For Quick Alerts
  ALLOW NOTIFICATIONS  
  For Daily Alerts

  ದೇವಾಲಯದಲ್ಲಿ ಚುಂಬನ ದೃಶ್ಯ: ನೆಟ್‌ಫ್ಲಿಕ್ಸ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

  |

  ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಮೀರಾ ನಾಯರ್ ನಿರ್ದೇಶನದ 'ಎ ಸೂಟೇಬಲ್ ಬಾಯ್' ವೆಬ್ ಸರಣಿ ವಿವಾದಕ್ಕೆ ಕಾರಣವಾಗಿದೆ.

  ವೆಬ್ ಸರಣಿಯಲ್ಲಿ ಮುಸ್ಲಿಂ ಯುವಕನ ಪಾತ್ರವೊಂದು ಹಿಂದು ಯುವತಿ ಪಾತ್ರಧಾರಿಗೆ ದೇವಾಲಯದಲ್ಲಿ ತುಟಿಗೆ ಚುಂಬಿಸುವ ರೊಮ್ಯಾಂಟಿಕ್ ದೃಶ್ಯವಿದ್ದು, ಈ ದೃಶ್ಯ ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂದು ಆರೋಪಿಸಿ ದೂರುಗಳು ದಾಖಲಾಗಿವೆ.

  ದೇವಸ್ಥಾನದಲ್ಲಿ ಚುಂಬನ: ಕೇಂದ್ರ ಸಚಿವ ಗರಂ, ವೆಬ್ ಸರಣಿ ವಿರುದ್ಧ ಪ್ರಕರಣ ದಾಖಲು

  ಮಧ್ಯಪ್ರದೇಶ ಪೊಲೀಸರು, ಭಾರತದ ನೆಟ್‌ಫ್ಲಿಕ್ಸ್‌ ಘಟಕದ ಇಬ್ಬರು ಹಿರಿಯ ಅಧಿಕಾರಿಗಳಾದ ಮೋನಿಕಾ ಶೇರ್ಗಿಲ್ ಹಾಗೂ ಅಂಬಿಕಾ ಖುರಾನಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಗೌರವ್ ಘೋಯಲ್ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ.

  ಐಪಿಸಿ ಸೆಕ್ಷನ್ 295 (ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯಲಿದೆ ಎಂದು ಎಸ್‌ಪಿ ರಾಕೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

  ಕೇಂದ್ರ ಮಂತ್ರಿ, ನರೋತ್ತಮ ಮಿಶ್ರಾ, ಬಿಜೆಪಿ ವಕ್ತಾರ ಗೌರವ್ ಘೋಯಲ್ ಇನ್ನೂ ಹಲವರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಎ ಸೂಟೆಬಲ್ ಬಾಯ್‌ನ ಕೆಲವು ದೃಶ್ಯಗಳು ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿವೆ ಅಲ್ಲದೆ ಲವ್ ಜಿಹಾದ್‌ಗೆ ಪ್ರೇರಣೆ ನೀಡುತ್ತಿವೆ ಎಂದು ಸಚಿವ ನರೋತ್ತಮ ಮಿಶ್ರಾ ಆರೋಪಿಸಿದ್ದಾರೆ.

  English summary
  Two Netflix India executives Monika Sherghil, Ambika Khurana booked for A Suitable Boy web series controversial scene.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X