»   » ಸ್ವತಂತ್ರಪೂರ್ವದ '1944' ಚಿತ್ರಕ್ಕೆ ವಿಮರ್ಶಕರು ಸಲಾಂ ಎಂದ್ರಾ.?

ಸ್ವತಂತ್ರಪೂರ್ವದ '1944' ಚಿತ್ರಕ್ಕೆ ವಿಮರ್ಶಕರು ಸಲಾಂ ಎಂದ್ರಾ.?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ನಾಟಕಗಳನ್ನು ಆಧರಿಸಿದ ಹಲವಾರು ಕನ್ನಡ ಸಿನಿಮಾಗಳು ಈಗಾಗಲೇ ಬರುತ್ತಿವೆ, ಬಂದು ಹೋಗಿವೆ. ಅಂದಹಾಗೆ ರಂಗ ಪ್ರಯೋಗಕ್ಕೂ, ಸಿನಿಮಾ ಶೈಲಿಗೂ ಇರುವ ವ್ಯತ್ಯಾಸವನ್ನು ತಿಳಿಯದೇ ಸಿನಿಮಾ ಮಾಡಿದರೆ ಯಶಸ್ಸು ಅನ್ನೋದು ಕನಸಿನ ಮಾತು.

  ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರ ಕಂಪೆನಿಯ ವಿರುದ್ಧ ಹೋರಾಡುವ ಸ್ವಾತಂತ್ರ ಹೋರಾಟಗಾರರ ಕಥೆಯಾಧರಿತ '1944' ಚಿತ್ರ ನಿನ್ನೆ (ಆಗಸ್ಟ್ 5) ಇಡೀ ಕರ್ನಾಟಕದಾದ್ಯಂತ ತೆರೆ ಕಂಡಿದೆ.


  ಇಷ್ಟು ದಿನ ಸ್ಟಿಲ್ ಫೋಟೋಗ್ರಾಫರ್ ಆಗಿದ್ದ ಬದರಿನಾಥ್ ಅವರ ಚೊಚ್ಚಲ ನಿರ್ದೇಶನದ '1944' ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗೆ ಒಳಗಾಗಿದೆ. ಎನ್.ಎಸ್.ರಾವ್ ಅವರ 'ರೊಟ್ಟಿ ಋಣ' ನಾಟಕವನ್ನು ಸಿನಿಮಾ ಮಾಡಿರುವ ಬದರಿನಾಥ್ ಅವರು ಅಲ್ಲಲ್ಲಿ ಕೊಂಚ ಎಡವಿದ್ದಾರೆ.


  ನಟ ನವೀನ್ ಕೃಷ್ಣ, ನಟಿ ಶ್ರುತಿ, ನಟಿ ಭವ್ಯ, ನಟಿ ಶಿವಾನಿ ಮತ್ತು ನಟ ಸುಚೇಂದ್ರ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ '1944' ಚಿತ್ರಕ್ಕೆ ವಿಮರ್ಶಕರ ವ್ಯಕ್ತಪಡಿಸಿರುವ ವಿಮರ್ಶೆಯ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....


  'ದೊಡ್ಡ ಸಂಗ್ರಾಮದೊಳಗಿನ ಸಣ್ಣಕಥೆ'- ವಿಜಯವಾಣಿ

  ಬ್ರಿಟಿಷರ ವಿರುದ್ಧ ಹೋರಾಡಿದ ಎಲ್ಲರನ್ನೂ ಸ್ಮರಿಸುತ್ತ ಸ್ವಾತಂತ್ರೋತ್ಸವ ಆಚರಿಸಲು ಇಡೀ ಭಾರತವೇ ಸಜ್ಜಾಗುತ್ತಿದೆ. ಈ ಸಂದರ್ಭಕ್ಕೆ ಸರಿಯಾಗಿ ಥಿಯೇಟರ್​ಗೆ ಬಂದಿದೆ ‘1944' ಚಿತ್ರ. ಅಂದಿನ ಕಥೆಯನ್ನು ಇಂದಿನ ಪೀಳಿಗೆಗೆ ಮತ್ತೊಮ್ಮೆ ನೆನಪಿಸಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಬದರಿನಾಥ್. ಇಲ್ಲಿನ ಕಥಾನಾಯಕ ದುಗ್ಗಪ್ಪ (ನವೀನ್ ಕೃಷ್ಣ). ಹೋರಾಟದ ಗುಣ ರಕ್ತದ ಪ್ರತಿ ಕಣದಲ್ಲಿ ಬೆರೆತಿದೆಯೋನೋ ಎಂಬಷ್ಟು ದೇಶಭಕ್ತಿ ಆತನದ್ದು. ತೀವ್ರ ಬಡತನದಲ್ಲಿಯೂ ದೇಶಕ್ಕಾಗಿ ಪ್ರಾಣಕೊಡಲು ಆತನ ತಾಯಿ (ಭವ್ಯಾ) ಸದಾ ಸಿದ್ಧ. ಹೋರಾಡುವಾಗಲೇ ಆಕೆ ಕೊನೆಯುಸಿರೆಳೆಯುತ್ತಾಳೆ. ನಂತರ ದುಗ್ಗಪ್ಪನೂ ಪೊಲೀಸರ ವಶವಾಗುತ್ತಾನೆ. ಆದರೆ ಪೊಲೀಸ್ ಆಧಿಕಾರಿಯ ಹೆಂಡತಿಯೇ (ಶ್ರುತಿ) ದುಗ್ಗಪ್ಪನ ಚಳವಳಿಗೆ ಬೆಂಬಲ ನೀಡುವುದು ಇಲ್ಲಿನ ವಿಶೇಷ. ಆಕೆ ನಡೆಯಲ್ಲಿ ಏನಾದರೂ ಹುನ್ನಾರವಿದೆಯೇ? ಆತ ಹೋರಾಟದಲ್ಲಿ ಯಶಸ್ಸು ಗಳಿಸುತ್ತಾನೋ ಇಲ್ಲವೋ ಎಂಬುದೇ ಕಥಾ ಕೌತುಕ.


  'ತೆರೆಯ ಮೇಲೊಂದು ನಾಟಕ'- ವಿಜಯ ಕರ್ನಾಟಕ

  ಸ್ವಾತಂತ್ರ್ಯದ ಕೂಗು ಎಲ್ಲೆಡೆ ಜೋರಾಗಿದ್ದ ದಿನಗಳು 1944 ವರ್ಷ. ಆದರೆ, ಸಿನಿಮಾದಲ್ಲಿ ಆ ತೀವ್ರತೆ ಕಾಣುವುದೇ ಇಲ್ಲ. ಚಿತ್ರದಲ್ಲಿ ಒಂದೆರಡು ಬಾರಿ ಗುಂಪಿನಲ್ಲಿ ಮಾತನಾಡುವುದು, ಕಂದಾಯ ವಸೂಲಿಗಾರರನ್ನು ಲೂಟಿ ಮಾಡುವುದನ್ನು ಯಾಂತ್ರಿಕವಾಗಿ ತೋರಿಸಿರೋದ್ರಿಂದ ನಾಯಕನ ಹೋರಾಟ ಮನೋಭಾವ ನೋಡುಗರ ಹೃದಯವನ್ನು ತಟ್ಟುವುದಿಲ್ಲ. ಅತ್ಯುತ್ತಮ ಕಲಾವಿದರಿದ್ದರೂ ನಟನೆಯ ರಸಾನುಭವ ಆಗುವುದಿಲ್ಲ. ನವೀನ್ ಕೃಷ್ಣ ಅಸಹಾಯಕತೆಯಿಂದ ನಟಿಸಿರುವಂತೆ ಕಾಣುತ್ತದೆ. ಶ್ರುತಿ ಅಭಿನಯ ಪರವಾಗಿಲ್ಲ. ಕಮರ್ಷಿಯಲ್ ಚಿತ್ರಗಳ ಮಧ್ಯೆ ಸ್ವಾತಂತ್ರ್ಯ ಹೋರಾಟದ ಕತೆಯನ್ನು ಆಯ್ಕೆ ಮಾಡಿರುವುದಕ್ಕೆ ನಿರ್ದೇಶಕ ಬದ್ರಿನಾಥ್ ರನ್ನು ಪ್ರಶಂಸಿಸಬಹುದಾದರೂ, ಅದನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಸೋತಿರುವುದು ವಿಷಾದನೀಯ. - ಪದ್ಮಾ ಶಿವಮೊಗ್ಗ.


  'ದೇಶಪ್ರೇಮದ ನೆರಳು ದಾಂಪತ್ಯದ ಉರುಳು' -ಉದಯವಾಣಿ

  'ಬಚ್ಚಲು ಮನೆಯಲ್ಲಿ ಅರ್ಧ ತಿಂದು ಬಿಟ್ಟ ರೊಟ್ಟಿಯ ತಟ್ಟೆ. ಈ ಕಡೆ ಜಗುಲಿಯಲ್ಲಿ ರಕ್ತದ ಹನಿ, ತಡಬಡಿಸುತ್ತಾ ಗಾಬರಿಯಲ್ಲಿರುವ ಹೆಂಡತಿ..ಗಂಡನ ಪೊಲೀಸ್ ಬುದ್ಧಿ ಜಾಗೃತವಾಗುತ್ತದೆ. ಮನೆಗೆ ಯಾರೋ ಬಂದು ಹೋಗಿದ್ದಾರೆಂಬ ಅನುಮಾನ ಬಲವಾಗುತ್ತದೆ. ಕೇಳಿದರೆ ಹೆಂಡತಿ ಬಾಯಿ ಬಿಡುತ್ತಿಲ್ಲ. ಹೇಗಾದರೂ ಮಾಡಿ ಬಾಯಿ ಬಿಡಿಸಬೇಕು. ಕೈ ಕೆನ್ನೆ ಮೇಲೆ ಹೋಗುತ್ತೆ. ಅಷ್ಟೊತ್ತಿಗೆ ಬಾಗಿಲ ಬಳಿ ನಿಂತು 'ಸಾಹೇಬ್ರಾ' ಎಂದು ಆ ವ್ಯಕ್ತಿ ಕೂಗುತ್ತಾನೆ. ಆ ವ್ಯಕ್ತಿಗೂ ಆ ಮನೆಗೂ ಏನು ಸಂಬಂಧ, ಯಾಕಾಗಿ ಬಾಗಿಲ ಬಳಿ ಬಂದ ಎಂಬ ಕುತೂಹಲ ನಿಮಗಿರಬಹುದು. ಆ ಕುತೂಹಲ ತಣಿಸಲು ನೀವು '1944' ಚಿತ್ರಕ್ಕೆ ಹೋಗಬಹುದು.- ರವಿಪ್ರಕಾಶ್ ರೈ.


  'ನಡೆದಿದ್ದು ನಿಜ ಐತ್ರಿ, ಆದ್ರೆ ನೋಡಾಕ್ ಭಾಳ ತ್ರಾಸ್ ಆಗತೈತ್ರಿ'-ಕನ್ನಡ ಪ್ರಭ

  ಕಾಡಿಸುವ ಕಥೆಯಾದರೂ ನೋಡುವುದೇ ವ್ಯಥೆ. '1994' ಚಿತ್ರ ನೋಡಿದವರಿಗೆ ತಕ್ಷಣ ಅನಿಸುವುದು ಹೀಗೆ. ಇಲ್ಲಿ ದೇಶ ಪ್ರೇಮಕ್ಕಾಗಿ ಹೋರಾಡುವ ನಾಯಕನಿಗೆ ತನ್ನ ತಾಯಿಯೂ ಅಷ್ಟೇ ಮುಖ್ಯವಾಗಿರುತ್ತಾಳೆ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಆತ, ತಾಯಿಯ ಆಸರೆಯಲ್ಲಿ ಬೆಳೆದು ಬಂದವನು. ಕೊನೆಗೆ ತನ್ನ ಹೋರಾಟದಲ್ಲಿ ವೈರಿಗಳೇ ಆದ ಬ್ರಿಟಿಷ್ ಕೈ ಕೆಳಗಿನ ಪೊಲೀಸರಿಂದಲೇ ಆಕೆ ಸಾವಿಗೀಡಾದಾಗ, ಆತನಿಗೆ ದಿಕ್ಕು ತೋಚದಂತಾಗುತ್ತದೆ. ಒಂದೆಡೆ ತಾಯಿಯನ್ನು ಕಳೆದುಕೊಂಡ ದುಃಖ, ಮತ್ತೊಂದೆಡೆ ಪೊಲೀಸರ ಕೈಗೆ ಸಿಕ್ಕಿ ಸಿಲುಕಿ ಸ್ವಾತಂತ್ರಕ್ಕಾಗಿ ಹೋರಾಡಬೇಕೆನ್ನುವ ತುಡಿತಕ್ಕೆ ಬಿದ್ದು ಹೊಡೆತ. ಇಂತ ಕತೆಗೆ ನಿರ್ದೇಶಕರ ನಿರೂಪಣೆಯ ಧಾಟಿ ಮಾತ್ರ ಪೇಲವ. -ದೇಶಾದ್ರಿ ಹೊಸ್ಮನೆ.


  English summary
  Kannada Movie '1944' Critics review. Kannada Actor Naveen Krishna, Actress Shivani, Actress Shruthi, Actor Suchendra Prasad starrer '1944' has received mixed response from the critics. Here is the collection of reviews by Top News Papers of Karnataka. The movie is directed by debut Badri.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more