»   » ಮಿನುಗು :ನಿದ್ರೆಗೆ ರತ್ನಗಂಬಳಿ ಹಾಸುತ್ತದೆ

ಮಿನುಗು :ನಿದ್ರೆಗೆ ರತ್ನಗಂಬಳಿ ಹಾಸುತ್ತದೆ

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಮಿನುಗು: ಫಳಫಳನೆ ಹೊಳೆ, ಬಂಗಾರದ ಕಳೆ, ಶುಭ್ರತೆಯ ಎಳೆ ಎಂದರ್ಥ. ಇಲ್ಲಿ ಪೂಜಾ ಗಾಂಧಿ ಆ ಪದಕ್ಕೆ ಹೊಸ ಅರ್ಥ ಕೊಡುತ್ತಾರೆ. ನಾಯಕಿಯೊಬ್ಬಳ ಬದುಕಿನ ಕತೆಯೇ ಮಿನುಗು. ಪ್ರೇಕ್ಷಕ ಆ ನಾಯಕಿಯ ಬಗ್ಗೆ ಅಯ್ಯೋ ಪಾ...ಪ... ಎನ್ನುತ್ತಾನೆ. ನಾಯಕನ ಬಗ್ಗೆ ಶೋಕದ ಶ್ಲೋಕ ಹೇಳುತ್ತಾನೆ. ಸೆಂಟಿಮೆಂಟಲ್' ಎನಿಸುವ ಚಿತ್ರಕತೆ, ಕುಂಟಾ ಬಿಲ್ಲೆ ಆಡುತ್ತ ಸಾಗುವ ನಿರೂಪಣೆ ನಿದ್ರೆಗೆ ರತ್ನಗಂಬಳಿ ಹಾಸುತ್ತದೆ.

ಹೀರೋ ಏಕೆ ಹುಚ್ಚನಾದ ಎಂಬುದಕ್ಕೆ ಕಾರಣ ಗೊತ್ತಾಗುವ ಹೊತ್ತಿಗೆ ಮಿನುಗು ಮನುಗು'ವಂತೆ ಸಿಗ್ನಲ್ ಕೊಡುತ್ತದೆ. ಗೊರ ಗೊರ ಗೊರ ಗೊರ... ನಿರ್ದೇಶಕ ಜಯವಂತ್ ಕನ್‌ಫ್ಯೂಷನ್ ಆಫ್ ಇಂಡಿಯಾ ಎನ್ನುವುದು ಗೊತ್ತಾಗುತ್ತದೆ. ಸುನಿಲ್‌ರಾವ್ ಅರ್ಧದ ನಂತರ ಹುಚ್ಚ್ರಾಯ ಸ್ಥಿತಿ' ತಲುಪುತ್ತಾರೆ. ಇದೊಂಥರ ತ್ರಿಕೋನ ಪ್ರೇಮ ಕತೆ. ನಿರ್ದೇಶಕರು ತೋರಿಸುವ ಟ್ರೊಂಯ್' ಆಂಗಲ್ ಆಯಾಮ ನಿಜಕ್ಕೂ ಇಸ್ಮಯ. ಸುನೀಲ್ ರಾವ್ ಹಿಂದೆ ಎಕ್ಸ್‌ಕ್ಯೂಸ್‌ಮಿ ಚಿತ್ರದಲ್ಲಿ ಮಾಡಿದ್ದೇ ನೂರು ಪಾಲು ವಾಸಿ.

ಒಬ್ಬ ಮಾಜಿ ನಾಯಕ ರೀ ಎಂಟ್ರಿ ಕೊಡುತ್ತಿದ್ದಾನೆ ಎಂದರೆ ಜನರಿಗೆ ಹೊಸ ರೀತಿಯ ನಿರೀಕ್ಷೆ ಇರುತ್ತದೆ. ಆದರೆ ಅದಕ್ಕೆ ಸುನೀಲ್ ತಣ್ಣೀರು ಎರಚುತ್ತಾರೆ. ಹಿಂದೆ ಮಾಡಿದ್ದೇ ವಾಸಿ ಎನ್ನಿಸುವಷ್ಟು ಎಳಸು ಎಳಸು. ಅಲ್ಲಿ ಇಲ್ಲಿ ಅಳತೆ ಮೀರಿ ಮಾತನಾಡುವ ಬದಲು ಅದೇ ಸಮಯವನ್ನು ಅಭಿನಯ ತರಬೇತಿಗೆ ಮೀಸಲಿಟ್ಟರೆ ಸುನೀಲ್ ಮುಂದಿನ ಹಾದಿ ಸುಗಮವಾದೀತು. ಪೂಜಾ ಗಾಂಧಿ ಮೇಡಮ್... ನಿಮ್ಗೂ ಸೇಮ್ ಡೈಲಾಗ್... ಪಾತ್ರ, ಚಿತ್ರ ಆಯ್ಕೆ ಮಾಡಿಕೊಳ್ಳುವಾಗ ಕಣ್ಣು, ಕಿವಿ ಎರಡನ್ನೂ ತೆರೆದಿಟ್ಟುಕೊಳ್ಳಿ! ಸಂಗೀತ ಸಾಮಾನ್ಯ, ಸಂಕಲನ ಶ್ರೀ ಸಾಮಾನ್ಯ. ಒಟ್ಟಾರೆ,ಮಿನುಗು= ಮಲಗು ಮಲಗು ಚಾರುಲತೇ...

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada