For Quick Alerts
ALLOW NOTIFICATIONS  
For Daily Alerts

  ನಟಸಾರ್ವಭೌಮ ಆಡಿಯೋ ವಿಮರ್ಶೆ: ಸೂಪರ್ ಹಿಟ್ ಹಾಡುಗಳ ತೋರಣ

  By ಪ್ರಶಾಂತ್ ಇಗ್ನೇಷಿಯಸ್
  |

  ಪುನೀತ್ ರಾಜ್ ಕುಮಾರ್ ಚಿತ್ರಗಳೆಂದರೆ ನಿರೀಕ್ಷೆ ಸಹಜವೇ. ಅದರಲ್ಲೂ ಸುಮಾರು ಒಂದು ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ನಟಸಾರ್ವಭೌಮ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಬೆಟ್ಟದಷ್ಟು ಕುತೂಹಲವಿದೆ.

  ಇತ್ತೀಚೆಗೆ ಬಿಡುಗಡೆಯಾದ ಇತರ ಚಿತ್ರಗಳ ಸದ್ದಿನ ನಡುವೆ ನಟಸಾರ್ವಭೌಮ ಅಷ್ಟೇನು ಸುದ್ದಿ ಮಾಡಿಲ್ಲದಿದ್ದರೂ ಟೀಸರ್ ಬಿಡುಗಡೆ ನಂತರ 'ಡ್ಯಾನ್ಸ್ ವಿತ್ ಅಪ್ಪು' ಎಂಬ ಸಾಲುಗಳು ವೈರಲ್ ಆದವು. ನಿರೀಕ್ಷೆಯೂ ಹೆಚ್ಚಾಯಿತು.

  ಬಂದ ನೋಡೋ 'ನಟಸಾರ್ವಭೌಮ', ದಾಖಲೆಗಳೆಲ್ಲಾ ನೆಲಸಮ

  ಆದರೆ ಟ್ರೇಲರ್ ಬಿಡುಗಡೆಯಾಗಿ, ಅದರಲ್ಲಿನ ಕೆಲವು ದೃಶ್ಯಗಳನ್ನು ನೋಡಿದ ಮೇಲಂತೂ ಅಭಿಮಾನಿಗಳ ಆನಂದ ಮತ್ತು ಸಂಭ್ರಮ ಗಗನಕ್ಕೇರಿದೆ.

  ಈ ನಡುವೆ ಬಿಡುಗಡೆಯಾದ ನಟಸಾರ್ವಭೌಮ ಚಿತ್ರದ ಹಾಡುಗಳು ಸಹ ಜನಪ್ರಿಯಗೊಂಡು ಯೂಟ್ಯೂಬ್ ನಲ್ಲಿ ತನ್ನದೇ ಆದ ಒಂದು ಕ್ರೇಜ್ ಕ್ರಿಯೇಟ್ ಮಾಡಿದೆ. ಡಿ ಇಮ್ಮಾನ್ ಸಂಗೀತ ನೀಡಿರುವ ಚಿತ್ರದ ಹಾಡುಗಳು ಹೇಗಿದೆ? ಹಾಡುಗಳ ವಿಮರ್ಶೆ, ಮುಂದೆ ಓದಿ..


  ಸಾಹಿತ್ಯ: ಪವನ್ ಒಡೆಯರ್

  ಗಾಯಕರು: ಸಂಜಿತ್ ಹೆಗಡೆ, ಆಂಥೋನಿ ದಾಸನ್, ಜತಿನ್ ರಾಜ್

  ನಟಸಾರ್ವಭೌಮ ಈ ಹಾಡು, ಈಗಿನ ಚಿತ್ರಗಳಲ್ಲಿ ಸರ್ವೇ ಸಾಮಾನ್ಯವಾದ ನಾಯಕನ ಪರಿಚಯ ಅಥವಾ ಇಂಟ್ರೋ ಗೀತೆ. ಯಾರೋ ಇವನು ಎಂಬ ರವಿಶಂಕರ್ ಪ್ರಶ್ನೆಯೊಂದಿಗೆ ಶುರುವಾಗುವ ಗೀತೆ, ಸುಂದರವಾದ ಟೆಕ್ನೋ ಸಂಗೀತದೊಂದಿಗೆ ಆರಂಭವಾಗುತ್ತದೆ. ಡ್ಯಾನ್ಸ್ ವಿದ್ ಅಪ್ಪು ಎಂದು ಈಗಾಗಲೇ ವೈರಲ್ ಆಗಿರುವ ಕೋರಸ್ ಧ್ವನಿಯೊಂದಿಗೆ ಮುಂದುವರಿಯುವ ಗೀತೆ, ವಿಶಿಷ್ಟ ಸಂಗೀತದೊಂದಿಗೆ ಮನಸೆಳೆಯುತ್ತದೆ.

  ಆದರೆ, ಸಾಹಿತ್ಯ ಇನ್ನಷ್ಟು ಗಂಭೀರವಾಗಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಇಮ್ಮಾನ್ ಅವರ ಸೆಂಟ್ರಲ್ ಸ್ಟೇಟು, ತಾಲೂಕು, ಗ್ರಾಮದಿಂದ ಹಿಡಿದು ಹಳ್ಳಿ ಹೋಬಳಿ ಎನ್ನುವುದಕ್ಕಿಂತ ಒಳ್ಳೆಯ ಸಾಲುಗಳನ್ನು ಪವನ್ ಬಳಸಿಕೊಂಡಿದ್ದರೆ ಹಾಡು ಮತ್ತಷ್ಟು ಕಳೆ ಏರುತ್ತಿತ್ತು. ಒಟ್ಟಿನಲ್ಲಿ ಡ್ಯಾನ್ಸ್ ಮೂಲಕ ಅಭಿಮಾನಿಗಳಿಗೆ ಔತಣ ನೀಡುವ ಸೂಚನೆಯಂತೂ ಈ ಗೀತೆಯಲ್ಲಿ ಕಾಣುತ್ತಿದೆ. ಸದ್ಯಕ್ಕೆ ಇಮ್ಮಾನ್ ಅವರ ಸಂಗೀತ ಮತ್ತು ಡ್ಯಾನ್ಸ್ ವಿದ್ ಅಪ್ಪು ಕೋರಸ್ ಮನಸ್ಸಿನಲ್ಲಿ ಉಳಿಯುತ್ತದೆ.

  ಗಾಂಧಿನಗರದಲ್ಲಿ 'ನಟ ಸಾರ್ವಭೌಮ'ನಿಗೆ ಸಿಕ್ಕ ಚಿತ್ರಮಂದಿರ ಯಾವುದು?

  ಸಾಹಿತ್ಯ : ಯೋಗರಾಜ್ ಭಟ್

  ಗಾಯಕರು: ವಿಜಯ್ ಪ್ರಕಾಶ್

  ಶರಣ್, ಜನ್ಯಾ, ಭಟ್ರು, ವಿಜಯ್ ಪ್ರಕಾಶ್ ಪಾಲುದಾರಿಕೆಯಲ್ಲಿ ಯಶಸ್ವಿಯಾಗಿದ್ದ ಹಿಂದಿನ ಪಾನಗೋಷ್ಠಿಗೆ ಸಂಬಂಧಿಸಿದ ಹಾಡುಗಳನ್ನು ನೆನಪಿಸುವ ಗೀತೆ 'ಓಪನ್ ದಿ ಬಾಟಲ್' ಕೌಟುಂಬಿಕೆ ಪ್ರೇಕ್ಷಕರ ಡಾರ್ಲಿಂಗ್ ಆಗಿರುವ ಪುನೀತ್, ಇಂತಹ ಸಾಹಿತ್ಯದ ಹಾಡುಗಳಲ್ಲಿ ಅಭಿನಯಿಸಬೇಕೇ ಎಂಬ ಪ್ರಶ್ನೆ ಈಗಾಗಲೇ ಬಂದು ಹೋಗಿದೆ. ಪ್ರಶ್ನೆಯಲ್ಲೇ ಪುನೀತ್ ಬಗ್ಗೆ ಇರುವ ಗೌರವ ಕಾಣುತ್ತದೆ. ಈ ಗೀತೆಗೆ ಅಭೂತಪೂರ್ವ ಪ್ರತಿಕ್ರಿಯೆ ಅಭಿಮಾನಿಗಳಿಂದ ಸಿಕ್ಕಿದೆ.

  ಭಟ್ರ ಎಂದಿನ ಲವಲವಿಕೆಯ, ತುಂಟುತನದ ಸಾಹಿತ್ಯ, ವಿಜಯ್ ಪ್ರಕಾಶ್ ಉತ್ಸಾಹದಿಂದ ನಮ್ಮ ಕಿವಿಗಳಿಗೆ ಮುಟ್ಟಿಸುತ್ತಾರೆ. ಶಾಸ್ತ್ರೀಯವಾಗಿ ಸಂಗೀತಗಳನ್ನು ಕಲಿತರೆ ಎಂತಹ ಗೀತೆಯನ್ನೂ ಲೀಲಾಜಾಲವಾಗಿ ಹಾಡಬಹುದು ಎಂಬುದನ್ನು ಅವರು ಮತ್ತೆ ನಿರೂಪಿಸಿದ್ದಾರೆ. ಇವರಿಬ್ಬರನ್ನು ಮೀರಿಸು ಮನಸ್ಸಿನಲ್ಲಿ ಉಳಿಯುವುದು ಇಮ್ಮಾನ್ ಅವರ ಸಂಗೀತ ಸಂಯೋಜನೆ. ವಾದ್ಯ, ತಾಳ, ಕೋರಸ್ ಗಳನ್ನು ಬಳಸಿಕೊಂಡಿರುವ ರೀತಿ ಅಚ್ಚುಕಟ್ಟಾಗಿದೆ.

  ಸಾಹಿತ್ಯ : ಜಯಂತ್ ಕಾಯ್ಕಿಣಿ

  ಗಾಯಕರು: ಜತಿನ್ ರಾಜ್, ವಂದನಾ ಶ್ರೀನಿವಾಸ್

  ಜತಿನ್ ರಾಜ್ ಹಾಡಿರುವ ಗೀತೆಯನ್ನು ವಂದನಾ ಶ್ರೀನಿವಾಸ್ ಅವರ ಕಂಠದಲ್ಲಿ ಕೇಳುವ ಅವಕಾಶವೂ ಚಿತ್ರದಲ್ಲಿದೆ (ಡ್ಯೂಯಟ್ ಅಲ್ಲ). ಇಬ್ಬರಲ್ಲಿ ಯಾರು ಹೆಚ್ಚು ಉತ್ತಮವಾಗಿ ಹಾಡಿದ್ದಾರೆ ಎಂದು ತಕ್ಕಡಿಯಲ್ಲಿ ಹಾಕಿ ತೂಗುವುದಕ್ಕಿಂತ ಸಾಹಿತ್ಯ ಮತ್ತು ಸಂಗೀತವನ್ನು ಆಸ್ವಾದಿಸುವುದು ಜಾಣತನ.

  ಸಾಹಿತ್ಯ: ಕವಿರಾಜ್

  ಗಾಯಕರು: ಶ್ರೇಯಾ ಘೋಷಾಲ್

  ಎರಡು ಅಬ್ಬರದ ಗೀತೆಗಳ ನಂತರ ಮಾಧುರ್ಯವನ್ನು ನೀಡಲು ಶ್ರೇಯಾ, ಕವಿರಾಜ್ ಜೋಡಿಯಲ್ಲಿ ಈ ಹಾಡು ಬಂದಿದೆ. ಅತ್ಯಂತ ಸುಂದರವಾದ ಸಂಗೀತ ಸ್ವರಗಳಿಂದ ಗೀತೆ ಶುರುವಾಗುತ್ತೆ ಮತ್ತು ಭರವಸೆ ಹುಟ್ಟಿಸುತ್ತದೆ. ಒಮ್ಮೆ ಗೀತೆ ಶುರುವಾದದೊಡನೆ, ಇಮ್ಮಾನ್ ಅವರ ಸಂಗೀತವಿದ್ದರೂ, ಅಲ್ಲಿ ಶ್ರೇಯಾ ಮತ್ತು ಕವಿರಾಜ್ ಅವರದ್ದೇ ಕಾರುಬಾರು.

  ಇದು ಹೇಗೆ ಹಾಡುವಿರೋ ನೋಡೋಣ ಎಂಬಂತೆ ಗಾಯನ ಹಾಗೂ ಸಾಹಿತ್ಯ ಪೈಪೋಟಿಗೆ ಬಿದ್ದು ಕೇಳುಗರ ಮನಸ್ಸನ್ನು ಸೂರೆಗೊಳ್ಳುತ್ತದೆ. ವಾದ್ಯಗಳ ಬಳಕೆಯಲ್ಲಿ ಇಮ್ಮಾನ್ ಮತ್ತೆ ಗೆಲ್ಲುತ್ತಾರೆ. ನಿರ್ದೇಶಕ ಪವನ್ ಗೆ ನಿಜಕ್ಕೂ ತೆರೆಯಲ್ಲಿ ಸವಾಲು ನೀಡುವಂತಹ ಗೀತೆ. ಗೀತೆಯ ಲಿರಿಕಲ್ ವಿಡಿಯೋದ ಕೊನೆಯಲ್ಲಿ ಶ್ರೇಯಾ ಹಾಡು ಮುಗಿಸಿ ಸಂತೃಪ್ತಿಯಿಂದ ನಗುವ ದೃಶ್ಯವಿದೆ.

  ಸಾಹಿತ್ಯ : ಜಯಂತ್ ಕಾಯ್ಕಿಣಿ

  ಗಾಯಕರು: ಜತಿನ್ ರಾಜ್

  ಗೀತೆಯ ಮೊದಲ ಸಾಲುಗಳನ್ನು ಕೇಳಿದೊಡನೆ ಇದು ಜಯಂತ್ ಕಾಯ್ಕಿಣಿಯವರ ಸಾಹಿತ್ಯದ ಹಾಡು ಎಂದು ಕನ್ನಡ ಕೇಳುಗರು ಹೇಳುವಷ್ಟು ಜಯಂತ್ ಪಳಗಿದ್ದಾರೆ. ನಿಧಾನವಾಗಿ ಕಾಡುವ ಗೀತೆಯ ಸಾಲಿಗೆ ಮತ್ತೊಂದು ಸೇರ್ಪಡೆ ಈ ಹಾಡು. ಇಮ್ಮಾನ್ ಅವರ ಸಂಗೀತ ಮತ್ತೊಮ್ಮೆ ಮೋಡಿ ಮಾಡುತ್ತದೆ.

  ಜತಿನ್ ಅವರ ಸಾಹಿತ್ಯ ಮತ್ತು ಸಂಗೀತಕ್ಕೆ ಪೂರಕವಾಗಿದೆ. ಸಂಗೀತದಲ್ಲಿ ಎಷ್ಟು ಪ್ರಮಾಣದಲ್ಲಿ ವಾದ್ಯಗಳನ್ನು ಬಳಕೆ ಮಾಡಬೇಕು ಎಂಬುದನ್ನು ಇಮ್ಮಾನ್ ತೋರಿಸಿಕೊಟ್ಟಿದ್ದಾರೆ. ಸಾಹಿತ್ಯ ಮತ್ತು ಮಾಧುರ್ಯಕ್ಕೆ ಎಲ್ಲೂ ಭಂಗ ಬರದಂತೆ ಸಂಗೀತ ಸಂಯೋಜನೆ ಮಾಡಿರುವ ಉತ್ತಮವಾದ ಗೀತೆ.

  English summary
  Audio review much awaited Puneeth Rajkumar starer Natasaarvabhowma movie. Pavan Wadeyar directed this movie and D Imman has composed the song. Rachita Ram and Anupama Parameshwaran in lead role.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more