»   » ಹೊಳೆಯುವುದೆಲ್ಲ ಚಿನ್ನವಲ್ಲ, ರಣ್ಬೀರ್ 'ನಾಚಿಕೆಗೇಡು'

ಹೊಳೆಯುವುದೆಲ್ಲ ಚಿನ್ನವಲ್ಲ, ರಣ್ಬೀರ್ 'ನಾಚಿಕೆಗೇಡು'

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ಚಿತ್ರರಂಗದಲ್ಲಿ ಖಾನ್ ತ್ರಯರಿಗೆ ಸಾಟಿಯಾಗಿ ನಿಲ್ಲಬಲ್ಲ ಸ್ಟಾರ್ ಎಂದೇ ಬೆಳೆದ ಕಪೂರ್ ಖಾನ್ ದಾನ್ ಹುಡುಗ ರಣಬೀರ್ ಕಪೂರ್ ಯಾಕೋ ಹುಚ್ಚಾಟವೇ ಚಿತ್ರವೆಂದು ತಿಳಿದ ಹಾಗೆ ಕಾಣುತ್ತದೆ. ರಾಕ್ ಸ್ಟಾರ್, ಬರ್ಫಿ, ಯೇ ಜವಾನಿ ಹೇ ದಿವಾನಿ ದಂಥ ಚಿತ್ರದಲ್ಲಿ ನಟಿಸಿದ್ದ ರಣಬೀರ್ ಪಾತ್ರ ಆಯ್ಕೆ ಗ್ರಾಫ್ 'ಬೇಷರಮ್' ಚಿತ್ರದ ನಂತರ ಸರಕ್ಕನೆ ಕೆಳಿಗಿಳಿದಿದೆ.

ಅಭಿನವ್ ಕಶ್ಯಪ್ ಅವರು ಪಲ್ಲವಿ ಶಾರದಾ, ರಿಷಿ-ನೀತು ಕಪೂರ್ ಹಾಗೂ ಇನ್ನಿತರ ತಾರಾಗಣವಿಲ್ಲದೆ ಕೂಡಾ ರಣಬೀರ್ ನಿಂದ ಏಕಪಾತ್ರಾಭಿನಯದ ಮೂಲಕ ಚಿತ್ರವನ್ನು ತೆರೆಗೆ ತರಬಹುದಿತ್ತು. ಚಿತ್ರದಲ್ಲಿ ರಣಬೀರ್ ಹುಚ್ಚಾಟ, ಕುಣಿದಾಟ, ಏಗರಾಟ, ಓಲಾಟ, ಹಾರಾಟ ಬಿಟ್ಟರೆ ಮತ್ತೇನು ಇಲ್ಲ.

ಆದರೆ, ರಣಬೀರ್ ಅಭಿಮಾನಿಗಳೇ ಪ್ರತಿದಿನ ಚಿತ್ರಮಂದಿರಕ್ಕೆ ಹೋಗಿ ಬಂದು ಮಾಡಿದರೂ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಗೆದ್ದರೆ ಅದೊಂದು ಪವಾಡವೇ ಸರಿ. ವಿವಿಧ ವಿಮರ್ಶಕರು ಈ ಚಿತ್ರವನ್ನು ನೋಡಿ ಸಮಯ ವ್ಯರ್ಥಮಾಡಿಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ.

ಆದರೆ, ಗಾಂಧಿ ಜಯಂತಿ ರಜೆ ದಿನವಾದ್ದರಿಂದ ಹೆಚ್ಚಿನ ಗಳಿಕೆ ಕಂಡು ಬಂದಿದೆ. ಬಾಕ್ಸಾಫೀಸ್ ವರದಿ ಬಗ್ಗೆ ಟ್ವೀಟ್ ಮಾಡಿರುವ ತರಣ್ ಆದರ್ಶ್, ಬರ್ಫಿ ಹಾಗೂ ಯೇ ಜವಾನಿ ಯೇ ದಿವಾನಿ ನಂತರ ರಣಬೀರ್ ಕಪೂರ್ ಚಿತ್ರ 25 ಕೋಟಿ ರು ಗಳಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೊದಲ ದಿನದ ಗಳಿಕೆ ಅಂದಾಜು 20 ಕೋಟಿ ರು ಎಂದು ತಿಳಿದು ಬಂದಿದೆ ಎಂದಿದ್ದಾರೆ. ವಿಮರ್ಶಕರ ವಿಮರ್ಶೆ ಸಾರ ಸಂಗ್ರಹ ಇಲ್ಲಿದೆ ಓದಿ...

ಚಿತ್ರದ ಕಥೆಯೇನು?

ಬಬ್ಲಿ(ರಣಬೀರ್ ಕಪೂರ್) ಎಂಬ ಕಾರುಕಳ್ಳ ಯಾವುದರ ಬಗ್ಗೆಯೂ ಭಯವಿಲ್ಲದ ಬಿಂದಾಸ್ ಯುವಕ. ಸರಿ ತಪ್ಪು ತಿಳಿಯದ ಈತನಿಗೆ ನಾಯಕಿ ತಾರಾ (ಪಲ್ಲವಿ ಶಾರದ) ಮೇಲೆ ಪ್ರೇಮ ವುಂಟಾಗಿ ತನ್ನ ಕೃತ್ಯಗಳ ತಪ್ಪಿನ ಅರಿವಾಗುವ ವೇಳೆಯಲ್ಲಿ...

ಸಭ್ಯ ಅಧಿಕಾರಿ ಚುಲ್ ಬುಲ್ ಚೌಟಾಲ(ರಿಷಿ ಕಪೂರ್) ತನ್ನ ಪತ್ನಿ ಮಾತು ಕೇಳಿಕೊಂಡು ಬುಲ್ ಬುಲ್ ಚೌಟಾಲಾ(ನೀತು ಕಪೂರ್) ಬಬ್ಲಿ ಹಿಂದೆ ಬೀಳುತ್ತಾನೆ. ದ್ವಿತೀಯಾರ್ಧದಲ್ಲಿ ಕಥೆ ಇಲ್ಲದೆ ರೀಲು ಓಡಿಸಲಾಗಿದೆ.

ಬಾಲಿವುಡ್ ಹಂಗಾಮ (1.5 ಸ್ಟಾರ್)

ಬೇಷರಮ್ ಸಾಮಾನ್ಯ ಪ್ರೇಕ್ಷಕರಿಗಷ್ಟೇ ಅಲ್ಲ, ರಣಬೀರ್ ಅಭಿಮಾನಿಗಳಿಗೂ ಭಾರಿ ನಿರಾಶೆ ಮೂಡಿಸುತ್ತದೆ. ಹೊಳೆಯುವುದೆಲ್ಲ ಚಿನ್ನವಲ್ಲ ಎಂಬುದು ತಕ್ಷಣಕ್ಕೆ ನೆನಪಾಗುತ್ತದೆ.

Koimoi (2.5 ಸ್ಟಾರ್)

ಚಿತ್ರದಲ್ಲಿ ಕಥೆಯೇ ಇಲ್ಲದೆ ಓಡಿಸಲು ಯತ್ನಿಸಲಾಗಿದೆ. ಎಡಿಟಿಂಗ್ ಕೈ ಕೊಟ್ಟಿರುವುದರಿಂದ ಚಿತ್ರ ಮಂದಿರದಲ್ಲಿ ಕೂರುವುದು ಕಷ್ಟವಾಗಲಿದೆ. ರಣಬೀರ್ ನಟನೆ ಹೊರತಾಗಿಯೂ ಚಿತ್ರ ನೀರಸವಾಗಿದೆ.

ಇಂಡಿಯನ್ ಎಕ್ಸ್ ಪ್ರೆಸ್ (1.5 ಸ್ಟಾರ್)

ಪ್ರತಿಭಾವಂತ ರಣಬೀರ್ ಏಕ ವ್ಯಕ್ತಿ ಹೋರಾಟ ಕೂಡಾ ಚಿತ್ರವನ್ನು ಗೆಲ್ಲಿಸಲು ಸಾಧ್ಯವಾಗುವುದಿಲ್ಲ.

ಜೀ ನ್ಯೂಸ್ (2.5 ಸ್ಟಾರ್)

ಬೇಷರಮ್ ಹೆಸರಿಗೆ ತಕ್ಕ ಸಿನಿಮಾವಾಗಿಲ್ಲ. ರಣಬೀರ್ ಕಪೂರ್ ಪ್ರತಿಭೆಗೆ ತಕ್ಕ ಅಭಿನಯ ಚಿತ್ರವನ್ನು ಉಳಿಸಲು ಸಾಕಾಗುವುದಿಲ್ಲ.ಅಂದ ಹಾಗೆ ಈ ಚಿತ್ರದಲ್ಲಿ ಜಾವೇದ್ ಜಫ್ರಿ ಖಳ ಪಾತ್ರಧಾರಿ

ರೀಡಿಫ್ (1.5 ಸ್ಟಾರ್)

ಪ್ರಜ್ಞೆ ಇಲ್ಲದ ಹಾಸ್ಯ, ಅರ್ಥವಿಲ್ಲದ ಸನ್ನಿವೇಶಗಳು, ಉತ್ತಮ ನಟನೆಯೊಂದೇ ಚಿತ್ರದ ವೇಗ ಹೆಚ್ಚಿಸಲು ಸಾಧ್ಯ ಎಂದು ನಂಬಿದ್ದರೆ ಕಷ್ಟ ಕಷ್ಟ.

ಎನ್ ಡಿಟಿವಿ (2.5 ಸ್ಟಾರ್)

ಚಿತ್ರದಲ್ಲಿ ಯಾವುದೇ ಭಾಗದಲ್ಲೂ ಕಥೆಯ ಎಳೆ ನಿಮಗೆ ಸಿಗುವುದಿಲ್ಲ. ಪಾತ್ರಗಳ ಪೋಷಣೆಯೂ ಪೇಲವವಾಗಿದೆ. ಕ್ಲೈಮ್ಯಾಕ್ಸ್ ನಲ್ಲಿ ಹೊಡಿ ಬಡಿ ದೃಶ್ಯಕ್ಕೂ ಆರಂಭದಿಂದಲೂ ಚಿತ್ರ ಸಾಗುವ ರೀತಿಯೂ ಹೊಂದಾಣಿಕೆಯೇ ಇಲ್ಲ. ರಣಬೀರ್ ಚಿತ್ರ ಒಪ್ಪಿಕೊಂಡಿದ್ದೇ ಹೆಚ್ಚು

ಐಬಿಎನ್ ಲೈವ್

ರಾಜೀವ್ ಮಸಂದ್ ಅವರು ಕೇವಲ 1 ಸ್ಟಾರ್ ನೀಡಿದ್ದಾರೆ. ದಬ್ಬಾಂಗ್ ಚಿತ್ರದ ಮೂಲಕ ಸಲ್ಮಾನ್ ಗೆ ಮತ್ತೆ ಸ್ಟಾರ್ ಗಿರಿ ತಂದುಕೊಟ್ಟ ನಿರ್ದೇಶಕ ಅಭಿನವ್ ಕಶ್ಯಪ್ ಈ ಚಿತ್ರದ ನಿರ್ದೇಶಕ ಎಂದರೆ ನಂಬಲು ಕಷ್ಟ

ಡಿಎನ್ ಎ (2.5 ಸ್ಟಾರ್)

ಪ್ರತಿ ದೃಶ್ಯಗಳು ಉದ್ದುದ್ದಾ ಇದ್ದು ಆರಂಭದಲ್ಲಿ ಬಬ್ಲಿ ಹಾಗೂ ಆತನ ಗೆಳೆಯ ಓಡಲು ಆರಂಭಿಸಿದ್ದು ಚಿತ್ರ ಮುಗಿಯುವ ತನಕ ಓಡುತ್ತಲೇ ಇರುತ್ತದೆ. ಒಂದಕ್ಕೊಂದು ಲಿಂಕ್ ಇರುವುದಿಲ್ಲ ಅಷ್ಟೇ. ಪ್ರೇಕ್ಷಕರನ್ನು ಚಿತ್ರಮಂದಿರದಲ್ಲೇ ಕೂರಿಸುವಲ್ಲಿ ವಿಫಲ

ಮುಂಬೈ ಮಿರರ್ (1.5 ಸ್ಟಾರ್)

ಅಭಿನವ್ ಕಶ್ಯಪ್ ಮತ್ತೊಮ್ಮೆ ವೃತ್ತಿ ಜೀವನ ಆರಂಭಿಸುವುದು ಒಳ್ಳೆಯದು ದಬ್ಬಾಂಗ್ ನಂತರ ಇಂಥ ಚಿತ್ರ ಯಾರೂ ನಿರೀಕ್ಷಿಸಿರಲಿಲ್ಲ

ಡೈಲಿ ಭಾಸ್ಕರ್(2.5 ಸ್ಟಾರ್)

ಪಲ್ಲವಿ ಶಾರದಗೆ ಮೊದಲ ಚಿತ್ರ ಡ್ರೀಮ್ ಆರಂಭವಾಗುವ ಬದಲು ಕೆಟ್ಟ ಕನಸಾಗಿ ಪರಿಣಮಿಸಿರುವುದು ದುರಂತ. ಪಾಪ ರಣಬೀರ್ ನದ್ದು ಏನು ತಪ್ಪಿಲ್ಲ.

English summary
Superstar Ranbir Kapoor's latest release Besharam can be termed as a perfect example of the saying "All that glitters is not gold". After doing films like Rockstar and Barfi, audience had a lot of expectation from Ranbir's Besharam. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada