For Quick Alerts
  ALLOW NOTIFICATIONS  
  For Daily Alerts

  ನನ್ನ ಕುಟುಂಬದ ಕಾರಣಕ್ಕೆ ನನ್ನನ್ನು ದೂರ ಇಡಲಾಗಿದೆ: ಬಿಗ್‌ಬಾಸ್‌ನಲ್ಲಿ ಶಮಿತಾ ಕಣ್ಣೀರು

  By ಫಿಲ್ಮಿಬೀಟ್ ಡೆಸ್ಕ್
  |

  ನಟಿ ಶಮಿತಾ ಶೆಟ್ಟಿ ಬಿಗ್‌ಬಾಸ್‌ ಒಟಿಟಿನಲ್ಲಿ ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ.

  ಶಮಿತಾ ಶೆಟ್ಟಿ ಬಿಗ್‌ಬಾಸ್‌ಗೆ ಹೋಗಿದ್ದೆ ಸಾಕಷ್ಟು ದೊಡ್ಡ ಸುದ್ದಿಯಾಗಿತ್ತು. ಭಾವ ರಾಜ್ ಕುಂದ್ರಾ ಅಶ್ಲೀಲ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ಸಮಯದಲ್ಲಿ ಅಕ್ಕ ಶಿಲ್ಪಾ ಶೆಟ್ಟಿಯನ್ನು ಒಂಟಿಯಾಗಿ ಬಿಗ್‌ಬಾಸ್‌ಗೆ ಹೋಗುವ ಶಮಿತಾ ಶೆಟ್ಟಿಯ ನಿರ್ಧಾರದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

  ಇದೀಗ ಬಿಗ್‌ಬಾಸ್‌ ಒಟಿಟಿಯಲ್ಲಿ ಸ್ಪರ್ಧಾಳುವಾಗಿರುವ ಶಮಿತಾ ಶೆಟ್ಟಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಯಾರೊಟ್ಟಿಗಾದರೂ ಜಗಳ, ಕಣ್ಣೀರು, ಸಹ ಸ್ಪರ್ಧಿಗಳ ಬಗ್ಗೆ ದೂರು ಅಥವಾ ತಮ್ಮದೇ ಸಿನಿಬದುಕಿನ ಕಷ್ಟ, ಜೀವನದ ಕಷ್ಟ-ನಷ್ಟ. ಅಕ್ಕ ಶಿಲ್ಪಾ ಶೆಟ್ಟಿ ಕುರಿತು ಮಾತು ಹೀಗೆ ತಮ್ಮೆಡೆಗೆ ಮಾಧ್ಯಮಗಳ ಗಮನ ಇರುವಂತೆ ನೋಡಿಕೊಳ್ಳುತ್ತಿದ್ದಾರೆ ನಟಿ ಶಮಿತಾ ಶೆಟ್ಟಿ.

  ನಟಿ ಶಮಿತಾ ಶೆಟ್ಟಿ ಇದೀಗ ಮತ್ತೊಮ್ಮೆ ಬಿಗ್‌ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ. ಅಲ್ಲದೆ ತಮ್ಮ ಕುಟುಂಬದ ಕಾರಣಕ್ಕೆ ನನ್ನನ್ನು ಭಿನ್ನವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದೂ ಸಹ ಶಮಿತಾ ಶೆಟ್ಟಿ ಆರೋಪ ಮಾಡಿದ್ದಾರೆ.

  ಟಾಸ್ಕ್‌ ಒಂದನ್ನು ಮಾಡುವಾಗ ನಟಿ ಶಮಿತಾ ಶೆಟ್ಟಿ, ಬಿಗ್‌ಬಾಸ್ ಒಟಿಟಿ ಮನೆಯ ಸದಸ್ಯ ನಿಶಾಂತ್ ಭಟ್ ಮೇಲೆ ಜಗಳ ಮಾಡಿದ್ದಾರೆ. ನಿಶಾಂತ್‌ಗೆ ನೀನು ಹಾವು ಇದ್ದಂತೆ ಎಂದು ಬೈದಿದ್ದಾರೆ. ನಿಶಾಂತ್ ಜೊತೆ ಈ ಹಿಂದೆಯೂ ಜಗಳವಾಡಿದ್ದ ನಟಿ ಶಮಿತಾ, 'ನಿಶಾಂತ್ ನನ್ನ ಬಳಿ ಎಲ್ಲೆ ಮೀರಿ ವರ್ತಿಸಿದ್ದಾನೆ' ಎಂದು ದೂರಿದ್ದರು.

  ಅವರೊಟ್ಟಿಗೆ ಗೆಳತಿಯಾಗಿ ಇರಲಾರೆ: ಶಮಿತಾ

  ಅವರೊಟ್ಟಿಗೆ ಗೆಳತಿಯಾಗಿ ಇರಲಾರೆ: ಶಮಿತಾ

  ನಿಶಾಂತ್‌ ಜೊತೆಗಿನ ಜಗಳದ ಬಗ್ಗೆ ಮತ್ತೊಬ್ಬ ಸಹ ಸ್ಪರ್ಧಿ ರಾಕೇಶ್‌ ಜೊತೆ ಮಾತನಾಡುತ್ತಾ, ''ಆ ರೀತಿಯ ಜನರೊಟ್ಟಿಗೆ ಸ್ನೇಹಿತರಾಗಿ ಹೇಗೆ ಉಳಿಯಲು ಸಾಧ್ಯ? ಯಾರೊಂದಿಗೂ ಜಗಳ ಮಾಡಬೇಡ ಎಂದು ನೀನು ನನಗೆ ಹೇಳಿದ್ದೆ. ನಾನೂ ಸಹ ಹಾಗೆಯೇ ಇರಲು ಯತ್ನಿಸುತ್ತಿದ್ದೇನೆ. ಬಾಯಿ ಮುಚ್ಚಿಕೊಂಡು ಬದುಕುತ್ತಿದ್ದೇನೆ. ಇನ್ನು ಮುಂದೆ ನನಗೆ ಹೀಗೆ ಇರಲು ಸಾಧ್ಯವಿಲ್ಲ. ನಿಶಾಂತ್, ದಿವ್ಯಾ ಅಗರ್ವಾಲ್ ಅಂಥಹವರೊಟ್ಟಿಗೆ ಗೆಳತಿಯಾಗಿ ಇರಲು ನನಗೆ ಸಾಧ್ಯವಿಲ್ಲ'' ಎನ್ನುತ್ತಾ ಕಣ್ಣೀರು ಹಾಕಿದ್ದಾರೆ ಶಮಿತಾ ಶೆಟ್ಟಿ.

  ''ನಾನು ಸಿನಿಮಾದವಳಾದ್ದರಿಂದ ಭಿನ್ನವಾಗಿ ನೋಡಲಾಗುತ್ತಿದೆ''

  ''ನಾನು ಸಿನಿಮಾದವಳಾದ್ದರಿಂದ ಭಿನ್ನವಾಗಿ ನೋಡಲಾಗುತ್ತಿದೆ''

  ''ಈ ಮನೆಯಲ್ಲಿ ಕ್ಲಾಸ್ ಆಧಾರದ ಮೇಲೆ ವಿಭಾಗಗಳು ಆಗಿಬಿಟ್ಟಿವೆ. ನಾನು ಸಿನಿಮಾ ರಂಗದಿಂದ ಬಂದಿದ್ದೇನೆ. ಸಿನಿಮಾ ಕುಟುಂಬದಿಂದ ಬಂದಿದ್ದೇನೆ (ಶೆಟ್ಟಿ ಕುಟುಂಬ) ನಾನು ನಟಿ, ನಾನು ಕ್ಲಾಸಿ ಎಂಬ ಕಾರಣಕ್ಕೆ ನನ್ನನ್ನು ಭಿನ್ನವಾಗಿ ನೋಡಲಾಗುತ್ತಿದೆ. ನಾನು ಸಿನಿಮಾ ಜಗತ್ತಿನ ಬಗ್ಗೆ ಮಾತನಾಡುತ್ತೇನೆ, ನನಗೆ ಅವಕಾಶ ಕೊಟ್ಟ ಜನರ ಬಗ್ಗೆ ಮಾತನಾಡಿದ್ದೇನೆ. ನನಗೆ ಅವಕಾಶ ಕೊಟ್ಟ ಜನ ಹೊರಗಿದ್ದಾರೆ. ಈ ಮನೆಯ ಜನರು ನನಗೆ ಅವಕಾಶ ಕೊಟ್ಟಿಲ್ಲ'' ಎಂದು ಕಣ್ಣೀರು ಹಾಕಿದ್ದಾರೆ ನಟಿ ಶಿಲ್ಪಾ ಶೆಟ್ಟಿ.

  ಶಿಲ್ಪಾ ಶೆಟ್ಟಿ ಬಗ್ಗೆ ಶಮಿತಾ ಶೆಟ್ಟಿ ಮಾತು

  ಶಿಲ್ಪಾ ಶೆಟ್ಟಿ ಬಗ್ಗೆ ಶಮಿತಾ ಶೆಟ್ಟಿ ಮಾತು

  ಕೆಲವು ದಿನಗಳ ಹಿಂದಷ್ಟೆ ಅಕ್ಕ ಶಿಲ್ಪಾ ಶೆಟ್ಟಿಯ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದರು ಶಮಿತಾ ಶೆಟ್ಟಿ, ''ಶಿಲ್ಪಾ ಶೆಟ್ಟಿಯ ತಂಗಿಯಾಗಿರುವುದು ಸುಲಭದ ಕಾರ್ಯವಲ್ಲ. ಎಲ್ಲರೂ ನನ್ನನ್ನು ಅಕ್ಕನಿಗೆ ಹೋಲಿಸಿ ಮಾತನಾಡುತ್ತಿದ್ದರು. ಅದು ನನಗೆ ಬಹಳ ಸಮಸ್ಯೆ ಕೊಟ್ಟಿದೆ. ಆದರೆ ನಾನು ಅಂಥಹಾ ಅಕ್ಕನನ್ನು ಪಡೆಯಲು ಪುಣ್ಯ ಮಾಡಿದ್ದೆ. ಆಕೆಯಿಂದಾಗಿ ನಾನು ಇಷ್ಟು ವರ್ಷ ಸಿನಿಮಾರಂಗದಲ್ಲಿ ಇರಲು ಸಾಧ್ಯವಾಯಿತು. ಆದರೆ ಆಕೆಯ ನೆರಳಿನಿಂದ ಆಚೆ ಬಂದು ನಾನು ನನ್ನದೇ ಆದ ಗುರುತನ್ನು ಪಡೆದುಕೊಂಡೆ'' ಎಂದಿದ್ದಾರೆ ಶಮಿತಾ ಶೆಟ್ಟಿ.

  ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ

  ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ

  ನಟಿ ಶಮಿತಾ ಶೆಟ್ಟಿ, ಶಿಲ್ಪಾ ಶೆಟ್ಟಿಯ ಸಹೋದರಿ. ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಜುಲೈ 19ರಂದು ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ರಾಜ್ ಕುಂದ್ರಾ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಅವನ್ನು ವಿದೇಶಿ ಸಂಸ್ಥೆಗಳ ಸಹಾಯದ ಮೂಲಕ ಹಾಟ್‌ಶಾಟ್ಸ್‌ ಎಂಬ ಆಪ್‌ನಲ್ಲಿ ಮಾರಾಟಕ್ಕಿಡುತ್ತಿದ್ದರು ಆ ಮೂಲಕ ಪ್ರತಿದಿನ ಲಕ್ಷಾಂತರ ಹಣವನ್ನು ರಾಜ್ ಕುಂದ್ರಾ ಗಳಿಸಿದ್ದರು ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ. ರಾಜ್ ಕುಂದ್ರಾ ಈವರೆಗೆ ಜೈಲಿನಲ್ಲಿಯೇ ಇದ್ದು, ಕುಂದ್ರಾರ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ ಹೋಗಿದೆ. ಇಷ್ಟು ದಿನ ಬಹುತೇಕ ಮೌನದಲ್ಲಿದ್ದ ಶಿಲ್ಪಾ ಶೆಟ್ಟಿ ಇದೀಗ ತಮ್ಮ ರಿಯಾಲಿಟಿ ಶೋ ಜಡ್ಜ್‌ ಕಾರ್ಯಕ್ಕೆ ಮರಳಿದ್ದಾರೆ.

  English summary
  Actress Shamita Shetty alleged that there is a class divide in Bigg Boss OTT house. She cried and said she been targeted because she is an actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X