For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಹಿಮ್ಮತ್ ವಾಲಾ ಅಸಲಿ ಮಜಾ ಹಾಳ್ಮಾಡ್ಬಿಟ್ಟ

  By ಜೇಮ್ಸ್ ಮಾರ್ಟಿನ್
  |

  Rating:
  1.0/5
  ಹಳೆ ಚಿತ್ರಗಳನ್ನು ಮತ್ತೊಮ್ಮೆ ರಿಮೇಕ್ ಮಾಡಿ ಹೊಸ ಪೀಳಿಗೆ ನಟರನ್ನು ಹಾಕಿಕೊಂಡು ಸಿನಿಮಾ ಮಾಡಿ ಗೆಲ್ಲುವುದು ಸುಲಭದ ಮಾತಲ್ಲ. ಹಿಮ್ಮತ್ ವಾಲಾ ಎಂಬ ಆ ಕಾಲದ ಹಿಟ್ ಚಿತ್ರವನ್ನು ಮತ್ತೊಮ್ಮೆ ತೆರೆಗೆ ತರುವ ಪ್ರಯತ್ನ ಮೆಚ್ಚತಕ್ಕದ್ದೇ. ಆದರೆ, ಅಸಲಿ ಹಿಮ್ಮತ್ ವಾಲಾಮಜಾ ಈಗಿನ ಹಿಮ್ಮತ್ ವಾಲಾದಲ್ಲಿ ಮಾಯವಾಗಿದೆ.

  ಹೇ ಬೇಬಿ, ಹೌಸ್ ಫುಲ್ ಜನಪ್ರಿಯ ಚಿತ್ರಗಳನ್ನು ನೀಡಿದ ಸಾಜಿದ್ ಖಾನ್ ಅವರು ಪ್ರೇಕ್ಷಕರ ಹಸಿವನ್ನು ಇಂಗಿಸಿದರೂ ಮೃಷ್ಟಾನ ಭೋಜನ ನೀಡುವಲ್ಲಿ ಸೋತಿದ್ದಾರೆ. ಹಳೆ ಹಿಟ್ ಚಿತ್ರವನ್ನು ಮತ್ತೆ ತೆರೆಗೆ ತಂದ ಪ್ರಯತ್ನಕ್ಕೆ ಮಾತ್ರ ಜೈ ಎನ್ನಬಹುದು. ಉಳಿದಂತೆ ಈ ಚಿತ್ರ ಬಾಲಿವುಡ್ ಪ್ರವೇಶಿಸಿದ ತಮನ್ನಾಗೆ ಮಾತ್ರ ಪಾಸಿಟಿವ್ ಅಷ್ಟೇ.

  ಜಖಂ, ಓಂಕಾರ, ಹಮ್ ದಿಲ್ ದೇ ಚುಕೆ ಸನಂ ನಂತರ ಹಾಸ್ಯ ಪಾತ್ರದಲ್ಲೂ ಮಿಂಚಿದ್ದ ಅಜಯ್ ದೇವಗನ್ ಗೆ ಈ ಚಿತ್ರ ಮಾಡುವ ಕರ್ಮ ಯಾಕೆ ಬಂತೋ ಗೊತ್ತಿಲ್ಲ. ಅಜಯ್ ಉತ್ತಮ ನಟ ನಿಜ. ಅದರೆ, ಜಂಪಿಂಗ್ ಜಾಕ್ ಆಗಿ ಅಜಯ್ ಹಾಗೂ ಶ್ರೀದೇವಿಯಾಗಿ ತಮನ್ನಾ ಊಹೆಗೆ ನಿಲುಕದ ಮಾತು.

  ಬಿಟ್ಟಿ ಟಿಕೆಟ್ ಸಿಕ್ಕರೆ ಮಾಡೋಕೆ ಬೇರೆ ಕೆಲ್ಸ ಇಲ್ಲ ಎಂದರೆ ದಯವಿಟ್ಟು ಥೇಟರ್ ಕಡೆಗೆ ಹೋಗಿ ಇಲ್ಲಾಂದ್ರೆ ಮಾಲಾಶ್ರೀ ಅವರ ವೀರ ನೋಡ್ಕೊಂಡು ಮನೆಗೆ ಹೋಗಿ. ಹಿಮ್ಮತ್ ವಾಲಾ ಎಂಬ ಅದ್ಭುತ ಕಳಪೆ ಚಿತ್ರ ಸಾಜಿದ್ ಖಾನ್ ಅಭಿಮಾನಿಗಳಿಗೆ ಮಾತ್ರ...

  ಚಿತ್ರದ ಹಣೆ ಬರಹ

  ಚಿತ್ರದ ಹಣೆ ಬರಹ

  ಅಜಯ್ ದೇವಗನ್ ಹಾಗೂ ತಮನ್ನಾ ಭಾಟಿಯಾ ಅವರು ಮುಖ್ಯ ಭೂಮಿಕೆಯಲ್ಲಿರುವ 1983ರ ಬ್ಲಾಕ್ ಬಾಸ್ಟರ್ ಚಿತ್ರದ ರಿಮೇಕ್ ಇದಾಗಿದೆ. ಕೆ ರಾಘವೇಂದ್ರರಾವ್ ಅವರ ನಿರ್ದೇಶನವಿದ್ದ ಜಿತೇಂದ್ರ ಹಾಗೂ ಶ್ರೀದೇವಿ ಅಭಿನಯದ ಈ ಚಿತ್ರ ಭರ್ಜರಿಯಾಗಿ ಓಡಿತ್ತು. ಬಾಕ್ಸಾಫೀಸ್ ನಲ್ಲಿ ಕೋಟಿಗಟ್ಟಲೇ ದುಡ್ಡು ಬಾಚಿತ್ತು

  ಹಿಮ್ಮತ್ ವಾಲ ಕಥೆ ಏನು

  ಹಿಮ್ಮತ್ ವಾಲ ಕಥೆ ಏನು

  ತನ್ನ ಅಪ್ಪ ಶಾಲಾ ಶಿಕ್ಷಕನಿಗೆ ಆದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಬಡ ತಾಯಿ ಮಗನೊಬ್ಬ ನಗರಕ್ಕೆ ಬರುತ್ತಾನೆ. ಮೂಲ ಚಿತ್ರದಲ್ಲಿ ಜಿತೇಂದ್ರ ಇಂಜಿನಿಯರ್, ಇಲ್ಲಿ ಅಜಯ್ ಹಾದಿ ಬೀದಿ ಕಾಳಗದ ಜಟ್ಟಿ. ಈ ನಡುವೆ ವಿಲನ್ ಮಗಳಾದ ನಾಯಕಿ ಜೊತೆ ಭೇಟಿಯಾಗುತ್ತದೆ. ನಾಯಕನ ತಂಗಿ, ಹೀರೋಯಿನ್ ಪ್ರಮುಖ ಪಾತ್ರದೊಂದಿಗೆ ಒಂದೆರಡು ಹಾಡು ಕುಣಿತದ ನಡುವೆ ಸೇಡಿನ ಕಥೆ ಏನಾಗುತ್ತದೆ ಎಂಬುದು ತೆರೆಯಮೇಲೆ ಕಾಣಬೇಕು

  ಹಾಡು ಕುಣಿತ ಹೇಗಿದೆ?

  ಹಾಡು ಕುಣಿತ ಹೇಗಿದೆ?

  ನೈನೋ ಮೆ ಸಪ್ನ... ತಾ ಥೈ ಸಾಂಗ್ ಬಂದರೆ ಹಳೆ ಹಾಡು ಕುಣಿತವೇ ಕಣ್ಮುಂದೆ ಬರುತ್ತದೆ. ತಮನ್ನಾ ಎಷ್ಟು ಕುಣಿದಾಡಿದರೂ ಶ್ರೀದೇವಿ ಮ್ಯಾಜಿಕ್ ಮಿಸ್, ತೋಫಾ ತೋಫಾ ಬದಲು ಧೋಕಾ ಧೋಕಾ ಎಂಬ ಹಾಡು ಕೇಳಿ ಬರುತ್ತದೆ. ಹಳೆ ಸೆಟ್ ಪುನರ್ ಸೃಷ್ಟಿಯಾದರೂ ಪ್ರೇಕ್ಷಕರ ಮನಸ್ಸಿಗೆ ಮುಟ್ಟುವುದು ಕಷ್ಟವಾಗಿದೆ.

  ಗಿಲ್ಟ್ ಕಾಡುತ್ತೆ ಅಷ್ಟೇ

  ಗಿಲ್ಟ್ ಕಾಡುತ್ತೆ ಅಷ್ಟೇ

  ಸಾಜಿದ್ ಖಾನ್ ಪೋಸ್ಟರ್ ರಿಲೀಸ್ ಮಾಡಿದಾಗ ಹುಟ್ಟಿದ್ದ ಕ್ರೇಜ್ ಟುಸ್ ಆಗಿದೆ ಚಿತ್ರಮಂದಿರದಿಂದ ಹೊರ ಬಂದ ಮೇಲೆ ಪ್ರೇಕ್ಷಕರ ಮುಖದಲ್ಲಿ ಟೈಮ್ ವೇಸ್ಟ್ ಮಾಡಿದ ಗಿಲ್ಟ್ ಕಾಡುತ್ತೆ ಅಷ್ಟೇ

  ಅಜಯ್ ಬಗ್ಗೆ ಎರಡು ಮಾತಿಲ್ಲ

  ಅಜಯ್ ಬಗ್ಗೆ ಎರಡು ಮಾತಿಲ್ಲ

  ಐವರು ಐಟಂ ಗರ್ಲ್ಸ್ , ಸೋನಾಕ್ಷಿ ಸಿನ್ಹಾ ನರ್ತನ, ಪರೇಶ್ ರಾವಲ್ ನರ್ತನ ಕೈ ಹಿಡಿದಿಲ್ಲ. ತಮನ್ನಾ ಬಳುಕಿದ್ದು ಕುಲುಕಿದ್ದು ಡ್ಯಾನ್ಸ್ ಎನ್ನಲು ಬರುವುದಿಲ್ಲ. ಅಜಯ್ ಬಗ್ಗೆ ಎರಡು ಮಾತಿಲ್ಲ. ತಾನು ಡ್ಯಾನ್ಸರ್ ಎಂದು ಪ್ರಾಮಾಣಿಕವಾಗಿ ಪ್ರೂವ್ ಮಾಡಿದ್ದಾನೆ ಪಾಪ

  ಶೇರ್ ಖಾನ್ ಬಂದೂಕ್ ವಾಲ

  ಶೇರ್ ಖಾನ್ ಬಂದೂಕ್ ವಾಲ

  ಶೇರ್ ಖಾನ್ ಬಂದೂಕ್ ವಾಲ ಆಗಿ ಮಹೇಶ್ ಮಂಜ್ರೇಕರ್ ಹೆಚ್ಚಿನ ಪರಿಣಾಮ ಬೀರುವಲ್ಲಿ ವಿಫಲರಾಗಿದ್ದಾರೆ. ನಟನೆ ಮಟ್ಟಿಗೆ ಎಲ್ಲರೂ ಉತ್ತಮ ಪ್ರಯತ್ನ ಪಟ್ಟಿದ್ದಾರೆ. ಆದರೆ, ಕಿಕ್ ಕಡಿಮೆಯಾಗಿದೆ.

  ಪರೇಶ್ ರಾವಲ್

  ಪರೇಶ್ ರಾವಲ್

  ಹಳೆ ಕಾಲದ ರೆಟ್ರೋ ಚಿತ್ರಗಳ ಅಣಕು ಮಾಡಲು ಸಹ ಆಗದಂತೆ ಈ ಚಿತ್ರ ಮೂಡಿದೆ. ವೇಷ ಭೂಷಣಗಳು ಹಳೆ ಲುಕ್ ಗಿಂತ ಹೊಸ ಲುಕ್ ನಂತೆ ಕಾಣುತ್ತದೆ.

  ಸಯಾತಿನಿ ಘೋಷ್ ಐಟಂ ನಂಬರ್

  ಸಯಾತಿನಿ ಘೋಷ್ ಐಟಂ ನಂಬರ್

  ಸಯಾತಿನಿ ಘೋಷ್ ಐಟಂ ನಂಬರ್

  ಅಜಯ್ ದೇವಗನ್

  ಅಜಯ್ ದೇವಗನ್

  ಸಾಹಸ ದೃಶ್ಯಗಳಿಗೆ ಅಜಯ್ ದೇವಗನ್ ಹೇಳಿ ಮಾಡಿಸಿದಂತೆ ನಟಿಸಿದ್ದಾರೆ.

  ಬಾಲಿವುಡ್ ನ ಅದ್ಭುತ

  ಬಾಲಿವುಡ್ ನ ಅದ್ಭುತ

  ಜರೀನಾ ವಹಬ್ ಅವರು ಅಜಯ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಚಿತ್ರ ಗೆದ್ದರೆ ಅದು ಬಾಲಿವುಡ್ ನ ಅದ್ಭುತಗಳಲ್ಲಿ ಒಂದೆನಿಸಲಿದೆ.

  English summary
  The Himmatwala remake contains quite a few over-the-top acting, typical filmy scenes between mother and son which today's youths wouldn't have experienced, Saas Bahu kind of drama and so on. There was over-the-top heroism, the protective brother, a mother giving fiery dialogues to the villain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X