»   »  ಕಬಡ್ಡಿ ಚಿತ್ರವಿಮರ್ಶೆ: ಇಡೀ ಚಿತ್ರಮಂದಿರ ಗಪ್ ಚುಪ್!

ಕಬಡ್ಡಿ ಚಿತ್ರವಿಮರ್ಶೆ: ಇಡೀ ಚಿತ್ರಮಂದಿರ ಗಪ್ ಚುಪ್!

Posted By: *ದೇವಶೆಟ್ಟಿ ಮಹೇಶ್
Subscribe to Filmibeat Kannada

ಕಬಡ್ಡಿ ಕಬಡ್ಡಿ ಕಬಡ್ಡಿ ಕಬಡ್ಡಿ...ಹೀಗೆನ್ನುತ್ತಾ ನಾಯಕ ತೊಡೆ ತಟ್ಟಿ, ನುಗ್ಗುತ್ತಿದ್ದರೆಇಡೀ ಚಿತ್ರಮಂದಿರ ಗಪ್‌ಚುಪ್! ಹಾಗಾಗುವ ಮುನ್ನ ಮುಕ್ಕಾಲು ಭಾಗ ಕತೆ ಮುಗಿದು,ಕ್ಲೈಮ್ಯಾಕ್ಸ್ ತಲುಪಿರುತ್ತದೆ. ಕುಳಿತವರು ಅದಾಗಲೇ ನಾಯಕನ ಪರ ವೋಟು ಗುದ್ದಿರುತ್ತಾರೆ. ಪಾಪ, ಬಡ ಹುಡುಗನಿಗೆಮೋಸವಾಗಿದೆ. ಅದಕ್ಕೆ ತಕ್ಕ ಶಾಸ್ತಿ ಆಗಲೇಬೇಕು, ಗಡವರಿಗೆ ಬಡವ ಬುದ್ಧಿ ಕಲಿಸಲೇಬೇಕು, ಪಂದ್ಯ ಗೆದ್ದು, ನಾಯಕಿಯನ್ನು ವರಿಸಬೇಕು ಎಂದ ಭಾವನೆ ಮೂಡಿರುತ್ತದೆ.

ಚಿತ್ರಕತೆ ಪ್ರೇಕ್ಷಕರ ಕಲ್ಪನೆಯನ್ನು ಹಾಗೆ ವಶೀಕರಣ ಮಾಡುತ್ತದೆ. ನಿರ್ದೇಶಕ ನರೇಂದ್ರ ಬಾಬು ಗೆದ್ದಿರುವುದೇಇಲ್ಲಿ. ಇಡೀ ಸಿನಿಮಾ ಮಣ್ಣಿನ ಘಮಘಮ. ಕೆಸರಿನ ಗದ್ದೆಯಲ್ಲಿ ಹುಡುಗರು ಕಬಡ್ಡಿ ಆಡುತ್ತಿದ್ದರೆ ಧೋ... ಎಂಬ ಹಿನ್ನೆಲೆಸಂಗೀತ. ಇಲ್ಲಿ ನಮ್ಮತನವಿದೆ, ದೇಸೀ ಕ್ರೀಡೆ ಕಬಡ್ಡಿಯ ಸೊಗಡಿದೆ, ಸೊಗಸಿದೆ.

ಹೌದು, ಬರೀ ಬೇರೆ ಭಾಷೆಯಿಂದ ಭಟ್ಟಿ ಇಳಿಸುವ,ಮಾರ್ಕೆಟ್ ಇರುವ ನಾಯಕನಿಗೆ ಕೈಗೊಂದು ಮಚ್ಚು ಕೊಟ್ಟು,ಚಂದ ನೋಡುವ ಪ್ರತಿಯೊಬ್ಬ ನಿರ್ದೇಶಕ ಕಬಡ್ಡಿಯನ್ನುನೋಡಬೇಕು. ಹೊಸ ಹುಡುಗರು, ಅದರಲ್ಲೂ ನಿಜವಾದಕಬಡ್ಡಿ ಪಟುಗಳನ್ನು ಕ್ಯಾಮೆರಾ ಮುಂದೆ ತಂದು, ಅವರಿಂದಹೇಗೆ ಕೆಲಸ ತೆಗೆಸಿದ್ದಾರೆ ಎನ್ನುವುದನ್ನು ಅಂಥ ಕೆಲವರುಅರ್ಥೈಸಿಕೊಳ್ಳಬೇಕು.

ಇಲ್ಲಿ ಅನಗತ್ಯ ಹೊಡೆದಾಟ, ದೃಶ್ಯ, ಸನ್ನಿವೇಶ,ಸಂಭಾಷಣೆಗಳಿಲ್ಲ. ಕತೆ ಏನನ್ನು ಕೇಳುತ್ತದೋ ಅದು ಮಾತ್ರಇದೆ. ಒಬ್ಬ ಮಾಮೂಲಿ ಹುಡುಗನನ್ನು ಕಬಡ್ಡಿ ಕೋಚ್ ಒಬ್ಬಕರೆ ತಂದು, ತರಬೇತಿ ಕೊಡುತ್ತಾನೆ. ಕೋಚ್ ಇರುವ ಮನೆಯಲ್ಲೇ ಹುಡುಗನಿಗೆ ಆಶ್ರಯ ಕೊಡಿಸುತ್ತಾರೆ. ಆಗ ಮನೆಮಗಳು ಹುಡುಗನನ್ನು ಪ್ರೀತಿಸುತ್ತಾಳೆ. ಅಣ್ಣಂದಿರುಉಗ್ರಾವತಾರ ತಾಳುತ್ತಾರೆ. ಹುಡುಗ ಊರುಬಿಡುವಂತೆ ಮಾಡುತ್ತಾರೆ. ಕೊನೆಗೆ ಏನಾಗುತ್ತದೆ? ಕಬಡ್ಡಿ ಕಬಡ್ಡಿ...

ಇದು ನಿರ್ದೇಶಕರಿಗೆ ಮೊದಲ ಚಿತ್ರ. ಪ್ರತಿ ವಿಭಾಗದಿಂದಕೆಲಸ ತೆಗೆಸುವಲ್ಲಿ ಬಾಬು ಗೆದ್ದಿದ್ದಾರೆ. ಹಂಸಲೇಖಸಂಗೀತದಲ್ಲಿ ಮೂರು ಹಾಡುಗಳಲ್ಲಿ ಹೊಸ 'ಸ್ಪರ್ಶ"ವಿದೆ. ಘಲ್ಲಂತ ಕಾಡುತಾಳಿವಳು...ಹಾಡಂತೂ ಘಮಘಮಿಸುವ ಸುಗಂಧ. ರೀರೆಕಾರ್ಡಿಂಗ್ ಕತೆಯ ಭಾವಕ್ಕೆಹೊಂದಿಕೊಳ್ಳುತ್ತದೆ. ನಾಗೇಂದ್ರ ಅರಸ್ ಸಂಕಲನ ಮೆಚ್ಚಲೇಬೇಕು. ಮಾಮೂಲಿ ಕತೆಯೊಂದನ್ನು ಹೀಗೂ ನಿರೂಪಿಸಬಹುದು ಎಂಬುದಕ್ಕೆ ಕಬಡ್ಡಿ ಸಾಕ್ಷಿ. ಹೂ ಪಟ್ಟಣಶೆಟ್ಟಿಯವರ ಗ್ರಾಮೀಣ ಸೊಗಡಿನ ಸಂಭಾಷಣೆಯಲ್ಲಿಲವಲವಿಕೆಯಿದೆ. ಅದು ಸಿನಿಮಾ ಗೆಲುವಿನ ಸೂತ್ರಧಾರಎಂದರೆತಪ್ಪಾಗಲಾರದು. ಛಾಯಾಗ್ರಹಣದಲ್ಲಿ ಹೊಸ ಸಾಧ್ಯತೆಬಳಸಿಕೊಳ್ಳಲಾಗಿದೆ. ಕಬಡ್ಡಿ ಆಟ ನೋಡಲೆರಡು ಕಣ್ಣು ಸಾಲದು!

ಕೋಚ್ ಕಿಶೋರ್ ಪಾತ್ರ ಸಿನಿಮಾ ಮುಗಿದ ನಂತರವೂ ಕಾಡುತ್ತದೆ. ಇಲ್ಲಿಯವರೆಗೆ ಕಿಶೋರ್ ಕೇವಲಖಳನಾಯಕನಾಗಷ್ಟೇ ಗೆದ್ದಿದ್ದರು. ಇಲ್ಲಿ ಮೌನಿಯಾಗಿ ಮನಸ್ಸಿಗೆ ಹತ್ತಿರವಾಗುತ್ತಾರೆ. ನಾಯಕ ಪ್ರವೀಣ್ ಬಗ್ಗೆಹೇಳಲೇಬೇಕು. ಸಹಜ ನಟನೆ, ಅದಕ್ಕೆ ತಕ್ಕ ಹಾವಭಾವ, ಜತೆಗೆಎಲ್ಲೋ ಒಂದು ಕಡೆ ಮುಗ್ಧತೆ, ಮೈಮೇಲೆ ಬಂದವರನ್ನು ನುಗ್ಗಿಬಡಿಯುವ ಎದೆಗಾರಿಕೆ... ದುನಿಯಾ ಚಿತ್ರದಲ್ಲಿ ವಿಜಿಯನ್ನುಕಂಡಾಗ ಆದ ಅನುಭವ ಆಗುತ್ತದೆ. ಅಲ್ಲಿಸೂರಿ ಮಾಡಿದ ಕೆಲಸವನ್ನೇ ಇಲ್ಲಿ ಬಾಬುಮಾಡಿದ್ದಾರೆ.

ನಾಯಕಿ ಪ್ರಿಯಾಂಕಾ ಮುದ್ದಾಗಿಕಾಣುತ್ತಾರೆ ನಿಜ, ಅಭಿನಯದಲ್ಲಿ ಇನ್ನೂ ಸ್ವಲ್ಪಚೇತರಿಕೆ ಬೇಕಿತ್ತು. ಮೊದಲ ಪ್ರಯತ್ನಕ್ಕೆ ಮೋಸಮಾಡಿಲ್ಲ. ಅವಿನಾಶ್ ಹಾಗೂ ಶ್ರೀರಕ್ಷಾ ಕೊನೆಯಲ್ಲಿ ಬಂದುಪಾತ್ರಕ್ಕೆ ಜೀವ ತುಂಬುತ್ತಾರೆ. ಧರ್ಮ ಎಂದಿನಂತೆ ಸೊಗಸಾಗಿನಟಿಸಿದ್ದಾರೆ. ಹತ್ತಾರು ಕಬಡ್ಡಿ ಆಟಗಾರರನ್ನು ಒಂದೆಡೆಕಲೆಹಾಕಿ, ಅವರಿಂದ ಕೆಲಸ ತೆಗೆಸಿದ್ದಾರೆ.

ಒಟ್ಟಾರೆ ಇತ್ತೀಚೆಗೆ ಬರುತ್ತಿರುವ ಎಲ್ಲಾ ಚಿತ್ರಗಳಿಗೂ ಇದುಭಿನ್ನ. ದೇಸೀ ಕ್ರೀಡೆಗೆ ಒತ್ತುಕೊಟ್ಟು, ಎಲ್ಲಿಯೂ ಅತಿರೇಕ,ಆಭಾಸವಿಲ್ಲದ ಒಂದು ಫ್ರೆಷ್ ಸಿನಿಮಾ ಕಬಡ್ಡಿ. ನಿಮಗೂನೋಡಿ, ಹೀಗೆನಿಸಿದರೆ ಕನ್ನಡದಲ್ಲಿ ಇನ್ನಾದರೂ 'ದೇಸೀ ಸಂಸ್ಕೃತಿ" ಉಳಿದುಕೊಂಡೀತು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada