For Quick Alerts
  ALLOW NOTIFICATIONS  
  For Daily Alerts

  ನೆಟ್‌ಫ್ಲಿಕ್ಸ್ ವಿಡಿಯೋದಲ್ಲಿ ರಿಷಬ್ ಪಂತ್‌ಗೆ ಟಾಂಗ್ ಕೊಟ್ಟ ಊರ್ವಶಿ ರೌಟೇಲಾ!

  |

  ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಾಗೂ ಭಾರತೀಯ ಕ್ರಿಕೆಟ್ ತಂಡದ ಕೀಪರ್ ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್ ನಡುವಿನ ಕಿತ್ತಾಟ ತಾರಕ್ಕೇರಿತ್ತು. ಇಬ್ಬರೂ ಒಬ್ಬರಿಗೊಬ್ಬರು ಮಾತಿನಲ್ಲೇ ಸಮರ ಸಾರಿದ್ದರು.

  ಊರ್ವಶಿ ರೌಟೇಲಾ ಸಂದರ್ಶನವೊಂದರಲ್ಲಿ ಕೆಲಸದ ನಿಮಿತ್ತ ದೆಹಲಿ ಹೋಗಿದ್ದೆ. ಆಗ ನಾನು ತಂಗಿದ್ದ ಹೊಟೇಲ್‌ನಲ್ಲಿ ನನ್ನನ್ನು ಭೇಟಿ ಮಾಡಲು Mr RP ಸುಮಾರು 10 ಗಂಟೆಗಳ ಕಾಲ ಕಾದಿದ್ದರು ಎಂದು ಹೇಳಿದ್ದರು. ಇದು ಊರ್ವಶಿ ರೌಟೇಲಾ ಹಾಗೂ ರಿಷಬ್ ಪಂತ್ ನಡುವಿನ ಪರೋಕ್ಷ ಕಿತ್ತಾಟಕ್ಕೆ ಕಾರಣವಾಗಿತ್ತು.

  ನಾನು ಪಂತ್ ಕ್ಷಮೆ ಕೇಳಿಯೇ ಇಲ್ಲ, ಟ್ರೋಲ್ ಪೇಜ್‍ಗಳು ವರ್ಸ್ಟ್ ಎಂದು ಪ್ಲೇಟ್ ಬದಲಿಸಿದ 'ಐರಾವತ' ಬೆಡಗಿ!ನಾನು ಪಂತ್ ಕ್ಷಮೆ ಕೇಳಿಯೇ ಇಲ್ಲ, ಟ್ರೋಲ್ ಪೇಜ್‍ಗಳು ವರ್ಸ್ಟ್ ಎಂದು ಪ್ಲೇಟ್ ಬದಲಿಸಿದ 'ಐರಾವತ' ಬೆಡಗಿ!

  ಊರ್ವಶಿ ರೌಟೇಲಾ ಹೇಳಿದಂತೆ Mr RP ಯಾರು ಅನ್ನೋ ಪ್ರಶ್ನೆ ಎದುರಾಗಿತ್ತು. ಆಗ ರಿಷಬ್ ಪಂತ್ ಕೂಡ ಸೋಶಿಯಲ್ ಮೀಡಿಯಾ ಮೂಲಕವೇ ತಿರುಗೇಟು ನೀಡಿದ್ದರು. ಇವರಿಬ್ಬರ ವಿವಾದ ಜೋರಾಗುತ್ತಿದ್ದಂತೆ ಊರ್ವಶಿ ಹಾಗೂ ರಿಷಬ್ ಪಂತ್ ಟ್ರೋಲ್ ಆಗಿದ್ದರು. ಆದರೂ ಇಬ್ಬರೂ ಒಬ್ಬರಿಗೊಬ್ಬರು ಟಾಂಗ್ ಕೊಡುತ್ತಲೇ ಇರುತ್ತಾರೆ. ಈಗ ಮತ್ತೆ ನೆಟ್‌ಫ್ಲಿಕ್ಸ್ ಪ್ಲೇಬ್ಯಾಕ್ 2022 ವಿಡಿಯೋ ರಿಷಬ್‌ಗೆ ಟಾಂಗ್ ಕೊಟ್ಟಿದ್ದಾರೆ.

  ರಿಷಬ್ ಪಂತ್‌ಗೆ ಊರ್ವಶಿ ಟಾಂಗ್

  ರಿಷಬ್ ಪಂತ್‌ಗೆ ಊರ್ವಶಿ ಟಾಂಗ್

  2022 ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಫ್ಲ್ಯಾಶ್ ಬ್ಯಾಕ್ ವಿಡಿಯೋ ಒಂದನ್ನು ಸಿದ್ಧಪಡಿಸಿದೆ. ಈ ವಿಡಿಯೋದಲ್ಲಿ ಊರ್ವಶಿ ರೌಟೇಲಾ ಕೂಡ ಗೆಸ್ಟ್ ಲುಕ್ ಕೊಟ್ಟಿದ್ದಾರೆ. ಈ ಕ್ರಿಯೇಟಿವ್ ವಿಡಿಯೋದಲ್ಲಿ ಊರ್ವಶಿ, ಕ್ರಿಕೆಟಿಗ ರಿಷಬ್ ಪಂತ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಹಾಲಿವುಡ್ ನಟ ರಾಯನ್ ಎದುರು ಊರ್ವಶಿ " ನಾವು ಮೇಡ್ ಫಾರ್ ಈಚ್ ಅದರ್" ಎಂದು ಹೇಳುತ್ತಾರೆ. ಆಗ ಹಾಲಿವುಡ್ ನಟ ಇದನ್ನು ಬರೆದು ಹೇಳಬಹುದೇ? ಎಂದು ಹೇಳುತ್ತಾರೆ. ಆ ವೇಳೆ ಊರ್ವಶಿ ಒಂದು ಕೈಯಲ್ಲಿ 'R' ಅಂತಲೂ ಇನ್ನೊಂದು ಕೈಯಲ್ಲಿ 'P'ಅನ್ನು ಹೊಡೆದು ಹಾಕಿ 'G' ಅಂತಲೂ ಬರೆದುಕೊಂಡಿರುತ್ತಾರೆ. ಇದೇ ವಿಡಿಯೋ ಈಗ ವೈರಲ್ ಆಗಿದೆ.

  Mr RP ಅಲ್ಲ Mr RG

  Mr RP ಅಲ್ಲ Mr RG

  ಕೆನಾಡದ ನಟನ ರಾಯನ್ ಗೋಸ್ಲಿಂಗ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಹೀಗಾಗಿ ಕ್ರಿಯೇಟಿವ್ ವಿಡಿಯೋದಲ್ಲಿ ರಾಯನ್ ಸಿನಿಮಾದ ತುಣುಕನ್ನು ಈ ವಿಶೇಷ ವಿಡಿಯೋಗೆ ಬಳಸಿಕೊಳ್ಳಲಾಗಿತ್ತು. ವಿಎಫ್‌ಎಕ್ಸ್ ಮೂಲಕ ರಾಯನ್ ಹಾಗೂ ಊರ್ವಶಿ ರೌಟೇಲಾ ರೊಮ್ಯಾಂಟಿಕ್ ಸಂಭಾಷಣೆಯನ್ನು ವಿಡಂಬನಾತ್ಮಕವಾಗಿ ಬಿಂಬಿಸಲಾಗಿತ್ತು. ಈ ವೇಳೆ ಊರ್ವಶಿ RPಯಲ್ಲಿ Pಯನ್ನು ಹೊಡೆದು ಹಾಕಿ ಆ ಜಾಗದಲ್ಲಿ 'RG' ರಾಯನ್ ಗೋಸ್ಲಿಂಗ್ ಎಂದು ತೋರಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

  ಈ ವಿಡಿಯೋಗೆ ಊರ್ವಶಿ ಪಡೆದಿದ್ದೆಷ್ಟು?

  ಈ ವಿಡಿಯೋಗೆ ಊರ್ವಶಿ ಪಡೆದಿದ್ದೆಷ್ಟು?

  ನೆಟ್‌ಫ್ಲಿಕ್ಸ್ ವಿಡಿಯೋದಲ್ಲಿ ಕಾಣಿಸಿಕೊಂಡ ಊರ್ವಶಿ ರೌಟೇಲಾ ಪಡೆದ ಸಂಭಾವನೆ ಬಗ್ಗೆನೂ ಜೋರಾಗಿ ಚರ್ಚೆಯಾಗುತ್ತಿದೆ. ಕ್ರಿಕೆಟರ್ ರಿಷಬ್ ಪಂತ್‌ಗೆ ಟಾಂಗ್ ಕೊಟ್ಟಿರೋ ಈ ವಿಡಿಯೋಗೆ ನಟಿ ಸುಮಾರು 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಕೆಲವೇ ಸೆಕೆಂಡುಗಳಲ್ಲಿ ಹಿಂಗೆ ಬಂದು ಹಂಗೆ ಹೋಗೋ ಊರ್ವಶಿ ಪಡೆದಿರೋ ಸಂಭಾವನೆ ಬಗ್ಗೆ ಎಲ್ಲರೂ ಮಾತಾಡುವಂತಾಗಿದೆ.

  ಈ ವಿಡಿಯೋದಲ್ಲಿ ಯಾವ್ಯಾವ ಸಿನಿಮಾವಿದೆ?

  ಈ ವಿಡಿಯೋದಲ್ಲಿ ಯಾವ್ಯಾವ ಸಿನಿಮಾವಿದೆ?

  ನೆಟ್‌ಫಿಕ್ಸ್‌ ವಿಡಿಯೋದಲ್ಲಿ ಭಾರತದಲ್ಲಿ ಸದ್ದು ಮಾಡಿದ ಸಿನಿಮಾಗಳಿವೆ. ರಾಜಮೌಳಿ ನಿರ್ದೇಶಿಸಿದ RRR ಸಿನಿಮಾದ ತುಣುಕು ಕಾಣುವುದಕ್ಕೆ ಸಿಗುತ್ತೆ. ಇದರಲ್ಲಿ ಜೂ.ಎನ್‌ಟಿಆರ್ ದೃಶ್ಯವನ್ನು ಆಯ್ಕೆ ಮಾಡಿದ್ದಾರೆ. ಇದರೊಂದಿಗೆ 'ಡಾರ್ಲಿಂಗ್ಸ್' ಸಿನಿಮಾದ ನಟ, ಮಲಯಾಳಂ ಸಿನಿಮಾ 'ಮಿನ್ನಾಲ್ ಮುರಳಿ' ತುಣುಕು ಹಾಗೂ ವಿವಾದಾತ್ಮಕ ನಟಿ ಉರ್ಫಿ ಜಾವೇದ್ ಕೂಡ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Urvashi Rautela FaceOff To Rishab Pant In Netflix's Annual Video, Know More.
  Friday, December 23, 2022, 21:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X