»   » 'ಅಲ್ಲಮ' ವಿಮರ್ಶೆ: ಸಿನಿಮಾ ಮಾಯೆಯೆಂಬರು, ಮಾಯೆ ಅಲ್ಲ ಗುಹೇಶ್ವರ!

'ಅಲ್ಲಮ' ವಿಮರ್ಶೆ: ಸಿನಿಮಾ ಮಾಯೆಯೆಂಬರು, ಮಾಯೆ ಅಲ್ಲ ಗುಹೇಶ್ವರ!

Posted By:
Subscribe to Filmibeat Kannada

ಇತಿಹಾಸ ಪುರುಷರನ್ನು ತೆರೆಮೇಲೆ ಕಲಾತ್ಮಕವಾಗಿ ಕಟ್ಟಿಕೊಡುವುದು ನಿಜಕ್ಕೂ ಸವಾಲಿನ ಕೆಲಸ. ಅಂತಹ ಸಾಹಸಕ್ಕೆ ಕೈ ಹಾಕಿ, 'ಅಲ್ಲಮ' ಚಿತ್ರದ ಮೂಲಕ ಸವಾಲು ಸ್ವೀಕರಿಸಿ ನಿರ್ದೇಶಕ ಟಿ.ಎಸ್.ನಾಗಾಭರಣ ಅಕ್ಷರಶಃ ಯಶಸ್ವಿಯಾಗಿದ್ದಾರೆ ಅಂದ್ರೆ ಖಂಡಿತ ತಪ್ಪಾಗಲಾರದು.


Rating:
3.5/5

ಚಿತ್ರ : ಅಲ್ಲಮ
ನಿರ್ದೇಶನ : ಟಿ.ಎಸ್.ನಾಗಾಭರಣ
ನಿರ್ಮಾಣ : ಶ್ರೀಹರಿ.ಎಸ್.ಖೋಡೆ
ಛಾಯಾಗ್ರಹಣ : ಟಿ.ಎಸ್.ಭಾಸ್ಕರ್
ಸಂಗೀತ : ಬಾಪು ಪದ್ಮನಾಭ
ತಾರಾಗಣ : ಧನಂಜಯ್, ಮೇಘನಾ ರಾಜ್, ಸಂಚಾರಿ ವಿಜಯ್, ಲಕ್ಷ್ಮಿ ಗೋಪಾಲಸ್ವಾಮಿ ಮತ್ತು ಇತರರು
ಬಿಡುಗಡೆ : ಜನವರಿ 26, 2017


ವಚನಕಾರ 'ಅಲ್ಲಮ' ಜೀವನಚರಿತ್ರೆ

12ನೇ ಶತಮಾನದ ವಚನಕಾರರ ಪೈಕಿ ಪ್ರಮುಖರಾಗಿದ್ದ 'ಅಲ್ಲಮ'ರ ಜೀವನಚರಿತ್ರೆಯೇ ಈ ಸಿನಿಮಾ. ಮದ್ದಳೆ ಬಾರಿಸುವ ಬಾಲಕನಿಂದ ಹಿಡಿದು ಬಸವ ಕಲ್ಯಾಣದ ಅನುಭವ ಮಂಟಪದ ಶೂನ್ಯ ಸಿಂಹಾಸನ ಏರುವವರೆಗೂ 'ಅಲ್ಲಮ'ನ ಜೀವನವನ್ನ ಚಿತ್ರದಲ್ಲಿ ಕಲಾತ್ಮಕವಾಗಿ ಕಟ್ಟಿಕೊಡಲಾಗಿದೆ.


'ಅಲ್ಲಮ'ನ ಪಾತ್ರದಲ್ಲಿ ಧನಂಜಯ್ ಅಭಿನಯ ಹೇಗಿದೆ.?

ವಚನಕಾರ, ಶಿವಾಂಶ ಸಂಭೂತ ಅಲ್ಲಮ ಪ್ರಭು ಪಾತ್ರದಲ್ಲಿ ನಟ ಧನಂಜಯ್ ಅಭಿನಯ ಅಚ್ಚುಕಟ್ಟಾಗಿದೆ. ಪಾತ್ರಕ್ಕಾಗಿ ಮದ್ದಳೆ ಬಾರಿಸುವುದನ್ನೂ ಕಲಿತಿರುವ ಧನಂಜಯ್ ಶ್ರಮ ತೆರೆಮೇಲೆ ಎದ್ದು ಕಾಣುತ್ತದೆ.


ಕಣ್ಮನ ಸೆಳೆಯುವ ಮೇಘನಾ ರಾಜ್

ನೃತ್ಯಗಾರ್ತಿ ಮಾಯಾದೇವಿ ಪಾತ್ರದಲ್ಲಿ ಮೇಘನಾ ರಾಜ್ ಕಣ್ಮನ ಸೆಳೆಯುತ್ತಾರೆ.


ಲಕ್ಷ್ಮಿ ಗೋಪಾಲಸ್ವಾಮಿ

ಉಳಿದಂತೆ ಲಕ್ಷ್ಮಿ ಗೋಪಾಲಸ್ವಾಮಿ ಮತ್ತು ಸಂಚಾರಿ ವಿಜಯ್ ಅಭಿನಯ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ.


ಕಣ್ಮುಂದೆ ಇದೆ 12ನೇ ಶತಮಾನ!

12ನೇ ಶತಮಾನದ ಸ್ಥಿತಿ-ಗತಿಯನ್ನ ಇಂದಿನ ಕಮರ್ಶಿಯಲ್ ಯುಗದ ತೆರೆಮೇಲೆ ತರುವುದು ಸುಲಭದ ಕೆಲಸ ಅಲ್ಲ. ಹೀಗಾಗಿ, ಆ ಕಾಲದ ಭವ್ಯ ಇತಿಹಾಸ ಸಾರುವ ಪುರಾತನ ದೇವಾಲಯಗಳಲ್ಲೇ ಚಿತ್ರೀಕರಣ ಮಾಡಿ 12ನೇ ಶತಮಾನವನ್ನ ಪ್ರೇಕ್ಷಕರ ಕಣ್ಮುಂದೆ ತಂದಿದ್ದಾರೆ ನಿರ್ದೇಶಕ ಟಿ.ಎಸ್.ನಾಗಾಭರಣ.


ಕಾಸ್ಟ್ಯೂಮ್ಸ್ ಚೆನ್ನಾಗಿದೆ.!

ನಿರ್ದೇಶಕ ಟಿ.ಎಸ್.ನಾಗಾಭರಣ ರವರ ಪತ್ನಿ ನಾಗಿಣಿ ಭರಣ ವಿನ್ಯಾಸ ಮಾಡಿರುವ, ಅಂದಿನ ಕಾಲಮಾನಕ್ಕೆ ಹೊಂದಾಣಿಕೆ ಆಗುವ ಕಾಸ್ಟ್ಯೂಮ್ಸ್ ಚೆನ್ನಾಗಿದೆ.


ಪ್ಲಸ್ ಪಾಯಿಂಟ್ಸ್

ಇಡೀ ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ ಕ್ಯಾಮರಾ ವರ್ಕ್. ಕತ್ತಲು-ಬೆಳಕಿನ ಆಟದಲ್ಲಿ ಭಾಸ್ಕರ್ ಛಾಯಾಗ್ರಹಣ ಸೊಗಸಾಗಿದೆ. ವಚನ ಸಾಹಿತ್ಯಕ್ಕೆ ಬಾಪು ಪದ್ಮನಾಭ ಸಂಗೀತ ಪೂರಕವಾಗಿದೆ.


ಮಾಸ್ ಪ್ರೇಕ್ಷಕರಿಗಲ್ಲ.!

ಭಕ್ತಿ ಭಾವ ಪ್ರಮುಖವಾಗಿರುವ 'ಅಲ್ಲಮ' ಚಿತ್ರ ಮಾಸ್ ಪ್ರೇಕ್ಷಕರಿಗಲ್ಲ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ 'ಅಲ್ಲಮ' ಚಿತ್ರವನ್ನ ಕ್ಲಾಸ್ ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.


English summary
Kannada Actor Dhananjay, Meghana Raj starrer T.S.Nagabharana directorial 'Allama' movie has hit the screens today. Review of 'Allama' is here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada