For Quick Alerts
ALLOW NOTIFICATIONS  
For Daily Alerts

  ಪ್ರೇಕ್ಷಕರ ವಿಮರ್ಶೆ : '2.O' ಸಿನಿಮಾ ನೋಡಿದವರ ಪ್ರತಿಕ್ರಿಯೆ

  |

  ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ಈಗ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದಾರೆ. ನಿರ್ದೇಶಕ ಶಂಕರ್ ಮತ್ತು ರಜನಿ ಮತ್ತೆ ಒಂದಾಗಿದ್ದಾರೆ. ವರ್ಷಗಳ ಕಾಲ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ '2.O' ಸಿನಿಮಾ ನೋಡುವ ಭಾಗ್ಯ ಸಿಕ್ಕಿದೆ.

  ಕೆಲವರು ಈಗಾಗಲೇ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ್ದಾರೆ. ಇನ್ನು ಹಲವರು ಸಿನಿಮಾ ನೋಡುವ ಪ್ಲಾನ್ ನಲ್ಲಿ ಇದ್ದಾರೆ. ಜೊತೆಗೆ ಸಿನಿಮಾ ಹೇಗಿದೆ? ಎನ್ನುವ ಪ್ರಶ್ನೆ ಎಲ್ಲರಿಗೆ ಇದೆ. 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ವಿಶ್ವಾದ್ಯಂತ ಸಿನಿಮಾ ಬಿಡುಗಡೆಯಾಗಿದೆ. 600 ಕೋಟಿ ಬಜೆಟ್ ನ ಮಹಾ ಸಿನಿಮಾ ತೆರೆ ಮೇಲೆ ಅಬ್ಬರಿಸಿದೆ.

  '2.O' ಸಿನಿಮಾದ ನಡುವೆ ದರ್ಶನ ನೀಡಿದ 'KGF'!

  ಅಂದಹಾಗೆ, ಸಿನಿಮಾ ನೋಡಿದ ಕೆಲ ಪ್ರೇಕ್ಷಕರ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮುಂದಿವೆ ಓದಿ..

  ಗ್ರಾಫಿಕ್ಸ್ ಸಿನಿಮಾದ ಶಕ್ತಿ

  ''2.O' ಅದ್ಬುತವಾಗಿದೆ. ಗ್ರಾಫಿಕ್ಸ್ ಹಾಗೂ ಮೇಕಿಂಗ್ ಸಿನಿಮಾದ ಶಕ್ತಿ. ಆದರೆ, ಚಿತ್ರದ ಕಥೆ ಅಷ್ಟೊಂದು ಚೆನ್ನಾಗಿಲ್ಲ. ಸಿನಿಮಾಟೋಗ್ರಾಫಿ ಸೂಪರ್. ಒಟ್ಟಾರೆ ಇದು ಒಂದು ಒಳ್ಳೆಯ ಫ್ಯಾಮಿಲಿ ಪ್ಯಾಕೇಜ್ ಹಾಗೂ ಪಕ್ಕಾ ತಲೈವ ಸಿನಿಮಾ.'' - dynamo kadhal‏ @DynamoKadhal

  ಟ್ವಿಟ್ಟರ್ ಲೋಕದಲ್ಲಿ ಟ್ರೆಂಡ್ ಆದ '2.O' ಸಿನಿಮಾ

  ಎಲ್ಲರೂ ಮುಖವಿಸ್ಮಿತರಾಗಿದ್ದಾರೆ

  ''ಚಿತ್ರಮಂದಿರದಿಂದ ನೇರವಾಗಿ ಟ್ವೀಟ್ ಮಾಡುತ್ತಿದ್ದೇನೆ. ಸದ್ಯಕ್ಕೆ ಮಧ್ಯಂತರವರೆಗೆ ಸಿನಿಮಾ ನೋಡಿದ್ದೇನೆ. ಇಡೀ ಚಿತ್ರಮಂದಿರ ಮುಖವಿಸ್ಮಿತರಾಗಿ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾದ ಬಗ್ಗೆ ಹೇಳಲು ಆಗುವುದಿಲ್ಲ ಅಷ್ಟೊಂದು ಚೆನ್ನಾಗಿದೆ.'' - S A I P S P K @SaiNaidu_

  ಶಂಕರ್ ಸರ್ ದಿ ಬೆಸ್ಟ್

  ''2.O' ಸಿನಿಮಾ ಪಕ್ಕಾ ಬ್ಲಾಕ್ ಬಾಸ್ಟರ್. ಶಂಕರ್ ಸರ್ ನೀವು ದಿ ಬೆಸ್ಟ್. ಚಿತ್ರಮಂದಿರರಲ್ಲಿ ಎಲ್ಲ ಪ್ರೇಕ್ಷಕರು ಕೂಗುತ್ತಿದ್ದ ದೃಶ್ಯವನ್ನು ಮರೆಯಲು ಆಗುವುದಿಲ್ಲ. ರಜನಿಕಾಂತ್ ಅವರ ಎಂಟ್ರಿ ಸೀನ್ ಸೂಪರ್ ಆಗಿದೆ. ಚಿತ್ರಮಂದಿರದಲ್ಲಿ ಇದ್ದ ಕ್ರೇಜ್ ನೋಡಿ ಮಾತೇ ಬರುತ್ತಿಲ್ಲ.'' - Ashwin Dash‏ @ashwindash15

  ಆನ್ ಸ್ಕ್ರೀನ್ ನಲ್ಲಿ ರಜನಿ ಅದ್ಬುತ

  ''3D ಯಲ್ಲಿ ಸಿನಿಮಾ ನೋಡಿದ ಅನುಭವ ತುಂಬ ಮಜಾ ನೀಡಿತು. ಸೂಪರ್ ಸ್ಟಾರ್ ರಜನಿಕಾಂತ್ ಆನ್ ಸ್ಕ್ರೀನ್ ಅಪಿಯರೆನ್ಸ್ ಅದ್ಬುತ. ಅವರ ಹೆಸರು ಪರದೆ ಮೇಲೆ ಬರುತ್ತಿದ್ದ ಹಾಗೆ ಜನರ ಕೂಗು ಮುಗಿಲು ಮುಟ್ಟಿತ್ತು.'' @African Kalaa‏ @ZaZuOke

  ಚೆನ್ನಾಗಿದೆ ಎಲ್ಲರೂ ನೋಡಿ

  ''ಫಸ್ಟ್ ಡೇ ಫಸ್ಟ್ ಶೋ ಸಿನಿಮಾವನ್ನು ನೋಡಿ ಮುಗಿಸಿದೆ. ಸಿಂಗಲ್ ಸ್ಕ್ರೀನ್ ನಲ್ಲಿ 900 ಜನರ ನಡುವೆ ಕೂತು ಸಿನಿಮಾ ನೋಡಿದ ಅನುಭವ ತುಂಬ ಚೆನ್ನಾಗಿತ್ತು. ಸಿನಿಮಾ ತುಂಬ ಚೆನ್ನಾಗಿದೆ ಎಲ್ಲರೂ ನೋಡಿ.'' - Akshaye Rathi @akshayerathi

  ಹಾಲಿವುಡ್ ಗೆ ಚಾಲೆಂಜ್ ಮಾಡುತ್ತದೆ

  ''ಸಿನಿಮಾದಲ್ಲಿ ಹೆಚ್ಚು 3D ಗ್ರಾಫಿಕ್ ಬಳಸಲಾಗಿದೆ. 3D ಸಿನಿಮಾದ ಅನುಭವ ಇಷ್ಟ ಪಡುವವರು ಈ ಸಿನಿಮಾವನ್ನು ನೋಡಬಹುದು. ಗ್ರಾಫಿಕ್ಸ್ ನಲ್ಲಿ ಈ ಸಿನಿಮಾ ಹಾಲಿವುಡ್ ಸಿನಿಮಾಗೆ ಚಾಲೆಂಜ್ ಮಾಡುತ್ತದೆ.'' Shiva sai teja @shivasaiteja12

  ಔಟ್ ಆಫ್ ಔಟ್ ರೇಟಿಂಗ್

  ''ಇತಿಹಾಸದಲ್ಲಿ ಬಂದ ಬೆಸ್ಟ್ ಸಿನಿಮಾ ಇದು. ನಾನು ಈ ಸಿನಿಮಾದಲ್ಲಿ ಔಟ್ ಆಫ್ ಔಟ್ ರೇಟಿಂಗ್ ನೀಡುತ್ತೇನೆ. ಶಂಕರ್ ಸರ್ ಹಾಗೂ ರಜನಿಕಾಂತ್ ಸರ್ ಅವರು ಗ್ರೇಟ್. ಅಕ್ಷಯ್ ಕುಮಾರ್ ಸರ್ ಅವರದ್ದು ಎಂತಹ ಅದ್ಬುತ ನಟನೆ.'' - P‏ @Jalaf03

  English summary
  Super Star Rajinikanth, Akshay Kumar and Amy Jackson's '2.O' tamil movie twitter review. The movie is directed by shankar and it released Today (November 29th).

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more