For Quick Alerts
  ALLOW NOTIFICATIONS  
  For Daily Alerts

  Mission Majnu Trailer : ಮತ್ತೆ ಪಾಕಿಸ್ತಾನಿ ಯುವತಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ, ಗಮನ ಸೆಳೆದಿದೆ ಟ್ರೈಲರ್

  By ಫಿಲ್ಮಿಬೀಟ್ ಡೆಸ್ಕ್
  |

  ನಟಿ ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಹಿಂದಿ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಮೊದಲು ಬಿಡುಗಡೆ ಆದ ರಶ್ಮಿಕಾರ ಹಿಂದಿ ಸಿನಿಮಾ ಫ್ಲಾಪ್ ಆದ ಬೆನ್ನಲ್ಲೆ ಇದೀಗ ರಶ್ಮಿಕಾರ ಮತ್ತೊಂದು ಹಿಂದಿ ಸಿನಿಮಾ ತೆರೆಗೆ ಬರುತ್ತಿದೆ. ಆದರೆ ಈ ಸಿನಿಮಾ ನೇರವಾಗಿ ಒಟಿಟಿಗೆ ಬರುತ್ತಿದೆಯೇ ಹೊರತು ಚಿತ್ರಮಂದಿರಕ್ಕಲ್ಲ.

  ರಶ್ಮಿಕಾ ಮಂದಣ್ಣ ನಟನೆಯ ಹಿಂದಿ ಸಿನಿಮಾ 'ಮಿಷನ್ ಮಜ್ನು' ಜನವರಿ 20 ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಾಣಲಿದೆ. ನಿನ್ನೆ (ಜನವರಿ 09) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ಬಹಳವಾಗಿ ಗಮನ ಸೆಳೆಯುತ್ತಿದೆ.

  'ಮಿಷನ್ ಮಜ್ನು' ಸಿನಿಮಾವು ಬಾಲಿವುಡ್‌ನ ಜನಪ್ರಿಯ 'ಗೂಢಚಾರಿ' ಕತೆಯನ್ನು ಒಳಗೊಂಡಿದ್ದು, ಭಾರತದ ರಾ ಏಜೆಂಟ್ ಒಬ್ಬ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನವನಂತೆ ಬದುಕಿ ಪಾಕಿಸ್ತಾನ ಸರ್ಕಾರ ಹಾಗೂ ಸೈನ್ಯದ ಮಾಹಿತಿಗಳನ್ನು ಕದ್ದು ಭಾರತಕ್ಕೆ ರವಾನಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

  ಸಿನಿಮಾದಲ್ಲಿ ಭಾರತದ ರಾ ಏಜೆಂಟ್ ಪಾತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಟಿಸಿದ್ದಾರೆ. ನಾಯಕಿ ರಶ್ಮಿಕಾ ಮಂದಣ್ಣ ಪಾಕಿಸ್ತಾನದ ಅಮಾಯಕ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಕುರುಡಿ ಆಗಿರುವ ಅನುಮಾನವೂ ಸಹ ಟ್ರೈಲರ್‌ನಿಂದ ತಿಳಿದು ಬರುತ್ತಿದೆ.

  ಎರಡನೇ ಬಾರಿ ಪಾಕ್ ಯುವತಿಯ ಪಾತ್ರದಲ್ಲಿ ರಶ್ಮಿಕಾ

  ಎರಡನೇ ಬಾರಿ ಪಾಕ್ ಯುವತಿಯ ಪಾತ್ರದಲ್ಲಿ ರಶ್ಮಿಕಾ

  ರಶ್ಮಿಕಾ ಮಂದಣ್ಣ ಪಾಕಿಸ್ತಾನದ ಯುವತಿಯ ಪಾತ್ರದಲ್ಲಿ ನಟಿಸುತ್ತಿರುವುದು ಇದು ಮೊದಲೇನೂ ಅಲ್ಲ. ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆದ 'ಸೀತಾ ರಾಮಂ' ಸಿನಿಮಾದಲ್ಲಿಯೂ ಸಹ ರಶ್ಮಿಕಾ ಮಂದಣ್ಣ ಪಾಕಿಸ್ತಾನಿ ಯುವತಿಯ ಪಾತ್ರದಲ್ಲಿ ನಟಿಸಿದ್ದರು. ಈಗ 'ಮಿಷನ್ ಮಜ್ನು' ಸಿನಿಮಾದಲ್ಲಿ ಮತ್ತೊಮ್ಮೆ ಪಾಕ್ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ನಸ್ರೀನ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

  ನಸ್ರೀನ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

  ರಶ್ಮಿಕಾ, ನಸ್ರೀನ್ ಹೆಸರಿನ ಪಾತ್ರದಲ್ಲಿ ನಟಿಸಿದ್ದು, ಪಾಕ್ ನಾಗರೀಕನಾಗಿ ಬದುಕುತ್ತಿರುವ ರಾ ಏಜೆಂಟ್ ನಸ್ರೀನ್‌ಳನ್ನು ವಿವಾಹವಾಗಿ ಆಕೆಯ ಪ್ರೇಮದಲ್ಲಿ ತಮ್ಮ ಕರ್ತವ್ಯ ಮರೆಯುತ್ತಾನೆ ಆ ನಂತರ ಏನಾಗುತ್ತದೆ. ತನಗೆ ಒಪ್ಪಿಸಲಾದ ಮಿಷನ್ ಅನ್ನು ಆ ಏಜೆಂಟ್ ಮುಗಿಸುತ್ತಾನೋ ಇಲ್ಲವೋ ಎಂಬುದೇ ಸಿನಿಮಾದ ಕತೆ. ದ'ಮಿಷನ್ ಮಜ್ನು' ಸಿನಿಮಾವನ್ನು ಶಂತನು ಬಾಗ್ಚಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಆರ್‌ಎಸ್‌ವಿಪಿ ಪ್ರೊಡಕ್ಷನ್ ಹೌಸ್.

  ಹಲವು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ

  ಹಲವು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ

  ಇನ್ನು ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಣ್ಬೀರ್ ಕಪೂರ್ ನಟನೆಯ 'ಅನಿಮಲ್' ಹಿಂದಿ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು 'ಅರ್ಜುನ್ ರೆಡ್ಡಿ' ಖ್ಯಾತಿಯ ಸಂದೀಪ್ ವಂಗ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ 2' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್ ವಿಜಯ್ ಜೊತೆ ರಶ್ಮಿಕಾ ನಟಿಸಿರುವ ತಮಿಳು ಸಿನಿಮಾ 'ವಾರಿಸು' ಜನವರಿ 12 ರಂದು ತೆರೆಗೆ ಬರಲಿದೆ. ಇನ್ನೊಂದು ತಮಿಳು ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

  English summary
  Kannada actress Rashmika Mandanna's second Hindi movie Mission Majnu's trailer released. Movie will release on January 20 on Netflix.
  Tuesday, January 10, 2023, 10:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X