For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ವೇಳೆ ಅವಘಡ, ಗಾಯಗೊಂಡ ನಿರ್ದೇಶಕ ರೋಹಿತ್ ಶೆಟ್ಟಿ ಆಸ್ಪತ್ರೆಗೆ ದಾಖಲು

  By ಫಿಲ್ಮಿಬೀಟ್ ಡೆಸ್ಕ್
  |

  ಜನಪ್ರಿಯ ಬಾಲಿವುಡ್ ನಿರ್ದೇಶಕ ಹಾಗೂ ಆಕ್ಷನ್ ನಿರ್ದೇಶಕ ರೋಹಿತ್ ಶೆಟ್ಟಿ ಹೈದರಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೂಟಿಂಗ್‌ನಲ್ಲಿ ನಡೆದ ಅವಘಡದಿಂದ ಅವರು ಗಾಯಗೊಂಡಿದ್ದಾರೆ.

  ಆಕ್ಷನ್ ಸಿನಿಮಾಗಳಿಂದ ಜನಪ್ರಿಯರಾಗಿರುವ ರೋಹಿತ್ ಶೆಟ್ಟಿ, ಪೊಲೀಸ್ ಕಥಾವಸ್ತುವುಳ್ಳ ವೆಬ್ ಸರಣಿಯೊಂದನ್ನು ನಿರ್ದೇಶನ ಮಾಡುತ್ತಿದ್ದು, ಆ ವೆಬ್ ಸರಣಿಯ ಚಿತ್ರೀಕರಣ ಹೈದರಾಬಾದ್‌ ನಲ್ಲಿ ನಡೆವ ವೇಳೆ ನಡೆದ ಅವಘಡದಿಂದಾಗಿ ಗಾಯಗೊಂಡಿದ್ದಾರೆ.

  'ಇಂಡಿಯನ್ ಪೊಲೀಸ್ ಫೋರ್ಸ್' ಹೆಸರಿನ ವೆಬ್ ಸರಣಿಯನ್ನು ರೋಹಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ವೆಬ್ ಸರಣಿಯಲ್ಲಿ ಸಖತ್ ಆಕ್ಷನ್ ದೃಶ್ಯಗಳಿದ್ದು, ಇದಕ್ಕಾಗಿ ರಾಮೋಜಿ ರಾವ್‌ನಲ್ಲಿ ಭರ್ಜರಿ ಕಾರು ಚೇಸ್ ದೃಶ್ಯವೊಂದರ ಚಿತ್ರೀಕರಣವನ್ನು ರೋಹಿತ್ ಶೆಟ್ಟಿ ಮಾಡುತ್ತಿದ್ದರು. ಈ ವೇಳೆ ನಡೆದ ಅವಘಡದಲ್ಲಿ ರೋಹಿತ್‌ರ ಕೈಗೆ ಪೆಟ್ಟಾಗಿದೆ.

  ಗಾಯ ತೀವ್ರವಾಗಿದ್ದರಿಂದ ರೋಹಿತ್ ಶೆಟ್ಟಿ ಅವರನ್ನು ಕೂಡಲೇ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಹಿತ್ ಶೆಟ್ಟಿಯ ಕೈ ಮೂಳೆ ಮುರಿದಿರುವ ಸಂಭವ ಇದೆ ಎನ್ನಲಾಗಿದೆ. ಆದರೆ ಜೀವಕ್ಕೆ ಎರವಾಗುವ ಯಾವುದೇ ಅಪಾಯ ಆಗಿಲ್ಲವೆಂದು ತಿಳಿದು ಬಂದಿದೆ.

  'ಇಂಡಿಯನ್ ಪೊಲೀಸ್ ಪೋರ್ಸ್‌' ವೆಬ್ ಸರಣಿಯು ಮುಂಬೈ ಪೊಲೀಸರ ಕುರಿತಾದ ಕತೆಯನ್ನು ಒಳಗೊಂಡಿದೆ. ಮುಂಬೈ ಪೊಲೀಸರು ಅಪರಾಧಿಗಳ ಬೆನ್ನಟ್ಟುವ ಕತೆಯನ್ನು ವೆಬ್ ಸರಣಿ ಮಾಡಿದ್ದಾರೆ ರೋಹಿತ್ ಶೆಟ್ಟಿ. ವೆಬ್ ಸರಣಿಯಲ್ಲಿ ಬಾಲಿವುಡ್‌ನ ಜನಪ್ರಿಯ ನಟ ಸಿದ್ಧಾರ್ಥ್ ಮಲ್ಹೋತ್ರಾ ನಟಿಸಿದ್ದಾರೆ. ಜೊತೆಗೆ ಶಿಲ್ಪಾ ಶೆಟ್ಟಿ, ವಿವೇಕ್ ಒಬೆರಾಯ್, ನಿಖಿತ್ ಧೀರ್ ಸಹ ನಟಿಸಿದ್ದಾರೆ.

  ಈ ಹಿಂದೆ ಇದೇ ವೆಬ್ ಸರಣಿಯ ಚಿತ್ರೀಕರಣದ ವೇಳೆ ನಟಿ ಶಿಲ್ಪಾ ಶೆಟ್ಟಿಗೆ ಸಹ ಗಾಯವಾಗಿತ್ತು. ಶಿಲ್ಪಾ ಶೆಟ್ಟಿಯ ಕಾಲಿನ ಮೂಳೆ ಮುರಿದಿತ್ತು. ಇದರಿಂದಾಗಿ ಚಿತ್ರೀಕರಣವನ್ನು ಮುಂದೂಡಲಾಗಿತ್ತು. ಇದೀಗ ಚಿತ್ರೀಕರಣ ಶುರುವಾದ ಬೆನ್ನಲ್ಲೆ ಈಗ ರೋಹಿತ್ ಶೆಟ್ಟಿ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ.

  'ಇಂಡಿಯನ್ ಪೊಲೀಸ್ ಫೋರ್ಸ್' ವೆಬ್ ಸರಣಿಯು ಭಾರತೀಯ ಪೊಲೀಸರಿಗೆ ಡೆಡಿಕೇಟ್ ಮಾಡಲಾಗಿದ್ದು, ಈ ವೆಬ್ ಸರಣಿಯನ್ನು ರೋಹಿತ್ ಶೆಟ್ಟಿ ಹಾಗೂ ಸುಶ್ವಂತ್ ಪ್ರಕಾಶ್ ಒಟ್ಟಿಗೆ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಸಹ ರೋಹಿತ್ ಶೆಟ್ಟಿಯೇ. ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಈ ವೆಬ್ ಸರಣಿ ಬಿಡುಗಡೆ ಆಗಲಿದೆ.

  English summary
  Director Rohit Shetty injured while shooting for his upcoming web series Indian police force in Hyderabad. He admitted to hospital.
  Saturday, January 7, 2023, 17:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X