»   » ಚಿತ್ರವಿಮರ್ಶೆ:ನಿರ್ದೇಶಕನ ಚಿತ್ರ 'ದಿಲ್ದಾರ'

ಚಿತ್ರವಿಮರ್ಶೆ:ನಿರ್ದೇಶಕನ ಚಿತ್ರ 'ದಿಲ್ದಾರ'

Posted By: * ದೇವಶೆಟ್ಟಿ ಮಹೇಶ್
Subscribe to Filmibeat Kannada

ನಿರ್ದೇಶಕ ಅಮರ್ ತಲೆಯಲ್ಲಿ ಒಂದಷ್ಟು ಹೊಸ ವಿಷಯಗಳಿವೆ ಎನ್ನುವುದು ನಾಲ್ಕು ದೃಶ್ಯ ಮುಗಿಯುವ ಹೊತ್ತಿಗೇ ಗೊತ್ತಾಗುತ್ತದೆ. ಒಂದು ಸಾಧಾರಣ ಕತೆಯನ್ನು ಅವರು ಹೇಳುವ ಪರಿ ಇಷ್ಟವಾಗುತ್ತದೆ.

ಕೆಲ ದೃಶ್ಯಗಳನ್ನು ಹೆಣೆದ ರೀತಿ, ಅದಕ್ಕೆ ಬಳಸಲಾಗಿರುವ ಕ್ಯಾಮೆರಾ ಆಂಗಲ್‌ಗಳು ನಿಜಕ್ಕೂ ವಿಶೇಷವಾಗಿದೆ. ರಂಗಾಯಣ ರಘುರಂಥ ನಟನೊಂದಿಗೆ ಏಗುವುದು ಸುಲಭದ ಮಾತಲ್ಲ. ಆದರೆ, ಇಡೀ ಚಿತ್ರದಲ್ಲಿ ರಘು ಹೈಲೈಟ್ ಆಗುತ್ತಾರೆ. ಅವರು ಬಳಸುವ ಸಂಭಾಷಣೆ, ಮ್ಯಾನರಿಸಂ ಎಲ್ಲ ವಿಚಿತ್ರ, ವಿಭಿನ್ನ. ಮೊದಲ ಯತ್ನದಲ್ಲೇ ಅಮರ್ ಗಮನಸೆಳೆದಿದ್ದಾರೆ.

ನಾಯಕ ಅಮನ್ ಹಲವು ಕಡೆ ಇಷ್ಟವಾಗುತ್ತಾರೆ. ಕೆಲವು ಕಡೆ ಕಷ್ಟಪಡುತ್ತಾರೆ. ನಾಯಕಿ ರೇಷ್ಮಾ ಚಂಗಪ್ಪ ಅತಿಯಾದ ಮೇಕಪ್ ಇಲ್ಲದೇ ಶಿಸ್ತಾಗಿ ನಟಿಸಿದ್ದಾಳೆ. ಕಿಶೋರ್ ಹಾಗೆ ಬಂದು ಹೀಗೆ ಹೋಗುತ್ತಾರೆ. ಪ್ರವೀಣ್.ಡಿ.ರಾವ್ ಸಂಗೀತದಲ್ಲಿ ಎರಡು ಹಾಡುಗಳು ಚೆನ್ನಾಗಿವೆ. ಹಾಡಿಗೆ ಬಳಸಿರುವ ನೃತ್ಯ ಸಂಯೋಜನೆಯಲ್ಲಿ ಜೀವಂತಿಕೆಯಿದೆ.

ಈ 'ದಿಲ್ದಾರ' ಕೋಟ್ಯಧೀಶ್ವರ ಅಲ್ಲ. ಈತನಿಗೆ ಸೂಜಿ ದಾರಕ್ಕೂ ಗತಿ ಇಲ್ಲ. ಹೊಟ್ಟೆ ಪಾಡಿಗೆ ಪೋಸ್ಟರ್ ಅಂಟಿಸುವ ವೃತ್ತಿಗೆ ಅಂಟಿಕೊಂಡಿರುತ್ತಾನೆ. ಗೋಡೆಗೆ ಬಣ್ಣದ ಕಾಗದ ಹಚ್ಚುವ ಹೊತ್ತಿಗೆ ಹುಡುಗಿಯೊಬ್ಬಳು ಸಿಗುತ್ತಾಳೆ. ಅವಳ ಅಸಹಾಯಕತೆ ಕಂಡು ಮರುಗುತ್ತಾನೆ ನಾಯಕ. ಅವಳಿಗೆ ಮನೆಯಲ್ಲಿ ಆಶ್ರಯ ಕೊಡುತ್ತಾನೆ. ಇನ್ನೇನು ಪ್ರೀತಿಯಲ್ಲಿ ಬೀಳಬೇಕು...;

ಎಲ್ಲ ಇಲ್ಲೇ ಹೇಳಿದರೆ ಚಿತ್ರಮಂದಿರ ಮಾಲೀಕರು ಜಾಲಿ ಬರಲು ಕೈಗೆತ್ತಿಕೊಳ್ಳುತ್ತಾರೆ! ಒಟ್ಟಾರೆ ಹೊಸಬರೇ ಸೇರಿ, ಒಂದಷ್ಟು ಹೊತ್ತು ಪ್ರೇಕ್ಷಕರಿಗೆ ಹೊಸ ಗಾನ ಬಜಾನಾ ಎನ್ನುತ್ತಾರೆ. ಒಂದಷ್ಟು ಹೊತ್ತು ಹೊಸ ಲೋಕ ತೋರಿಸುತ್ತಾರೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada