For Quick Alerts
  ALLOW NOTIFICATIONS  
  For Daily Alerts

  ವೂಟ್‌ನಲ್ಲಿ ಪ್ರೋ ಬಾಕ್ಸಿಂಗ್ ಪಂದ್ಯ: ಲೈವ್ ಪಂದ್ಯದಲ್ಲಿ ಒಲಿಂಪಿಕ್ ಕಂಚು ಗೆದ್ದ ವಿಜಯೇಂದ್ರ ಸಿಂಗ್

  |

  ಓಟಿಟಿ ಅಂದರೆ ಕೇವಲ ಸಿನಿಮಾ, ವೆಬ್‌ ಸಿರೀಸ್ ಪ್ರಸಾರ ಆಗುತ್ತೆ ಅನ್ನೋ ಕಾಮನ್. ವೀಕ್ಷಕರ ಹೆಚ್ಚಿನ ಆಸಕ್ತಿ ಕೂಡ ಇವುಗಳ ಮೇಲೆನೇ ಇರುತ್ತೆ. ಆದರೆ, ಹೀಗಾಗಿ ಓಟಿಟಿಗೆ ಕ್ರೀಡೆಯಲ್ಲಿ ಆಸಕ್ತಿ ಇರುವವರನ್ನು ಸೆಳೆಯುವುದಕ್ಕೂ ವೂಟ್ ಸೆಲೆಕ್ಟ್ ಮುಂದಾಗಿದೆ.

  ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದಿರುವ ವೀಜೇಂದರ್ ಸಿಂಗ್ ಇದೀಗ ಹಲವು ವರ್ಷಗಳ ಬಳಿಕ ವೃತ್ತಿಪರ ಬಾಕ್ಸಿಂಗ್‌ಗೆ ಮರಳಲಿದ್ದಾರೆ. 'ದ ಜಂಗಲ್ ರಂಬಲ್' ಹೋರಾಟದಲ್ಲಿ ಘಾನದಾ ಎಲೈಸು ಸುಲಿ ಅವರನ್ನು ಎದುರಿಸಲು ಸಜ್ಜಾಗಿದ್ದಾರೆ. ವಿಶೇಷ ಅಂದ್ರೆ, ಈ ಸ್ಪರ್ಧೆಯೂ ವೂಟ್‌ನಲ್ಲಿ ನೇರಪ್ರಸಾರವಾಗಲಿದೆ.

  ವೀಕೆಂಡ್‌ನಲ್ಲಿ ಓಟಿಟಿ ವೀಕ್ಷಕರಿಗೆ ಮಸ್ತ್ ಮನರಂಜನೆ: ವೂಟ್‌ನಲ್ಲಿ 'ಹರಿಕಥೆ ಅಲ್ಲ ಗಿರಿಕಥೆ'ವೀಕೆಂಡ್‌ನಲ್ಲಿ ಓಟಿಟಿ ವೀಕ್ಷಕರಿಗೆ ಮಸ್ತ್ ಮನರಂಜನೆ: ವೂಟ್‌ನಲ್ಲಿ 'ಹರಿಕಥೆ ಅಲ್ಲ ಗಿರಿಕಥೆ'

  ಛತ್ತೀಸ್‌ಗಢದ ರಾಯ್‌ಪುರದ ಬಾಲ್ಬೀರ್ ಸಿಂಗ್ ಜುನೆಜಾ ಒಳಾಂಗಣ ಸ್ಟೇಡಿಯಂನಲ್ಲಿ ಆಗಸ್ಟ್ 17 ರಂದು ಸಂಜೆ 6.30ಕ್ಕೆ ಸ್ಪರ್ಧೆ ನಡೆಯಲಿದೆ. ಇದು ಭಾರತದಲ್ಲಿ ನಡೆಯಲಿರುವ 6ನೇ ವೃತ್ತಿಪರ ಬಾಕ್ಸಿಂಗ್ ಸ್ಪರ್ಧೆಯಾಗಿದ್ದು, ಈ ಪಂದ್ಯವನ್ನು ವೂಟ್‌ನಲ್ಲಿ ನೇರ ಪ್ರಸಾರ ಪ್ರಸಾರ ಮಾಡುತ್ತಿದೆ. ವೀಜೇಂದರ್ ಸಿಂಗ್, ಪಶ್ಚಿಮ ಆಫ್ರಿಕಾದ ಬಾಕ್ಸಿಂಗ್ ಯೂನಿಯನ್ ಚಾಂಪಿಯನ್ ಘಾನದಾ ಎಲೈಸು ಸುಲಿ ಅವರನ್ನು ಆಗಸ್ಟ್ 17 ರಂದು ಎದುರಿಸಲಿದ್ದಾರೆ

  36 ವರ್ಷದ ವೀಜೇಂದರ್ ಸಿಂಗ್, 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಬಾಕ್ಸರ್ ಎನಿಸಿಕೊಂಡಿದ್ದರು. 2015ರಲ್ಲಿ ಇವರು ವೃತ್ತಿಪರ ಬಾಕ್ಸರ್ ಆಗಿ ಬದಲಾಗಿದ್ದರು. ಆ ನಂತ್ರ ಸುಮಾರು 8 ನಾಕೌಟ್ ಸೇರಿದಂತೆ 12-1ರ ದಾಖಲೆ ಹೊಂದಿದ್ದಾರೆ. ಸತತ 12 ಗೆಲುವು ದಾಖಲಿಸಿದ್ದು, ಅಜೇಯ ಓಟ ಮುಂದುವರಿಸಿದ್ದಾರೆ. ಅಂದ್ಹಾಗೆ, 2021ರ ಮಾರ್ಚ್‌ನಲ್ಲಿ ಗೋವಾದಲ್ಲಿ ಕಡೇ ಬಾರಿ ಪಂದ್ಯ ಆಡಿದ್ದರು.

  Voot Select To Live Stream Vijender Singhs Jungle Rumble On 17th August

  'ಈ ಸ್ಪರ್ಧೆಗೆ ಎದುರು ನೋಡುತ್ತಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿ ನಡಸಿದ್ದು, ಮುಂಬರುವ ಜಂಗಲ್ ರಂಬಲ್ ಸ್ಪರ್ಧೆಗೆ ಸಂಪೂರ್ಣ ತಯಾರಿಯಾಗಿದ್ದೇನೆ" ಎಂದು ವಿಜೇಂದರ್ ಸಿಂಗ್ ತಿಳಿಸಿದ್ದು, ಬಾಕ್ಸಿಂಗ್ ಪ್ರಿಯರನ್ನು ರೊಚ್ಚಿಗೆಬ್ಬಿಸಿದ್ದಾರೆ.

  English summary
  Voot Select To Live Stream Vijender Singhs Jungle Rumble On 17th August, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X