For Quick Alerts
ALLOW NOTIFICATIONS  
For Daily Alerts

  ಡಾನ್ 'ಚಕ್ರವರ್ತಿ' ಬಗ್ಗೆ ಸಿನಿಮಾ ವಿಮರ್ಶಕರು ಏನಂದ್ರು ನೋಡಿ?

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಚಕ್ರವರ್ತಿ' ಸಿನಿಮಾ ನಿನ್ನೆ (ಏಪ್ರಿಲ್ 14) ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದ್ದು, ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಂಡಿದೆ.

  ಭೂಗತ ಲೋಕದ ಕಥೆಯೊಳಗೆ ದೇಶ ಪ್ರೇಮವನ್ನ ಹುರಿಧುಂಬಿಸಿರುವ 'ಚಕ್ರವರ್ತಿ'ಗೆ ಅಭಿಮಾನಿಗಳು ಉಘೇ ಎಂದಿದ್ದಾರೆ. ಆದ್ರೆ, ವಿಮರ್ಶಕರು 'ಚಕ್ರವರ್ತಿ'ಯನ್ನ ಒಪ್ಪಿಕೊಂಡ್ರಾ? ದರ್ಶನ್ ಅವರು ಕ್ಲಾಸ್ ಅಭಿನಯಕ್ಕೆ ಎಷ್ಟು ಮಾರ್ಕ್ಸ್ ಕೊಟ್ರು? ಒಟ್ಟಾರೆ 'ಚಕ್ರವರ್ತಿ'ಯ ಬಗ್ಗೆ ಏನಂದ್ರು?['ಚಕ್ರವರ್ತಿ'ಗೆ ರಾಜ್ಯಾದ್ಯಂತ ಸಿಕ್ತು ಭರ್ಜರಿ ಓಪನಿಂಗ್]

  ಇಲ್ಲಿದೆ ನೋಡಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಚಕ್ರವರ್ತಿಯ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿ..

  'ಅಂಡರ್ ವರ್ಲ್ಡ್'ನಲ್ಲಿದೆ ಚಕ್ರವರ್ತಿಯ ದರ್ಬಾರ್'- ವಿಜಯ ಕರ್ನಾಟಕ

  'ಭೂಗತ ಜಗತ್ತಿನ ಕತೆಯ ಜೊತೆಗೆ ದೇಶಪ್ರೇಮದ ಸಂದೇಶ ಹೊಂದಿರುವ ಚಿತ್ರ ಚಕ್ರವರ್ತಿ. ಅಂಡರ್‌ವರ್ಲ್ಡ್‌ ಡಾನ್ ಪಾತ್ರದಲ್ಲಿ ದರ್ಶನ್ ಮಿಂಚಿದ್ದು, ಮೂರು ಗೆಟಪ್ ಗೂ ಫರ್ಫೆಕ್ಟ್ ಮ್ಯಾಚ್ ಆಗಿದ್ದಾರೆ. ಅವರ ಸ್ಟೈಲ್, ಡೈಲಾಗ್‌ ಡಿಲೆವರಿ ಎಲ್ಲವೂ ಬದಲಾಗಿದೆ. ಡಾನ್ ಮಹಾರಾಜನ ಪಾತ್ರವನ್ನು ನಿರ್ವಹಿಸಿರುವ ದಿನಕರ್ ತೂಗುದೀಪ ಕೂಡ ಇಷ್ಟವಾಗುತ್ತಾರೆ. ನಾಯಕಿ ದೀಪಾ ಸನ್ನಿಧಿಯ ಪಾತ್ರಕ್ಕೆ ಹೆಚ್ಚಿಗೇನೂ ಕೆಲಸವಿಲ್ಲ. ಪೊಲೀಸ್‌ ಆಫೀಸರ್ ಪಾತ್ರಕ್ಕೆ ಆದಿತ್ಯ ಹೇಳಿಮಾಡಿಸಿದಂತಿದೆ. ಎಂಬತ್ತರ ದಶಕದ ಕತೆಯಾಗಿದ್ದರಿಂದ ಆ ಕಾಲವನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಕಾಸ್ಟ್ಯೂಮ್, ಲೊಕೇಶನ್‌, ಕಾರು ಹೀಗೆ ಎಲ್ಲವನ್ನೂ ಕಾಲಕ್ಕೆ ತಕ್ಕಂತೆ ಜೋಡಿಸಿದ್ದಾರೆ' - ವಿಜಯ ಕರ್ನಾಟಕ [ಚಕ್ರವರ್ತಿ ಮೊದಲ ಪ್ರದರ್ಶನ, ಅಭಿಮಾನಿಗಳ ವಿಮರ್ಶೆ ಸಂಭ್ರಮ]

  'ಭೂಗತಲೋಕದಲ್ಲಿ ದೇಶಭಕ್ತಿಯ ಜಪ' - ವಿಜಯವಾಣಿ

  '80ರ ದಶಕದಲ್ಲಿ ಬೆಂಗಳೂರಿನಲ್ಲಿ ಬೇರೂರಿದ್ದ ರಿಯಲ್ ರೌಡಿಸಂನ ಛಾಯೆ ಕಥೆಯಲ್ಲಿ ಕಾಣಿಸುತ್ತದೆ. ಮೈಂಡ್​ಗೇಮ್ ಸಿನಿಮಾಗಳಿಗಿರಬೇಕಾದ ವೇಗ ‘ಚಕ್ರವರ್ತಿ'ಗೂ ಸಿಕ್ಕಿಬಿಟ್ಟಿದ್ದರೆ, ಇನ್ನೂ ಚೆನ್ನಾಗಿರುತ್ತಿತ್ತು. ಮೂರು ಗೆಟಪ್​ಗಳಲ್ಲಿ ಮಿಂಚಿರುವ ದರ್ಶನ್, ಅಭಿಮಾನಿಗಳನ್ನು ರಂಜಿಸುತ್ತಾರೆ. ಆದಿತ್ಯ, ದೀಪಾ ಸನ್ನಿಧಿ, ಸೃಜನ್, ಶರತ್ ಲೋಹಿತಾಶ್ವ ಅಭಿನಯದಲ್ಲಿ ಅಚ್ಚುಕಟ್ಟು. ಮೊದಲ ಬಾರಿಗೆ ಖಳನ ದಿರಿಸು ತೊಟ್ಟಿರುವ ದಿನಕರ್, ಇನ್ನೂ ಮಾಗಬೇಕು. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ‘ಒಂದು ಮಳೆಬಿಲ್ಲು..' ಹಾಡು ನೆನಪಿನಲ್ಲುಳಿದರೆ, ಮಿಕ್ಕಿದವು ಆ ಕ್ಷಣಕ್ಕೆ ಮಾತ್ರ ಕಿಕ್ ನೀಡುತ್ತವೆ' - ವಿಜಯವಾಣಿ [ವಿಮರ್ಶೆ: ಭೂಗತ ಲೋಕಕ್ಕೆ ದೇಶಪ್ರೇಮದ ಪಾಠ ಹೇಳುವ 'ಚಕ್ರವರ್ತಿ']

  ಅಭಿಮಾನಿಗಳಿಗೂ ಅರೆಕಾಸಿನ ಮಜ್ಜಿಗೆ' - ಪ್ರಜಾವಾಣಿ

  'ಒಂದು ಕಮರ್ಷಿಯಲ್ ಸಿನಿಮಾದ ಆರಂಭದಲ್ಲಿ ಜನರನ್ನು ಸೆಳೆಯಲು ಇರಬೇಕು ಎನ್ನಲಾಗುವ ಎಲ್ಲ ಅಂಶಗಳೂ ‘ಚಕ್ರವರ್ತಿ'ಯಲ್ಲಿವೆ. ಆದ್ರೆ, ಅಭಿಮಾನಿಗಳ ಹೊಟ್ಟೆಗೂ ಅರೆಕಾಸಿನ ಮಜ್ಜಿಗೆಯನ್ನಷ್ಟೇ ಹನಿಸಲು ಶಕ್ತರಾಗಿದ್ದಾರೆ ನಿರ್ದೇಶಕ ಚಿಂತನ್. ದಿನಕರ್ ತೂಗುದೀಪ ಸಿನಿಮಾದೊಳಗೆ ಮಾತ್ರವಲ್ಲ, ಸಿನಿಮಾಕ್ಕೂ ಅವರು ನಿಜವಾದ ವಿಲನ್. ದರ್ಶನ್ ತಮ್ಮ ಎಂದಿನ ಲಯವನ್ನು ಮೀರದೇ ನಟಿಸಿದ್ದಾರೆ. ದೀಪಾ ಸನ್ನಿಧಿ ದ್ವಿತೀಯಾರ್ಧದಲ್ಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲ. ಸಿನಿಮಾದಲ್ಲಿ ಹಾಸ್ಯವಿಲ್ಲ. ಆದರೆ ಹಲವು ಗಂಭೀರ ದೃಶ್ಯಗಳು ಹಾಸ್ಯಾಸ್ಪದವಾಗಿ ಆ ಕೊರತೆಯನ್ನು ಕೊಂಚಮಟ್ಟಿಗೆ ಕಮ್ಮಿ ಮಾಡುತ್ತವೆ. ಉಳಿದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರ' - ಪ್ರಜಾವಾಣಿ

  'ಭೂಗತ ದೊರೆಯ ಸಿದ್ದಾಂತ ಮತ್ತು ಸಾಮಾಜಿಕ ಚಿಂತನ' - ಕನ್ನಡ ಪ್ರಭ

  'ಚಕ್ರವರ್ತಿ ಕಥೆ ಹೊಸತೇನಲ್ಲ. 80ರ ದಶಕದ ಕಥೆಗಳು ಹಲವಾರು ಬಂದಿವೆ. ದರ್ಶನ್ ಅವರು 50ನೇ ಚಿತ್ರದ ಸಮೀಪದಲ್ಲಿರುವ ಹೊಸ ರಿಸ್ಕ್ ತೆಗೆದುಕೊಂಡಿದ್ದಾರೆ. ಯಾವುದೇ ಅಬ್ಬರವಿಲ್ಲದ ಮುಗ್ದ ಹುಡುಗನಂತೆ ಪಾತ್ರ ನಿರ್ವವಹಿಸಿದ್ದಾರೆ. ಚಿತ್ರಕಥೆಯಲ್ಲಿ ಗೊಂದಲಕ್ಕೊಳಗಾಗಿರುವಂತಿರುವ ನಿರ್ದೇಶಕ ಯಾವುದನ್ನ ಪೂರ್ತಿ ಮಾಡಲಿಲ್ಲ. ಕಲಾವಿದರು ಪಾತ್ರಗಳನ್ನ ಉತ್ತಮವಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ವೇಗ ಕಮ್ಮಿ. ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಹೊಡೆದಾಟಗಳಲ್ಲಿ ಖದರ್ ಇಲ್ಲ'' - ಕನ್ನಡ ಪ್ರಭ

  Chakravarthy Review: Times of india

  ''Darshan looks like he has given his all for the film, what with sporting multiple looks and dedicating many days to live his role as Chakravarthy. Sadly, his effort seems futile at times, because of the amateurish narrative. if you're the sort who wants a treat of masala moments on screen, this could be worth your visit to the screens. '' -Times of india

  English summary
  Kannada Actor Challenging Star Darshan starrer 'Chakravarthy' Movie has received positive response from the critics. Here is the collection of 'Chakravarthy'' reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more