For Quick Alerts
  ALLOW NOTIFICATIONS  
  For Daily Alerts

  ಮದುವೆ ಚಿತ್ರ ಹಂಚಿಕೊಂಡು ಇಕ್ಕಟ್ಟಿಗೆ ಸಿಲುಕಿದ ನಯನತಾರಾ-ವಿಘ್ನೇಶ್! 25 ಕೋಟಿ ನಷ್ಟ!

  |

  ನಟಿ ನಯನತಾರಾ ಹಾಗೂ ನಿರ್ಮಾಪಕ, ನಿರ್ದೇಶಕ ವಿಘ್ನೇಶ್ ಶಿವನ್ ಕಳೆದ ತಿಂಗಳಷ್ಟೆ ಅದ್ಧೂರಿಯಾಗಿ ವಿವಾಹವಾದರು. ಆದರೆ ಇವರ ವಿವಾಹದ ಚಿತ್ರಗಳನ್ನು ಹಂಚಿಕೊಂಡಿರಲಿಲ್ಲ. ಮೊದಲ ದಿನ ಒಂದೆರಡು ಚಿತ್ರ ಬಿಟ್ಟರೆ ಹೆಚ್ಚು ಚಿತ್ರಗಳು ಹೊರಬಂದಿದ್ದಿಲ್ಲ.

  ಆದರೆ ವಿವಾಹವಾದ ಎರಡು ಮೂರು ವಾರಗಳ ಬಳಿಕ ವಿಘ್ನೇಶ್ ಶಿವನ್ ತಮ್ಮ ಮದುವೆ ಕೆಲ ಚಿತ್ರಗಳನ್ನು ಹಂಚಿಕೊಂಡರು. ಶಾರುಖ್ ಖಾನ್ ತಮ್ಮ ವಿವಾಹಕ್ಕೆ ಬಂದು ಹಾರೈಸಿದ ಚಿತ್ರ, ರಜನೀಕಾಂತ್, ಕಮಲ್ ಹಾಸನ್ ಬಂದ ಚಿತ್ರಗಳನ್ನು ಹಂಚಿಕೊಂಡರು.

  ಈ ಚಿತ್ರಗಳು ಅಭಿಮಾನಿಗಳಿಗೇನೋ ಮುದ ನೀಡಿದವು. ಆದರೆ ನಯನತಾರಾ ಹಾಗೂ ವಿಘ್ನೇಶ್ ಶಿವನ್‌ಗೆ ಭಾರಿ ಸಂಕಷ್ಟವನ್ನು ತಂದಿಟ್ಟಿದ್ದವು. ಅಸಲಿಗೆ ವಿಘ್ನೇಶ್ ಹಾಗೂ ನಯನತಾರಾ ತಮ್ಮ ವಿವಾಹ ವಿಡಿಯೋದ ಹಕ್ಕನ್ನು ನೆಟ್‌ಫ್ಲಿಕ್ಸ್‌ಗೆ ಮಾರಿದ್ದರು. ಆದರೆ ವಿಘ್ನೇಶ್ ತಮ್ಮ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದರಿಂದ ನೆಟ್‌ಫ್ಲಿಕ್ಸ್‌ ಇಂಡಿಯಾ ಬೇಸರಗೊಂಡು ಹಣ ಹಿಂತಿರುಗಿಸುವಂತೆ ಸೂಚನೆ ನೀಡಿತ್ತು.

  ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ ವಿವಾಹ

  ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ ವಿವಾಹ

  ಹೌದು, ನಯನತಾರಾ ಹಾಗೂ ವಿಘ್ನೇಶ್ ಶಿವನ್‌ರ ಪೂರ್ಣ ವಿವಾಹ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿತ್ತು. ವಿವಾಹದ ವಿಡಿಯೋ ಪ್ರಸಾರದ ಸಂಪೂರ್ಣ ಹಕ್ಕನ್ನು ಈ ಜೋಡಿ 25 ಕೋಟಿ ರುಪಾಯಿಗೆ ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಿತ್ತು. ವಿವಾಹದ ವಿಡಿಯೋವನ್ನು ಎಪಿಸೋಡ್‌ಗಳ ರೂಪದಲ್ಲಿ ಎಡಿಟ್ ಮಾಡಿ ಪ್ರಸಾರ ಮಾಡಲು ನೆಟ್‌ಫ್ಲಿಕ್ಸ್‌ ಸಹ ಸಜ್ಜಾಗಿತ್ತು. ಆದರೆ ಈ ನಡುವೆ ವಿಘ್ನೇಶ್, ತಮ್ಮ ಮದುವೆಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ನೆಟ್‌ಫ್ಲಿಕ್ಸ್‌ಗೆ ಬೇಸರ ಮೂಡಿಸಿತ್ತು.

  25 ಕೋಟಿ ವಾಪಸ್ ನೀಡುವಂತೆ ನೊಟೀಸ್

  25 ಕೋಟಿ ವಾಪಸ್ ನೀಡುವಂತೆ ನೊಟೀಸ್

  ತಾವು ನೀಡಿದ್ದ 25 ಕೋಟಿ ಹಣವನ್ನು ಮರಳಿಸುವಂತೆ ವಿಘ್ನೇಶ್ ಹಾಗೂ ನಯನತಾರಾಗೆ ಸೂಚಿಸಿ ನೊಟೀಸ್ ಸಹ ಕಳಿಸಿತ್ತು ನೆಟ್‌ಫ್ಲಿಕ್ಸ್‌. ಇದರಿಂದ ವಿಚಲಿತರಾದ ವಿಘ್ನೇಶ್ ಶಿವನ್, ನೆಟ್‌ಫ್ಲಿಕ್ಸ್‌ ಇಂಡಿಯಾ ಜೊತೆ ಚರ್ಚೆ ನಡೆಸಿ ಕೆಲವು ಷರತ್ತುಗಳ ಜೊತೆಗೆ ಒಪ್ಪಂದವನ್ನು ಮುಂದುವರೆಸಿದ್ದಾರೆ. ಹಾಗಾಗಿ ನಯನತಾರಾ-ವಿಘ್ನೇಶ್ ವಿವಾಹದ ವಿಡಿಯೋ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.

  ಮದುವೆಗೆ ಹಲವು ಗಣ್ಯರು ಆಗಮಿಸಿದ್ದರು

  ಮದುವೆಗೆ ಹಲವು ಗಣ್ಯರು ಆಗಮಿಸಿದ್ದರು

  ನಯನತಾರಾ-ವಿಘ್ನೇಶ್ ಶಿವನ್ ವಿವಾಹ ತಿರುಪತಿಯಲ್ಲಿ ನಡೆಯಲಿದೆ ಎನ್ನಲಾಗಿತ್ತು. ಆದರೆ ನೆಟ್‌ಫ್ಲಿಕ್ಸ್‌ ಜೊತೆ ಒಪ್ಪಂದ ಮಾಡಿಕೊಂಡ ಕಾರಣದಿಂದಲೇ ಚೆನ್ನೈ ಹೊರ ಪ್ರದೇಶದ ರೆಸಾರ್ಟ್‌ನಲ್ಲಿ ವಿವಾಹ ಆಯೋಜಿಸಲಾಯ್ತು. ವಿವಾಹಕ್ಕೆ ಶಾರುಖ್ ಖಾನ್, ರಜನೀಕಾಂತ್, ಕಮಲ್ ಹಾಸನ್, ಚಿರಂಜೀವಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸೇರಿದಂತೆ ಹಲವು ದೊಡ್ಡ ಸೆಲೆಬ್ರಿಟಿಗಳು ಆಗಮಿಸಿದ್ದರು. ನಯನತಾರಾ ಕೆಂಪು ಸೀರೆಯುಟ್ಟು ಮಿರಿ-ಮಿರಿ ಮಿಂಚಿದ್ದರು.

  ಜೂನ್ 9 ರಂದು ವಿವಾಹವಾಗಿದ್ದ ಜೋಡಿ

  ಜೂನ್ 9 ರಂದು ವಿವಾಹವಾಗಿದ್ದ ಜೋಡಿ

  ನಯನತಾರಾ ಹಾಗೂ ವಿಘ್ನೇಶ್ ಶಿವನ್ ಹಲವು ವರ್ಷಗಳಿಂದ ಪ್ರೇಮಿಗಳಾಗಿದ್ದರು. ಪ್ರಭುದೇವಾ ಜೊತೆ ಬ್ರೇಕ್‌ ಅಪ್ ಬಳಿಕ ನಯನತಾರಾ ವಿಘ್ನೇಶ್ ಶಿವನ್ ತೆಕ್ಕೆಗೆ ಬಿದ್ದರು. ಕೆಲ ವರ್ಷ ಡೇಟಿಂಗ್ ಬಳಿಕ ಜೂನ್ 9 ರಂದು ಈ ಜೋಡಿ ವಿವಾಹವಾದರು. ವಿವಾಹವಾದ ಬಳಿಕ ತಿರುಪತಿಗೆ ತೆರಳಿದ್ದರು. ಅಲ್ಲಿ ನಯನತಾರಾ ಚಪ್ಪಲಿ ಧರಿಸಿ ದೇವಾಲಯದ ಆವರಣ ಪ್ರವೇಶಿಸಿದ್ದು ಸಹ ಸುದ್ದಿಯಾಗಿತ್ತು.

  Recommended Video

  ವಿಕ್ರಾಂತ್ ರೋಣ ಸಿನಿಮಾನಾ ಯಾಕೆ ನೋಡ್ಬೇಕು | Neetha Ashok | Nirup Bhandari | Kichcha Sudeep *Interview
  English summary
  Vignesh Shivan and Nayanthara marriage video will stream on Netflix soon. Nayanathara-Vignesh sold their wedding video streaming rights for 25 crore rs to Netflix.
  Thursday, July 21, 2022, 18:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X