twitter
    For Quick Alerts
    ALLOW NOTIFICATIONS  
    For Daily Alerts

    'ಮಂಜಿನ ಹನಿ' ಕಣ್ಣಲ್ಲಿ 'ಉಳಿದವರು ಕಂಡಂತೆ'

    By ಮಂಜಿನ ಹನಿ
    |

    ಒಂದು ಸಿನೇಮಾಕ್ಕೆ ತನ್ನದೇ ಆದ ಸಿದ್ಧ ಸೂತ್ರಗಳಿರುತ್ತವೆ. ಕಲಾತ್ಮಕವಾದ ಸಿನೇಮಾಗಳು, ಮನೋರಂಜನೆಯನ್ನು ಕೇಂದ್ರವಾಗಿಟ್ಟುಕೊಂಡ ಸಿನೇಮಾಗಳು, ಆಕ್ಷನ್, ಕಾಮೆಡಿ, ಥ್ರಿಲ್ಲರ್, ಲವ್-ರೊಮ್ಯಾನ್ಸ್, ಹೀಗೆ... ಸೃಜನಾತ್ಮಕ ನಿರ್ದೇಶಕ ಇವೆಲ್ಲವನ್ನೂ, ದುಡ್ಡು ಮಾಡುವ ಸಿನೇಮಾಗಳನ್ನಷ್ಟೇ ಮಾಡಬೇಕೆಂಬ ಒತ್ತಡಗಳನ್ನೂ ಮೀರಿ ಯೋಚಿಸುತ್ತಾನೆ. ತನ್ನ ಸಿನೇಮಾದ ಮೂಲಕ ಇಂಡಸ್ಟ್ರಿಗೆ ಹೊಸ ತರಹದ ಪ್ರೇಕ್ಷಕವರ್ಗವನ್ನು ಹುಟ್ಟಿಹಾಕಲು ಪ್ರಯತ್ನಿಸುತ್ತಾನೆ. ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮಿಸ್ಸಿಂಗ್ ಲಿಂಕ್ ಮತ್ತಿತರ ವೈಜ್ಞಾನಿಕ ಭೂಮಿಕೆಗಳ ಮೂಲಕ ವಿಭಿನ್ನವಾದ ಓದುಗ ವರ್ಗವನ್ನು ಸೃಷ್ಟಿಸಲು ಶ್ರಮಿಸಿದ್ದರು. ಇಂಥದೇ ಸೃಜನಾತ್ಮಕ ಕೆಲಸ ಹೊಸ ತರಹದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸುವುದು.

    ಆ ಮಟ್ಟಿಗೆ ನೋಡುವುದಾದರೆ, 'ಉಳಿದವರು ಕಂಡಂತೆ' ದಿಲೈಟ್'ಫುಲ್ ವಾಚ್ ಮತ್ತು ವಿಶುವಲ್ ಎಕ್ಸಲೆನ್ಸ್. ಇಂಥದ್ದೊಂದು ಪರಿಕಲ್ಪನೆ ಸ್ಯಾಂಡಲ್'ವುಡ್ ನ ಮಟ್ಟಿಗೆ ತೀರ ಹೊಸದು. ಒಂದು ಘಟನೆಯನ್ನು ಮತ್ತು ಅದಕ್ಕೆ ತಳುಕು ಹಾಕಿಕೊಂಡ ಹಲವಾರು ಘಟನೆಗಳನ್ನು ಐದಾರು ಆಯಾಮಗಳಲ್ಲಿ ಹೇಳುತ್ತಾ ಹೋಗುತ್ತದೆ ಕಥೆ. ಅವುಗಳನ್ನೆಲ್ಲಾ ಬಂಧಿಸುವ ಪ್ರತಿಬಂಧಕ ಶಕ್ತಿ, ರೆಜೀನಾ(ಶೀತಲ್ ಶೆಟ್ಟಿ) ಎಂಬ ಪತ್ರಕರ್ತೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

    ಆ ಕಥೆಯನ್ನು ನಿರೂಪಿಸುವಾಗ ಮೂಲ ಕಥೆಗೆ ಧಕ್ಕೆಯಾಗದಂತೆ ಹೇಳುವುದು ಹೇಗೆ ಎಂಬ ಅವಳ ಜಿಜ್ಞಾಸೆಗೆ ಅವಳು ಕಂಡುಕೊಳ್ಳುವ ಉತ್ತರ: ತನ್ನ ಯಾವುದೇ ಇನ್ಟ್ಯೂಷನ್'ಗಳು ಮತ್ತು ಕನ್'ಕ್ಲೂಶನ್'ಗಳು ಕಥೆಯ ಭಾಗವಾಗದಂತೆ ಎಚ್ಚರ ವಹಿಸುವುದು ಮತ್ತು ಪ್ರತಿಯೊಂದು ಮೈನ್ಯೂಟ್ ಅಂಶಗಳನ್ನೂ ಬಿಡದಂತೆ ದಾಖಲಿಸುವುದು. ಈ ಉತ್ತರಗಳು ಬೆಳೆದಂತೆ ರೂಪುಗೊಳ್ಳುವ ಕಥೆಯೇ, 'ಆಸ್ ಸೀನ್ ಬೈ ದ ರೆಸ್ಟ್' ಅರ್ಥಾತ್ ಉಳಿದವರು ಕಂಡಂತೆ. [ಕೃಪೆ: ಮಂಜಿನ ಹನಿ]

    ಉಳಿದವರು ಕಂಡಂತೆ ಕಥೆ ಏನೆಂದರೆ...

    ಉಳಿದವರು ಕಂಡಂತೆ ಕಥೆ ಏನೆಂದರೆ...

    ರಘು(ರಿಷಬ್ ಶೆಟ್ಟಿ) ಮತ್ತು ರಿಚ್ಚಿ(ರಕ್ಷಿತ್ ಶೆಟ್ಟಿ) ಬಾಲ್ಯದ ಗೆಳೆಯರು. ಗೆಳೆಯನಿಗಾಗಿ ಒಬ್ಬನ ಕೊಲೆ ಮಾಡುವ ರಿಚ್ಚಿ ರಿಮ್ಯಾಂಡ್ ಹೋಮ್ ಸೇರುತ್ತಾನೆ, ಆ ಕೊಲೆಯಿಂದ ಹೆದರಿದ ರಘು ಮುಂಬೈ ಪಾಲಾಗುತ್ತಾನೆ. ಮುಂಬೈ ನ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು, ಕ್ರಮೇಣ ಒಂದು ಸ್ಮಗ್ಲಿಂಗ್ ಗ್ಯಾಂಗ್ ಸೇರಿಕೊಳ್ಳುತ್ತಾನೆ. ಅಮ್ಮನ ಪ್ರೀತಿ, ಊರಿನ ಮಮತೆ, ಗೆಳೆಯ ಎಲ್ಲರನ್ನೂ ಬಿಟ್ಟು ಹದಿನೈದು ವರ್ಷಗಳ ಕಾಲ ಮುಂಬೈನಲ್ಲಿ ಓಡುತ್ತಾನೆ.

    ತಾರಾ ಮನೋಜ್ಞ ಅಭಿನಯ

    ತಾರಾ ಮನೋಜ್ಞ ಅಭಿನಯ

    ಅದೇ ಸಂದರ್ಭದಲ್ಲಿ ಅಚಾನಕ್ ಆಗಿ ಸಿಗುವ ಐಶ್ವರ್ಯದ ಪ್ರತೀಕವಾದ 'ಅದು' ಅವನ ಕೈ ಸೇರುತ್ತದೆ. ತಮ್ಮ ಗುಂಪಿಗೆ ತಿಳಿಯದಂತೆ ಅದನ್ನು ಅಪಹರಿಸಿ ತನ್ನ ಹುಟ್ಟೂರಾದ ಮಲ್ಪೆಗೆ ಬರುತ್ತಾನೆ. ಆ ನಿಧಿಯನ್ನು ಪಡೆಯುವ ರೇಸ್ ನಲ್ಲಿರುವ ಎಲ್ಲರನ್ನೂ ಅವನಿಗೇ ಅರಿವಿಲ್ಲದೆ ಎದಿರುಗೊಳ್ಳುತ್ತಾನೆ. ತಾಯಿಯ ಪಾತ್ರದಲ್ಲಿ ತಾರಾ ಅವರ ನಟನೆ ಮನೋಜ್ಞವಾಗಿದೆ ಮತ್ತು ಅಮ್ಮ ಮಗನ ಸೆಂಟಿಮೆಂಟ್ ಬಹಳ ಅಚ್ಚುಕಟ್ಟಾಗಿ ವರ್ಕೌಟ್ ಆಗಿದೆ.

    ಗ್ಯಾಂಗ್ ಸ್ಟರ್ ಆಗಿ ಬೆಳೆಯು ರಿಚ್ಚಿ

    ಗ್ಯಾಂಗ್ ಸ್ಟರ್ ಆಗಿ ಬೆಳೆಯು ರಿಚ್ಚಿ

    ಇತ್ತ ಗೆಳೆಯನಿಗಾಗಿ ಕೊಲೆ ಮಾಡಿ 8 ವರ್ಷ ರಿಮ್ಯಾಂಡ್ ಹೋಮ್ ನಲ್ಲಿ ಕಳೆಯುವ ರಿಚ್ಚಿ ಒಬ್ಬ ತಿಕ್ಕಲು ಸ್ವಭಾವದ ಗ್ಯಾಂಗ್ ಸ್ಟರ್ ಆಗಿ ಬೆಳೆಯುತ್ತಾನೆ. ಮಲ್ಪೆಯ ಬಂದರುಗಳಲ್ಲಿ ಮೀನುಗಾರಿಕೆ ಮತ್ತು ಸ್ಮಗ್ಲಿಂಗ್ ಮಾಡಿಕೊಂಡಿರುವ ಶಂಕರ್ ಪೂಜಾರಿ ಸಹಜವಾಗೇ ರಿಚ್ಚಿಯ ಒತ್ತಾಸೆಯಾಗಿ ನಿಲ್ಲುತ್ತಾನೆ. ತನ್ನ ಮಗನಂತೆ ಬೆಳೆಸುತ್ತಾನೆ.

    ಕಥೆ ರೋಚಕವಾಗಿಯೂ ಸಾಗುತ್ತದೆ

    ಕಥೆ ರೋಚಕವಾಗಿಯೂ ಸಾಗುತ್ತದೆ

    ಇಷ್ಟರೆಲ್ಲದರ ನಡುವೆಯೂ ಹದಿನೈದು ವರ್ಷಗಳಿಂದಲೂ ಒಮ್ಮೆಯಾದರೂ ತನ್ನನ್ನು ನೋಡಲು ಬಾರದ ಗೆಳೆಯನ ಮೇಲೆ ಸಣ್ಣದಾದ ಅಸಹನೆಯೂ ಅವನನ್ನು ಬಾಧಿಸುತ್ತಿರುತ್ತದೆ. ಮಲ್ಪೆಗೆ ಗುಟ್ಟಾಗಿ ಹಿಂದಿರುಗಿರುವ ಗೆಳೆಯನನ್ನು ಮತ್ತೆ ಭೇಟಿ ಮಾಡುವ ರಿಚ್ಚಿಯೂ ಹೇಗೆ ಆ ಸಂಪತ್ತಿನ ಹಿಂದೆ ಬಿದ್ದಿರುತ್ತಾನೆ ಎಂಬುದು ಕಥೆಯ ರೋಚಕ ಅಂಶಗಳಲ್ಲೊಂದು.

    'ಫೀಲಿಂಗ್ಸ್'ಗಳಲ್ಲೇ ತೇಲಾಡುವ ಪ್ರಣಯರಾಜ

    'ಫೀಲಿಂಗ್ಸ್'ಗಳಲ್ಲೇ ತೇಲಾಡುವ ಪ್ರಣಯರಾಜ

    ಇಷ್ಟೆಲ್ಲಾ ಸೆಂಟಿಮೆಂಟ್ ಮತ್ತು ಥ್ರಿಲ್ಲರ್ ಗಳ ನಡುವೆ ಒಂದು ನವಿರಾದ ಪ್ರೇಮಕಥೆಯೂ ಇದೆ. ಅದರ ನಾಯಕನೇ ಮುನ್ನ (ಕಿಶೋರ್) ಅರ್ಥಾತ್ ಪ್ರಣಯರಾಜ. ಬೋಟ್ ರಿಪೇರಿ ಮಾಡುವ ಮೆಕ್ಯಾನಿಕ್ ಆದ ಮುನ್ನ ಬಾಲಣ್ಣ(ಅಚ್ಯುತ್)ನ ತಂಗಿ(ಯಜ್ಞಾ ಶೆಟ್ಟಿ)ಯ ಪ್ರೇಮ ಪಾಶಕ್ಕೆ ಬಿದ್ದಿರುತ್ತಾನೆ. ಅವಳ ನಗುವಿಗೆ ಹಗುರಾಗುವ ಅವನು, 'ಫೀಲಿಂಗ್ಸ್'ಗಳಲ್ಲೇ ತೇಲಾಡುತ್ತಾನೆ.

    ಕೋಲ್ಡ್ ಬ್ಲಡ್ಡೆಡ್ ಮರ್ಡರ್ ಗಳಿಗೆ ಸಾಕ್ಷಿಯಾಗುವ ಕಥೆ

    ಕೋಲ್ಡ್ ಬ್ಲಡ್ಡೆಡ್ ಮರ್ಡರ್ ಗಳಿಗೆ ಸಾಕ್ಷಿಯಾಗುವ ಕಥೆ

    ಒಮ್ಮೆಯೂ ಅವಳೊಂದಿಗೆ ಮಾತನಾಡುವುದಿಲ್ಲ! ತನಗೇ ಅರಿವಿಲ್ಲದೆ ಈ ಥ್ರಿಲ್ಲರ್ ಗಳ ಮಧ್ಯೆ ಸೇರಿಕೊಳ್ಳುತ್ತಾನೆ. ಮುಂದೆ ಕಥೆ ಮೂರು ಕೋಲ್ಡ್ ಬ್ಲಡ್ಡೆಡ್ ಮರ್ಡರ್ ಗಳಿಗೆ ಸಾಕ್ಷಿಯಾಗುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಅಂದ್ರೆ: ಯಾವ ಪಾತ್ರಗಳಿಗೂ ಯಾಕೆ, ಯಾರಿಗಾಗಿ, ಏನು ಮಾಡುತ್ತಿದ್ದೇವೆ ಎಂಬ ಕಲ್ಪನೆಯೇ ಇಲ್ಲದಂತೆ ಪ್ರತಿಯೊಂದು ಘಟನೆಗಳೂ ನಡೆದುಹೋಗುತ್ತವೆ. ಅದನ್ನು ಸಿನೇಮಾದಲ್ಲಿ ನೋಡಿದರೇನೆ ಮಜ.

    ರಿಚ್ಚಿಯ ಮ್ಯಾನರಿಸಂ ಬಹಳ ಇಷ್ಟ ಆಯ್ತು

    ರಿಚ್ಚಿಯ ಮ್ಯಾನರಿಸಂ ಬಹಳ ಇಷ್ಟ ಆಯ್ತು

    ಲೈವ್ ಸೌಂಡ್ ಮಿಕ್ಸಿಂಗ್ ಸೂಪರ್ ಆಗಿದೆ, ಕಣ್ಣಿಗೆ ಹಬ್ಬವೆನ್ನಿಸುವಂಥ ಕ್ಯಾಮೆರಾ ವರ್ಕ್, ಅದ್ಭುತವೆನ್ನಿಸುವ ಮೇಕಿಂಗ್ ಮತ್ತು ಹುಲಿ ಕುಣಿತ ಖುಷಿ ಕೊಟ್ಟವು. ಎಲ್ಲರ ಆಕ್ಟಿಂಗ್ ಚೆನ್ನಾಗಿದೆ. ತಾರಾ, ಅಚ್ಯುತ್ ಮತ್ತು ಕಿಶೋರ್ ರವರ ಅಭಿನಯ ಮತ್ತು ರಿಚ್ಚಿಯ ಮ್ಯಾನರಿಸಂ ಬಹಳ ಇಷ್ಟ ಆಯ್ತು.

    ಚಿತ್ರಕತೆ ಸ್ವಲ್ಪ ಸ್ಲೋ ಮತ್ತು ಲ್ಯಾಗ್ ಆದಂತಿದೆ

    ಚಿತ್ರಕತೆ ಸ್ವಲ್ಪ ಸ್ಲೋ ಮತ್ತು ಲ್ಯಾಗ್ ಆದಂತಿದೆ

    ಇನ್ನು ನೆಗೆಟೀವ್ ಅಂಶಗಳಿಗೆ ಬರುವುದಾದರೆ, ಚಿತ್ರಕತೆ ಸ್ವಲ್ಪ ಸ್ಲೋ ಮತ್ತು ಲ್ಯಾಗ್ ಆದಂತೆನ್ನಿಸುತ್ತದೆ. ಪ್ರೇಕ್ಷಕನ ಮನಸ್ಸಿನಲ್ಲಿ ಕನ್'ಫ್ಯೂಶನ್ ಗಳನ್ನು ರೆಜಿಸ್ಟರ್ ಮಾಡಿಸುವ ಭರದಲ್ಲಿ ತುಂಬಾ ರಿಸ್ಕ್ ತೆಗೆದುಕೊಂಡಂತನ್ನಿಸುತ್ತದೆ. ಪ್ರೇಕ್ಷಕ ಒಮ್ಮೆ ತನ್ನ ಇಂಟರೆಸ್ಟ್ ಕಳೆದುಕೊಂಡರೆ ಸಿನೇಮಾ ಅವನಿಗೆ ರೀಚ್ ಆಗದೆ ಇರಬಹುದಾದ ಸಾಧ್ಯತೆಯಿದೆ. ಒಂದಷ್ಟು ಡೈಲಾಗ್ ಗಳನ್ನು ಅರ್ಥ ಮಾಡಿಕೊಳ್ಳಲು ಮಂಗಳೂರು ಭಾಗದವರಲ್ಲದ ಪ್ರೇಕ್ಷಕರು ಕಷ್ಟಪಡಬೇಕಾಗಬಹುದು.

    ತೇಜಸ್ವಿಯವರ 'ಜುಗಾರಿ ಕ್ರಾಸ್' ಶೇಡ್

    ತೇಜಸ್ವಿಯವರ 'ಜುಗಾರಿ ಕ್ರಾಸ್' ಶೇಡ್

    ಒಟ್ಟಾರೆಯಾಗಿ, ಸಿನೇಮಾವನ್ನು ನೋಡಿದ ಪ್ರೇಕ್ಷಕನಲ್ಲಿ ಇಂಗ್ಲಿಷ್ ಸಿನೆಮಾ, 'ವಾಂಟೇಜ್ ಪಾಯಿಂಟ್'ನ ಶೇಡ್ ಕಾಣಿಸಬಹುದು. ಇನ್ನೊಂದು ಕುತೂಹಲದ ಸಂಗತಿ ಎಂದರೆ ನಾನು ಕಂಡಂತೆ ಸಿನೆಮಾದಲ್ಲಿ ತೇಜಸ್ವಿಯವರ 'ಜುಗಾರಿ ಕ್ರಾಸ್' ಕಾದಂಬರಿಯ ಶೇಡ್ ಕೂಡ ಕಾಣಿಸುತ್ತದೆ. 'ಅದು' ಮಾತ್ರ ಕೊನೆಗೂ ಏನೆಂದು ತಿಳಿಯಲಾಗದ್ದು ಸಿನೇಮಾ ಅಪೂರ್ಣವಾದಂಥ ಫೀಲ್ ಕೊಡುತ್ತದೆ. ನಾನು ಈ ಪ್ರಯೋಗಾತ್ಮಕ ಪರಿಕಲ್ಪನೆಗೆ ಮತ್ತು ರಕ್ಷಿತ್ ಶೆಟ್ಟಿಯ ಫಿಲ್ಮ್ ಮೇಕಿಂಗ್ ಗೆ 4/5(★★★★) ಕೊಡುತ್ತೇನೆ.

    English summary
    Read one more review on Kannada movie 'Ulidavaru Kandante' by 'Manjina Hani' (Dewdrop) blog. A delightful watch and visual excellence says the blogger, also gives four star rating.
    Tuesday, April 1, 2014, 16:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X