»   » ವಿಮರ್ಶೆ:ಸಿಹಿಗಾಳಿ,ಕೆರಳಿಸುವ ಬಿರುಗಾಳಿ

ವಿಮರ್ಶೆ:ಸಿಹಿಗಾಳಿ,ಕೆರಳಿಸುವ ಬಿರುಗಾಳಿ

By: * ದೇವಶೆಟ್ಟಿ ಮಹೇಶ್
Subscribe to Filmibeat Kannada

ಹಿಟ್ ಸಿನಿಮಾ ಒಂದರಲ್ಲಿ ಬಂದು ಹೋದ ಹಾಡಿನ ಸಾಲು ಬಳಸಿ, ಇನ್ನೊಂದು ಸಿನಿಮಾ ಮಾಡಿದರೆ ಅದೂ ಹಿಟ್ ಆಗುತ್ತಾ? ನೋ ಛಾನ್ಸ್ ಎನ್ನುತ್ತಿದೆ 'ಸಿಹಿಗಾಳಿ' ಚಿತ್ರ. ಇದು ಆ ದಿನಗಳು ಚಿತ್ರದ-ಸಿಹಿಗಾಳಿ ಸಿಹಿಗಾಳಿ... ಸಹಿ ಹಾಕಿದೆ ಮನಸಿನಲೀ... ಹಾಡಿನ ಸಾಲಿನಿಂದ ಹೆಕ್ಕಿಕೊಂಡ ಶಬ್ದ. ಹೆಸರೇನೋ ಸಿಹಿಯಾಗಿದೆ. ಆದರೆ, ಚಿತ್ರದಲ್ಲಿ ಇರುವುದು ಮನುಷ್ಯನ ದೇಹದೊಳಗೆ ಅಳತೆ ಮೀರಿ ತುಂಬಿಕೊಳ್ಳುವ ಶುಗರ್' ಅಂಶ. ಅದನ್ನು ಬಿಟ್ಟರೆ ಬೀಪಿ ಕೆರಳಿಸುವ ಬಿರುಗಾಳಿ.

ನಿರ್ದೇಶಕ ಲೇಖನಿ ಅದ್ಯಾವ ಆಂಗಲ್‌ನಲ್ಲಿ ಕತೆಗೆ ಲೇಖನಿ ಹಿಡಿದಿದ್ದಾರೋ ಗೊತ್ತಿಲ್ಲ..ಮಾತಿಲ್ಲ, ಕತೆಯಿಲ್ಲ. ಗಾಳಿ ಎಲ್ಲಾ ಕಡೆಯಿಂದ ಬೀಸುತ್ತದೆ. ಅದು ಕೂಲಾಗಿ ಬೀಸಿದರೆ ತಂಗಾಳಿ. ಹಿತವಾಗಿ ಬೀಸಿದರೆ ಸಿಹಿಗಾಳಿ. ಇಲ್ಲಿ ಅದು ಅಡ್ಡಡ್ಡ ಬೀಸುತ್ತದೆ. ಚಂಡಮಾರುತವಾಗಿ ಪ್ರೇಕ್ಷಕರನ್ನು ಹಗಲಲ್ಲೇ ಹೈಜಾಕ್ ಮಾಡುತ್ತದೆ.

ಒಬ್ಬ ಇದ್ದನಂತೆ. ಅವನ ತಾಯಿಗೆ ಮಗ ಎಂಜಿನಿಯರ್ ಆಗಬೇಕು ಎಂಬ ಆಸೆಯಂತೆ. ಅವನಿಗೊಬ್ಬಳು ಗರ್ಲ್ ಫ್ರೆಂಡಂತೆ. ಇನ್ನೇನು ಎಲ್ಲಾ ಮುಗಿಯಿತು ಎನ್ನುವ ಹೊತ್ತಿಗೆ ಪುಸಕ್ ಅಂತ ಆತ ಜೈಲಿಗೆ ಹೋಗುತ್ತಾ ನಂತೆ... ಅಲ್ಲಿ ಕಂಬಿ ಎಣಿಸಿ ಮುಗಿಸುವಷ್ಟರಲ್ಲಿ ತಾಯಿ ದೇಹ ತಣ್ಣಗಾಗುತ್ತದೆಯಂತೆ... ಒಳ್ಳೆ ಹರಿಕತೆ' ಕೇಳಿದ ಸಿಹಿ' ಅನುಭವ ಆಗುತ್ತಿದೆಯಾ? ಎಲ್ಲಾ ಗಾಳಿ ಗಮ್ಮತ್ತು ಕಣ್ರೀ...!

ಶ್ರೀ ಮುರಳಿಗೆ ಉದ್ದುದ್ದ ಕೂದಲು ಸೆಟ್ ಆಗುವುದಿಲ್ಲ. ಸಿರಿನ್ ನಟನೆಯಲ್ಲಿ ನಯಾಪೈಸೆ ಬದಲಾವಣೆಯಿಲ್ಲ. ತುಳಸಿ ಶಿವಮಣಿ ತಾಯಿಯ ಪಾತ್ರವನ್ನು ಅನುಭವಿಸಿ ಮಾಡಿದ್ದಾರೆ. ಶರಣ್ ಕಾಮಿಡಿಗೆ ಟೊಪ್ಪಿ ಹಾಕಿಲ್ಲ. ಉಳಿದಂತೆ ಒಂದಷ್ಟು ಹೊಡೆದಾಟ, ಹಾರಾಟ, ಕುಣಿದಾಟ... ಗಾಳಿ' ಆಂಜನೇಯಾ... ನೀನೇ ಕಾಪಾಡಪ್ಪಾ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada