For Quick Alerts
  ALLOW NOTIFICATIONS  
  For Daily Alerts

  ಹಚ್ಚ ಹಸಿರಿನ ಕ್ಯಾನ್ವಾಸ್‌ ಒಳಗೆ ಬೆಂಕಿಯ ನರ್ತನ

  |

  ಬೆಂಗಳೂರು ಚಲನಚಿತ್ರೋತ್ಸವದ ಎರಡನೇಯ ದಿನ ಪ್ರದರ್ಶಿಸಲಾದ ಸ್ಪ್ಯಾನಿಶ್ ಚಿತ್ರ 'ಫೈರ್ ವಿಲ್ ಕಂ' (ಮೂಲ ಹೆಸರು 'ಓ ಕ್ಯು ಆರ್ಡೆ') ದೃಶ್ಯ, ಸಂಗೀತ ಸುಂದರತೆ ಮಾತ್ರ ಹೊಂದಿರುವ ಪೇಲವ ಚಿತ್ರ.

  ಚಿತ್ರದ ಪ್ರಧಾನ ಪಾತ್ರ ಅಮಾಡೋರ್ ಕಾಡಿಗೆ ಬೆಂಕಿ ಇಟ್ಟ ಆರೋಪದಲ್ಲಿ ಜೈಲು ಅನುಭವಿಸಿದ್ದಾನೆ. ಪ್ರಕೃತಿಯ ಮಡಿಲಲ್ಲಿನ ಹಳ್ಳಿಗೆ ವಾಪಸ್ಸಾಗಿ, ತನ್ನ ತಾಯಿಯೊಂದಿಗೆ ಹಳ್ಳಿಯಲ್ಲಿ ಜೀವಿಸಲು ಪ್ರಾರಂಭಿಸುತ್ತಾನೆ. ಆಗಲೇ ಹಳ್ಳಿ ಪಕ್ಕದ ಕಾಡಿಗೆ ಬೆಂಕಿ ಬೀಳುತ್ತದೆ, ಬೆಂಕಿ ಇಟ್ಟವನು ಅಮಾಡೋರ್ ಎಂದು ಹಳ್ಳಿಗರು ಆರೋಪಿಸುತ್ತಾರೆ, ಆರೋಪದ ಬಗ್ಗೆ ಒಂದೂ ಮಾತನಾಡದೆ ಹಳ್ಳಿಗರಿಗೆ ಬೆನ್ನುತಿರುಗಿಸಿ ಹೊರಟುಹೋಗುತ್ತಾನೆ ಅಮಾಡೋರ್.

  ಸರಳ ಕತೆಯನ್ನು ಸುಮಾರು ಎರಡು ಗಂಟೆಗಳ ಕಾಲ ಎಳೆದು ಹೇಳಿದ್ದಾರೆ ನಿರ್ದೇಶಕ ಓಲಿವರ್ ಲ್ಯಾಕ್ಸೆ. ಬಹು ದೀರ್ಘ ದೃಶ್ಯಗಳು ನೋಡುಗರಿಗೆ ಆರಂಭದಲ್ಲಿ ಕುತೂಹಲ ಕೆರಳಿಸುತ್ತವೆಯಾದರೂ ಚಿತ್ರ ಸಾಗಿದಂತೆ ಆಕಳಿಕೆಯನ್ನೂ ತರಿಸುತ್ತದೆ.

  Bengaluru Film Fest Fire Will Come Film Review

  ಚಿತ್ರದ ಧನಾತ್ಮಕ ಅಂಶವೆಂದರೆ ಕ್ಯಾಮೆರಾ ಕೈಚಳಕ, ಕ್ಯಾಮೆರಾ ಕಟ್ಟಿಕೊಟ್ಟಿರುವ ಹಚ್ಚಹಸಿರಿನ ದೃಶ್ಯಗಳು ಕಣ್ಣಿಗೆ ತಣ್ಣನೆಯ ಅನುಭೂತಿ ನೀಡುತ್ತದೆ. ಮಳೆಗಾಲದ ಮಲೆನಾಡಿನಂತೆ ಮೊದಲರ್ಧ ಚಿತ್ರ ಕಾಣುತ್ತದೆ. ಆ ನಂತರದ್ದು ಕಾಡ್ಗಿಚ್ಚಿನ ರುದ್ರನರ್ತನ.

  ಹಸಿರು ಮಲೆಗಳ ನಡುವಿನ ಹಳ್ಳಿಯನ್ನು, ಮಳೆಯನ್ನು ಸುಂದರವಾಗಿ ಕಟ್ಟಿಕೊಟ್ಟಿರುವ ಕ್ಯಾಮೆರಾ ತಂತ್ರಜ್ಞ, ಕಾಡ್ಗಿಚ್ಚಿನ ಭೀಕರತೆಯನ್ನೂ ಅಂದವಾಗಿಯೇ ಕಟ್ಟಿಕೊಟ್ಟಿದ್ದಾರೆ.

  ಚಿತ್ರದ ಹಿನ್ನೆಲೆ ಸಂಗೀತ ಗಮನಸೆಳೆಯುತ್ತದೆ. ಬಹುತೇಕ ಮೌನವಾಗಿಯೇ ಸಾಗುವ ಚಿತ್ರದಲ್ಲಿ ಮೌನ ಉಂಟುಮಾಡುವ ಬೇಸರದ ಭಾವವನ್ನು ಹಿನ್ನೆಲೆ ಸಂಗೀತ ಅಲ್ಪಮಟ್ಟಿಗೆ ಹೋಗಲಾಡಿಸುತ್ತದೆ.

  English summary
  12 th Bengaluru film festival Spanish movie Fire will come review.
  Friday, February 28, 2020, 8:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X