»   » ಅನಂತ್ ನಾಗ್ 'ಪ್ಲಸ್' ಗೆ ವಿಮರ್ಶಕರು ಪ್ಲಸ್ ಪಾಯಿಂಟ್ ನೀಡಿದ್ರಾ?

ಅನಂತ್ ನಾಗ್ 'ಪ್ಲಸ್' ಗೆ ವಿಮರ್ಶಕರು ಪ್ಲಸ್ ಪಾಯಿಂಟ್ ನೀಡಿದ್ರಾ?

Posted By:
Subscribe to Filmibeat Kannada

ಎವರ್ಗ್ರೀನ್ ಸ್ಟಾರ್ ಅನಂತ್ ನಾಗ್ ಸೂಪರ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಸಿನಿಮಾ '+'. 'ದ್ಯಾವ್ರೇ' ಅಂತಹ ಸದಭಿರುಚಿಯ ಸಿನಿಮಾ ನಿರ್ದೇಶಿಸಿದ್ದ ಗಡ್ಡ ವಿಜಿ, '+' ಮೂಲಕ ಅಂತದ್ದೇ ಮತ್ತೊಂದು ಸಿನಿಮಾ ತರ್ತಾರೆ ಅಂತ ಎಲ್ಲರೂ ಊಹಿಸಿದ್ದರು.

ಬಹು ನಿರೀಕ್ಷೆ ಹುಟ್ಟಿಸಿದ್ದ '+' ಈ ವಾರ ರಿಲೀಸ್ ಆಗಿದೆ. '+' ಸಿನಿಮಾ ನೋಡಿದವರಿಗೆ ಲೆಕ್ಕ ಸ್ಪಷ್ಟವಾಗಿ ಅರ್ಥವಾಗಿಲ್ಲ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. [ವಿಮರ್ಶೆ : ಮೈನಸ್ ಮೈನಸ್ '+' ಆದ್ರೆ '-' ಮೈನಸ್.!]


ಆದ್ರೆ, ವಿಮರ್ಶಕರಿಗೆ '+' ಇಷ್ಟವಾಗಿದ್ಯಾ? '+' ಸಿನಿಮಾದ ಪ್ಲಸ್ ಪಾಯಿಂಟ್ಸ್ ಏನು? ಅನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನ ಪತ್ರಿಕೆಗಳು '+' ಸಿನಿಮಾ ಬಗ್ಗೆ ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ......


ಬದಲಾವಣೆಯ ಕಸರತ್ತು! - ಪ್ರಜಾವಾಣಿ

ಈ ಹಿಂದಿನ ‘ದ್ಯಾವ್ರೇ' ಚಿತ್ರದಲ್ಲಿ ನಮ್ಮ ನಡುವಿನ ವ್ಯಕ್ತಿತ್ವಗಳೇ ಸಿನಿಮಾ ಪಾತ್ರಗಳು ಎನ್ನುವಷ್ಟು ಉತ್ಕಟತೆಯಿಂದ ವಿಜಿ ಕಥೆ ಹೇಳಿದ್ದರು. ಆದರೆ, ‘ಪ್ಲಸ್‌' ಚಿತ್ರದಲ್ಲಿ ಈ ಉತ್ಕಟ ಭಾವ ಕಾಣಿಸುವುದಿಲ್ಲ. ಅವರ ಗಮನ ಬದಲಾಗಿದೆ, ಶೈಲಿಯೂ ಬೇರೆಯಾಗಿದೆ. ಕಮರ್ಷಿಯಲ್ ಆಗಿ ಸಿನಿಮಾ ಗೆಲ್ಲಿಸಬೇಕು ಎನ್ನುವ ನಿರ್ದೇಶಕರ ಕಸರತ್ತು ‘ಪ್ಲಸ್‌' ಚಿತ್ರದ ಚಿತ್ರಕಥೆಯಲ್ಲಿ ಕಾಣಿಸುತ್ತದೆ. ‘ಪ್ಲಸ್‌'ನ ಪ್ರಯತ್ನ ಉತ್ತಮವಿದ್ದರೂ ‘ತೀವ್ರ ಕಸರತ್ತು' ಕಥೆಗೆ ಭಾರವಾಗಿಯೇ ತೋರುತ್ತದೆ. ಸುರಾಸುರರ ಕಲ್ಪನೆಯನ್ನು ಮೆಚ್ಚುವುದು ಕಷ್ಟಸಾಧ್ಯ. - ಡಿ.ಎಂ.ಕುರ್ಕೆ ಪ್ರಶಾಂತ


ಪ್ಲಸ್ : ಪಾಸಿಟಿವ್ ಪ್ಲಸ್ ನೆಗೆಟಿವ್ - ವಿಜಯ ಕರ್ನಾಟಕ

ಪ್ರೀತಿಪ್ರೇಮ, ಮಚ್ಚುಲಾಂಗು ಸಿನಿಮಾಗಳ ನಡುವೆ ಅಪರೂಪಕ್ಕೊಮ್ಮೆ ವಿಭಿನ್ನ ಪ್ರಯತ್ನಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತವೆ. ಅನಂತ್ ನಾಗ್‌ಗೆ ವಿಭಿನ್ನ ಗೆಟಪ್ ನ ವಿಜ್ಞಾನಿ ಪಾತ್ರ ನೀಡಿರುವ 'ಪ್ಲಸ್' ಸಿನಿಮಾ ಇಂತಹ ಪ್ರಯತ್ನಗಳಿಗೆ ಹೊಸ ಸೇರ್ಪಡೆ. ಕೊನೆಯವರೆಗೂ ಒಂದಿಷ್ಟು ಕುತೂಹಲವನ್ನು ಕಾಯ್ದಿಟ್ಟುಕೊಳ್ಳುವುದು ಚಿತ್ರದ ಪ್ಲಸ್ ಪಾಯಿಂಟ್. ಆದರೆ, ಕೊನೆಯವರೆಗೂ ಚಿತ್ರಕಥೆ ಕುಂಟುತ್ತ ಸಾಗುವುದು ನೆಗೆಟಿವ್ ಪಾಯಿಂಟ್. - ಪ್ರವೀಣ್ ಚಂದ್ರ


ಅನಂತ್ ನಾಗ್ ಇದ್ದೂ ಪ್ಲಸ್ ಇಲ್ಲ - ಕನ್ನಡಪ್ರಭ

ಗಡ್ಡ ವಿಜಿ ನಿರ್ದೇಶನದ 'ಪ್ಲಸ್' ಸಿನೆಮಾವನ್ನು ಮಾನಸಿಕ ಅವಸ್ಥೆಯ ಬಗೆಗಿನ ಚಿತ್ರ ಎಂದು ವರ್ಗೀಕರಿಸಲಾಗದ, ಸೇಡು ಪ್ರಧಾನ ರಿವೆಂಜ್ ಮೂವಿ ಎಂದು ಕೂಡ ವರ್ಗೀಕರಿಸಲು ಮನಸ್ಸಾಗದೆ, ಒಳ್ಳೆಯ ಮನರಂಜನೆ ಸಿನಿಮಾ ಎಂದಂತೂ ಹೇಳಲೇ ಆಗದ, ಇಕ್ಕಟ್ಟಿನ ಸಿನೆಮಾ. ಕಥೆಯಲ್ಲಿ ಪಾತ್ರಗಳ ಸೃಷ್ಟಿ ಹೇಗಿರಬಾರದು ಎಂಬುದಕ್ಕೆ ಪಠ್ಯಪುಸ್ತಕದ ಉದಾಹರಣೆಯಂತಿದೆ ಈ ಸಿನೆಮಾ. ಯಾವ ಪಾತ್ರದಲ್ಲೂ ಗಟ್ಟಿತನವಿಲ್ಲದೆ, ಎಲ್ಲರಿಗೂ ನಾನು ಸಿನೆಮಾದಲ್ಲಿ ಪಾತ್ರ ನೀಡುತ್ತೇನೆ ಎಂಬ ದಾರ್ಷ್ಟ್ಯದಿಂದ ಮನಸಾಇಚ್ಛೆ ಪಾತ್ರಗಳ ಪಟ್ಟಿ ಬೆಳೆದು, ಅರ್ಥಹೀನ ಚಿತ್ರಕಥೆಯೊಂದಿಗೆ ನಿರ್ಮಾಪಕನಾಗಿ, ಕಥೆಗಾರನಾಗಿ, ನಟನಾಗಿ ಹೊರಹೊಮ್ಮಿದ್ದಾರೆ ರಿತೇಶ್. - ಗುರುಪ್ರಸಾದ್


Movie Review : Plus - Bangalore Mirror

Plus is an experiment wrapped in entertainment. Director Gadda Viji mixes fantasy, science (fiction) and adopts a deliberately disruptive narrative to create an experience rather than a film. He succedes to quite an extent. But not everything is a positive output. The film is found wanting in some aspects like the CG budget and ease of watching and understanding that common audience expect. - Shyam Prasad S


English summary
Kannada Actor Anant Nag starrer 'Plus' movie has received mixed response from the critics. Here is the collection of reviews by Top News Papers of Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada