For Quick Alerts
  ALLOW NOTIFICATIONS  
  For Daily Alerts

  'ಜೂಮ್' ಲೆನ್ಸ್ ಹಾಕಿ ನೋಡಿದ ವಿಮರ್ಶಕರಿಗೆ ಕಂಡಿದ್ದೇನು?

  By Suneetha
  |

  ಸಂಪೂರ್ಣ ವಯಸ್ಕರ ಕಾಮಿಡಿ ಕಿಕ್ ನೀಡಿರುವ 'ಜೂಮ್' ಚಿತ್ರ ನಿದ್ದೆಯಲ್ಲಿರುವವರನ್ನು ಎಬ್ಬಿಸಿ ಸಖತ್ ಕಿಕ್ ಕೊಟ್ಟಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಧಿಕಾ ಪಂಡಿತ್ ಜೋಡಿಯ ಮೋಡಿಗೆ ಪಡ್ಡೆ ಹೈಕಳು ಮನಸೋತಿದ್ದಾರೆ.

  ಒಟ್ನಲ್ಲಿ ಪಡ್ಡೆ ಹೈಕಳು ಬಿದ್ದು-ಬಿದ್ದು ನಗುವಂತೆ ಮಾಡಿದ ಪಕ್ಕಾ ಕಾಮಿಡಿ ಎಂರ್ಟಟೈನ್ ಮೆಂಟ್ 'ಜೂಮ್' ಚಿತ್ರದ ಬಗ್ಗೆ ಬರೀ ಸಿನಿಪ್ರೀಯರು ಮಾತ್ರವಲ್ಲದೇ ವಿಮರ್ಶಕರು ಕೂಡ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಚಿತ್ರ ವಿಮರ್ಶೆ: 'Zooಮ್' ಮಾಡಿ ನೋಡಿದ್ರೂ, 'ಜುಮ್' ಎನಿಸದು.!]

  ಪ್ರಶಾಂತ್ ರಾಜ್ ನಿರ್ದೇಶನ ಮಾಡಿದ್ದ 'ಜೂಮ್' ಚಿತ್ರ ನಿನ್ನೆ (ಜುಲೈ 1) ಇಡೀ ಕರ್ನಾಟಕ ಸೇರಿದಂತೆ ವಿದೇಶಗಳಲ್ಲೂ ಏಕಕಾಲದಲ್ಲಿ ತೆರೆ ಕಂಡಿದ್ದು, ಮೊದಲ ದಿನವೇ ಒಳ್ಳೆ ಕಲೆಕ್ಷನ್ ಮಾಡಿದೆ.[ಕನ್ನಡದಲ್ಲಿ ಮಾತ್ರ ಅಲ್ಲ, ಫ್ರೆಂಚ್ ಭಾಷೆಯಲ್ಲೂ 'ಜೂಮ್' ಮಾಡಿ ನೋಡಿ]

  ನಟ ಗೋಲ್ಡನ್ ಸ್ಟಾರ್ ಗಣೇಶ್, ನಟಿ ರಾಧಿಕಾ ಪಂಡಿತ್, ನಟ ಕಾಶೀನಾಥ್, ಸಾಧು ಕೋಕಿಲಾ ಮುಂತಾದವರು ಕಾಣಿಸಿಕೊಂಡಿದ್ದ 'ಜೂಮ್' ಚಿತ್ರಕ್ಕೆ ಖ್ಯಾತ ಕನ್ನಡ ವಿಮರ್ಶಕರು ಏನು ಹೇಳಿದ್ದಾರೆ ಅನ್ನೋದನ್ನು ನೋಡೋಣ ಕೆಳಗಿನ ಸ್ಲೈಡುಗಳಲ್ಲಿ.....

  'ಮ್ಯಾಜಿಕ್ ಜೂಮ್' - ವಿಜಯ ಕರ್ನಾಟಕ

  'ಮ್ಯಾಜಿಕ್ ಜೂಮ್' - ವಿಜಯ ಕರ್ನಾಟಕ

  ಇಡೀ ಸಿನಿಮಾವನ್ನು ಕಲರ್‌ಫುಲ್‌ ಆಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್‌ ರಾಜ್‌. ಇಟಲಿ, ಬೆಂಗಳೂರು ಮತ್ತಿತರ ಸುಂದರ ಸ್ಥಳಗಳಲ್ಲಿ ಶೂಟ್‌ ಮಾಡಿರುವುದರಿಂದ ಬಾಲಿವುಡ್‌ ಚಿತ್ರಕ್ಕೆ ಕಡಿಮೆ ಇಲ್ಲ ಅನ್ನುವಂತೆ ಪ್ರತಿ ದೃಶ್ಯ ಕಾಣುತ್ತದೆ. ಆದರೆ, ಎಡವಟ್ಟು ಮಾಡಿಕೊಂಡಿದ್ದು ಚಿತ್ರಕತೆಯಲ್ಲಿ. ಲಾಜಿಕ್‌ಗೆ ಯಾವುದೇ ಅವಕಾಶ ಕೊಡದೇ, ಕೇವಲ ಮ್ಯಾಜಿಕ್‌ ಮಾಡಿದ್ದಾರೆ ನಿರ್ದೇಶಕರು. ಹೀಗಾಗಿ ಚಿತ್ರದ ಮೊದಲರ್ಧ ತಮಾಷೆ, ದ್ವಿತೀಯಾರ್ಧದಲ್ಲಿ ಹೆಚ್ಚು ಡಬಲ್ ಮೀನಿಂಗ್ ಗೆ ಪ್ರಾಶಸ್ತ್ಯವಿದೆ. ಅದರಲ್ಲೂ ಸಾಧು ಕೋಕಿಲಾ ಪಾತ್ರವನ್ನು ಡಬಲ್ ಮೀನಿಂಗ್ ಗಾಗಿಯೇ ಸೃಷ್ಟಿ ಮಾಡಿದಂತಿದೆ. ಸಿಂಗಲ್‌ ಮೀನಿಂಗ್ ನಲ್ಲೇ ಕಾಶೀನಾಥ್‌ ಗಮನ ಸೆಳೆಯುತ್ತಾರೆ. -ಶರಣು ಹುಲ್ಲೂರು. ರೇಟಿಂಗ್ : 3/5.

  ನಗು ಮತ್ತು ಏನೆಲ್ಲ...-ಪ್ರಜಾವಾಣಿ

  ನಗು ಮತ್ತು ಏನೆಲ್ಲ...-ಪ್ರಜಾವಾಣಿ

  ‘ಜೂಮ್'ನಲ್ಲಿ ಗಟ್ಟಿಯಾದ ಕಥೆ ಕಾಣದು. ಇರುವ ಅಲ್ಪಸ್ವಲ್ಪ ಕಥೆಯನ್ನು ಹೇಳಲು ನಿರ್ದೇಶಕ ಪ್ರಶಾಂತ್ ರಾಜ್ ಕಾಮಿಡಿ ಶೈಲಿ ಆಯ್ದುಕೊಂಡಿದ್ದಾರೆ. ಇದರಲ್ಲಿ ಹಲವು ದ್ವಂದ್ವಾರ್ಥದ ಸಂಭಾಷಣೆಗಳಿವೆ; ಅದಕ್ಕೂ ಹೆಚ್ಚು ‘ಏಕಾರ್ಥ'ದ ಮಾತುಗಳಿವೆ. ಹೀಗಾಗಿ ನಿಮಿಷಕ್ಕೊಮ್ಮೆ ಪಡ್ಡೆಹುಡುಗರ ಶಿಳ್ಳೆ, ಕೇಕೆ, ನಗು ಕೇಳಿಸುತ್ತಲೇ ಇರುತ್ತದೆ. ಸಿನಿಮಾವನ್ನು ಹಾಸ್ಯದ ಹೊನಲಿನಲ್ಲಿ ಮುಳುಗಿಸಬೇಕು ಎಂಬ ನಿರ್ದೇಶಕರ ನಿಲುವು ತಪ್ಪೇನಲ್ಲ. ಆದರೆ ಅವರು ಅದಕ್ಕಾಗಿ ಆಯ್ದುಕೊಂಡ ದಾರಿ ಕೆಲವರಿಗೆ ಅಸಹನೀಯ ಅನಿಸಬಹುದೇನೋ? ತುಂಟತನ ಹಾಗೂ ಪೋಲಿತನ - ಇವೆರಡಕ್ಕೂ ಇಲ್ಲಿ ಯಥೇಚ್ಛ ಅವಕಾಶ ಸಿಕ್ಕಿದೆ. -ಆನಂದತೀರ್ಥ ಪ್ಯಾಟಿ.

  ಸಿಂಪಲ್ಲಾಗ್ ಇನ್ನೊಂದು ಕಾಮಿಡಿ - ಉದಯವಾಣಿ

  ಸಿಂಪಲ್ಲಾಗ್ ಇನ್ನೊಂದು ಕಾಮಿಡಿ - ಉದಯವಾಣಿ

  'ಬೇಸಿಕಲಿ ನಾನು ಲಗೋರಿ ಪ್ಲೇಯರ್...ಆರು ಕಲ್ಲಿಗೇ ಗುರಿ ಇಟ್ಟು ಹೊಡೆಯೋನು ನಾನು, ಇನ್ನು ಆರಡಿ ದೇಹನಾ ಹೊಡೆಯಲ್ವಾ..?- ಈ ಡೈಲಾಗ್ ಬೀಳುತ್ತಿದ್ದಂತೆಯೇ, ಇಡೀ ಚಿತ್ರಮಂದಿರದಲ್ಲಿ ಶಿಳ್ಳೆ, ಚಪ್ಪಾಳೆಗಳ ಸದ್ದು. ಈ ಮಾಸ್ ಡೈಲಾಗ್ ಗಳಿಗಷ್ಟೇ ಅಲ್ಲ, ಆರಂಭದಿಂದ ಅಂತ್ಯದವರೆಗೂ ಕೇಳಿಬರುವ ಸಿಂಗಲ್ಲು, ಡಬ್ಬಲ್ಲು ಮೀನಿಂಗ್ ಮಾತುಗಳಿಗೂ ಭರಪೂರ ಚಪ್ಪಾಳೆಗಳ ಸುರಿಮಳೆ. ಇಲ್ಲಿ ಎಲ್ಲವನ್ನೂ 'ಜೂಮ್' ಹಾಕಿಯೇ ನೋಡಬೇಕಿಲ್ಲ. ಎಲ್ಲವೂ ಟ್ರಾನ್ಸ್ ಪರೆಂಟ್ ಆಗಿಯೇ ಕೇಳಿಸುತ್ತೆ, ನೋಡಿಸುತ್ತೆ! ಹಾಗಾಗಿ ಜೂಮ್ ಜಾಲಿಮೂಡ್ ನಲ್ಲೇ ಸಾಗುತ್ತೆ. ಅಲ್ಲಲ್ಲಿ ಒಂದಷ್ಟು ಫೀಲಿಂಗು ಅನ್ನೋದು ಬಿಟ್ಟರೆ, ಚಿತ್ರದ ತುಂಬೆಲ್ಲಾ ನಗುವಿಗಷ್ಟೇ ಜಾಗ. - ವಿಜಯ್ ಭರಮಸಾಗರ.

  'ಬತ್ತಾಸ್ ಕೊಡುವ ಡಬಲ್ ಕಿಕ್' - ಕನ್ನಡ ಪ್ರಭ

  'ಬತ್ತಾಸ್ ಕೊಡುವ ಡಬಲ್ ಕಿಕ್' - ಕನ್ನಡ ಪ್ರಭ

  ಕನ್ನಡ ಸಿನಿಮಾ ನೋಡುವ ಪ್ರೇಕ್ಷಕನಿಗೆ 'ಲೂಸಿಯಾ' ಮಾತ್ರೆ ಸಿಕ್ಕಾಪಟ್ಟೆ ಕಿಕ್ ನೀಡಿ ನಿದ್ರೆ ತರಿಸಿದ್ದು ಈ ಹಿಂದಿನ ಕತೆ. ಈಗ ನಿರ್ದೇಶಕ ಪ್ರಶಾಂತ್ ರಾಜ್ ಸೃಷ್ಟಿಸಿರುವ 'ಜೂಮ್' ಬತ್ತಾಸ್ ಪ್ರೇಕ್ಷಕರನ್ನು ಎಚ್ಚರಿಸಿ, ಕಿಕ್ ನೀಡುತ್ತದೆ. ಕಾಮೋದ್ರೇಕ ಬತ್ತಾಸ್ ಮಹಿಮೆ ಇಲ್ಲಿ ಭರ್ಜರಿ ಆಗಿಯೇ ಇದೆ. ಆ ಮಟ್ಟಿಗೆ ಜೂಮ್ ವಯಸ್ಕರ ಚಿತ್ರದಂತೆ ಕಂಡರೂ ಮನರಂಜನೆಗೆ ಕೊರತೆ ಇಲ್ಲ. -ದೇಶಾದ್ರಿ ಹೊಸ್ಮನೆ. ರೇಟಿಂಗ್: 3/5.

  'ಜೂಮ್' ಎಂಬ ಡಬಲ್ ಡೋಸ್ ಗುಳಿಗೆ- ವಿಜಯವಾಣಿ

  'ಜೂಮ್' ಎಂಬ ಡಬಲ್ ಡೋಸ್ ಗುಳಿಗೆ- ವಿಜಯವಾಣಿ

  ಗಟ್ಟಿ ಕಥೆಯನ್ನು ಬದಿಗಿಟ್ಟು ಬರೀ ಹಾಸ್ಯ ಸನ್ನಿವೇಶಗಳನ್ನೇ ಪೋಣಿಸಿ, ಮತ್ತದಕ್ಕೆ ಪೂರಕವಾಗಿ ಡಬಲ್ ಮೀನಿಂಗ್ ಡೈಲಾಗ್ ಗಳನ್ನು ಸೇರಿಸಿ 'ಜೂಮ್' ಮೂಲಕ ಮನರಂಜನೆ ಉಣಬಡಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್. ಹೆದ್ದಾರಿಯಾಗಲಿ ಅಥವಾ ಅಡ್ಡದಾರಿಯಾಗಲಿ ಗುರಿ ಮುಖ್ಯ ಎಂದು ನಂಬಿರುವ ಸಂತೋಷ್ (ಗಣೇಶ್) ಮತ್ತು ನ್ಯೂಮರಾಲಜಿ ನಂಬರ್ ಗಿಂತ ನನ್ನ ನಂಬರ್ ಮುಖ್ಯ' ಎನ್ನುವ ನೈನಾ (ರಾಧಿಕಾ ಪಂಡಿತ್), ಜಾಹೀರಾತು ಕಂಪನಿಗಳಲ್ಲಿ ಕೆಲಸ ಮಾಡುತ್ತ ಸ್ಪರ್ಧೆಗಿಳಿಯುತ್ತಾರೆ. 'ಜೂಮ್' ಹೆಸರಿನ ಕಾಮೋತ್ತೇಜಕ ಗುಳಿಗೆಯ ಪ್ರಾಜೆಕ್ಟ್ ಕೈವಶ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಲೇ ಇಬ್ಬರೂ ಪ್ರೀತಿಗೆ ಬೀಳುತ್ತಾರೆ. ಮುಂದೇನಾಗುತ್ತೆ ಅನ್ನೋದೇ ಕ್ಲೈಮ್ಯಾಕ್ಸ್ ಕೌತುಕ.

  English summary
  Kannada Movie 'Zoom' Critics Review. Kannada Actor Ganesh, Kannada Actress Radhika Pandit starrer 'Zoom' has received mixed response from the critics. Here is the collection of reviews by Top News Papers of Karnataka. The movie is directed by Prashanth Raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X