Just In
Don't Miss!
- News
ಶಿವಮೊಗ್ಗದಲ್ಲಿ ಭಾರೀ ಸ್ಫೋಟ; ಸಿಬಿಐ ತನಿಖೆ ಇಲ್ಲ
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Sports
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಿಯಾಂಕ ವಿಮರ್ಶೆ: ಗಂಡ-ಹೆಂಡತಿ, ಗುಲಾಬಿ ಹುಡುಗ ಮತ್ತು ಕೊಲೆ
ಪ್ರೀತಿ ಅಂದರೆ ಏನು? ಪ್ರೀತಿ ಎಂದರೆ ಪವಿತ್ರ, ಅದೊಂದು ಆಕರ್ಷಣೆ, ಪ್ರೀತಿಯಂದರೆ ಜೀವನ, ಬದುಕು ಹೀಗೆ ನೂರಾರು ಉತ್ತರಗಳು ನಮಗೆ ಎದುರಾಗುತ್ತವೆ. ಪ್ರೀತಿ ಅಂದರೆ ಅಪಾಯಕಾರಿ ಕೂಡಾ! ಹೌದು... ಹೀಗೆಂದು 'ಪ್ರಿಯಾಂಕ' ಚಿತ್ರದ ಮೂಲಕ ದಿನೇಶ್ ಬಾಬು 'ಪ್ರಿಯಾಂಕ' ಚಿತ್ರದ ಮೂಲಕ ಹೇಳಿದ್ದಾರೆ.
ಫೇಸ್ ಬುಕ್ ಸಂದೇಶಗಳ ಆಟ ತರುವ ತಂದಿಡುವ ಸಂಕಟ, ನಿಜವಾದ ಪ್ರೀತಿಯ ಹುಡುಕಾಟ, ಅದು ಕಳೆದಾಗ ಉಂಟಾಗುವ ತಳಮಳ, ಕೊಲೆ ಆರೋಪ, ತನಿಖೆ ಎಲ್ಲವೂ ಚಿತ್ರದಲ್ಲಿದೆ.[ಮೈಸೂರಿನಲ್ಲಿ ನಡೆದ ಕ್ರೈಂ ಸ್ಟೋರಿಯೇ 'ಪ್ರಿಯಾಂಕ' ಸಿನಿಮಾ!]
ಮೂರು ಪಾತ್ರಗಳಲ್ಲಿಯೇ ಇಡೀ ಚಿತ್ರವನ್ನು ಕಟ್ಟಿಕೊಡಲಾಗಿದೆ. ಗಂಡ-ಹೆಂಡತಿ ಮತ್ತು ಅವನು...ಗಂಡ ಸಿದ್ಧಾಂತ್(ಶಿವಧ್ವಜ್), ಹೆಂಡತಿ ಪ್ರಿಯಾಂಕಾ(ಪ್ರಿಯಾಂಕಾ ಉಪೇಂದ್ರ) ಮತ್ತು ಅವನು ಅಶ್ವಥ್(ತೇಜಸ್) ನಡುವೆ ನಡೆಯುವ ಘಟನಾವಳಿಗಳು ಮತ್ತು ಸಿದ್ಧಾಂತ್ ಕೊಲೆ, ಕೊಲೆ ಸುತ್ತಲಿನ ತನಿಖೆಯನ್ನೇ ಬಾಬು ಸಿನಿಮಾವನ್ನಾಗಿಸಿದ್ದಾರೆ.[ಪ್ರಿಯಾಂಕ ಚಿತ್ರದ ಹಿಂದಿನ ನೈಜ ಕತೆ ಯಾವುದು?]
ಗುಲಾಬಿ ಹೂವನ್ನು ಅತಿಯಾಗಿ ಪ್ರೀತಿಸುವ ಹುಡುಗ, ಗಂಡ-ಹೆಂಡತಿಯ ಪವಿತ್ರ ಪ್ರೀತಿಯ ನಡುವೆ ಅದು ಹೇಗೆ ಮುಳ್ಳಾಗುತಾನೆ? ಸಿದ್ದಾಂತ್ ಕೊಲೆಯನ್ನು ನಾನೇ ಮಾಡಿದ್ದೇನೆ ಎಂದು ಒಪ್ಪಿಕೊಂಡರೂ ಕಾನೂನಿನ ಕಣ್ಣಿಂದ ಹೇಗೆ ತಪ್ಪಿಸಿಕೊಳ್ಳುತ್ತಾನೆ? ಆತ ಮಾಡಿದ ಘೋರ ಕೃತ್ಯಕ್ಕೆ ಅಂತಿಮವಾಗಿ ಶಿಕ್ಷೆ ನೀಡುವರು ಯಾರು? ಎಂಬುದನ್ನು ನೋಡಲು ಚಿತ್ರಮಂದಿರಕ್ಕೆ ತೆರಳಬಹುದು.

ನೈಜ ಘಟನೆ
ಚಿತ್ರದ ಬಹುತೇಕ ದೃಶ್ಯಗಳಲ್ಲಿ ಪರಧೆಯ ಮೇಲೆ ದಿನಾಂಕ ಮತ್ತು ಸಮಯನ್ನು ತೋರಿಸಲಾಗುತ್ತದೆ. ಬಾಬು ಹೇಳುವಂತೆ ಇದು 2014 ಜೂನ್ ನಲ್ಲಿ ಮೈಸೂರಿನಲ್ಲಿ ನಡೆದ ಇಂಜಿನಿಯರ್ ಒಬ್ಬರ ಕೊಲೆ.

ಎಲ್ಲದಕೂ ಕಾರಣ ಫೇಸ್ ಬುಕ್
ಮದುವೆಯಾಗಿದ್ದ ಪ್ರಿಯಾಂಕಾರನ್ನು ಮಾಲ್ ವೊಂದರಲ್ಲಿ ಕಂಡು ಭ್ರಮೆಗೆ ಒಳಗಾಗುವ ಅಶ್ವಥ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳಿಸುವುದರಲ್ಲಿಂದ ಕತೆ ಆರಂಭ.

ಪವಿತ್ರ ಪ್ರೀತಿ
ಶಿವಧ್ವಜ್ ಮತ್ತು ಪ್ರಿಯಾಂಕಾ ಉಪೇಂದ್ರ ನಡುವಣ ಕೆಮೆಸ್ಟ್ರಿಯನ್ನು ಬಾಬು ಚೆನ್ನಾಗಿಯೇ ಸೆರೆಹಿಡಿದಿದ್ದಾರೆ. ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಮೂರು ಹಾಡುಗಳನ್ನು ಚಿತ್ರೀಕರಣ ಮಾಡಲಾಗಿದೆ.

ಅಮೃತ ವರ್ಷಿಣಿ ಛಾಯೆ
ಪ್ರಿಯಾಂಕಾ ನೋಡಿದ ನಿಮಗೆ ರಮೇಶ್ ಅರವಿಂದ್-ಸುಹಾಸಿನಿ-ಶರತ್ ಬಾಬು ಅಭಿನಯದ ಅಮೃತ ವರ್ಷಿಣಿ ನೆನಪಾಗದಿರಲು ಸಾಧ್ಯವೇ ಇಲ್ಲ. ಅಲ್ಲಿನ ಕತೆಗೂ ಇಲ್ಲಿನನ ಕತೆಗೂ ಸಾಮ್ಯತೆ ಇದೆಯಲ್ಲಾ? ಎಂದು ಒಮ್ಮೆ ಅನಿಸಿದರೂ ಆಶ್ಚರ್ಯವಿಲ್ಲ.

ನಗಿಸುವ ಪ್ರಕಾಶ್ ರಾಜ್
ತೇಜಸ್ ನನ್ನು ಇಂಟ್ರಾಗೇಟ್ ಮಾಡುವ ಎಸಿಪಿ ಸತ್ಯ ನಾಡಿಗ್ (ಪ್ರಕಾಶ್ ರಾಜ್) ಮ್ಯಾನರಿಸಂ ಸಂಪೂರ್ಣ ವಿಭಿನ್ನ. ಬಾಯಲ್ಲಿ ಸದಾ ಬೀಡಾ ತುಂಬಿಕೊಂಡು, ಟೀ-ಕಾಫಿ ಹೀರುತ್ತ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡುತ್ತಲೇ ತಮ್ಮ ಕೆಲಸ ಮಾಡಿ ಮುಗಿಸುತ್ತಾರೆ.

ಅದ್ದೂರಿ ಚಿತ್ರವಲ್ಲ
ಅದ್ದೂರಿ ಚಿತ್ರಗಳ ಸಾಲಿಗೆ ಪ್ರಿಯಾಂಕ ಸೇರುವುದಿಲ್ಲ. ನೈಜ ಘಟನೆ ಮತ್ತು ಅದಕ್ಕೊಂದಿಷ್ಟು ಕಲ್ಪನೆಗಳನ್ನು ಇಟ್ಟುಕೊಂಡು ಬಾಬು ಚಿತ್ರಕತೆ ಸಿದ್ಧಮಾಡಿದ್ದಾರೆ. ಒಂದು ಹಾಡು ಕೇಳಲು ಇಂಪಾಗಿದ್ದರೂ ಹೊರ ಬರುವ ವೇಳೆ ತಲೆಯಲ್ಲಿ ಇರುವುದಿಲ್ಲ.

ಪ್ರಿಯಾಂಕ ಉಪೇಂದ್ರ ಬೆಸ್ಟ್
ಇಡೀ ಚಿತ್ರವನ್ನು ಆವರಿಸಿಕೊಂಡಿರುವ ಪ್ರಿಯಾಂಕಾ ಉಪೇಂದ್ರ ಅಭಿನಯಕ್ಕೆ ಫುಲ್ ಮಾರ್ಕ್ಸ್. ಕ್ಲೈಮ್ಯಾಕ್ಸ್ ವೇಳೆಯಲ್ಲಿ ಪ್ರಿಯಾಂಕಾ ಉಪೇಂದ್ರ ಅಭಿನಯ ನೋಡದಿದ್ದರೆ ನಷ್ಟ.

ಕಂಠದಾನ ಕಲಾವಿದರು
ಅನುಪಮಾ ಭಟ್ ಪ್ರಿಯಾಂಕ ಉಪೇಂದ್ರ ಅವರಿಗೆ, ವಿನಾಯಕ ಜೋಷಿ ಶಿವಧ್ವಜ್ ಗೆ ಕಂಠದಾನ ಮಾಡಿರುವುದು ಚಿತ್ರದಲ್ಲಿ ಗಮನಿಸಬೇಕಾದ ಅಂಶ. ಅನುಪಮಾ ಭಟ್ ಧ್ವನಿ ಒಮ್ಮೊಮ್ಮೆ ಮಿಸ್ ಮ್ಯಾಚ್ ಆಗುವುದನ್ನು ಗಮನಿಸಬಹುದು.

ಫೈನಲ್ ಸ್ಟೇಟ್ ಮೆಂಟ್
ಸಾಮಾಜಿಕ ತಾಣಗಳ ವ್ಯಾಮೋಹಕ್ಕೆ ಸಿಕ್ಕಿ ಅಥವಾ ಅದನ್ನೇ ಗೀಳಾಗಿಸಿಕೊಂಡ ಮಂದಿ ನೀವಾಗಿದ್ದರೆ 'ಪ್ರಿಯಾಂಕ' ಚಿತ್ರವನ್ನು ಖಂಡಿತ ಒಮ್ಮೆ ವೀಕ್ಷಣೆ ಮಾಡಲೇಬೇಕು. ಆ ಕಡೆ ಕುಳಿತ ವ್ಯಕ್ತಿಯ ಮನಸ್ಥಿತಿ ಅರಿಯದೇ ನಾವು ಮಾಡುವ ಮೆಸೇಜ್ ಗಳು ಅಥವಾ ಕೊಡುವ ಪ್ರತಿಕ್ರಿಯೆ ಎಂಥ ಅನರ್ಥಕ್ಕೆ ಕಾರಣವಾಗಬಹುದು ಎಂಬುದನ್ನು ಚಿತ್ರ ನೋಡಿ ತಿಳಿದುಕೊಳ್ಳಬಹುದು.