For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ನನ್ನ ಡಾರ್ಲಿಂಗ್, ಆದರೆ...! ವಿಜಯ್ ದೇವರಕೊಂಡ ಹೇಳಿದ್ದೇನು?

  |

  ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವೆ ಏನೋ ನಡೆಯುತ್ತಿದೆ ಎಂಬ ಸುದ್ದಿಗಳು ಪ್ರಾರಂಭವಾಗಿ ಮೂರು ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಈ ಜೊಡಿ ತಮ್ಮ ರಿಲೇಶನ್‌ಶಿಪ್ ಸ್ಟೇಟಸ್ ಅನ್ನು ಈವರೆಗೆ ಬಹಿರಂಗಗೊಳಿಸಿಲ್ಲ.

  ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಆಗಾಗ್ಗೆ ಮುಂಬೈನ ತಾರಾ ಹೋಟೆಲ್‌ಗಳ ಮುಂದೆ, ಹೈದರಾಬಾದ್‌ನ ಏರ್‌ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರಾದರೂ ಪರಸ್ಪರರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಿಲ್ಲ.

  ರಶ್ಮಿಕಾ ಮಂದಣ್ಣ ಬೇಡಿಕೆ ಕುಸಿಯಲಿದೆ, ಆ ನಟನಿಂದ ಸಮಸ್ಯೆ: ಭವಿಷ್ಯರಶ್ಮಿಕಾ ಮಂದಣ್ಣ ಬೇಡಿಕೆ ಕುಸಿಯಲಿದೆ, ಆ ನಟನಿಂದ ಸಮಸ್ಯೆ: ಭವಿಷ್ಯ

  ಆದರೆ ಇದೀಗ ನಟ ವಿಜಯ್ ದೇವರಕೊಂಡ 'ಕಾಫಿ ವಿತ್ ಕರಣ್' ಶೋನಲ್ಲಿ ಕಾಣಿಸಿಕೊಂಡಿದ್ದು, ಕರಣ್ ಜೋಹರ್, ವಿಜಯ್ ದೇವರಕೊಂಡ ಬಳಿ ಅವರ ರಿಲೇಶನ್‌ಶಿಪ್‌ ಸ್ಟೇಟಸ್ ಏನೆಂದು ಪ್ರಶ್ನೆ ಮಾಡಿದ್ದಾರೆ ಅಲ್ಲದೆ, ರಶ್ಮಿಕಾ ಮಂದಣ್ಣ ಜೊತೆಗಿನ ಸಂಬಂಧದ ಬಗ್ಗೆಯೂ ಕೇಳಿದ್ದಾರೆ. ಕರಣ್ ಪ್ರಶ್ನೆಗೆ ವಿಜಯ್ ದೇವರಕೊಂಡ ನೀಡಿರುವ ನೇರ ಉತ್ತರ ಹೀಗಿದೆ.

  ನಿಮ್ಮ ಖಾಸಗಿ ಜೀವನದ ಬಗ್ಗೆ ಹೆಚ್ಚೇನು ಗೊತ್ತಿಲ್ಲ ನಮಗೆ, ''ನಿಮ್ಮ ಗರ್ಲ್‌ ಫ್ರೆಂಡ್ ಯೂರೋಪ್‌ನಲ್ಲಿದ್ದಾಳೆ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಹೇಳುತ್ತಾರೆ ರಶ್ಮಿಕಾ ಮಂದಣ್ಣ ಜೊತೆ ನೀವು ರಿಲೇಶನ್‌ಶಿಪ್‌ನಲ್ಲಿದ್ದೀರಿ ಎನ್ನುತ್ತಾರೆ. ಸಾಕಷ್ಟು ನಾಯಕಿಯರೊಟ್ಟಿಗೆ ನಿಮ್ಮ ಹೆಸರು ಜೋಡಿಸಲಾಗುತ್ತದೆ. ನೀವು ನೇರವಾಗಿ ಇದಕ್ಕೆ ಉತ್ತರಿಸಿ'' ಎಂದಿದ್ದಾರೆ ಕರಣ್. ಆಗ ಪಕ್ಕದಲ್ಲೇ ಇದ್ದ ನಟಿ ಅನನ್ಯಾ ಪಾಂಡೆ ಸಹ, ಹೌದು, ನಾನೂ ಸಹ ವಿಜಯ್ ಬಗ್ಗೆ ಏನೇನೋ ಕೇಳಿದ್ದೇನೆ, ಬೇರೆಯವರಿಗೆ ಹೇಳಿದ್ದೀನಿ'' ಸಹ ಎನ್ನುತ್ತಾರೆ. ''ರಶ್ಮಿಕಾ ಜೊತೆಗಂತೂ ನಿಮ್ಮ ಹೆಸರು ಬಹಳ ಕೇಳಿ ಬರುತ್ತೆ, ನೀವಿಬ್ಬರು ಬಹಳ ಆತ್ಮೀಯರಾಗಿ ಸಹ ಇದ್ದೀರಿ'' ಎಂದು ಕರಣ್ ಪ್ರಶ್ನೆ ಮಾಡಿದ್ದಾರೆ.

  ತೆಲುಗಿನ ಸ್ಟಾರ್ ನಟರಿಗೆ ಟಾಂಗ್ ಕೊಟ್ಟ ವಿಜಯ್ ದೇವರಕೊಂಡತೆಲುಗಿನ ಸ್ಟಾರ್ ನಟರಿಗೆ ಟಾಂಗ್ ಕೊಟ್ಟ ವಿಜಯ್ ದೇವರಕೊಂಡ

  ಇದಕ್ಕೆ ಉತ್ತರಿಸಿರುವ ವಿಜಯ್ ದೇವರಕೊಂಡ, ''ನಾನು ನನ್ನ ವೃತ್ತಿ ಜೀವನದ ಆರಂಭದಲ್ಲಿ ಎರಡು ಸಿನಿಮಾಗಳಲ್ಲಿ ರಶ್ಮಿಕಾ ಜೊತೆ ನಟಿಸಿದೆ. ಆಕೆ ನನ್ನ ಡಾರ್ಲಿಂಗ್, ನನಗೆ ಆಕೆಯೆಂದರೆ ಬಹಳ ಪ್ರೀತಿ. ನಾವಿಬ್ಬರೂ ಬಹಳ ಒಳ್ಳೆಯ ಗೆಳೆಯರು. ನಮ್ಮ ಏಳು-ಬೀಳಿನ ಕುರಿತು ಮಾತನಾಡುವಾಗ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಏರ್ಪಟ್ಟಿತು. ಸಿನಿಮಾಗಳಲ್ಲಿ ನಟ-ನಟಿಯರ ಮಧ್ಯೆ ಬಾಂಧವ್ಯ ಬಹಳ ಬೇಗ ಬಿಲ್ಡ್ ಆಗುತ್ತದೆ. ಅದಕ್ಕೆ ನಾವಿಬ್ಬರೂ ಒಟ್ಟಿಗೆ ನಟಿಸುತ್ತಿರುವುದು ಸಹ ಕಾರಣವಾಗುತ್ತದೆ'' ಎಂದಿದ್ದಾರೆ ವಿಜಯ್.

  ಮೊದಲ ಭೇಟಿಯಲ್ಲೇ ಮಾತನಾಡುವುದು ಕಷ್ಟ: ವಿಜಯ್

  ಮೊದಲ ಭೇಟಿಯಲ್ಲೇ ಮಾತನಾಡುವುದು ಕಷ್ಟ: ವಿಜಯ್

  ''ಸಾಮಾನ್ಯವಾಗಿ ನನಗೆ ಹುಡುಗಿಯೊಟ್ಟಿಗೆ ಮಾತನಾಡಲು, ಸ್ನೇಹ ಬೆಳೆಸಲು ಸಮಯ ಬೇಕಾಗುತ್ತದೆ. ಆದರೆ ಸಿನಿಮಾಗಳಲ್ಲಿ ಹಾಗಲ್ಲ, ಬಂದ ಕೂಡಲೇ ನಾಯಕಿಯ ಕೆನ್ನೆ ಮುಟ್ಟು, ಕೂದಲು ಸರಿಸು ಎನ್ನುತ್ತಾರೆ. ಇದರಿಂದಾಗಿ ಪರಸ್ಪರರ ಮಧ್ಯೆ ಇದ್ದ ಅಪರಿಚಿತತೆ ಬೇಗ ಮಾಯವಾಗಿಬಿಡುತ್ತದೆ ಹಾಗೂ ಪರಸ್ಪರರು ಬೇಗ ಹತ್ತಿರವಾಗಿಬಿಡುತ್ತಾರೆ'' ಎಂದಿದ್ದಾರೆ ವಿಜಯ್ ದೇವರಕೊಂಡ.

  ವಿಜಯ್ ದೇವರಕೊಂಡ ರಿಲೇಶನ್‌ಶಿಪ್ ಸ್ಟೇಟಸ್ ಏನು?

  ವಿಜಯ್ ದೇವರಕೊಂಡ ರಿಲೇಶನ್‌ಶಿಪ್ ಸ್ಟೇಟಸ್ ಏನು?

  ಆದರೆ ಅಷ್ಟಕ್ಕೆ ಸುಮ್ಮನಾಗದ ಕರಣ್ ಜೋಹರ್, ನಿಮಗೆ ಯಾರು ಇಷ್ಟ, ನಿಮ್ಮ ರಿಲೇಶನ್‌ಶಿಪ್ ಸ್ಟೇಟಸ್ ಏನು, ನೀವು ಸಿಂಗಲ್ಲಾ, ಮಿಂಗಲ್ಲಾ? ಯಾರನ್ನಾದರೂ ಡೇಟ್ ಮಾಡುತ್ತಿದ್ದೀರಾ? ಎಂದೆಲ್ಲ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ವಿಜಯ್, ನಾನು ಜೀವನದಲ್ಲಿ ಖುಷಿಯಾಗಿದ್ದೇನೆ, ನನ್ನ ಪೋಷಕರು, ನಿರ್ದೇಶಕರೊಟ್ಟಿಗೆ ಒಳ್ಳೆಯ ರಿಲೇಶನ್‌ಶಿಪ್ ಮೇಂಟೇನ್ ಮಾಡುತ್ತಿದ್ದೇನೆ ಎಂದಿದ್ದಾರೆ.

  ವಿಜಯ್ ಉತ್ತರದಿಂದ ತೃಪ್ತಿಯಾಗದ ಕರಣ್

  ವಿಜಯ್ ಉತ್ತರದಿಂದ ತೃಪ್ತಿಯಾಗದ ಕರಣ್

  ಆದರೆ ಇದಕ್ಕೂ ತೃಪ್ತಿಯಾಗದ ಕರಣ್ ಜೋಹರ್, ನಿಮ್ಮ ಪ್ರೀತಿ-ಪ್ರೇಮದ ಬಗ್ಗೆ ಹೇಳಿ ಎಂದು ಒತ್ತಾಯಿಸಿದ್ದಾರೆ. ಆಗ ಅನನ್ಯಾ ಪಾಂಡೆ ಸಹ ಸುಮ್ಮನೆ ಹೇಳಿಬಿಡಿ ಹೆದರಬೇಡಿ ಎಂದು ಹುರಿದುಂಬಿಸಿದ್ದಾರೆ. ಆಗ ಮಾತನಾಡಿದ ವಿಜಯ್, ''ನಾನು ಈಗಲೇ ಅದನ್ನು ಹೇಳಲಾರೆ. ಆದರೆ ಮುಂದೊಂದು ದಿನ ಮದುವೆ ಆಗಬೇಕು ಎಂದುಕೊಂಡಾಗಲಷ್ಟೆ ನಾನು ಈ ವಿಷಯವನ್ನು ಎಲ್ಲರಿಗೂ ಹೇಳಿಕೊಳ್ಳುತ್ತೇನೆ. ಈಗಲೇ ಈ ವಿಷಯ ಹೇಳಿ ನನ್ನನ್ನು ಪ್ರೀತಿಸುವವರಿಗೆ ನಾನು ಬೇಸರ ಮಾಡಲಾರೆ'' ಎಂದಿದ್ದಾರೆ.

  ಯಾರ ಹೃದಯವನ್ನೂ ನೋವಿಸುವುದು ಇಷ್ಟವಿಲ್ಲ: ವಿಜಯ್

  ಯಾರ ಹೃದಯವನ್ನೂ ನೋವಿಸುವುದು ಇಷ್ಟವಿಲ್ಲ: ವಿಜಯ್

  ''ನನ್ನನ್ನು ನಟನಾಗಿ, ತಮ್ಮ ಗೆಳೆಯನಾಗಿ ಬಹಳ ಜನ ಇಷ್ಟಪಡುತ್ತಿದ್ದಾರೆ. ನನ್ನ ಚಿತ್ರಗಳನ್ನು ಗೋಡೆಗೆ ಅಂಟಿಸಿಕೊಂಡವರು, ಮೊಬೈಲ್‌ನಲ್ಲಿ ವಾಲ್‌ಪೇಪರ್ ಅನ್ನಾಗಿ ಹಾಕಿಕೊಂಡವರಿದ್ದಾರೆ. ನಾನು ಈಗ ಯಾರನ್ನಾದರೂ ಪ್ರೀತಿಸುತ್ತಿದ್ದೇನೆ ಎಂದು ಹೇಳಿದರೆ ಅವರ ಮನಸ್ಸಿಗೆ ಬೇಸರವಾಗಬಹುದು, ನನಗೆ ಯಾರಿಗೂ ಬೇಸರ ಮಾಡಲು, ಯಾರದ್ದೂ ಹೃದಯ ಒಡೆಯಲು ಇಷ್ಟವಿಲ್ಲ. ಮದುವೆಯಾಗಿ, ಮಕ್ಕಳನ್ನು ಹೊಂದಬೇಕೆನ್ನುವ ಆಸೆ ನನಗೂ ಇದೆ ಆದರೆ ಅದಕ್ಕೆ ಸಮಯ ಬರುತ್ತದೆ. ಅಲ್ಲಿಯವರೆಗೆ ನಾನು ಹೀಗೆಯೇ ಇರುತ್ತೇನೆ'' ಎಂದಿದ್ದಾರೆ ವಿಜಯ್.

  Recommended Video

  Vikrant Rona 1st Day Collection | ವಿಕ್ರಾಂತ್ ರೋಣ ಸಿನಿಮಾ ಕಲೆಕ್ಷನ್ ಭವಿಷ್ಯ | Vikrant Rona | Sudeep
  English summary
  Actor Vijay Devarkonda talks about Rashmika Mandanna in Koffee With Karan show. He said Rashmika is my darling.
  Friday, July 29, 2022, 16:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X