twitter
    For Quick Alerts
    ALLOW NOTIFICATIONS  
    For Daily Alerts

    ಆರು ಸಾವಿರ ಕೋಟಿ ಬಜೆಟ್‌ನ ವೆಬ್ ಸರಣಿ ಬಿಡುಗಡೆ! ಏನು ವಿಶೇಷತೆ?

    |

    ಒಟಿಟಿಗಳ ಜಮಾನಾದಲ್ಲಿ ವೆಬ್ ಸರಣಿಗಳಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ. ಸಿನಿಮಾಗಳಿಗಿಂತಲೂ ಹೆಚ್ಚು ಲಾಭವನ್ನು, ವೀಕ್ಷಕರನ್ನು ವೆಬ್ ಸರಣಿಗಳು ಗಳಿಸಿಕೊಳ್ಳುತ್ತಿವೆ.

    'ಗೇಮ್ ಆಫ್ ಥ್ರೋನ್ಸ್', 'ಬ್ರೇಕಿಂಗ್ ಬ್ಯಾಡ್', 'ಮನಿ ಹೈಸ್ಟ್', 'ಸೂಟ್ಸ್', 'ಡಾರ್ಕ್', 'ಸ್ಟ್ರೆಂಜರ್ ಥಿಂಗ್ಸ್', 'ನಾರ್ಕೋಸ್' ಇನ್ನೂ ಹಲವು ವಿಶ್ವ ವಿಖ್ಯಾತ ವೆಬ್ ಸರಣಿಗಳು ಈಗಾಗಲೇ ಒಟಿಟಿಗಳಲ್ಲಿ ಲಭ್ಯವಿದೆ. ಇದೇ ಸಾಲಿಗೆ ಈಗ ಹೊಸದೊಂದು ವೆಬ್ ಸರಣಿ ಸೇರಿಕೊಂಡಿದೆ ಅದುವೆ 'ರಿಂಗ್ಸ್ ಆಫ್ ಪವರ್'.

    ಜನಪ್ರಿಯ ಸಿನಿಮಾ ಸರಣಿ 'ಲಾರ್ಡ್ ಆಫ್‌ ದಿ ರಿಂಗ್ಸ್'ನ ಪ್ರೀಕ್ವೆಲ್ (ಲಾರ್ಡ್‌ ಆಫ್ ದಿ ರಿಂಗ್ಸ್ ಕತೆಗಿಂತಲೂ ಹಿಂದೆ ನಡೆದಿದ್ದ ಕತೆ) 'ರಿಂಗ್ಸ್ ಆಫ್ ಪವರ್' ಆಗಿದೆ. ಈ ಶೋ ಇಂದು (ಸೆಪ್ಟೆಂಬರ್ 02) ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು ಮೊದಲ ಸೀಸನ್‌ನ ಎರಡು ಎಪಿಸೋಡ್‌ಗಳು ಇದೀಗ ಬಿಡುಗಡೆ ಆಗಿವೆ. ಮೊದಲ ಸೀಸನ್‌ನಲ್ಲಿ ಒಟ್ಟು ಎಂಟು ಎಪಿಸೋಡ್‌ಗಳಿವೆ ಎನ್ನಲಾಗಿದೆ.

    'ರಿಂಗ್ಸ್ ಆಫ್ ಪವರ್' ವೆಬ್ ಸರಣಿ ಈವರೆಗೆ ನಿರ್ಮಾಣಗೊಂಡ ಯಾವುದೇ ವೆಬ್ ಸರಣಿಗಿಂತಲೂ ಅತ್ಯಂತ ದುಬಾರಿ ವೆಬ್ ಸರಣಿಯಾಗಿದೆ. ಈ ವೆಬ್ ಸರಣಿ ನಿರ್ಮಾಣ ಹಾಗೂ ಕತೆಯ ಹಕ್ಕು ಖರೀದಿ ಸೇರಿ ಮೊದಲ ಸೀಸನ್‌ಗೆ ಸುಮಾರು ಆರು ಸಾವಿರ ಕೋಟಿ ರುಪಾಯಿ ಹಣ ಖರ್ಚು ಮಾಡಲಾಗಿದೆ.

    ಒಂದು ಎಪಿಸೋಡ್‌ಗೆ 500 ಕೋಟಿ ಖರ್ಚು

    ಒಂದು ಎಪಿಸೋಡ್‌ಗೆ 500 ಕೋಟಿ ಖರ್ಚು

    ಈ ವೆಬ್ ಸರಣಿಯ ಒಂದು ಎಪಿಸೋಡ್‌ಗೆ ಸುಮಾರು 500 ಕೋಟಿ ಹಣ ಖರ್ಚು ಮಾಡಲಾಗಿದೆ. ಮೊದಲ ಸೀಸನ್‌ನ ಪೂರ್ಣ ಬಜೆಟ್ 3800 ಕೋಟಿ ರುಪಾಯಿ ಆಗಿದೆ. ಆದರೆ 'ಲಾರ್ಡ್ ಆಫ್‌ ದಿ ರಿಂಗ್ಸ್' ಕತೆಯ ಹಕ್ಕು ಖರೀದಿಗೆ 2000 ಕೋಟಿ ರುಪಾಯಿ ಹಣವನ್ನು ಅಮೆಜಾನ್ ನೀಡಿದೆ. ಆ ಮೂಲಕ ಈ ವೆಬ್ ಸರಣಿಯು ಈ ವರೆಗಿನ ಅತಿ ಹೆಚ್ಚು ಬಜೆಟ್‌ನ ವೆಬ್ ಸರಣಿ ಎನಿಸಿಕೊಂಡಿದೆ. ಈವರೆಗೆ ಯಾವ ಸಿನಿಮಾಕ್ಕೂ ಸಹ ಇಷ್ಟು ದೊಡ್ಡ ಬಂಡವಾಳ ಹೂಡಲಾಗಿಲ್ಲ.

    'ಲಾರ್ಡ್ ಆಫ್ ದಿ ರಿಂಗ್ಸ್' ಕತೆ ಬೇರೆಯಾಗಿತ್ತು

    'ಲಾರ್ಡ್ ಆಫ್ ದಿ ರಿಂಗ್ಸ್' ಕತೆ ಬೇರೆಯಾಗಿತ್ತು

    'ಲಾರ್ಡ್ ಆಫ್‌ ದಿ ರಿಂಗ್ಸ್' ಸಿನಿಮಾ ಸರಣಿಯಲ್ಲಿ ಶಾಪಗ್ರಸ್ತ ರಿಂಗ್ ಗಾಲಮ್‌ನಿಂದ ಕಳೆದು ಹಾಬಿಟ್‌ ಸಮುದಾಯದ ಫ್ರಾಡೊ ಬ್ಯಾಗಿನ್ಸ್‌ ಕೈಗೆ ಸಿಗುತ್ತದೆ. ಅದನ್ನು ತನ್ನ ಗೆಳೆಯರೊಟ್ಟಿಗೆ ಸೇರಿಕೊಂಡು ಆತ ಮಾರ್ಡೋರ್‌ಗೆ ಹೋಗಿ ಸಾರೊಮನ್‌ ಕಣ್‌ ತಪ್ಪಿಸಿ ಅಲ್ಲಿ ಅದನ್ನು ನಾಶ ಮಾಡಬೇಕಾಗಿರುತ್ತದೆ. ಮೂರು ಸಿನಿಮಾ ಸರಣಿಯ ಕೊನೆಯ ಸಿನಿಮಾ 'ರಿಟರ್ನ್ ಆಫ್ ದಿ ಕಿಂಗ್'ನಲ್ಲಿ ಫ್ರಾಡೊ ರಿಂಗ್ ಅನ್ನು ನಾಶಪಡಿಸುತ್ತಾನೆ.

    ರಿಂಗ್‌ ಹುಟ್ಟಿದ ಕತೆ, ಸಾಗಿಬಂದ ಕತೆ

    ರಿಂಗ್‌ ಹುಟ್ಟಿದ ಕತೆ, ಸಾಗಿಬಂದ ಕತೆ

    ಆದರೆ ಈಗ ಬಿಡುಗಡೆ ಆಗಿರುವ 'ರಿಂಗ್ಸ್ ಆಫ್‌ ಪವರ್', 'ಲಾರ್ಡ್ ಆಫ್‌ ದಿ ರಿಂಗ್ಸ್' ಗಿಂತಲೂ ಹಳೆಯ ಕತೆಯನ್ನು ಒಳಗೊಂಡಿದೆ. 'ರಿಂಗ್‌ ಆಫ್ ದಿ ಪವರ್' ಅಥವಾ ಶಾಪಗ್ರಸ್ತ ರಿಂಗ್ ಹುಟ್ಟಿದ್ದು ಹೇಗೆ, ಅದಕ್ಕಾ ಹೇಗೆ ದೇವರುಗಳು, ರಾಕ್ಷಸರು, ಮನುಷ್ಯರು ಇತರೆ ಜೀವ ಜಾತಿಗಳು ಜಗಳವಾಡಿದರು. ಕೊನೆಗೆ ರಿಂಗ್ ಅನ್ನು ಹೊಂದಿದ್ದ ದುಷ್ಟಶಕ್ತಿ ಅಂತ್ಯವಾಗಿ ಅದು ಗೋಲಮ್‌ನ ಕೈಗೆ ಹೇಗೆ ದೊರಕಿತು ಎಂಬ ಕತೆಯನ್ನು ಒಳಗೊಂಡಿದೆ.

    ಭಾರಿ ರಿಚ್ ಆಗಿ ಮೂಡಿ ಬಂದಿದೆ ವೆಬ್ ಸರಣಿ

    ಭಾರಿ ರಿಚ್ ಆಗಿ ಮೂಡಿ ಬಂದಿದೆ ವೆಬ್ ಸರಣಿ

    ಅಮೆಜಾನ್ ಪ್ರೈಂನಲ್ಲಿ ವೆಬ್ ಸರಣಿ ಬಿಡುಗಡೆ ಆಗಿದ್ದು, ಈವರೆಗೆ ಎರಡು ಎಪಿಸೋಡ್‌ಗಳು ಬಿಡುಗಡೆ ಆಗಿವೆ. ವಿಶ್ವದಾದ್ಯಂತ ಜನ ವೆಬ್ ಸರಣಿಯನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದು, ಈ ವೆಬ್ ಸರಣಿಯನ್ನು ಮೊಬೈಲ್ ಬದಲಿಗೆ ದೊಡ್ಡ ಪರದೆಗಾಗಿ ನಿರ್ಮಾಣ ಮಾಡಬೇಕಿತ್ತು ಎಂದಿದ್ದಾರೆ. ವೆಬ್ ಸರಣಿ ಭಾರಿ ರಿಚ್ ಆಗಿ ಮೂಡಿಬಂದಿದೆ ಎಂದಿದ್ದಾರೆ.

    English summary
    Six Thousand crore rs budget web series Lord of the Rings: Rings of Power released on Amazon Prime on September 02.
    Friday, September 2, 2022, 17:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X