»   » 'ಆರ್ಯನ್' ವಿಮರ್ಶೆ: ಅಭಿಮಾನಿಗಳ ಆಸೆಗೆ ತಣ್ಣೀರು

'ಆರ್ಯನ್' ವಿಮರ್ಶೆ: ಅಭಿಮಾನಿಗಳ ಆಸೆಗೆ ತಣ್ಣೀರು

By: ಭರತ್ ಭಟ್
Subscribe to Filmibeat Kannada

ಕನ್ನಡದ ಬಹುನಿರೀಕ್ಷಿತ ಚಿತ್ರ 'ಆರ್ಯನ್' ಅಭಿಮಾನಿಗಳಲ್ಲಿ ಹುಟ್ಟುಹಾಕಿದ್ದ ನಿರೀಕ್ಷೆಗಳು ಅಷ್ಟಿಷ್ಟಲ್ಲ. ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ಕೋಚ್ ಆಗಿ ಅಭಿನಯಿಸಿರುವುದು, ರಮ್ಯಾ ಅಥ್ಲೀಟ್ ಆಗಿ ಕಾಣಿಸಿಕೊಂಡಿರುವುದು ಚಿತ್ರದ ಬಗೆಗಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿತ್ತು. ಆದರೆ ಚಿತ್ರ ನೋಡಿದರೆ ಖಂಡಿತ ನಿರಾಸೆ ತಪ್ಪಿದ್ದಲ್ಲ.

ಶಿವಣ್ಣನ ಸಿನಿಮಾನಾ ಇದು ಎಂದು ಮತ್ತೆ ಮತ್ತೆ ಕೇಳಿಕೊಳ್ಳುವಂತಿದೆ. ಮಂಡ್ಯ ರಾಜಕೀಯದಲ್ಲಿ ಮಿಂದು ಬಂದ ರಮ್ಯಾ ಅಭಿಮಾನಿಗಳೂ ತೀವ್ರ ನಿರಾಸೆ ಪಡಬೇಕಾಗುತ್ತದೆ. ಮೂಲ ನಿರ್ದೇಶಕರಾದ ಡಿ.ರಾಜೇಂದ್ರ ಬಾಬು ಅವರು ಅಕಾಲಿಕ ಮರಣದ ಬಳಿಕ ಚಿತ್ರವನ್ನು ಚಿ ಗುರುದತ್ ಅವರು ನಿರ್ದೇಶಿಸಿದರು.

ಈ ಚಿತ್ರಕ್ಕೆ ಉಪ್ಪು ಹುಳಿ ಒಬ್ಬರು ಖಾರ ಇನ್ನೊಬ್ಬರು ಹಾಕಿದ ಕಾರಣಕ್ಕೋ ಏನೋ ರುಚಿ ಹದಗೆಟ್ಟಿದೆ. ಅತೀವ ನಿರೀಕ್ಷೆಗಳನ್ನು ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರುವ ಅಭಿಮಾನಿಗಳಿಗೆ 'ಆರ್ಯನ್' ಚಿತ್ರ ತೀವ್ರ ನಿರಾಸೆ ಉಂಟು ಮಾಡುತ್ತದೆ.

Rating:
1.5/5

ಚಿತ್ರ: ಆರ್ಯನ್
ನಿರ್ಮಾಪಕರು: ಧ್ರುವ ದಾಸ್, ಡಿ ಕಮರ್
ನಿರ್ದೇಶನ: ಡಿ.ರಾಜೇಂದ್ರ ಬಾಬು, ಚಿ.ಗುರುದತ್
ಸಂಗೀತ ನಿರ್ದೇಶನ: ಜೆಸ್ಸಿ ಗಿಫ್ಟ್
ಛಾಯಾಗ್ರಹಣ: ಚಂದ್ರಶೇಖರ್
ಸಂಭಾಷಣೆ: ಜನಾರ್ಧನ ಮಹರ್ಷಿ
ಪಾತ್ರವರ್ಗ
: ಶಿವರಾಜ್ ಕುಮಾರ್, ರಮ್ಯಾ, ಶರತ್ ಬಾಬು, ಬುಲೆಟ್ ಪ್ರಕಾಶ್, ವಿನಯಾ ಪ್ರಸಾದ್, ಅರ್ಚನಾಗುಪ್ತ ಮುಂತಾದವರು.

ಚಿತ್ರದ ಮೈನಸ್ ಪಾಯಿಂಟ್ ಗಳು ಹಿಂಗಿವೆ

ಚಿತ್ರದಲ್ಲಿ ಮನಮುಟ್ಟುವ ಸನ್ನಿವೇಶಗಳಾಗಲಿ, ಸಂದೇಶವಾಗಲಿ ಇಲ್ಲ. ಇನ್ನು ಚಿತ್ರದ ಮೇಕಿಂಗ್ ಸಹ ಅಷ್ಟಕ್ಕಷ್ಟೆ. ನಿರೂಪಣೆಯಲ್ಲಿ ಬಿಗಿತನ ಇಲ್ಲದಿರುವುದು, ಕಥೆಯಲ್ಲಿ ಕುತೂಹಲ, ತಿರುವುಗಳು ಇಲ್ಲದಿರುವುದು ಇನ್ನೊಂದು ಮೈನಸ್ ಪಾಯಿಂಟ್.

ಇನ್ನು ಚಿತ್ರದ ಕಥೆಯ ವಿಚಾರಕ್ಕೆ ಬಂದರೆ

ಇನ್ನು ಚಿತ್ರದ ಕಥೆಯ ವಿಚಾರಕ್ಕೆ ಬಂದರೆ, ಸಿಂಗಪುರ್ ನ ಸ್ಫೋರ್ಟ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಯನ್ (ಶಿವರಾಜ್ ಕುಮಾರ್) ಎಂಬ ಕೋಚ್ ಒಬ್ಬನ ಸುತ್ತ ಸುತ್ತುವ ಕಥೆ ಇದು. ಅಥ್ಲೀಟ್ ಗಳಿಗೆ ತರಬೇತಿ ನೀಡುವ ಆರ್ಯನ್ ಮೆಚ್ಚಿನ ವಿದ್ಯಾರ್ಥಿನಿ ಶ್ವೇತಾ ಪಾತ್ರದಲ್ಲಿ ರಮ್ಯಾ ಅಭಿನಯಿಸಿದ್ದಾರೆ.

ಇಬ್ಬರನ್ನೂ ದೂರ ಮಾಡುವ ಡೋಪ್ ಟೆಸ್ಟ್

ಶ್ವೇತಾರನ್ನು ಆರ್ಯನ್ ಪ್ರೀತಿಸುತ್ತಿರುತ್ತಾನೆ ಕೂಡ. ಆದರೆ ಶ್ವೇತಾ ಅವರು ಉದ್ದೀಪನ ಮದ್ದು ಪರೀಕ್ಷೆ (ಡೋಪ್ ಪರಿಕ್ಷೆ) ಯಲ್ಲಿ ಸಿಕ್ಕಿಬಿದ್ದು ಎರಡು ವರ್ಷಗಳ ಕಾಲ ಅಥ್ಲೀಟ್ ನಿಂದ ನಿಷೇಧಕ್ಕೆ ಒಳಗಾಗುತ್ತಾರೆ. ಇದಕ್ಕೆಲ್ಲಾ ಆರ್ಯನ್ ಅವರೇ ಕಾರಣ ಎಂದು ಶ್ವೇತಾ ಅವನಿಂದ ದೂರವಾಗುತ್ತಾಳೆ. ಇಬ್ಬರ ಸ್ನೇಹಕ್ಕೆ ಡೋಪ್ ಟೆಸ್ಟ್ ಅಡ್ಡಿ ಬಂದು ದೂರ ಸರಿಯುತ್ತಾರೆ.

ಶ್ವೇತಾ ಮುಂದಿನ ಕಥೆ ಏನು?

ಡೋಪ್ ನ ಗ್ಯಾಪ್ ನಿಂದ ತಿರುವು ಪಡೆದುಕೊಳ್ಳುವ ಕಥೆ ಇನ್ನೊಂದು ಮಜಲನ್ನು ತಲುಪುತ್ತದೆ. ಪ್ರೇಕ್ಷಕರು ಅಷ್ಟೊತ್ತಿಗೆ ಸುಸ್ತಾಗಿರುತ್ತಾರೆ. ತನ್ನ ಬಾಸ್ ಜೊತೆ ಶ್ವೇತಾಗೆ ಮದುವೆಯಾಗಿರುತ್ತದೆ. ಇಷ್ಟಕ್ಕೂ ಏನಾಯಿತು? ತನ್ನ ಮೇಲಿನ ಆಪಾದನೆಯಿಂದ ಆರ್ಯನ್ ಹೇಗೆ ಹೊರಬರುತ್ತಾನೆ, ಶ್ವೇತಾ ಮುಂದಿನ ಕಥೆ ಏನು ಎಂಬುದೇ ಚಿತ್ರದ ಕಥಾವಸ್ತು.

ಆನ್ ಸ್ಕ್ರೀನ್ ಕೆಮಿಸ್ಟ್ರಿ ವರ್ಕ್ ಔಟ್ ಆಗಿಲ್ಲ

ಮುಖ್ಯವಾಗಿ ಚಿತ್ರದ ಪ್ರಮುಖ ಆಕರ್ಷಣೆಯಾಗಬೇಕಿದ್ದ ಶಿವಣ್ಣ ಹಾಗೂ ರಮ್ಯಾ ಅವರ ಆನ್ ಸ್ಕ್ರೀನ್ ಕೆಮಿಸ್ಟ್ರಿ ವರ್ಕ್ ಔಟ್ ಆಗಿಲ್ಲ. ಇನ್ನು ಚಿತ್ರದ ಕಥೆಯಲ್ಲಿ ಕುತೂಹಲ ಇಲ್ಲದೆ ಮುಂದಿನ ಕಥೆ ಏನು ಎಂಬುದನ್ನು ಪ್ರೇಕ್ಷಕರು ಸುಲಭವಾಗಿ ಗೊತ್ತಾಗುತ್ತದೆ.

ಜನಜಂಗುಳಿ ಗದ್ದಲದ ಧ್ವನಿಗ್ರಹಣ ತುಂಬಾ ಕಳಪೆ

ಇನ್ನು ಕಾಮಿಡಿ ಬಗ್ಗೆ ಹೇಳದಿರುವುದೇ ವಾಸಿ. ಇನ್ನು ಜನಜಂಗುಳಿ ಗದ್ದಲದ ಧ್ವನಿಗ್ರಹಣ ತುಂಬಾ ಕಳಪೆ ಮಟ್ಟದಲ್ಲಿದೆ. ಒಟ್ಟಾರೆಯಾಗಿ ಫ್ಯಾಮಿಲಿ ಆಡಿಯನ್ಸ್ ಗೆ ಚಿತ್ರ ಯಾವುದೇ ವಿಧದಲ್ಲೂ ಹೇಳಿಮಾಡಿಸಿದಂತಿಲ್ಲ. ಕಡೆಗೆ ಶಿವಣ್ಣ ಹಾಗೂ ರಮ್ಯಾ ಅಭಿಮಾನಿಗಳಿಗೆ ನಿರಾಸೆ ತಪ್ಪಿದ್ದಲ್ಲ.

English summary
How is the Kannada movie Aaryan? Here is the review of the film. Shivrajkumar and Ramya lack the chemistry needed as a couple. The comedy in the movie is distasteful and not fit for a family entertainer. Fans of Shivanna will be disappointed.
Please Wait while comments are loading...