twitter
    For Quick Alerts
    ALLOW NOTIFICATIONS  
    For Daily Alerts

    ಕೆಎ 99 ಬಿ 333: ಶಕಲಕ ಭೂಮ್ ಭೂಮ್ ಚಿತ್ರ!

    By Staff
    |

    *ದೇವಶೆಟ್ಟಿ ಮಹೇಶ್

    KA 99 B 333, Kannada movie review
    ಆಟೊಗಳಿಗೆ ಸಂಬಂಧಿಸಿ, ಅದೆಷ್ಟೋ ಸಿನಿಮಾ ಬಂದಿವೆ, ಬರುತ್ತಿವೆ.ಆದರೆ ಈ ಥರದ 'ಆಟೊ"ಮ್ಯಾಟಿಕ್ ಚಿತ್ರ ಬಂದಿಲ್ಲ ! ಇದೊಂಥರಾ ಶಕಲಕ ಭೂಮ್ ಭೂಮ್ ಚಿತ್ರ...

    ನಾಯಕ ನಟ-ಶ್ರೀಕಾಂತ್ ನಾಟ್ಯ ಮಾಡುತ್ತಾ ಎಂಟ್ರಿ ಕೊಡುತ್ತಾನೆ. ನಾಯಕಿ ಬಂದಿದ್ದೇ ಗೊತ್ತಾಗುವುದಿಲ್ಲ. ಆದರೆ ನಾಯಕನ ಜತೆ ಜಗಮಗಿಸಿ ಜಿಗಿದಾಗ ಆಕೆಯ ಆಗಮನವಾಗಿದೆ ಎಂದು ಮನದಟ್ಟಾಗುತ್ತದೆ. ಆತ ಅಭಿನವ ಆಟೊರಾಜ. ಈಕೆ ರಾಣಿ. 'ಲೋ ದಿನಿ... ನಂಗೂ ಆಟೊ ಓಡ್ಸೋದ್ ಹೇಳಿಕೊಡ್ತೀಯಾ..." ಎಂದು ಆತನ ಪಕ್ಕ ಬಂದು ಕೂರುತ್ತಾಳೆ. ಈತ ಡೊರ್...ಅಂತ ಗಾಡಿ ಸ್ಟಾರ್ಟ್ ಮಾಡಿ, ಮೊದಲನೇ 'ಗೇರ್" ಹಾಕುತ್ತಾನೆ...ತಗಳಪ್ಪಾ... ಇದ್ದಕ್ಕಿದ್ದಂತೆ ಕನಸಿನ ಲೋಕ, ಸಮುದ್ರ ತೀರ...ಡಾಂ ಡೂಮ್ ಡರ್ ಢಸಕ್...

    ***

    ಇದು ಕಾಮಿಡಿ ದೃಶ್ಯ:
    ಆದೈತ್ಯ ದೇಹ ದೇವರ ಗುಡಿ ಮುಂದೆ; ನೀನು ಸಾರಾಯಿ ನಿಷೇಧ ಮಾಡಿದ್ದು ಯಾಕೆ, ಲಾಟರಿ ವ್ಯಾಪಾರನಿಲ್ಲಿಸಿದ್ದಕ್ಕೆ ಏನು ಕಾರಣ, ಈಗಲೇ ಪ್ಯಾಕೆಟ್ ಕೊಡಿಸು ಪರಮಾತ್ಮಾ ಎಂದುನುಲಿಯುತ್ತದೆ. ಅಲ್ಲಿ ಶುರು ನಗೆ-ಪಾಟಲಿ... ಎಲ್ಲಾ ಬಾಟಲಿ ಲೀಲೆ ಎಂದುಆತ ಇನ್ನೊಮ್ಮೆ ಅರಚುತ್ತಾನೆ, ನಿಮ್ಮನ್ನು ಪರಚುತ್ತಾನೆ...

    ಆಟೊ ಚಾಲಕರ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ ಎಂದು ಕೆಲವರುಗುಂಪು ಕಟ್ಟಿ, ಒಂದು ತೀರ್ಮಾನಕ್ಕೆ ಬರುತ್ತಾರೆ. ಮುಂದಿನ ದೃಶ್ಯದಲ್ಲಿ ಹಣಕಾಸು ಸಚಿವರ ಮುಂದೆ ನಿಂತು; ಈ ಮೀಟರ್ ಬಡ್ಡಿ ವ್ಯವಹಾರ ಮಾಡುವ '..." ಮಕ್ಳನ್ನಾ ಮೊದಲು ಜೈಲಿಗೆ ತಳ್ಳಿ ಸಾರ್" ಎನ್ನುತ್ತಾರೆ. ಅಲ್ಲಿಂದ ಓವರ್ ಟು ಸೋಮಾರಿ ಕಟ್ಟೆ...

    ಹೀರೊ ಇಲ್ಲಿ ಹೀರೊ ಅಲ್ಲ, ಇಲ್ಲಿ ಬರುವ ಎಲ್ಲರೂ ಹಾರುವ ತಟ್ಟೆಗಳು. ಬರಬರುತ್ತಿದ್ದಂತೆ ಬೀಳುತ್ತಾರೆ. ನಾಯಕನ ಜತೆ ಜಿಗಿಜಿಗಿದು ಜುಗಲ್‌ಬಂದಿ ಆಡುತ್ತಾರೆ. ನಾಯಕಿಯ ತಂಟೆಗೆ ಹೋಗುತ್ತಾರೆ, ಪುಕ್ಕಟೆ ಪೆಟ್ಟಿಗೆ ಎದೆಕೊಡುತ್ತಾರೆ. ಆಗ ಕ್ಯಾಮೆರಾ ಅಂತೂ ಗಲಗಲಗಲ ಅಲ್ಲಾಡುತ್ತದೆ.

    ಸುನಿಲ್ ನಟನೆ ಒಂದನ್ನು ಬಿಟ್ಟು ಉಳಿದದ್ದರಲ್ಲಿ ಉಲ್ಲಾಸದ ಚಿಲುಮೆ.ಮಾತೆತ್ತಿದರೆ ಮೈ-ಕೈ ತೋರಿಸಲು ಮುಂದಾಗುತ್ತಾನೆ. ಅಭಿನಯ ಈ ನಾಲ್ಕಕ್ಷರಕ್ಕೆ ಆತನ ಶಬ್ದಕೋಶದಲ್ಲಿ 'ಮೂರಡಿ, ಆರಡಿ" ಜಾಗವಿಲ್ಲ. ನಾಯಕಿದೀಪಾಚಾರಿ ಖುಲ್ಲಂ ಖುಲ್ಲಾ ಮಸಾಲಾ, ಚಿತ್ರಾನ್ನಾ, ಪುಳಿ ಯೊಗರೆ, ಮಿಸಲ್‌ಬಾಜಿ, ಹಳೇ ಪಾತ್ರೆ ಹಳೆ ಕಬ್ಣ...ಸೋಪ್ ಹಾಕ್ಕಂಡು, ತಲೆ ಬಾಚ್ಕೊಂಡು ಬಳುಕುವ ಬಳ್ಳಿಯಾಗುತ್ತಾಳೆ. ಆದರೂ ಅಲ್ಲೊಂದು ಪೆಸಲ್ ಐತೆ ; ಆಟೊ ಓಡಿಸುವುದು. ಅದೊಂದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ!

    ***

    ಸಾಫ್ಟ್‌ವೇರ್ ಎಂಜಿನಿಯರ್, ಲಾಯರ್, ಡಾಕ್ಟರ್ ಹೀಗೆ ಸಾಕಷ್ಟು ಮಂದಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅದೇ ರೀತಿ ಅರುಣ್ ಕುಮಾರ್. ಪೊಲೀಸ್ ಇಲಾಖೆಯಲ್ಲಿದ್ದವರು. ಅದರ ಸಂಕೇತವಾಗಿ ವಿರಾಮದ ವೇಳೆಗೆ ಕರ್ನಾಟಕ ಪೊಲೀಸ್ ಪಾತ್ರ ಎಂಟ್ರಿಯಾಗುತ್ತದೆ. ಇದ್ದಕ್ಕಿದ್ದಂತೆ ತನ್ನ ಖದರ್ ತೋರಲು ಮುಂದಾಗುತ್ತದೆ. ಆ ಪಾತ್ರವನ್ನು ದೂರದಿಂದ ಬಂದಂಥ ಅಜಯ ರತ್ನಂ ಮಾಡಿದ್ದಾರೆ. ಕಂಡಕಂಡವರನ್ನು ದಿಟ್ಟಿಸಿ ನೋಡುವುದೇ ನಟನೆ ಎಂದು ಅವರು ಅಂದುಕೊಂಡಿದ್ದರೆ ಅದು ತಪ್ಪು. ಅಭಿನಯಕ್ಕೂ ಅರಚಾಟಕ್ಕೂ ವ್ಯತ್ಯಾಸವಿದೆ. ಅದು ಅವರ ಗಮನಕ್ಕೆ ಬರಬೇಕಿದೆ.

    ಸಂಭಾಷಣೆಯಲ್ಲಿ ಕೆಲವು: ಬೆಂಗಳೂರಿನಲ್ಲಿ ಖಾಲಿ ಸೈಟು, ಖಾಲಿ ದೋಸೆಗೆ ಬೆಲೆ ಇದೆ, ಆದರೆ ಖಾಲಿ ಜೇಬಿಗೆ ಬೆಲೆ-ನೆಲೆ ಎರಡೂ ಇಲ್ಲ, ನನ್ನ ಹೆಸರು ಚರಣ್ ಡಿ ಅಂತ; ಚರಂಡಿಯಲ್ಲ, ನೀನು ಉದ್ದಾನೂ ಆಗಲ್ಲ, ಉದಾಟಛಿರವೂ ಆಗಲ್ಲ...ಇಂಥ ಮಾತು ಇಷ್ಟವಾಗುತ್ತದೆ. ಆದರೆ ಕತೆ ಕವಲೊಡೆದ ಹಾದಿ, ಚಿತ್ರಕತೆ ಚಂದವಳ್ಳಿ ತೋಟದಿ ಬೆಳೆದು ನಿಂತ ಕಾಂಗ್ರೆಸ್ ಗಿಡ, ನಿರೂಪಣೆ ನಿಂತ ನೀರು, ಸಂಗೀತದಲ್ಲಿ ಹಿತ/ಮಿತ...

    ಆದರೆ ಅನಾಥ ಶವ ಸಾಗಿಸುವ ತ್ರಿವಿಕ್ರಮನ ಪಾತ್ರದಲ್ಲಿ ಕರಿಬಸವಯ್ಯ, ತೆವಳಿಕೊಂಡು ಸಾಗುವ ಭಿಕ್ಷುಕನ ಪಾತ್ರದಲ್ಲಿ ಕಾಶಿ, ಜಿಪುಣ ಸೇಟುವಾಗಿ ಬ್ಯಾಂಕ್ ಜನಾರ್ಧನ್ ಕೊಟ್ಟ ಕಾಸು, ಕೆಲಸಕ್ಕೆ ಮೋಸ ಮಾಡಿಲ್ಲ. ಒಟ್ಟಾರೆ ಚಿತ್ರದ ಹೆಸರಿನಂತೆ ಇಡೀ ಸಿನಿಮಾ ವಿಚಿತ್ರವಾಗಿದೆ. ಅಂಥದ್ದೊಂದು ಶಕಲಕ ಅನುಭವ ಆಗಬೇಕಾ? ಓವರ್ ಟು ಕೆಎ 99...

    ಚಿತ್ರವಿಮರ್ಶೆ: ಸ್ವತಂತ್ರ ಪಾಳ್ಯದ ಗಲ್ಲಿಯೊಳಗೆ

    Monday, February 16, 2009, 11:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X