»   » ಚಿತ್ರ ವಿಮರ್ಶೆ: ಪ್ರೀತಿ ನೀ ಶಾಶ್ವತನಾ?

ಚಿತ್ರ ವಿಮರ್ಶೆ: ಪ್ರೀತಿ ನೀ ಶಾಶ್ವತನಾ?

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಒಂದಷ್ಟು ಮನಮಿಡಿಯುವ ಹಾಡುಗಳು, ಮತ್ತೊಂದಿಷ್ಟು ಕಣ್ಣ್ ಸೆಳೆಯುವ ದೃಶ್ಯಗಳು, ಈ ಎರಡನ್ನೂ ಬ್ಯಾಲೆನ್ಸ್ ಮಾಡುವ ನಾಯಕ/ನಾಯಕಿ ಇದ್ದರೆ ಇಡೀ ಚಿತ್ರವನ್ನು ತಾಳ್ಮೆಯಿಂದ ನೋಡಬಹುದು ಎನ್ನುವುದಕ್ಕೆ 'ಪ್ರೀತಿ ನೀ ಶಾಶ್ವತಾನಾ?"ಒಂದು ತಾಜಾ ಉದಾಹರಣೆ!

ಹೌದು, ನಿರ್ದೇಶಕ ಮೂರ್ತಿ ಸಹನಾತ್ಮಕ ಸಿನಿಮಾ ಮಾಡಿದ್ದಾರೆ. ಹೊಸ ತಂಡ ಕಟ್ಟಿಕೊಂಡು, ಕಲರವ ಮೂಡಿಸಿದ್ದಾರೆ. ಹಾಗಂತ ಎಲ್ಲ ಸರಿ ಇದೆ ಎಂದಲ್ಲ... ಕತೆಯಲ್ಲಿ ಹೊಸತನ ಬೇಕಿತ್ತು. ಕತೆಯ ನಿರೂಪಣೆಯಲ್ಲಿ ಗೋಲಿ ಗಾತ್ರದ ಬದಲಾವಣೆ ಮಾಡಬಹುದಿತ್ತು. ನಾಯಕಿ ಕೀರ್ತಿ ಕಿಲಕಿಲ ಎನ್ನಲು ವ್ಯರ್ಥ ಮಾಡಿರುವಅವಧಿಯನ್ನು ಅಭಿನಯಕ್ಕೆ ಮೀಸಲಿಡಬಹುದಿತ್ತು. ನಿರ್ದೇಶಕರು, ಎರಡನೇನಾಯಕನ ಆಯ್ಕೆ ಬಗ್ಗೆ ಮತ್ತೊಮ್ಮೆ ಯೋಚಿಸಬಹುದಿತ್ತು...ಈ ಎಲ್ಲವೈರುಧ್ಯಗಳ ನಡುವೆಯೂ ಚಿತ್ರ ಇಷ್ಟವಾಗುತ್ತದೆ.

ಚುರುಕಾದ ಸಂಭಾಷಣೆ,ಅಲ್ಲಲ್ಲಿ ಕಣ್ಣಿಗೆ ಡ್ರಾಪ್ಸ್ ಹಾಕುವ ಛಾಯಾಗ್ರಹಣ. ನಾಯಕ ಅಕ್ಷಯ್ ಮುದ್ದಾಗಿ ಕಾಣುತ್ತಾನೆ. ಹೈಟಿಗೆ ತಕ್ಕ ದೇಹ ದಾರ್ಢ್ಯತೆ, ಮಾತಿನಲ್ಲಿ ನಿಖರತೆ,ಫೈಟಿಂಗ್‌ನಲ್ಲಿ ಪಕ್ವತೆ... ಎಲ್ಲದಕ್ಕೂ ಅಕ್ಷಯ್ 'ಸೈ"ಫಲಿ ಖಾನ್. ಕೆ.ಕಲ್ಯಾಣ್ ಸಂಯೋಜಿತ ಹಾಡುಗಳ ಮನಮೋಹಕ, 'ನವ ಜಾತ"ಕ. ಒಬ್ಬ ಹುಡುಗನಾ ಮನಸು... ಹಾಡಂತೂ ಕೇಳ್ತಾ ಕೇಳ್ತಾ ಕಲ್ಲರಳಿ ಹೂವಾಗುತ್ತದೆ. ನಾಲ್ಕು ಹಾಡುಗಳಿಗೆ ತಲಾ ತೊಂಬತ್ತು ಮಾರ್ಕ್ ಕೊಡಬಹುದು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada