For Quick Alerts
  ALLOW NOTIFICATIONS  
  For Daily Alerts

  'ಸೆಕೆಂಡ್ ಹಾಫ್' ಚಿತ್ರ ನೋಡಿದ ವಿಮರ್ಶಕರು ಏನಂದ್ರು.?

  By Bharath Kumar
  |

  ಪ್ರಿಯಾಂಕಾ ಉಪೇಂದ್ರ ಅಭಿನಯದ 'ಸೆಕೆಂಡ್ ಹಾಫ್' ಸಿನಿಮಾ ಬಿಡುಗಡೆಯಾಗಿದ್ದು, ಜನರಿಂದ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಪೊಲೀಸ್ ಕಾನ್ಸ್ ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಅವರ ಮೇಲೆ ನಿರೀಕ್ಷೆ ಬೆಟ್ಟದಷ್ಟಿತ್ತು. ಆದ್ರೆ, ಈ ನಿರೀಕ್ಷೆಯನ್ನ ತಲುಪುವಲ್ಲಿ ಚಿತ್ರತಂಡ ವಿಫಲವಾಗಿದೆ ಎಂಬುದು ಜನರ ಅಭಿಪ್ರಾಯ.

  ಆದ್ರೆ, ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವ 'ಸೆಕೆಂಡ್ ಹಾಫ್' ಚಿತ್ರಕ್ಕೆ ವಿಮರ್ಶಕರು ಏನಂದ್ರು. ಸಿನಿಮಾದಲ್ಲಿ ಏನಿಷ್ಟ ಆಯ್ತು, ಏನಿಷ್ಟ ಆಗಿಲ್ಲ. ಪ್ರಿಯಾಂಕಾ ನಟನೆ ಹೇಗಿದೆ.? ನಿರ್ದೇಶಕರ ಕೆಲಸ ಹೇಗಿದೆ.? ಸಂಗೀತ, ಕ್ಯಾಮೆರಾ, ಕಥೆ ಎಂಬುದನ್ನ ತಮ್ಮದೇ ಪದಗಳಲ್ಲಿ ವರ್ಣಿಸಿದ್ದಾರೆ.

  ವಿಮರ್ಶೆ : ಫಸ್ಟ್ ಹಾಫ್ ಸಪ್ಪೆ, 2nd ಹಾಫ್ ಪರ್ವಾಗಿಲ್ಲವಿಮರ್ಶೆ : ಫಸ್ಟ್ ಹಾಫ್ ಸಪ್ಪೆ, 2nd ಹಾಫ್ ಪರ್ವಾಗಿಲ್ಲ

  ಯೋಗಿ ದೇಶಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ, ನಿರಂಜನ್, ಸುರಭಿ ಸಂತೋಷ್, ಶರತ್ ಲೋಹಿತಾಶ್ವ, ಶಾಲಿನಿ, ಸತ್ಯಜಿತ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಚೇತನ್ ಸೋಸ್ಕ ಸಂಗೀತ, ಆರ್.ಕೆ ಶಿವಕುಮಾರ್ ಕ್ಯಾಮೆರಾ ಕೆಲಸ ನಿರ್ವಹಿಸಿದ್ದಾರೆ. ಕರ್ನಾಟಕದ ಜನಪ್ರಿಯ ಪತ್ರಿಕೆಗಳಲ್ಲಿ ಸೆಕೆಂಡ್ ಹಾಫ್ ಚಿತ್ರದ ಬಗ್ಗೆ ಪ್ರಕಟವಾಗಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿ....

  ಹೆಸರಿಗೆ ತಕ್ಕಂತ್ತಿರುವ ಸಿನಿಮಾ

  ಹೆಸರಿಗೆ ತಕ್ಕಂತ್ತಿರುವ ಸಿನಿಮಾ

  ''ಸಿನಿಮಾದ ಫಸ್ಟ್‌ ಹಾಫ್‌ ಏನಂದರೂ ಏನೂ ಇಲ್ಲ. ಪೊಲೀಸ್‌ ಪೇದೆ ಅನುರಾಧ (ಪ್ರಿಯಾಂಕಾ ಉಪೇಂದ್ರ) ಮತ್ತು ರತ್ನಾ (ಶಾಲಿನಿ) ಸಿಸಿ ಟಿವಿಗಳನ್ನು ನೋಡುವುದರಲ್ಲೇ ಕಾಲಹರಣ ಮಾಡುತ್ತಾರೆ. ಬಹುತೇಕ ಪಾತ್ರಗಳನ್ನು ಇದೇ ಸಿಸಿ ಟಿವಿಯಲ್ಲೇ ತೋರಿಸುವುದರಿಂದ ಬೋರೋ ಬೋರು. ಈ ಚಿತ್ರದ ಮೂಲಕ ಉಪೇಂದ್ರರ ಸಹೋದರನ ಮಗ ನಿರಂಜನ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಗೆದ್ದಿದ್ದಾರೆ. ಪೊಲೀಸ್‌ ಪಾತ್ರದಲ್ಲಿ ಪ್ರಿಯಾಂಕಾ ಕೂಡ ಮನಸ್ಸು ಗೆಲ್ಲುತ್ತಾರೆ. ಆಯ್ದುಕೊಂಡಿರುವ ಎಳೆಯು ಚೆನ್ನಾಗಿದ್ದರೂ, ಅದನ್ನು ಹೇಳುವ ರೀತಿಯಲ್ಲಿ ಎಡವಿದ್ದಾರೆ ನಿರ್ದೇಶಕರು'' - ವಿಜಯ ಕರ್ನಾಟಕ

  ಪತ್ತೇದಾರಿ ಪ್ರಿಯಾಂಕಾ

  ಪತ್ತೇದಾರಿ ಪ್ರಿಯಾಂಕಾ

  ''ಅನುರಾಧಾ (ಪ್ರಿಯಾಂಕಾ ಉಪೇಂದ್ರ) ಪೊಲೀಸ್‌ ಕಾನ್‌ಸ್ಟೆಬಲ್. ಸಿ.ಸಿ ಕ್ಯಾಮೆರಾ ನಿಯಂತ್ರಣ ಕೊಠಡಿಯಲ್ಲಿ ಆಕೆಯ ಕೆಲಸ. ಪರದೆ ಮೇಲಿನ ಜನರ ದಯನೀಯ ಬದುಕು ಕಂಡಾಗ ಆಕೆಗೆ ಮರುಕ. ಇನ್ನೊಂದೆಡೆ ಶರಣ್ಯಳ (ಸುರಭಿ) ಜೀವಪರ ಕೆಲಸ ಕಂಡರೆ ಆಕೆಗೆ ಅಚ್ಚುಮೆಚ್ಚು. ಅವಳ ದಿನಚರಿ ನೋಡುವುದೇ ಆಕೆಯ ನಿತ್ಯದ ಕಾಯಕ. ಪೊಲೀಸ್‌ ಕಾನ್‌ಸ್ಟೆಬಲ್ ಪಾತ್ರಧಾರಿಯಾಗಿ ಪ್ರಿಯಾಂಕಾ ಉಪೇಂದ್ರ ಇಷ್ಟವಾಗುತ್ತಾರೆ. ಶರತ್ ಲೋಹಿತಾಶ್ವ ಅವರದು ಅಚ್ಚುಕಟ್ಟಾದ ನಟನೆ. ಸುರಭಿ ಮತ್ತು ನಿರಂಜನ್ ನಟನೆ ಇನ್ನೂ ಎಳಸು. ಚೇತನ್‌ ಸಂಗೀತ ಸಂಯೋಜಿಸಿರುವ ಒಂದು ಹಾಡು ಗುನುಗುವಂತಿದೆ. ಆರ್‌.ಕೆ. ಶಿವಕುಮಾರ್‌ ಅವರ ಕ್ಯಾಮೆರಾದಲ್ಲಿ ವಿಶೇಷ ಕೈಚಳಕವೇನೂ ಇಲ್ಲ.'' - ಪ್ರಜಾವಾಣಿ

  ಫಸ್ಟ್ ಹಾಫ್ ಒಗಟು ಸೆಕೆಂಡ್ ಹಾಫ್ ಉತ್ತರ

  ಫಸ್ಟ್ ಹಾಫ್ ಒಗಟು ಸೆಕೆಂಡ್ ಹಾಫ್ ಉತ್ತರ

  ''ಮಧ್ಯಂತರ ಮುಗಿದು, ದ್ವಿತೀಯಾರ್ಧ ಕಥೆ ತೆರೆದುಕೊಂಡಾಗಲೇ ಗೊತ್ತಾಗುವುದು; ನಿರ್ದೇಶಕರು ಈ ಚಿತ್ರಕ್ಕೆ ‘ಸೆಕೆಂಡ್ ಹಾಫ್' ಎಂದು ಶೀರ್ಷಿಕೆ ಯಾಕೆ ಇಟ್ಟಿದ್ದಾರೆ ಅಂತ. ಇಲ್ಲಿ ಏನೋ ನಡೆಯುತ್ತಿದೆಯಲ್ಲ ಎಂಬ ಕುತೂಹಲದ ಪ್ರಶ್ನೆಯನ್ನು ಸೃಷ್ಟಿಸುವ ಸಲುವಾಗಿಯೇ ಮೊದಲರ್ಧವನ್ನು ಮೀಸಲಿಡಲಾಗಿದೆ. ಏನು ನಡೆಯಿತು? ಹೇಗೆ ನಡೆಯಿತು? ಯಾರೆಲ್ಲ ಭಾಗಿಯಾಗಿದ್ದರು ಎಂಬಿತ್ಯಾದಿ ವಿವರಗಳು ತೆರೆದುಕೊಳ್ಳುವುದೇ ಸೆಕೆಂಡ್ ಹಾಫ್​ನಲ್ಲಿ. ಪೊಲೀಸ್ ಕಾನ್ಸ್​ಟೆಬಲ್ ಪಾತ್ರಕ್ಕೆ ಜೀವ ತುಂಬಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಿದ್ದಾರೆ ಪ್ರಿಯಾಂಕಾ. ಮೊದಲಾರ್ಧದಲ್ಲಿ ನಿರಂಜನ್ ಮತ್ತು ಸುರಭಿಯದ್ದು ಕೇವಲ ಸಿಸಿಟಿವಿ ಮೂಕಾಭಿನಯ! ಆ ಮೂಕಾಭಿನಯದ ಅರ್ಥವೇನು ಎಂಬುದನ್ನು ತಿಳಿದುಕೊಳ್ಳಲು ‘ಸೆಕೆಂಡ್ ಹಾಫ್' ಪೂರ್ತಿ ನೋಡಬೇಕು '' -ವಿಜಯವಾಣಿ

  Bitter halves - 2nd Half movie review

  Bitter halves - 2nd Half movie review

  ''This is one investigative saga that will drive Sherlock Holmes nuts, Hercule Poirot crazy, leave Byomkesh Bakshi unbalanced and force Pattedara Purushottama to retire. The narration is completely detached from the audience. It seems the film was not made for the audience. The idea that someone would watch the film to understand it is missing. The constable goes on doing what she wants, keeping all the story, suspense, investigation methods she uses, to herself'' - bangalore mirror

  English summary
  Kannada actress priyanka upendra starrer kannada movie 2nd Half critics review. the movie has released on may 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X