Don't Miss!
- News
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ಗೆ ಕೊರೊನಾ ಸೋಂಕು
- Sports
ಹೀಗೆ ಆದ್ರೆ ಧೋನಿ ಒಂದು ಪಂದ್ಯದ ನಿಷೇಧ ಎದುರಿಸುವುದು ಗ್ಯಾರಂಟಿ!
- Lifestyle
ರಾಮನವಮಿ 2021: ರಾಮನ ಕುರಿತಾದ ಅಚ್ಚರಿಯ ಸಂಗತಿಗಳು
- Finance
ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ: 10 ಗ್ರಾಂ ಎಷ್ಟು ರೂಪಾಯಿ ಹೆಚ್ಚಾಗಿದೆ?
- Automobiles
ಏಪ್ರಿಲ್ ಅವಧಿಗಾಗಿ ವಿವಿಧ ಆಫರ್ಗಳನ್ನು ಘೋಷಣೆ ಮಾಡಿದ ದಟ್ಸನ್
- Education
States That Cancelled And Postponed Board Exams: ಯಾವೆಲ್ಲಾ ರಾಜ್ಯಗಳಲ್ಲಿ ಬೋರ್ಡ್ ಪರೀಕ್ಷೆ ರದ್ದು ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬರಲಿದೆ ಮತ್ತೊಂದು 'ಬಾಹುಬಲಿ': 200 ಕೋಟಿ ಬಜೆಟ್, ಹಿಂದಿದ್ದಾರೆ ರಾಜಮೌಳಿ
ರಾಜಮೌಳಿ ವಿರಚಿತ ಸುಂದರ ದೃಶ್ಯಕಾವ್ಯ 'ಬಾಹುಬಲಿ' ಸಿನಿಪ್ರೇಮಿಗಳ ಮನಸಿನಲ್ಲಿ ಅಚ್ಚೊತ್ತಿದೆ. ಈ ನಡುವೆ ರಾಜಮೌಳಿ ಮತ್ತೊಂದು 'ಬಾಹುಬಲಿ' ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ಈಗಾಗಲೇ 'ಬಾಹುಬಲಿ' ಸರಣಿಯ ಎರಡು ಸಿನಿಮಾಗಳು ತೆರೆಗೆ ಬಂದಿವೆ. ಒಂದು 'ಬಾಹುಬಲಿ' ಅನಿಮೇಟೆಡ್ ವೆಬ್ ಸರಣಿ ಪ್ರಸಾರವಾಗಿತ್ತು. ಈಗ ಮತ್ತೊಂದು ಬಾಹುಬಲಿ ತೆರೆಗೆ ಬರಲಿದೆ. ಇದರ ಹಿಂದಿರುವುದು ಸ್ವತಃ ರಾಜಮೌಳಿ.
ರಾಜಮೌಳಿಯ ವಿರುದ್ಧ ಬೆದರಿಕೆ ಆರೋಪ ಹೊರಿಸಿದ ನಿರ್ಮಾಪಕ ಬೋನಿ ಕಪೂರ್
2015 ರಲ್ಲಿ 'ಬಾಹುಬಲಿ; ದಿ ಬಿಗಿನಿಂಗ್' ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು. ಅದರ ಮುಂದುವರೆದ ಭಾಗ 'ಬಾಹುಬಲಿ; ದಿ ಕನ್‌ಕ್ಲೂಷನ್' ಹೆಸರಿನಲ್ಲಿ 2017 ರಲ್ಲಿ ಬಿಡುಗಡೆ ಆಯಿತು. ಆ ನಂತರ ಅಮೆಜಾನ್ ಪ್ರೈಂನಲ್ಲಿ 'ಬಾಹುಬಲಿ; ದಿ ಲಾಸ್ಟ್ ಲೆಜೆಂಡ್ಸ್' ಹೆಸರಿನ ಅನಿಮೇಟೆಡ್ ಸರಣಿ ಬಂದಿತ್ತು. ಈಗ ಮತ್ತೊಂದು ವೆಬ್ ಸರಣಿ ಬರುತ್ತಿದೆ.

ಬಾಹುಬಲಿ ಪಾತ್ರಗಳ ಪೂರ್ಣ ಕತೆ ಹೇಳುವ ಯತ್ನ
'ಬಾಹುಬಲಿ' ಸಿನಿಮಾದ ಅಮರೇಂದ್ರ ಬಾಹುಬಲಿ, ದೇವಸೇನಾ, ಬಲ್ಲಾಳದೇವ, ಶಿವಗಾಮಿ, ಕಟ್ಟಪ್ಪ, ಬಿಜ್ಜಳದೇವಾ ಇವೆಲ್ಲ ಬಹಳ ಗಟ್ಟಿಯಾದ ಪಾತ್ರಗಳು. ಪ್ರತಿ ಪಾತ್ರವನ್ನೂ ಪ್ರತ್ಯೇಕ ಸಿನಿಮಾ ಮಾಡಬಹುದಾದಷ್ಟು ವಿಶೇಷತೆಗಳು, ಅವಕಾಶಗಳು ಇವೆ. ಇದೇ ಅವಕಾಶವನ್ನು ಬಳಸಿಕೊಂಡು ಹೊಸ ವೆಬ್ ಸರಣಿಯೊಂದನ್ನು ತೆರೆಗೆ ತರಲಾಗುತ್ತಿದೆ.
'ದೃಶ್ಯಂ-2' ನೋಡಿ ನಿರ್ದೇಶಕ ರಾಜಮೌಳಿ ಹೇಳಿದ್ದೇನು?

ಬಂಡವಾಳ ಹೂಡಿರುವುದು ರಾಜಮೌಳಿ
'ಬಾಹುಬಲಿ; ಬಿಫೋರ್ ದಿ ಬಿಗಿನಿಂಗ್' ವೆಬ್ ಸರಣಿಗೆ 'ಬಾಹುಬಲಿ' ಸೃಷ್ಟಿಕರ್ತ ರಾಜಮೌಳಿ ಬಂಡವಾಳ ಹೂಡಿದ್ದಾರೆ. ರಾಜಮೌಳಿ ಜೊತೆಗೆ ಆರ್ಕ್ ಮೀಡಿಯಾಸ್‌ನ ಪ್ರಸಾದ್ ದೇವಿನೇನಿ ಸಹ ಜೊತೆಗಿದ್ದಾರೆ. ಈ ವೆಬ್ ಸರಣಿಯು 200 ಕೋಟಿ ಬಜೆಟ್‌ನದ್ದಾಗಿರಲಿದೆ. ವೆಬ್ ಸರಣಿಯನ್ನು ನೆಟ್‌ಫ್ಲಿಕ್ಸ್‌ನ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿದೆ.

ಆನಂದ್ ನೀಲಕಂಠನ್ ಕಾದಂಬರಿ ಆಧರಿಸಿ ಚಿತ್ರಕತೆ
'ಬಾಹುಬಲಿ' ಸಿನಿಮಾ ಬಿಡುಗಡೆ ಬಳಿಕ ಕೇರಳದ ಖ್ಯಾತ ಕಾದಂಬರಿಕಾರ ಆನಂದ್ ನೀಲಕಂಠನ್ ಅವರು 'ದಿ ರೈಸ್ ಆಫ್ ಶಿವಗಾಮಿ', 'ಚದುರಂಗ', 'ಕ್ವೀನ್ ಆಫ್ ಮಾಹೀಷ್ಮತಿ' ಹೆಸರಿನ ಮೂರು ಕಾದಂಬರಿಗಳನ್ನು ಬರೆದಿದ್ದು, ಅವುಗಳನ್ನೇ ಆಧಾರವಾಗಿಟ್ಟುಕೊಂಡು 'ಬಾಹುಬಲಿ; ಬಿಫೋರ್ ದಿ ಬಿಗಿನಿಂಗ್' ವೆಬ್ ಸರಣಿಯ ಚಿತ್ರಕತೆ ಹೆಣೆಯಲಾಗಿದೆ. ವೆಬ್ ಸರಣಿಯನ್ನು ದೇವ ಕಟ್ಟ, ಪ್ರವೀಣ್ ಸತ್ತಾರು ನಿರ್ದೇಶನ ಮಾಡಲಿದ್ದಾರೆ.

ಯಾವ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ?
'ಬಾಹುಬಲಿ; ಬಿಫೋರ್ ದಿ ಬಿಗಿನಿಂಗ್ ವೆಬ್ ಸರಣಿಯ ಚಿತ್ರೀಕರಣ ಆರಂಭವಾಗಿದ್ದು, ಶಿವಗಾಮಿ ಪಾತ್ರದಲ್ಲಿ ಮೃನಾಲ್ ಠಾಕೂರ್, ಕಟ್ಟಪ್ಪ ಪಾತ್ರದಲ್ಲಿ ಸುನೀಲ್ ಪಾಲ್ವಾಲ್, ಬಿಜ್ಜಳದೇವ ಪಾತ್ರದಲ್ಲಿ ಸಮರನ್ ಸಾಹು ನಟಿಸಲಿದ್ದಾರೆ. ವೆಬ್ ಸರಣಿಯಲ್ಲಿ ಅತುಲ್ ಕುಲಕರ್ಣಿ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.