತು ರಾಖಿ ಸಾವಂತ್ ಪ್ರತಿಭಟನೆ

  ಅತಿರೇಕದ ಮಾತುಗಳನ್ನಾಡುವ, ಅತಿರೇಕದಿಂದ ವರ್ತಿಸುವ ನಟಿ ರಾಖಿ ಸಾವಂತ್ ಮತ್ತೊಮ್ಮೆ ಅದನ್ನೇ ಪುನರಾವರ್ತಿಸಿದ್ದಾರೆ. ಈ ಬಾರಿಯಂತೂ ಎಲ್ಲೆ ಮೀರಿ ಹೋಗಿದ್ದಾರೆ.

  ಬಿಗ್‌ಬಾಸ್ ಒಟಿಟಿ ಕಳೆದ ಒಂದು ವಾರದಿಂದಲೂ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಇದಕ್ಕೆ ತಮಗೆ ಆಹ್ವಾನ ನೀಡಿಲ್ಲವೆಂದು ನಟಿ ರಾಖಿ ಸಾವಂತ್ ಬಿಗ್‌ಬಾಸ್ ಒಟಿಟಿ ಸೆಟ್‌ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಅದೂ ಭಿನ್ನ ವೇಷದಲ್ಲಿ.

  ಸ್ಪೈಡರ್ ಮ್ಯಾನ್ ರೀತಿ ವೇಷ ಧರಿಸಿ, ಸ್ಪೈಡರ್ ಮ್ಯಾನ್‌ ರೀತಿ ಮುಖದ ಮೇಲೆ ಚಿತ್ರ ಬರೆಸಿಕೊಂಡು ಬಿಗ್‌ಬಾಸ್ ಸೆಟ್‌ ಮುಂದೆ ಬಂದು ಚಿತ್ರ-ವಿಚಿತ್ರವಾಗೆಲ್ಲ ವರ್ತಿಸಿ ಪ್ರತಿಭಟನೆ ಮಾಡಿದ್ದಾರೆ ರಾಖೀ. ಸಿದ್ ನಾಜ್ ಸೇರಿದಂತೆ ಹಲವರಿಗೆ ಬಿಗ್‌ಬಾಸ್‌ಗೆ ಆಹ್ವಾನ ನೀಡಲಾಗಿದೆ, ಆದರೆ ನನಗೆ ನೀಡಲಾಗಿಲ್ಲ. ಬಿಗ್‌ಬಾಸ್‌ಗೆ ನನಗೆ ಆಹ್ವಾನ ನೀಡದೇ ಇರುವುದು ಸರಿಯಲ್ಲ ಎಂದು ರಾಖಿ ಹೇಳಿದ್ದಾರೆ.

  ವೇಷ ಧರಸಿ ಬ್ಯಾಗ್ ಒಂದನ್ನು ಹುಡಿದುಕೊಂಡು ರಸ್ತೆಯಲ್ಲಿ ನಡೆದು ಬಂದ ರಾಖಿ ಸಾವಂತ್ ಬಿಗ್‌ಬಾಸ್ ಮನೆಯೊಳಗೆ ಹೋಗಲು ಯತ್ನಿಸಿದರು. ಅಲ್ಲಿನ ಭದ್ರತೆಯವರು ರಾಖಿಯನ್ನು ತಡೆದಾಗ ರಾಖಿ ಅಲ್ಲಿಯೇ ಹಾಸಿಗೆ ಹಾಸಿಕೊಂಡು ಅದರ ಮೇಲೆ ಮಲಗಿ ಪ್ರತಿಭಟನೆ ಮಾಡಿದರು. ನಂತರ ಎದ್ದು ಕುಣಿಯುವುದು, ಸ್ಪೈಡರ್ ಮ್ಯಾನ್ ರೀತಿ ವಿಚಿತ್ರವಾಗಿ ಆಡುವುದು ಮಾಡಿದರು. ಸುತ್ತಲಿರುವವರಿಗೆ ಕಿರಿ-ಕಿರಿ ಆಗುವಂತೆ ನಟಿ ರಾಖಿ ಸಾವಂತ್ ವರ್ತಿಸಿದ್ದಾರೆ.

  ''ಬಿಗ್‌ ಬಾಸ್, ಬಿಗ್‌ ಬಾಸ್' ಎಂದು ಕೂಗಾಡಿದ ರಾಖಿ ಸಾವಂತ್, ''ಬಿಗ್‌ಬಾಸ್ ಹೇಳಿದ್ದರು ಪ್ರತಿವರ್ಷವೂ ನಾನು ಬಿಗ್‌ಬಾಸ್‌ಗೆ ಬರಬಹುದೆಂದು ಆದರೆ ಬಿಗ್‌ಬಾಸ್ ಒಟಿಟಿ ಪ್ರಾರಂಭವಾಗಿದೆ. ಆದರೆ ನನ್ನನ್ನು ಕರೆದೇ ಇಲ್ಲ'' ಎಂದಿದ್ದಾರೆ. ದೊಡ್ಡ ದೊಡ್ಡ ಚಿನ್ನದ ಸರಗಳನ್ನು ಹಾಕಿದ್ದ ರಾಖಿ ಸಾವಂತ್, ''ನಾನು ಎರಡು ಚಿನ್ನದ ಅಂಗಡಿಗಳನ್ನು ಲೂಟಿ ಮಾಡಿಕೊಂಡು ಈ ಆಭರಣಗಳನ್ನು ತಂದಿದ್ದೇನೆ. ನಾನು ಬಿಗ್‌ಬಾಸ್ ಮನೆಯ ಒಳಗೆ ಹೋಗಬೇಕು ಅದಕ್ಕಾಗಿ ಹೀಗೆ ಮಾಡಿದ್ದೇನೆ'' ಎಂದಿದ್ದಾರೆ.

  ರಾಖಿಯ ಈ ವಿಚಿತ್ರ ವರ್ತನೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಹಲವರು ರಾಖಿಯ ವರ್ತನೆ ಅತಿರೇಕದ್ದು ಎಂದಿದ್ದಾರೆ. ರಾಖಿಗೆ ಮನೋವೈದ್ಯರ ಅಗತ್ಯವಿದೆ ಎಂದು ಇನ್ನು ಕೆಲವರು ಹೇಳಿದ್ದಾರೆ. ಬಿಗ್‌ಬಾಸ್‌ ನವರೇ ಹಣ ಕೊಟ್ಟು ರಾಖಿ ಕೈಲಿ ಹೀಗೆ ಮಾಡಿಸಿದ್ದಾರೆ ಇದೆಲ್ಲ ಪ್ರಚಾರ ತಂತ್ರ ಎಂದು ಇನ್ನು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

  2006ರಲ್ಲಿಯೇ ರಾಖಿ ಸಾವಂತ್ ಹಿಂದಿ ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ರನರ್‌ಅಪ್ ಆಗಿದ್ದರು. ಆ ನಂತರ ಕಳೆದ ಬಿಗ್‌ಬಾಸ್ 14ನಲ್ಲೂ ರಾಖಿ ಸಾವಂತ್ ಭಾಗವಹಿಸಿ ನಾಲ್ಕನೇ ಸ್ಪರ್ಧಿಯಾಗಿ ಹೊರಬಂದಿದ್ದರು. ಈ ಬಾರಿ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ರಾಖಿ ಅಲ್ಲಿಯೂ ಬಹಳ ವಿಚಿತ್ರವಾಗಿ ವರ್ತಿಸಿ ಸ್ಪರ್ಧಿಗಳಿಗೆ ಗಾಬರಿ ಹುಟ್ಟಿಸಿದ್ದರು. ದೆವ್ವ ಬಂದಂತೆ ವರ್ತಿಸಿದ್ದ ರಾಖಿ ಸಾವಂತ್ ಬಟ್ಟೆಯಲ್ಲಿಯೇ ಮೂತ್ರ ಮಾಡಿಕೊಂಡು ಮನೆಯ ಸದಸ್ಯರಿಗೆ ಗಾಬರಿ ತಂದಿದ್ದರು.

  ನಟಿ ಸಾವಂತ್ ತಮ್ಮ ಪೆದ್ದು-ಪೆದ್ದು ಹೇಳಿಕೆಗಳಿಂದ ವರ್ತನೆಗಳಿಂದ ಸುದ್ದಿಗೆ ಬರುತ್ತಲೇ ಇರುತ್ತಾರೆ. ಪಿಪಿಇ ಕಿಟ್ ಹಾಕಿಕೊಂಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ್ದ ರಾಖಿ, ಕೊರೊನಾ ಆರಂಭದ ಸಮಯದಲ್ಲಿ ತಾನು ಏಕಾಂಗಿಯಾಗಿ ಚೀನಾಕ್ಕೆ ಹೋಗಿ ಕೊರೊನಾವನ್ನು ನಾಶ ಮಾಡುವುದಾಗಿ ಹೇಳಿ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದರು. ಕೊರೊನಾ ಲಾಕ್‌ಡೌನ್ ಆದ ಬಳಿಕ, ತನ್ನನ್ನು ತನ್ನ ಗಂಡ ಇರುವಲ್ಲಿಗೆ ಬಿಡಿ ಎಂದು ವಿಡಿಯೋದಲ್ಲಿ ಗೋಗರೆದು ಮೋದಿಗೆ ಮನವಿ ಮಾಡಿದ್ದರು.

  English summary
  Rakhi Sawanth protested in front of Bigg Boss OTT set. She arrived near set in bizarre spider man costume.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X