For Quick Alerts
  ALLOW NOTIFICATIONS  
  For Daily Alerts

  ನಟ ಸೂರ್ಯಾ ಹೊಸ ಸಿನಿಮಾ ಬಿಡುಗಡೆ ಮುಂದೂಡುವ ಸಾಧ್ಯತೆ

  |

  ನಟ ಸೂರ್ಯ ನಟನೆಯ ಹೊಸ ಸಿನಿಮಾ 'ಸೂರರೈ ಪೊಟ್ರು' ಸಿನಿಮಾ ಅಮೆಜಾನ್‌ ಪ್ರೈಂ ನಲ್ಲಿ ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುವುದಾಗಿ ಈ ಹಿಂದೆ ಘೋಷಣೆಯಾಗಿತ್ತು, ಆದರೆ ಈಗ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

  ಹೌದು, ಅಮೆಜಾನ್ ಪ್ರೈಂ ನವರೇ ಸಿನಿಮಾದ ಬಿಡುಗಡೆಯನ್ನು ಮುಂದಕ್ಕೆ ಹಾಕುವ ಯೋಚನೆಯಲ್ಲಿದ್ದಾರೆ. ಅಕ್ಟೋಬರ್ 30 ಕ್ಕೆ ಸೂರರೈ ಪೊಟ್ರು ಸಿನಿಮಾ ಬಿಡುಗಡೆ ಆಗುವುದು ಬಹುತೇಕ ಅನುಮಾನವಾಗಿದೆ.

   ಬಿಡುಗಡೆ ಆಗದಿದ್ದರೂ ಕೋಟಿಗಟ್ಟಲೆ ಬಾಚಿದ ಸೂರ್ಯಾ ಸಿನಿಮಾ ಬಿಡುಗಡೆ ಆಗದಿದ್ದರೂ ಕೋಟಿಗಟ್ಟಲೆ ಬಾಚಿದ ಸೂರ್ಯಾ ಸಿನಿಮಾ

  ಸೂರರೈ ಪೊಟ್ರು ಬಿಗ್‌ ಬಜೆಟ್ ಸಿನಿಮಾ ಆಗಿದ್ದು, ಭಾರಿ ಮೊತ್ತದ ಹಣ ನೀಡಿ ಸಿನಿಮಾವನ್ನು ಅಮೆಜಾನ್ ಪ್ರೈಂ ಖರೀದಿಸಿದೆ. ಆದರೆ ಸಿನಿಮಾಕ್ಕೆ ಸರಿಯಾಗಿ ಪ್ರಚಾರ ಮಾಡಿಲ್ಲದ ಕಾರಣ ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕುವ ಚಿಂತನೆ ನಡೆಸಿದೆ ಅಮೆಜಾನ್ ಪ್ರೈಂ.

  ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ ಸಿನಿಮಾ

  ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ ಸಿನಿಮಾ

  ಸೂರರೈ ಪೊಟ್ರು ಸಿನಿಮಾ, ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧರಿಸಿದ ಸಿನಿಮಾ ಆಗಿದೆ. ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಸಿನಿಮಾ ಸೂರರೈ ಪೊಟ್ರು ಅನ್ನು ಎರಡು ತಿಂಗಳ ಹಿಂದೆಯೇ ಅಮೆಜಾನ್ ಪ್ರೈಂ ಗೆ ಮಾರಾಟ ಮಾಡಲಾಗಿದೆ.

  ಸೂರರೈ ಪೊಟ್ರು ಸಿನಿಮಾಕ್ಕೆ 50 ಕೋಟಿ ನೀಡಲಾಗಿದೆ

  ಸೂರರೈ ಪೊಟ್ರು ಸಿನಿಮಾಕ್ಕೆ 50 ಕೋಟಿ ನೀಡಲಾಗಿದೆ

  ಸೂರರೈ ಪೊಟ್ರು ಸಿನಿಮಾಕ್ಕೆ ಅಮೆಜಾನ್ ಪ್ರೈಂ 50 ಕೋಟಿ ಹಣ ನೀಡಿದೆಯಂತೆ. ಆದರೆ ಸಿನಿಮಾ ಬಗ್ಗೆ ಸರಿಯಾಗಿ ಪ್ರಚಾರ ಕಾರ್ಯ ಮಾಡಿಲ್ಲ ಎನ್ನುವುದು ಅಮೆಜಾನ್ ಪ್ರೈಂ ನ ಚಿಂತೆ. ಪ್ರಚಾರ ಸರಿಯಾಗಿ ಆಗಿಲ್ಲವಾದ್ದರಿಂದ ಈಗ ಸಿನಿಮಾ ಬಿಡುಗಡೆ ಮಾಡಿದರೆ ನಷ್ಟವಾಗುವ ಸಾಧ್ಯತೆ ಇದೆ ಎಂಬುದು ಅಮೆಜಾನ್ ಪ್ರೈಂ ಲೆಕ್ಕಾಚಾರ.

  ಸೂರ್ಯಾ ನಟನೆಯ ಸಿನಿಮಾ ನೇರ ಒಟಿಟಿಗೆ: ವಿವಾದಕ್ಕೆ ಮುನ್ನುಡಿ?ಸೂರ್ಯಾ ನಟನೆಯ ಸಿನಿಮಾ ನೇರ ಒಟಿಟಿಗೆ: ವಿವಾದಕ್ಕೆ ಮುನ್ನುಡಿ?

  ಟೀಸರ್, ಟ್ರೇಲರ್, ಹಾಡು ಬಿಡುಗಡೆ ಮಾಡಬೇಕಿದೆ

  ಟೀಸರ್, ಟ್ರೇಲರ್, ಹಾಡು ಬಿಡುಗಡೆ ಮಾಡಬೇಕಿದೆ

  ಸೂರರೈ ಪೊಟ್ರು ಸಿನಿಮಾದ ಟೀಸರ್, ಟ್ರೇಲರ್ ಹಾಗೂ ಮೂರು ಹಾಡುಗಳನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿತ್ತಂತೆ ಅಮೆಜಾನ್ ಪ್ರೈಂ, ಆದರೆ ಬಿಡುಗಡೆ ದಿನಾಂಕ ಸನಿಹ ಇರುವ ಕಾರಣ, ಕಡಿಮೆ ಅವಧಿಯಲ್ಲಿ ಇಷ್ಟನ್ನೆಲ್ಲಾ ಬಿಡುಗಡೆ ಮಾಡಲು ಆಗುವುದಿಲ್ಲ, ಹಾಗಾಗಿ ಇನ್ನಷ್ಟು ಸಮಯ ತೆಗೆದುಕೊಂಡು ಸರಿಯಾಗಿ ಪ್ರಚಾರ ಮಾಡುವ ಯೋಚನೆಯಲ್ಲಿದೆ ಅಮೆಜಾನ್ ಪ್ರೈಂ.

  ಸೇಲ್ಸ್ ಮೆನ್ ಆಗಿ ಜಂಟಲ್ ಮೆನ್ ಚಿತ್ರದಲ್ಲಿ ಪ್ರಜ್ವಲ್ ಮಿಂಚಿದ್ದು ಹೀಗೆ | Filmibeat Kannada
  ಸೂರರೈ ಪೊಟ್ರು ಸಿನಿಮಾದ ತಾರಾಗಣ

  ಸೂರರೈ ಪೊಟ್ರು ಸಿನಿಮಾದ ತಾರಾಗಣ

  ಸೂರರೈ ಪೊಟ್ರು ಸಿನಿಮಾದಲ್ಲಿ ಸೂರ್ಯ ಎದುರು ನಾಯಕಿಯಾಗಿ ಅಪರ್ಣಾ ಬಾಲಮುರಳಿ ನಟಿಸಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟರಾದ ಜಾಕಿ ಶ್ರಾಫ್, ಪರೇಶ್ ರಾವಲ್ ಸಹ ಇದ್ದಾರೆ. ಸಿನಿಮಾವನ್ನು ಸುಧಾ ಕೆ ಪ್ರಸಾದ್ ನಿರ್ದೇಶಿಸಿದ್ದಾರೆ. ಸಿನಿಮಾವು ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನವನ್ನು ಆಧರಿಸಿದೆ.

  English summary
  Suriya's Soorarai Potru movie release date may get postponed by Amazon Prime.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X