»   » ಚಿತ್ರ ವಿಮರ್ಶೆ: ಸಂಚಾರಿ ಸುಪಾರಿ ಕಿಲ್ಲರ್ ಸ್ಟೋರಿ

ಚಿತ್ರ ವಿಮರ್ಶೆ: ಸಂಚಾರಿ ಸುಪಾರಿ ಕಿಲ್ಲರ್ ಸ್ಟೋರಿ

By: * ದೇವಶೆಟ್ಟಿ ಮಹೇಶ್
Subscribe to Filmibeat Kannada

ನಿರ್ದೇಶನ ಚೆನ್ನಾಗಿದೆ, ಸಂಗೀತ ಸೂಪರ್ ಆಗಿದೆ. ಛಾಯಾಗ್ರಹಣ ಭಿನ್ನ ಎನಿಸುತ್ತದೆ. ಕತೆ ತಕ್ಕ ಮಟ್ಟಿಗೆ ಇದೆ. ಆದರೂ ಚಿತ್ರದಲ್ಲಿ ಕೆಲ ಮೈನಸ್ ಪಾಯಿಂಟ್ ಕಾಣುತ್ತದೆ-ಕಾಡುತ್ತದೆ-ಕಾಡುತ್ತಲೇ ಇರುತ್ತದೆ!

ಹಾಗಾಗಲು ಕಾರಣ ನಾಯಕ ರಾಜ್. ದೂರದಲ್ಲಿ ಕ್ಯಾಮೆರಾ ಇಟ್ಟರೂ ಅವರನ್ನು ಸಹಿಸಿಕೊಳ್ಳುವುದು ಕಷ್ಟ ಕಷ್ಟ. ಇಲ್ಲಿ ನೋಡುತ್ತಾರೆ, ಅಲ್ಲೆಲ್ಲೋ ಮಾತನಾಡುತ್ತಾನೆ.ಅಲ್ಲಿ ನೋಡುತ್ತಾ, ಇಲ್ಲಿ ಹೊಡೆಯುತ್ತಾನೆ. ಮುಂದಿನ ಚಿತ್ರದಲ್ಲಿ ಅವರ ನಟನೆಯಲ್ಲಿ ಸಾಕಷ್ಟು ತಿದ್ದುಪಡಿಯಾಗ ಬೇಕಿದೆ.

ಸಂಚಾರಿ-ಇದೊಂದು ಸುಪಾರಿ ಕಿಲ್ಲರ್ ಸ್ಟೋರಿ. ಅನ್ಯಾಯದ ವಿರುದ್ಧ ಹೋರಾಡುವ ಹುಡುಗನ ಡವ ಡವ ಕತೆ. ನಿರ್ದೇಶಕರು ಎಲ್ಲ ಹಂತದಲ್ಲೂ ಇಷ್ಟವಾಗುತ್ತಾರೆ. ಆದರೆ, ನಾಯಕ ರಾಜ್‌ನ ಅಸಹನೀಯ ಅಭಿನಯದಿಂದ ಚಿತ್ರ ಸೊರಗಿದೆ. ವಿಶೇಷ ಎನ್ನುವಂತೆ ನಾಯಕಿ ಬಿಯಾಂಕಾ ದೇಸಾಯಿ ಕೂಡ ಚೆನ್ನಾಗಿ ನಟಿಸಿದ್ದಾರೆ.

ರಂಗಾಯಣ ರಘು ಎಂದಿನಂತೇ ಹರಟುತ್ತಾರೆ. ಸಂಗೀತ ನಿರ್ದೇಶಕ ಅರ್ಜುನ್ ಮತ್ತೊಮ್ಮೆ 'ಬಿರುಗಾಳಿ' ಎಬ್ಬಿಸಿದ್ದಾರೆ. 'ದೀಪವೇ ನೋಡುಬಾ... ಗಾಳಿಯಾ ನರ್ತನ...' ಹಾಡಂತೂ ಮಾಧುರ್ಯಕ್ಕೆ ಬರೆದ ಮುನ್ನುಡಿ. ರೀರೆಕಾರ್ಡಿಂಗ್ ಕೂಡ ಲವಲವಿಕೆಯಿಂದ ಕೂಡಿದೆ.

Please Wait while comments are loading...