»   » ಭೂತದ ಚೇಷ್ಟೆ ನೋಡಿದ ವಿಮರ್ಶಕರು ಭಯಪಟ್ರಾ.?

ಭೂತದ ಚೇಷ್ಟೆ ನೋಡಿದ ವಿಮರ್ಶಕರು ಭಯಪಟ್ರಾ.?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ರಿಯಲ್ ಸ್ಟಾರ್ ಉಪೇಂದ್ರ, ನಟಿ ಅವಂತಿಕಾ ಶೆಟ್ಟಿ ಮತ್ತು ನಟಿ ಪ್ರಿಯಾಮಣಿ ಕಾಣಿಸಿಕೊಂಡಿದ್ದ ಹಾರರ್-ಥ್ರಿಲ್ಲರ್ 'ಕಲ್ಪನಾ 2' ನಿನ್ನೆ (ಜುಲೈ 15) ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಂಡಿದೆ.

  ಅಂದಹಾಗೆ ಫಸ್ಟ್ ಡೇ ಫಸ್ಟ್ ಶೋ ನೋಡಿದ ಸಿನಿ ಪ್ರಿಯರು ಕೆಲವರು ಚೆನ್ನಾಗಿದೆ ಅಂದ್ರೆ, ಇನ್ನೂ ಕೆಲವರು ಚೆನ್ನಾಗಿಲ್ಲ ಎಂದಿದ್ದಾರೆ. ಆದರೆ ರಿಯಲ್ ಸ್ಟಾರ್ ಉಪ್ಪಿ ಅವರ ಕಟ್ಟಾ ಅಭಿಮಾನಿಗಳು ಮಾತ್ರ ಸೂಪರ್-ಡೂಪರ್ ಹಿಟ್, ಬಾಸ್ ಸೂಪರ್ ಅಂತ್ಹೆಲ್ಲಾ ಕಾಮೆಂಟ್ ಮಾಡಿದ್ದಾರೆ.


  ತಮಿಳಿನ 'ಕಾಂಚನಾ 2' ರೀಮೇಕ್ ಆಗಿದ್ದ 'ಕಲ್ಪನಾ 2' ಚಿತ್ರಕ್ಕೆ ಕನ್ನಡದ ಖ್ಯಾತ ವಿಮರ್ಶಕರು ಮಾತ್ರ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ತಮಿಳಿನ 'ಕಾಂಚನಾ 2' ಸಿನಿಮಾ ನೋಡದವರು ಖಂಡಿತ ಈ ಸಿನಿಮಾ ನೋಡಿ ಎಂಜಾಯ್ ಮಾಡಬಹುದು ಅಂತ ಇನ್ನೂ ಕೆಲವರು ಒಳ್ಳೆ ರೀತಿಯಲ್ಲಿ ವಿಮರ್ಶೆ ಬರೆದಿದ್ದಾರೆ.[ಚಿತ್ರ ವಿಮರ್ಶೆ: ಭೀಕರ, ಭಯಂಕರ, 'ಕಲ್ಪನಾ-2' ಥರ ಥರ.!]


  ಅದೇನೇ ಇರಲಿ ನಿರ್ದೇಶಕ ಆರ್.ಅನಂತರಾಜು ಆಕ್ಷನ್-ಕಟ್ ಹೇಳಿರುವ 'ಕಲ್ಪನಾ 2' ಚಿತ್ರದ ಬಗ್ಗೆ ವಿಮರ್ಶಕರು ನೀಡಿರುವ ವಿಮರ್ಶೆಗಳ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋಗಿ...


  'ಅತಿಮಾನುಷ ಶಕ್ತಿಗಳ ಅಬ್ಬರ' - ವಿಜಯವಾಣಿ

  ದೆವ್ವ ಎಂದಕೂಡಲೇ ಡೈಪರ್ ಹಾಕ್ಕೊಂಡು ಮಲಗುವಷ್ಟು ಪುಕ್ಕಲ ರಾಘವ (ಉಪೇಂದ್ರ), ನ್ಯೂಸ್ ಚಾನೆಲ್​ವೊಂದರಲ್ಲಿ ಕ್ಯಾಮರಾಮನ್ ಆಗಿರುತ್ತಾನೆ. ಅದೇ ಚಾನಲ್​ನ ಕಾರ್ಯಕ್ರಮ ನಿರ್ದೇಶಕಿ ನಂದಿನಿ (ಅವಂತಿಕಾ) ಮೇಲೆ ಅವನಿಗೆ ಪ್ರೀತಿ. ಇದೇ ಕಾರಣಕ್ಕೆ ಅವಳ ದೆವ್ವದ ಪ್ರೋಗ್ರಾಮ್ ಇಷ್ಟವಿಲ್ಲದಿದ್ದರೂ ಕ್ಯಾಮರಾಮನ್ ಆಗಿ ಭೂತ ಬಂಗಲೆಯೊಂದಕ್ಕೆ ಎಂಟ್ರಿ ನೀಡುತ್ತಾನೆ. ಶೂಟಿಂಗ್ ಮಾಡುವಾಗ ನಂದಿನಿಗೆ ತಾಳಿಯೊಂದು ಸಿಗುತ್ತದೆ. ಅಲ್ಲಿಂದ ದೆವ್ವದ ಒಂದೊಂದೇ ಪ್ರಲಾಪಗಳು ಶುರುವಾಗುತ್ತವೆ. ಹಾಗಾದರೆ, ಆ ತಾಳಿ ಯಾರದ್ದು? ಇಲ್ಲಿ ದೆವ್ವ ಯಾರು? ಆದರ ಹಿನ್ನೆಲೆಯೇನು? ಇವೆಲ್ಲದಕ್ಕೂ ಉತ್ತರ ಬೇಕಿದ್ದರೆ, ‘ಕಲ್ಪನ'ಳನ್ನು ಕಣ್ತುಂಬಿಕೊಳ್ಳಬಹುದು.[ದೆವ್ವಕ್ಕೂ-ದೆವ್ವಕ್ಕೂ ಫೈಟು : 'ಕಲ್ಪನಾ-2' ನೋಡೋರಿಗೆ ಟ್ರೀಟು.!]


  'ಹೆದರಿಸುತ್ತಲೇ ನಗಿಸುವ ಕಲ್ಪನಾ' - ವಿಜಯ ಕರ್ನಾಟಕ

  ತಮಿಳಿನ 'ಕಾಂಚನಾ' ಕನ್ನಡದಲ್ಲಿ 'ಕಲ್ಪನ' ಆಗಿ ಹಿಟ್‌ಲಿಸ್ಟ್ ಸೇರಿಕೊಂಡಿತ್ತು. ಅದರ ಸರಣಿ ಈಗ 'ಕಲ್ಪನ 2' ಹೆಸರಿನಲ್ಲಿ ಬಂದಿದೆ. ಮೂಲ ಕತೆಗೂ ಕನ್ನಡ ರಿಮೇಕ್‌ಗೂ ಏನೂ ಬದಲಾವಣೆಗಳಿಲ್ಲ. ತಮಿಳಿನಲ್ಲಿ ಹೇಗಿದೆಯೋ ಹಾಗೆಯೇ ಭಟ್ಟಿ ಇಳಿಸಿದ್ದಾರಷ್ಟೇ. ಹಾಗಾಗಿ ಈಗಾಗಲೇ ಕಾಂಚನಾ 2 ಚಿತ್ರವನ್ನು ವೀಕ್ಷಿಸಿದವರು ಈ ಚಿತ್ರದಲ್ಲಿ ನೋಡುವಂಥದ್ದೇನೂ ಇಲ್ಲ. ಟಿವಿ ಟಿಪೋರ್ಟರ್ ಆಗಿ ಆವಂತಿಕಾ ಶೆಟ್ಟಿ ತಮ್ಮ ಕೆಲಸವನ್ನು ನೀಟಾಗಿ ಮಾಡಿದ್ದಾರೆ. ಉಪೇಂದ್ರ ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು ಮೆಚ್ಚಿಸಿದ್ದಾರೆ. ಪ್ರಿಯಾಮಣಿ ಇಷ್ಟ ಆಗುತ್ತಾರಾದರೂ ತಮಿಳಿನ ಕಾಂಚನಾಳಾಗಿ ನಿತ್ಯಾ ಮೆನನ್ ರನ್ನು ಕಂಡವರಿಗೆ ಪ್ರಿಯಾ ಸಪ್ಪೆ ಅನಿಸುತ್ತಾರೆ.- ಪದ್ಮಿನಿ ಎಸ್ ಜೈನ್.


  'ಹಾರರ್ ಕಥೆಗೆ ನಗೆಲೇಪ' -ಪ್ರಜಾವಾಣಿ

  ತಮಿಳಿನ ‘ಕಾಂಚನಾ 2' ಚಿತ್ರದ ಈ ಕನ್ನಡ ರೂಪದಲ್ಲಿ ಉಪೇಂದ್ರ ಎರಡು ಪಾತ್ರಗಳನ್ನು ನಿಭಾಯಿಸಿದ್ದಾರೆ. ದೆವ್ವವೆಂದರೆ ಡೈಪರ್ ಒದ್ದೆ ಮಾಡಿಕೊಳ್ಳುವ ರಾಘವ ದೆವ್ವದ ಬಾಯಿಗೇ ಸಿಲುಕುವ ಪಾತ್ರದಲ್ಲಿ ಉಪೇಂದ್ರ ಹಾಸ್ಯರಸವನ್ನೂ ಹೊಮ್ಮಿಸಿದ್ದಾರೆ. ಹೆದರಿಸುತ್ತಲೇ ನಗಿಸುವ ನಿರ್ದೇಶಕರ ತಂತ್ರ ಕೆಲಸ ಮಾಡಿದೆ. ಆದರೆ ನಡುನಡುವೆ ಹಾಸ್ಯವು ಹುಚ್ಚು ಸಂತೆಯಾಗುವುದೂ ಇದೆ. ಅವಂತಿಕಾಗಿಂತಲೂ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಪ್ರಿಯಾಮಣಿ ಹೆಚ್ಚು ಗಮನ ಸೆಳೆಯುತ್ತಾರೆ. ಎಂ.ಆರ್. ಸೀನು ಅಚ್ಚುಕಟ್ಟಾಗಿ ಕ್ಯಾಮೆರಾ ಓಡಿಸಿದ್ದಾರೆ. ಗ್ರಾಫಿಕ್ ಮತ್ತು ಹಿನ್ನೆಲೆ ಸಂಗೀತ ಚೆನ್ನಾಗಿ ಬಳಕೆಯಾಗಿದ್ದರೂ ಅರ್ಜುನ್ ಜನ್ಯ ಸಂಗೀತದಲ್ಲಿ ಸಾಹಿತ್ಯಕ್ಕಿಂತ ವಾದ್ಯಗಳೇ ಅಬ್ಬರಿಸುತ್ತವೆ. ಫಟಾಫಟ್ ಓಡುವ ದೃಶ್ಯಗಳು ಅಲ್ಲಲ್ಲಿ ಕುಂಟುತ್ತವೆ. -ಗಣೇಶ ವೈದ್ಯ.


  'ನಗಿಸೋ ದೆವ್ವದ ಮುಂದೆ ಮುಗಿಸೋ ದೆವ್ವ ಸಪ್ಪೆ'-ಉದಯವಾಣಿ

  'ಪೂಜಿಸುವ 'ದೇವ್ರು' ಒಮ್ಮೊಮ್ಮೆ ಒಲಿಯದಿದ್ದರೂ, ಪ್ರೀತಿಸಿದ 'ದೆವ್ವ' ಮೋಸ ಮಾಡಲ್ಲ ಅನ್ನುವುದಕ್ಕೆ 'ಕಲ್ಪನಾ 2' ಸಾಕ್ಷಿ. ಇದು ತಮಿಳಿನ 'ಕಾಂಚನಾ 2' ಚಿತ್ರದ ರೀಮೇಕ್. ನಿರ್ದೇಶಕರು ಇಲ್ಲೂ ಕೂಡ ತಮಿಳು ದೆವ್ವಗಳಾಡಿದ ಆಟವನ್ನೇ ಒಂಚೂರು ಮಿಸ್ ಮಾಡದೆ ಯಥಾವತ್ ಆಡಿಸಿರುವುದೇ ಚಿತ್ರದ ಸಣ್ಣದ್ದೊಂದು ಪ್ಲಸ್ಸು. ಕಾಮಿಡಿ ಹಾಗೂ ಹಾರರ್ ಮಿಕ್ಸ್ ಮಾಡಿ ಮನರಂಜನೆ ಜತೆಗೆ 'ಕಲ್ಪನಾ'ಳ ಪ್ರೀತಿಯ ಕಥೆ ಮತ್ತು ವ್ಯಥೆಯನ್ನು ಕಟ್ಟಿಕೊಡುವಲ್ಲಿ ಜಾಣತನ ಮೆರೆದಿದ್ದಾರೆ. ಈ ಬಾರಿ ಉಪೇಂದ್ರ ಅವರಿಗೆ 'ದೇವ್ರು' ಕೈ ಬಿಟ್ಟರೂ, 'ದೆವ್ವ' ಕೈ ಹಿಡಿಯುತ್ತೆ ಅಂತ 'ಕಲ್ಪನಾ'ಳನ್ನು ನೋಡಿ ಮುಲಾಜಿಲ್ಲದೆ ಹೇಳಬಹುದು. -ವಿಜಯ ಭರಮಸಾಗರ.


  'ದೆವ್ವದ ಕಥೆಗೆ ಸಾವಿಲ್ಲ'- ಕನ್ನಡ ಪ್ರಭ

  ಉಪೇಂದ್ರ ಕೆಲವೊಮ್ಮೆ ಅವರ ಮ್ಯಾನರಿಸಂ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದರೂ, ಹಿರೋಯಿಸಂ ಬೆರೆತ ದೆವ್ವದ ಪಾತ್ರದ ನಟನೆಯಲ್ಲಿ ಬೇಸರ ಮೂಡಿಸುತ್ತಾರೆ. ಅವಂತಿಕಾ ಶೆಟ್ಟಿ ಮತ್ತು ಪ್ರಿಯಾಮಣಿ ಅವರ ನಟನೆಯೂ ಅತಿ ಸಾಧಾರಣವಾದದ್ದು. ಅರ್ಜುನ್ ಜನ್ಯ ಅವರ ಸಂಗೀತಲ್ಲಿ ಮೂಡಿ ಬಂದಿರುವ ಹಾಡುಗಳು ಸಿನೆಮಾದ ಕಥೆಗೂ ಪೂರಕವಾಗದೆ, ಪ್ರತ್ಯೇಕವಾಗಿ ಗುನುಗಿಕೊಳ್ಳುವಂತೆಯೂ ಇರದೆ ಸಿನೆಮಾ ಸಮಯವನ್ನು ಇನ್ನಷ್ಟು ಲಂಬಿಸಲು ಸಹಕರಿಸಿವೆ. ಕಥೆ-ನಿರೂಪಣೆಯಲ್ಲಿ ಯಾವುದೇ ಗಟ್ಟಿತನವಿಲ್ಲದೆ, ಎಲ್ಲವೂ ಅತಿ ಸಾಧಾರಣ ಎನ್ನಬಹುದಾದ ದೆವ್ವ, ಮಂತ್ರವಾದಿ, ಒಂದಷ್ಟು ಭಯ, ಹಾಸ್ಯ, ಆಕ್ಷನ್, ಹಿರೋಯಿಸಂ ಎಲ್ಲವನ್ನು ಬೆರೆಸಿ ಕಲಸಿ ಉಸಿರುಗಟ್ಟಿಸುವ ಸಿನೆಮಾ ಒಂದರ ರಿಮೇಕ್ ಮಾಡಿ ನಿರ್ದೇಶಕ ಬೆಟ್ಟ ಕಡಿದು ಇಲಿ ಹಿಡಿದಿದ್ದಾರೆ ಎನ್ನಬಹುದು!.


  'Leave both disbelief and belief to enjoy' - Bangalore Mirror

  The horror-comedy is quite enjoyable. It has almost a perfect blend of scary ghosts and silly characters to keep the audience engaged. The film follows the same pattern as its predecessor and there is a flashback that is a perfect ploy for dead people to turn into ghosts. -Shyam Prasad S.


  English summary
  Kannada Movie 'Kalpana 2' Critics Review. Kannada Actor Upendra, Kannada Actress Priyamani, Actress Avanthika Shetty starrer 'Kalpana 2' has received mixed response from the critics. Here is the collection of reviews by Top News Papers of Karnataka. The movie is directed by R Anantharaju.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more