Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾಫಿ ವಿತ್ ಕರಣ್‌ನಲ್ಲಿ ಕೊಡುವ ಉಡುಗೊರೆ ಬುಟ್ಟಿಯ ಒಳಗೇನಿರುತ್ತೆ ಗೊತ್ತೆ!
'ಕಾಫಿ ವಿತ್ ಕರಣ್' ಭಾರತದ ಅತ್ಯಂತ ಹೆಚ್ಚು ಮೌಲ್ಯಯುತ ಟಾಕ್ ಶೋ, ಅತ್ಯಂತ ಶ್ರಿಮಂತ ಟಾಕ್ ಶೋ ಸಹ ಹೌದು. ಬಾಲಿವುಡ್‌ನ ಸ್ಟಾರ್ ನಟರು ಭಾಗವಹಿಸುವ, ಬಾಲಿವುಡ್‌ನ ಹೆಸರಾಂತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಈ ಶೋನ ಒಂದು ಎಪಿಸೋಡ್‌ಗಾಗಿ ಕೋಟ್ಯಂತರ ಹಣ ಖರ್ಚು ಮಾಡಲಾಗುತ್ತದೆ.
'ಕಾಫಿ ವಿತ್ ಕರಣ್'ನ ಏಳನೇ ಸೀಸನ್ ಇದೀಗ ಪ್ರಸಾರವಾಗುತ್ತಿದ್ದು, ಮೂರು ಎಪಿಸೋಡ್‌ಗಳು ಇದಾಗಲೇ ಪ್ರಸಾರವಾಗಿವೆ. ಬಂದ ಅತಿಥಿಗಳನ್ನು ಐಶಾರಾಮಿ ಸೆಟ್‌ನ ಕೌಚ್ ಮೇಲೆ ಕೂರಿಸಿ ಕಾಫಿ ಕುಡಿಸುವ ಕರಣ್ ಜೋಹರ್, ಅವರ ವೈಯಕ್ತಿಕ ಜೀವನ ಸೇರಿದಂತೆ ಸಿನಿಮಾ, ಫ್ಯಾಷನ್ ಇತರೆ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ.
ಸಿಎಂ
ಮೊಮ್ಮಕಳಿಬ್ಬರನ್ನು
ಡೇಟ್
ಮಾಡಿದ್ದ
ಸಾರಾ
ಅಲಿ
ಖಾನ್-ಜಾನ್ಹವಿ!
ಕರಣ್
ಬಿಚ್ಚಿಟ್ಟ
ರಹಸ್ಯ
ಈ ಶೋನಲ್ಲಿ ರ್ಯಾಫಿಡ್ ಫೈಯರ್ ರೌಂಡ್ ಬಹಳ ಜನಪ್ರಿಯ. ಈ ರೌಂಡ್‌ನಲ್ಲಿ ಚೆನ್ನಾಗಿ ಉತ್ತರಿಸಿ ಗೆದ್ದವರಿಗೆ ಹ್ಯಾಂಪರ್ ಒಂದನ್ನು ನೀಡಲಾಗುತ್ತದೆ. ಬಿದಿರಿನ ಬುಟ್ಟಿಯಲ್ಲಿ ಹಲವು ಉಡುಗೊರೆಗಳನ್ನು ಇಟ್ಟು ಅದನ್ನು ಗೆದ್ದವರಿಗೆ ನೀಡಲಾಗುತ್ತದೆ. ಅಕ್ಷಯ್ ಕುಮಾರ್, ಶಾರುಖ್ ಖಾನ್, ರಣ್ವೀರ್, ಆಲಿಯಾ ಅಂಥಹಾ ಕೋಟ್ಯಧಿಪತಿ ಸ್ಟಾರ್ ನಟರಿಗೆ ನೀಡುವ ಈ ಉಡುಗೊರೆ ಡಬ್ಬಿಯಲ್ಲಿ ಅಂಥಹದ್ದೇನಿರಬಹುದು ಎಂಬುದು ಸಹಜ ಕುತೂಹಲ. ಅದಕ್ಕೆ ಉತ್ತರ ಇಲ್ಲಿದೆ.

ದುಬಾರಿ ಉಡುಗೊರೆಗಳನ್ನು ಹೊಂದಿರುವ ಹ್ಯಾಂಪರ್
ಕಾಫಿ ವಿತ್ ಕರಣ್ ಶೋನಲ್ಲಿನ ಜನಪ್ರಿಯ ರ್ಯಾಪಿಡ್ ಫೈರ್ ರೌಂಡ್‌ನಲ್ಲಿ ಗೆದ್ದವರಿಗೆ ಕರಣ್ ಜೋಹರ್ ಈ ಗಿಫ್ಟ್ ಹ್ಯಾಂಪರ್ ನೀಡುತ್ತಾರೆ. ಸುಮಾರು ಹತ್ತಕ್ಕೂ ಹೆಚ್ಚು ದುಬಾರಿ ಗಿಫ್ಟ್‌ಗಳನ್ನು ಒಳಗೊಂಡ ಉಡುಗೊರೆಗಳ ಡಬ್ಬಿ ಇದಾಗಿರುತ್ತದೆ. ಪ್ರತಿ ಸೀಸನ್‌ಗೂ ಭಿನ್ನ ಭಿನ್ನ ಉಡುಗೊರೆ ತುಂಬಿದ ಗಿಫ್ಟ್‌ಗಳನ್ನು ಕರಣ್ ಜೋಹರ್ ನೀಡುತ್ತಾರೆ. ರ್ಯಾಪಿಡ್ ಫೈರ್ ರೌಂಡ್ ಪ್ರಾರಂಭಿಸುವ ಮುನ್ನ, ಈ ಹ್ಯಾಂಪರ್ ಸಾಮಾನ್ಯದ್ದಲ್ಲ, ಜಿದ್ದಾಜಿದ್ದಿನ ಸ್ಪರ್ಧೆ ಮಾಡಲು ಪ್ರೇರೇಪಿಸುವಂಥಹಾ ಉತ್ತಮ, ದುಬಾರಿ, ಕಲಾತ್ಮಕ ಉಡುಗೊರೆಗಳನ್ನು ಇದು ಒಳಗೊಂಡಿದೆ ಎಂದು ಕರಣ್ ಹೇಳುತ್ತಾರೆ.
ಕರಣ್
ಜೋಹರ್
ಶೋನಲ್ಲಿ
ಮದುವೆಯನ್ನು
'ಕೆಜಿಎಫ್'ಗೆ
ಹೋಲಿಸಿದ
ಸಮಂತಾ!
ಕಾರಣ?

ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಹ್ಯಾಂಪರ್!
ಆದರೆ ಆ ಗಿಫ್ಟ್ ಹ್ಯಾಂಪರ್ ಒಳಗೆ ಏನಿದೆ ಎಂಬುದನ್ನು ಕರಣ್ ಒಮ್ಮೆಯೂ ಹೇಳಿಲ್ಲ. ಆದರೆ ಹ್ಯಾಂಪರ್ ಒಳಗೆ ಏನಿದೆ ಎಂದು ಕೆಲವು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ. ಟ್ಯಾನಿ ಬ್ರ್ಯಾಂಡ್‌ನ ಆಭರಣ, ಒಂದು ಐಫೋನ್, ಒಂದು ಐಪ್ಯಾಡ್, ಒಂದು ಚಿಕ್ಕ ಕಾಫಿ ಮಷೀನ್, ಜೊ ಮಲೋನ್‌ನ ದುಬಾರಿ ಕ್ಯಾಂಡಲ್‌ಗಳು, ಫ್ಯಾಷನ್ ಪ್ರ್ಯಾಂಡ್ ಅಜಿಯೋನ ಕೆಲವು ಆಟಿಕೆಗಳು, ಆಲಂಕಾರಿಕ ವಸ್ತುಗಳು, ಸ್ಪೀಕರ್‌ಗಳು ಇವೆ. ಈ ಗಿಫ್ಟ್ ಹ್ಯಾಂಪರ್‌ನ ಮೌಲ್ಯ ಸುಮಾರು ಐದು ಲಕ್ಷ ರುಪಾಯಿ ಎನ್ನಲಾಗುತ್ತದೆ.

ಗಿಫ್ಟ್ ಹ್ಯಾಂಪರ್ ಅನ್ನು ಸಮಂತಾಗೆ ಕೊಟ್ಟ ಅಕ್ಷಯ್ ಕುಮಾರ್
ಹೊಸ ಸೀಸನ್‌ನ ವಿಶೇಷತೆಯೆಂದರೆ ಎರಡು ಗಿಫ್ಟ್ ಹ್ಯಾಂಪರ್‌ಗಳನ್ನು ಅತಿಥಿಗಳಿಗೆ ನೀಡುತ್ತಿದ್ದಾರೆ ಕರಣ್ ಜೋಹರ್. ರ್ಯಾಪಿಡ್ ಫೈರ್ ರೌಂಡ್‌ಗೆ ದುಬಾರಿ ಗಿಫ್ಟ್ ಹ್ಯಾಂಪರ್ ನೀಡಿದರೆ, ಕರಣ್ ಜೋಹರ್ ಕೇಳುವ ಸಿನಿಮಾ ಜನರಲ್ ನಾಲೆಡ್ಜ್ ಪ್ರಶ್ನೆಗಳಿಗೆ ಹೆಚ್ಚು ಉತ್ತರ ನೀಡಿದವರಿಗೆ ಒಂದು ಪ್ರತ್ಯೇಕ ಉಡುಗೊರೆಯನ್ನು ಕರಣ್ ನೀಡುತ್ತಾರೆ. ಈ ಬಾರಿಯ ಸೀಸನ್‌ನ ಮೊದಲ ಎಪಿಸೋಡ್‌ನಲ್ಲಿ ನಟ ರಣ್ವೀರ್ ಸಿಂಗ್ ಹ್ಯಾಂಪರ್ ಗೆದ್ದಿದ್ದಾರೆ. ಎರಡನೇ ಎಪಿಸೋಡ್‌ನಲ್ಲಿ ಸಾರಾ ಅಲಿ ಖಾನ್ ಗೆದ್ದರೆ, ಮೂರನೇ ಎಪಿಸೋಡ್‌ನಲ್ಲಿ ಅಕ್ಷಯ್ ಕುಮಾರ್ ಗೆದ್ದರು. ಆದರೆ ಅಕ್ಷಯ್ ಕುಮಾರ್ ತಮ್ಮ ಹ್ಯಾಂಪರ್ ಅನ್ನು ಸಂಮಂತಾಗೆ ನೀಡಿಬಿಟ್ಟರು.

ಹಲವು ಅತಿಥಿಗಳು ಕಾಣಿಸಿಕೊಳ್ಳಲಿದ್ದಾರೆ
ಕಾಫಿ ವಿತ್ ಕರಣ್ ಸೀಸನ್ ಏಳರಲ್ಲಿ ಹಲವು ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಈ ವರೆಗೆ ಪ್ರಸಾರವಾಗಿರುವ ಮೂರು ಎಪಿಸೋಡ್‌ಗಳಲ್ಲಿ ರಣ್ವೀರ್ ಸಿಂಗ್-ಆಲಿಯಾ ಭಟ್, ಜಾನ್ಹವಿ ಕಪೂರ್-ಸಾರಾ ಅಲಿ ಖಾನ್, ಅಕ್ಷಯ್ ಕುಮಾರ್ ಮತ್ತು ಸಮಂತಾ ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ಟೈಗರ್ ಶ್ರಾಫ್, ವರುಣ್ ಧವನ್, ಅನಿಲ್ ಕಪೂರ್, ಶಾಹಿದ್ ಕಪೂರ್ ಇನ್ನೂ ಹಲವರು ಬರಲಿದ್ದಾರೆ. ಕೆಲವು ಮೂಲಗಳ ಪ್ರಕಾರ ಗರ್ಭಿಣಿ ಸೋನಂ ಕಪೂರ್ ಸಹ ಈ ಶೋನಲ್ಲಿ ಭಾಗವಹಿಸಿದ್ದಾರಂತೆ, ಅವರ ಎಪಿಸೋಡ್ ಶೀಘ್ರವೇ ಪ್ರಸಾರವಾಗಲಿದೆ.